ಪೊಲೀಸರಿಗೇ ಆವಾಜ್ ಹಾಕಿದ ರೌಡಿಶೀಟರ್; ಸಾಮೂಹಿಕ ವರ್ಗಾವಣೆಗೆ ಮನವಿ ಮಾಡಿದ ಸಿಬ್ಬಂದಿ
ನವನಗರದ ಎಪಿಎಂಸಿ ಪೊಲೀಸ್ ಠಾಣೆ ಮುಂದೆ ವರ್ಗಾವಣೆ ಅರ್ಜಿ ಹಿಡಿದು ನಿಲ್ಲುವ ಮೂಲಕ ಮೌನ ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಇನ್ಸ್ಪೆಕ್ಟರ್ ಪ್ರಭು ಸೂರೀನ್ ಜೊತೆ ಮಾತುಕತೆ ನಡೆಸಿದ್ದಾರೆ. ಅವರನ್ನು ಕಚೇರಿಗೆ ಕರೆಸಿದ ಡಿಸಿಪಿ ರಾಮರಾಜನ್ ಅವರು ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ.
news18-kannada Updated:November 27, 2020, 7:21 PM IST

ಸಾಮೂಹಿಕ ವರ್ಗಾವಣೆ ಕೋರಿದ ಹುಬ್ಬಳ್ಳಿ ಪೊಲೀಸರ ಮೌನ ಪ್ರತಿಭಟನೆ.
- News18 Kannada
- Last Updated: November 27, 2020, 7:21 PM IST
ಹುಬ್ಬಳ್ಳಿ; ನಗರದಲ್ಲಿ ರೌಡಿಯೊಬ್ಬ ಪೊಲೀಸ್ ಇನ್ಸ್ಪೆಕ್ಟರ್ಗೆ ಅವಾಜ್ ಹಾಕಿ ಪುಂಡಾಟ ಮಾಡಿದ್ದಾನೆ. ಹುಬ್ಬಳ್ಳಿಯ ನವನಗರದಲ್ಲಿ ಇನ್ಸ್ಪೆಕ್ಟರ್ ಪ್ರಭು ಸೂರೀನ್ಗೆ ಧಮ್ಕಿ ಹಾಕಿದ್ದಾನೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಪ್ರವೀಣ ಪೂಜಾರಿ ಕೆಲವರೊಂದಿಗೆ ನಡುರಸ್ತೆಯಲ್ಲೇ ಗಲಾಟೆ ಮಾಡುತ್ತಿದ್ದ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಇನ್ಸ್ಪೆಕ್ಟರ್ ಪ್ರಭು ಸೂರೀನ್ ಅವರು ರಸ್ತೆಯಲ್ಲಿ ಜಗಳ ಮಾಡದಂತೆ ಬುದ್ಧಿವಾದ ಹೇಳಿದ್ದಾರೆ. ಅಷ್ಟಕ್ಕೆ ಕೆರಳಿದ ಪ್ರವೀಣ ಪೂಜಾರಿ ಇನ್ಸ್ಪೆಕ್ಟರ್ಗೆ ಏಕವಚನದಲ್ಲಿ ಬೈದಿದ್ದಾನೆ. ಒಂದು ಕೈ ನೋಡ್ಕೋತೀನಿ ಬಾರಲೇ ಎಂದು ಧಮ್ಕಿ ಹಾಕಿದ್ದಾನೆ.
ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದವರನ್ನು ನವನಗರ ಠಾಣೆಗೆ ಕರೆದೊಯ್ದು ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ವಕೀಲ ವಿನೋದ ಪಾಟೀಲ್ ಎಂಬುವವರು ಕೂಡ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಠಾಣೆಯ ಬಳಿ ಜಮಾಯಿಸಿದ ಸ್ನೇಹಿತರು ಪ್ರವೀಣ ಪೂಜಾರಿಯನ್ನು ಮನೆಗೆ ಕರೆದೊಯ್ದಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ ರೌಡಿಶೀಟರ್ ವಿರುದ್ಧ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ದೂರು ದಾಖಲಿಸಿದ್ದಾರೆ. ಇದನ್ನು ಓದಿ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಲಾಡ್ಜ್ ನಲ್ಲಿ ಶವವಾಗಿ ಪತ್ತೆ!
ಸಾಮೂಹಿಕ ವರ್ಗಾವಣೆಗೆ ಪೊಲೀಸರ ಮನವಿ
ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಸಾಮೂಹಿಕ ವರ್ಗಾವಣೆಗೆ ಆಗ್ರಹಿಸಿದ್ದಾರೆ. ಬೇರೆ ಠಾಣೆಗಳಿಗೆ ನಿಯೋಜಿಸುವಂತೆ ಒತ್ತಾಯಿಸಿ 35 ಜನ ಪೊಲೀಸ್ ಸಿಬ್ಬಂದಿಗಳು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ವಕೀಲ ವಿನೋದ ಪಾಟೀಲ್ ಮತ್ತು ಇನ್ಸ್ಪೆಕ್ಟರ್ ಪ್ರಭು ಸೂರೀನ್ ನಡುವೆ ವಾಗ್ವಾದ ನಡೆದಿತ್ತು. ರೌಡಿಶೀಟರ್ ಪ್ರವೀಣ ಪೂಜಾರಿ ಎಂಬಾತ ನಡುರಸ್ತೆಯಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಗಳವಾಡುತ್ತಿದ್ದ. ಎರಡು ಗುಂಪುಗಳ ನಡುವೆ ಗಲಾಟೆಯಾಗುತ್ತಿದ್ದ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಪೊಲೀಸರು ತಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆಂದು ವಕೀಲ ವಿನೋದ ಪಾಟೀಲ್ ಆರೋಪಿಸಿದ್ದರು.
ನವನಗರ ಠಾಣೆ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಧಾರವಾಡದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ನಡೆದಿತ್ತು. ಇತ್ತ ಪೊಲೀಸರು ಕೂಡ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ವಕೀಲರ ಒತ್ತಡದಿಂದಾಗಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ. ನವನಗರದ ಎಪಿಎಂಸಿ ಪೊಲೀಸ್ ಠಾಣೆ ಮುಂದೆ ವರ್ಗಾವಣೆ ಅರ್ಜಿ ಹಿಡಿದು ನಿಲ್ಲುವ ಮೂಲಕ ಮೌನ ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಇನ್ಸ್ಪೆಕ್ಟರ್ ಪ್ರಭು ಸೂರೀನ್ ಜೊತೆ ಮಾತುಕತೆ ನಡೆಸಿದ್ದಾರೆ. ಅವರನ್ನು ಕಚೇರಿಗೆ ಕರೆಸಿದ ಡಿಸಿಪಿ ರಾಮರಾಜನ್ ಅವರು ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ.
ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದವರನ್ನು ನವನಗರ ಠಾಣೆಗೆ ಕರೆದೊಯ್ದು ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ವಕೀಲ ವಿನೋದ ಪಾಟೀಲ್ ಎಂಬುವವರು ಕೂಡ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಠಾಣೆಯ ಬಳಿ ಜಮಾಯಿಸಿದ ಸ್ನೇಹಿತರು ಪ್ರವೀಣ ಪೂಜಾರಿಯನ್ನು ಮನೆಗೆ ಕರೆದೊಯ್ದಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ ರೌಡಿಶೀಟರ್ ವಿರುದ್ಧ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ದೂರು ದಾಖಲಿಸಿದ್ದಾರೆ.