ಹುಬ್ಬಳ್ಳಿ-ವಿಜಯಪುರ ರೈಲು ಹಳಿ ಕಾಮಗಾರಿ ಆರಂಭ; ರಸ್ತೆ ಬಂದ್, ಜನ-ಜಾನುವಾರು ಓಡಾಟಕ್ಕೆ ಸೇತುವೆ ನಿರ್ಮಿಸಲು ಪಟ್ಟು

ರೈತರು ರೈಲು ಹಳಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿಲ್ಲ. ನಮಗೆ ಸೇತುವೆ ಮಾಡಿಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಬೇಕು ಅಂತಾ ಒತ್ತಾಯಿಸಿದ್ದಾರೆ. ಇಲ್ಲವಾದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

ರೈಲು ಹಳಿ ಕಾಮಗಾರಿ

ರೈಲು ಹಳಿ ಕಾಮಗಾರಿ

  • Share this:
ಗದಗ: ಗದಗ ಭಾಗದ ಅನ್ನದಾತರು ಸಾವಿರಾರು ವರ್ಷಗಳಿಂದ ಅದೇ ಮಾರ್ಗವಾಗಿ ಸಂಚಾರ ಮಾಡುತ್ತಿದ್ದರು. ಆದರೆ, ಈಗ ಈ ಮಾರ್ಗ ಬಂದ್ ಆಗಲಿದೆ. ಹೀಗಾಗಿ ಅನ್ನದಾತರು ರೊಚ್ಚಿಗೆದ್ದಿದ್ದಾರೆ. ಏನೇ ಆಗಲಿ, ನಮಗೆ ಅದೇ ಮಾರ್ಗವಾಗಿ ರಸ್ತೆ ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಹುಬ್ಬಳ್ಳಿ-ವಿಜಯಪುರ ನೂತನ ರೈಲು ಹಳಿ ಕಾಮಗಾರಿ ಆರಂಭವಾಗಿದ್ದು, ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಆದರೆ ಗದಗ ನಗರದ ಹೊಂಬಳ ರಸ್ತೆ ಮಾರ್ಗವಾಗಿ ಗದಗ ನಗರದ ರೈತರ ಜಮೀನುಗಳಿಗೆ ಹೋಗುವ ರಸ್ತೆಯ ಮೇಲೆ ರೈಲು ಹಳಿ ಕಾಮಗಾರಿ ಮಾಡಲಾಗುತ್ತಿದೆ. ಹೀಗಾಗಿ ಈ ಭಾಗದ ಒಕ್ಕಲಗೇರಿ, ಖಾನತೋಟ, ಗಂಗಾಪುರ ಪೇಟೆ ಸೇರಿದಂತೆ 10 ಕ್ಕೂ ಹೆಚ್ಚು ಓಣಿಯ ರೈತರು ಇದೇ ಮಾರ್ಗವಾಗಿ ಸಂಚಾರ ಮಾಡುತ್ತಿದ್ದರು. ಆದರೆ, ಈಗ ಈ ಭಾಗದ ಸಾವಿರಾರು ರೈತರು ತಮ್ಮ ಕೃಷಿ ಜಮೀನುಗಳಿಗೆ ಹೋಗಬೇಕಾದರೆ, ಗದಗ ನಗರದಲ್ಲಿಯೇ ನಾಲ್ಕೈದು ಕಿಲೋಮೀಟರ್ ಸುತ್ತು ಹಾಕಿ ತಮ್ಮ ಜಮೀನುಗಳಿಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ನಿತ್ಯ ನಗರವನ್ನು ಸುತ್ತು ಹಾಕಿ ಹೋಗುವುದರಿಂದ ಕೃಷಿ ಕಾರ್ಮಿಕರು, ಹಾಗೂ ಜಾನುವಾರುಗಳಿಗೆ ಬಹಳ‌ ಸಮಸ್ಯೆಯಾಗುತ್ತದೆ. ಜಮೀನಿನಿಂದ ಫಸಲು ಬಂದಾಗ ಅದನ್ನು ತೆಗೆದುಕೊಂಡು ಬರಲು ಕೂಡ ರೈತರು ಸಮಸ್ಯೆ ಎದುರಿಸಬೇಕಾಗುತ್ತದೆ. ಕೂಡಲೇ ನಮಗೆ ಹಳೆಯ ರಸ್ತೆಯಲ್ಲಿ, ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ರೈತರು ಒತ್ತಾಯ ಮಾಡಿದ್ದಾರೆ.

ಇದನ್ನು ಓದಿ: ಪಿಎಂಎವೈ, ಪಿಎಂ ಸ್ವನಿಧಿ ಯೋಜನೆಯಡಿ ತ್ವರಿತ ಸಾಲ ವಿತರಣೆಗೆ ಬ್ಯಾಂಕರುಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ

ನಗರದ 10 ಓಣಿಯ ರೈತರ, 2500 ಹೆಕ್ಟೇರ್ ಪ್ರದೇಶದಷ್ಟು ಜಮೀನು ಇದೇ ಮಾರ್ಗದಲ್ಲಿವೆ. ಹೀಗಾಗಿ ನಿತ್ಯ ಇದೇ ಮಾರ್ಗವಾಗಿ ಸಂಚಾರ ಮಾಡುತ್ತಿದ್ದರು. ನಗರದಲ್ಲಿ ನಾಲ್ಕೈದು ಕಿಲೋಮೀಟರ್ ಸಂಚಾರ ಮಾಡಿ, ಮುಂದೆ ನಮ್ಮ ಜಮೀನುಗಳು ಅಲ್ಲಿಂದ 10 ರಿಂದ‌ 15 ಕಿಲೋಮೀಟರ್ ವರಿಗೆ ಕೃಷಿ ಜಮೀನುಗಳು ಹೋಗಬೇಕಾಗುತ್ತದೆ. ನಮ್ಮ‌ ಜಾನುವಾರುಗಳು ಸುಸ್ತಾಗುತ್ತವೆ. ಹಾಗೇ ನಮಗೆ ಕಾರ್ಮಿಕರು ಹಾಗೂ ಫಸಲು ತರಲು ಸಾಕಷ್ಟು ವೆಚ್ಚ ತಗಲುತ್ತದೆ. ಈಗ ಕಾಮಗಾರಿ ಆರಂಭವಾಗಿದೆ. ಇನ್ನೂ ರೈಲು ಓಡಾಡುತ್ತಿಲ್ಲಾ. ಕೂಡಲೇ ರೈತರು ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವದಾಗಿ ರೈತರು ಎಚ್ಚರಿಕೆ ನೀಡ್ತಾಯಿದ್ದಾರೆ.

ರೈತರು ರೈಲು ಹಳಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿಲ್ಲ. ನಮಗೆ ಸೇತುವೆ ಮಾಡಿಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಬೇಕು ಅಂತಾ ಒತ್ತಾಯಿಸಿದ್ದಾರೆ. ಇಲ್ಲವಾದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

ವರದಿ: ಸಂತೋಷ ಕೊಣ್ಣೂರು
Published by:HR Ramesh
First published: