ಹುಬ್ಬಳ್ಳಿ; ಫೀಸ್ ವಿಷಯದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರ ಹೊರತಾಗಿಯೂ ಕೆಲ ಖಾಸಗಿ ಶಾಲೆಗಳು ಪೂರ್ತಿ ಫೀಸ್ ಕಟ್ಟುವಂತೆ ತಾಕೀತು ಮಾಡಿವೆ. ಫೀಸ್ ಕೊಡದವರಿಗೆ ಮಾರ್ಕ್ಸ್ ಕಾರ್ಡ್ ನೀಡದೇ ಸತಾಯಿಸುತ್ತಿವೆ. ಪೂರ್ತಿ ಫೀಸ್ ಕಟ್ಟಿಲ್ಲವೆಂದು ವಿದ್ಯಾರ್ಥಿಗಳ ಅಂಕಪಟ್ಟಿ ನೀಡಲು ಶಾಲೆ ನಿರಾಕರಿಸಿರೋ ಘಟನೆ ಹುಬ್ಬಳ್ಳಿಯ ಕಾಳಿದಾಸ ನಗರದಲ್ಲಿ ನಡೆದಿದೆ. ಕಾಳಿದಾಸ ನಗರದ ಸೇಂಟ್ ಅಂಥೋನಿ ಪಬ್ಲಿಕ್ ಶಾಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ಕಳೆದ ವರ್ಷ ಸೇಂಟ್ ಆ್ಯಂಥೋನಿ ಶಾಲೆ ವಾರ್ಷಿಕ 18 ಸಾವಿರ ರೂಪಾಯಿ ಫೀಸ್ ನಿಗದಿಗೊಳಿಸಿತ್ತು. ಈ ಪೈಕಿ ಹತ್ತು ಸಾವಿರ ರೂಪಾಯಿ ಟ್ಯೂಷನ್ ಫೀಸ್ ಎಂದು ನಿಗದಿಪಡಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಕೇವಲ ಶೇ. 70 ಬೋಧನಾ ಶುಲ್ಕ ಪಡೆಯುವಂತೆ ಆದೇಶಿಸಿತ್ತು. ಶಾಲೆ ಈಗಾಗಲೇ ಪೋಷಕರಿಂದ 9 ಸಾವಿರ ರೂಪಾಯಿ ಕಟ್ಟಿಸಿಕೊಂಡಿದೆ. ಸರ್ಕಾರದ ಆದೇಶದ ಪ್ರಕಾರ 7 ಸಾವಿರ ರೂಪಾಯಿ ಟ್ಯೂಶನ್ ಫೀಸ್ ಆಗುತ್ತೆ. ಸರ್ಕಾರದ ಆದೇಶಕ್ಕಿಂತ 2 ಸಾವಿರ ರೂಪಾಯಿ ಈಗಾಗಲೇ ಹೆಚ್ಚು ಪಾವತಿಸಲಾಗಿದೆ. ಇಷ್ಟಾದರೂ ಪೂರ್ತಿ ಫೀಸ್ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ತರುತ್ತಿದೆ ಎಂದು ಆರೋಪಿಸಲಾಗಿದೆ. ಪೂರ್ತಿ ಫೀಸ್ ಕಟ್ಟಿಲ್ಲವೆಂದು ಅಂಕಪಟ್ಟಿ ನೀಡಲು ನಿರಾಕರಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸರ್ಕಾರ ನಿಗದಿಗೊಳಿಸಿದ ಫೀಸ್ ಗಿಂತ ಹೆಚ್ಚು ಹಣ ಕಟ್ಟಿದ್ದೇವೆ. ಮತ್ತೇಕೆ ಹಣ ಕಟ್ಟಬೇಕೆಂದು ಪಾಲಕರು ಪ್ರಶ್ನಿಸಿದ್ದಾರೆ.
ಇದನ್ನು ಓದಿ: West Bengal Election 2021: ಟಿಎಂಸಿ ಸಮೀಕ್ಷೆ ಪ್ರಕಾರವೂ ಬಿಜೆಪಿಗೇ ಗೆಲುವು; ಬಿರುಗಾಳಿ ಎಬ್ಬಿಸಿದ ಪ್ರಶಾಂತ್ ಕಿಶೋರ್ ಆಡಿಯೋ!
ಶಾಲೆಯ ಆಡಳಿತ ಮಂಡಳಿ ಸದಸ್ಯರು ಅನುಚಿತವಾಗಿ ವರ್ತಿಸಿದ್ದಾರೆಂದ ಕಿಡಿಕಾರಿದ್ದಾರೆ. ಶಾಲೆ ಮುಂದೆ ಜಮಾವಣೆಗೊಂಡ ಪೋಷಕರಿಂದ ಆಕ್ರೋಶ ವ್ಯಕ್ತವಾಗಿದೆ. ಶಾಲೆಯ ಒತ್ತಡ ತಂತ್ರದಿಂದ ಮಕ್ಕಳೂ ಮಂಕಾಗುವಂತಾಗಿದೆ. ಫೀಸ್ ಗಾಗಿ ಒತ್ತಡ ಹಾಕಬಾರದೆಂದು ಸರ್ಕಾರ ಸೂಚಿಸಿದ್ದರೂ, ಸೇಂಟ್ ಆ್ಯಂಥೊನಿ ಶಾಲೆ ಅದನ್ನು ಧಿಕ್ಕರಿಸೋ ರೀತಿಯಲ್ಲಿ ವರ್ತಿಸ್ತಿದೆ ಎಂದು ಶಾಲಾ ಆಡಳಿತ ಮಂಡಳಿ ಕಾರ್ಯ ವೈಖರಿಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ