HOME » NEWS » District » HUBBALLI POLICE HAVE SUCCESSFULLY NABBED 3 BURGLARS WHO WOULD ROB TRAVELERS FREQUENTLY SAKLB SKTV

Crime News: ದಾರಿಹೋಕರನ್ನು ಟಾರ್ಗೆಟ್ ಮಾಡುತ್ತಿದ್ದ ದರೋಡೆಕೋರರನ್ನು ಬಂಧಿಸಿದ ಹುಬ್ಬಳ್ಳಿ ಪೋಲೀಸ್, ನಿಟ್ಟುಸಿರು ಬಿಟ್ಟ ಜನ!

ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ, ಚಾಕುವಿನಿಂದ ಹಲ್ಲೆ ನಡೆಸಿ, ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದ ಗ್ಯಾಂಗ್ ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹುಬ್ಬಳ್ಳಿಯ ಸೆಟಲ್ ಮೆಂಟ್ ಪ್ರದೇಶದ ಶ್ರೀನಿವಾಸ ವೀರಾಪುರ, ಸಿದ್ಧಾರ್ಥ ಅಲಿಯಾಸ್ ಕಿರಣ್ ಗುರುನಾಥ ಹಾಗೂ ಸುಧಾಕರ ಗಬ್ಬೂರ ಎಂದು ಗುರುತಿಸಲಾಗಿದೆ. 

news18-kannada
Updated:May 6, 2021, 7:03 AM IST
Crime News: ದಾರಿಹೋಕರನ್ನು ಟಾರ್ಗೆಟ್ ಮಾಡುತ್ತಿದ್ದ ದರೋಡೆಕೋರರನ್ನು ಬಂಧಿಸಿದ ಹುಬ್ಬಳ್ಳಿ ಪೋಲೀಸ್, ನಿಟ್ಟುಸಿರು ಬಿಟ್ಟ ಜನ!
ದರೋಡೆಕೋರರು ಅರೆಸ್ಟ್
  • Share this:
ಹುಬ್ಬಳ್ಳಿ: ಈ ಖತರ್ನಾಕ್ ಗ್ಯಾಂಗ್ ನ ಕಾರ್ಯಾಚರಣೆಯೇ ಬೇರೆ. ಕರ್ನಾಟಕದ ಜೊತೆ ನೆರೆ ರಾಜ್ಯಗಳಲ್ಲಿಯೂ ಸಕ್ರಿಯರಾಗಿದ್ದುಕೊಂಡು, ದಾರಿ ಹೋಕರನ್ನು ಬೆದರಿಸಿ, ಹಲ್ಲೆ ಮಾಡಿ, ದರೋಡೆ ಮಾಡುತ್ತಿದ್ದ ತಂಡವನ್ನು ಹೆಡೆಮುರಿಗೆ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ, ಚಾಕುವಿನಿಂದ ಹಲ್ಲೆ ನಡೆಸಿ, ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದ ಗ್ಯಾಂಗ್ ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹುಬ್ಬಳ್ಳಿಯ ಸೆಟಲ್ ಮೆಂಟ್ ಪ್ರದೇಶದ ಶ್ರೀನಿವಾಸ ವೀರಾಪುರ, ಸಿದ್ಧಾರ್ಥ ಅಲಿಯಾಸ್ ಕಿರಣ್ ಗುರುನಾಥ ಹಾಗೂ ಸುಧಾಕರ ಗಬ್ಬೂರ ಎಂದು ಗುರುತಿಸಲಾಗಿದೆ.

ಮೇ 02 ರಂದು ಹುಬ್ಬಳ್ಳಿ ತಾಲೂಕಿನ ಬೆಳಗಲಿ ಕ್ರಾಸ್ ಬಳಿ ದರೋಡೆ ಕೃತ್ಯ ಘಟನೆ ನಡೆದಿತ್ತು. ಶಿರಾಜ್ ಮೆಹಬೂಬ್ ಸಾಬ್ ಕೋಳೂರ ಹಾಗೂ ಆತನ ಗೆಳೆಯ ಹಾಶೀಮ್ ಪೀರ ಸವಣೂರ ಅವರು ಹೋಗುತ್ತಿದ್ದ ವೇಳೆ, ವಾಹನ ಅಡ್ಡಗಟ್ಟಿದ್ದ ಆರೋಪಿಗಳು, ಚಾಕುವಿನಿಂದ ಹಲ್ಲೆ ಮಾಡಿ, ಗನ್ ತೋರಿಸಿ ದರೋಡೆ ಮಾಡಿದ್ದಾರೆ. 15 ಸಾವಿರ ರೂಪಾಯಿ ನಗದು, ಎರಡು ಪರ್ಸ್, 20 ಸಾವಿರ ರೂಪಾಯಿ ಮೌಲ್ಯದ ಹೊಸ ಬಟ್ಟೆಗಳು ಇತ್ಯಾದಿಗಳನ್ನು ಕಳುವು ಮಾಡಿದ್ದ ಆರೋಪಿಗಳು ಎಸ್ಕೇಪ್ ಆಗಿದ್ದರು.
ಗ್ರಾಮೀಣ ಠಾಣೆ ಪೊಲೀಸ್ ಇನ್ಸಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್, ತಲ್ವಾರ್ ಮತ್ತಿತರ ವಸ್ತು ಜಪ್ತಿ ಮಾಡುವ ಜೊತೆಗೆ, ದರೋಡೆ ಮಾಡಿದ ನಗದು ಹಣವನ್ನೂ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನು ಬಂಧಿಸಿದ ನಂತರ ಈ ಗ್ಯಾಂಗ್ ಬೇರೆ ಬೇರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಬಂಧಿತ ಆರೋಪಿಗಳು ವಾಹನಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಹೆದರಿಸಿ ದರೋಡೆ ಮಾಡುತ್ತಿದ್ದರು. ಬಂಧಿತರು ರೌಡಿಶೀಟರ್ ಗಳಾಗಿದ್ದು, ಮರ್ಡರ್, ದರೋಡೆ  ಇತ್ಯಾದಿ ಕೇಸ್ ಗಳು ಅವರ ಮೇಲಿವೆ. ರಾಜ್ಯವೊಂದೇ ಅಲ್ಲದೆ ನೆರೆ ರಾಜ್ಯಗಳಲ್ಲಿಯೂ ಸಂಚರಿಸಿ ದರೋಡೆ ಇತ್ಯಾದಿ ಕೃತ್ಯ ನಡೆಸಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ.
Youtube Video

ಹುಬ್ಭಳ್ಳಿಯ ಬೆಳಗಲಿ ಕ್ರಾಸ್ ಬಳಿ ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿಂದೆಯೂ ಈ ಆರೋಪಿಗಳು ಹಲವಾರು ಅಪರಾಧ ಕೃತ್ಯಗಳನ್ನು ನಡೆಸಿದ್ದರು. ವಿವಿಧ ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದಿನ ಅಪರಾಧ ಕೃತ್ಯಗಳ ತನಿಖೆಯನ್ನೂ ಮಾಡಲಾಗ್ತಿದೆ ಎಂದು ಹುಬ್ಬಳ್ಳಿಯಲ್ಲಿ ಧಾರವಾಡ ಎಸ್.ಪಿ. ಪಿ.ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ.
Published by: Soumya KN
First published: May 6, 2021, 7:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories