ಕರ್ಫ್ಯೂ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಟ; ಫೀಲ್ಡಿಗಿಳಿದು ಬಿಸಿ ಮುಟ್ಟಿಸಿದ ಪೊಲೀಸ್ ಕಮಿಷನರ್!

ಖುದ್ದು ಫೀಲ್ಡ್ ಗೆ ಇಳಿದ ಹುಬ್ಬಳ್ಳಿ-ಧಾರಾವಾಡ ಪೊಲೀಸ್ ಕಮೀಷನರ್ ಲಾಭೂ ರಾಮ್, ನಗರದ ವಿವಿಧೆಡೆ ಸಂಚರಿಸಿ ಪೊಲೀಸ್ ಬಂದೋಬಸ್ತ್ ಪರಿಶೀಲನೆ ಮಾಡಿದರು. ಲಾಕ್ ಡೌನ್ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಪೊಲೀಸರಿಗೆ ಸೂಚನೆ ನೀಡಿದರು.

ಪೊಲೀಸರಿಂದ ಪರಿಶೀಲನೆ

ಪೊಲೀಸರಿಂದ ಪರಿಶೀಲನೆ

  • Share this:
ಹುಬ್ಬಳ್ಳಿ - ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಆದರೆ ಹುಬ್ಬಳ್ಳಿಯಲ್ಲಿ ಜನತಾ ಕರ್ಫ್ಯೂಗೆ ಜನ ಡೋಂಟ್ ಕೇರ್ ಅನ್ನೋ ರೀತಿಯಲ್ಲಿ ಬೇಕಾ ಬಿಟ್ಟಿಯಾಗಿ ಅಡ್ಡಾಡುತ್ತಿದ್ದಾರೆ. ಹೀಗಾಗಿ ಹುಬ್ಬಳ್ಳಿ - ಧಾರವಾಡ ಪೊಲೀಸರ್ ಕಮೀಷನರ್ ಲಾಭೂರಾಮ್ ಇಂದು ಖುದ್ದು ಫೀಲ್ಡ್ ಗೆ ಇಳಿದು ಜನತಾ ಕರ್ಫ್ಯೂ ಎಷ್ಟರ ಮಟ್ಟಿಗೆ ಜಾರಿಗೆಯಾಗುತ್ತಿದೆ ಎನ್ನೋದರ ಪರಿಶೀಲನೆ ನಡೆಸಿದರು.
ಜನತಾ ಕರ್ಫ್ಯೂ ಇದ್ದರೂ ಹುಬ್ಬಳ್ಳಿಯಲ್ಲಿ ಅನಗತ್ಯ ವಾಹನಗಳ ಅಡ್ಡಾಟ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿಯ ವಿವಿಧೆಡೆ ಪೊಲೀಸರಿಂದ ವಾಹನಗಳ ತಪಾಸಣೆ ನಡೆಯಿತು.

ಖುದ್ದು ಫೀಲ್ಡ್ ಗೆ ಇಳಿದ ಹುಬ್ಬಳ್ಳಿ-ಧಾರಾವಾಡ ಪೊಲೀಸ್ ಕಮೀಷನರ್ ಲಾಭೂ ರಾಮ್, ನಗರದ ವಿವಿಧೆಡೆ ಸಂಚರಿಸಿ ಪೊಲೀಸ್ ಬಂದೋಬಸ್ತ್ ಪರಿಶೀಲನೆ ಮಾಡಿದರು. ಲಾಕ್ ಡೌನ್ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಪೊಲೀಸರಿಗೆ ಸೂಚನೆ ನೀಡಿದರು. ರಾಣಿ ಚೆನ್ನಮ್ಮ ವೃತ್ತ ಸೇರಿ ನಗರದ ಬಹುತೇಕ ಕಡೆ ಬ್ಯಾರಿಕೇಡ್ ಹಾಕಿರೋ ಪೊಲೀಸರು ವಾಹನಗಳ ತಪಾಸಣೆ ನಡೆಸ್ತಿದಾರೆ. ಅನಗತ್ಯವಾಗಿ ಅಡ್ಡಾತ್ತಿರುವವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ. ಹಲವು ವಾಹನಗಳನ್ನು ಸೀಜ್ ಮಾಡಿ, ವಾರ್ನ್ ಮಾಡಿದ್ದಾರೆ.

ಇದನ್ನೂ ಓದಿ: Karnataka Lockdown: ರಾಜ್ಯದಲ್ಲಿ ಕಂಪ್ಲೀಟ್​​​ ಲಾಕ್​​​​​ಡೌನ್​ ; ಮೇ 10ರಿಂದ 2 ವಾರ ಕರ್ನಾಟಕ ಸ್ತಬ್ಧ!

ಹುಬ್ಬಳ್ಳಿ ನಗರದಲ್ಲಿ ಮಾಸ್ಕ್ ಹಾಕದೆ ಅಡ್ಡಾಡುತ್ತಿದ್ದ 203 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, 50,750 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಪಾಡದ ಆರೋಪದ ಮೇಲೆ 482 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 96,400 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಇನ್ನೂ ಒಂದೇ ದಿನ ಅನಗತ್ಯವಾಗಿ ಅಡ್ಡಾಡುತ್ತಿದ್ದ 161 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಕಳೆದ ಒಂದು ವಾರದಲ್ಲಿ 2100 ಮಾಸ್ಕ್ ಹಾಕದ ಪ್ರಕರಣ ದಾಖಲಿಸಲಾಗಿದ್ದು, 2.10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಕೋವಿಡ್ ಸೋಂಕತರಿಗಾಗಿ ಬಿ.ವಿ.ಬಿ. ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ಆಸ್ಪತ್ರೆ....ರಾಜ್ಯದಲ್ಲಿ ಕೊರೋನಾ ದಿನೇ ದಿನೇ ವ್ಯಾಪಕಗೊಳ್ಳುತ್ತಿದೆ. ಧಾರವಾಡ ಜಿಲ್ಲೆಯಲ್ಲಿಯೂ ಕೊರೋನಾ ಎರಡನೆಯ ಅಲೆ ಅಬ್ಬರಿಸಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಸೇವಾ ಭಾರತಿ ಟ್ರಸ್ಟ್ ಮತ್ತು ಕೆ.ಎಲ್.ಇ. ಸಂಸ್ಥೆಗಳು ಕೋರೋನಾ ಸೋಂಕಿತರ ನೆರವಿಗೆ ಮುಂದಾಗಿವೆ. ಹುಬ್ಬಳ್ಳಿಯ ಕೆ.ಎಲ್.ಇ. ಸಂಸ್ಥೆಯ ಬಿ.ವಿ. ಭೂಮರೆಡ್ಡಿ ಮಹಾವಿದ್ಯಾಲಯದಲ್ಲಿ ಕೊರೋನಾ ಆಸ್ಪತ್ರೆ ಆರಂಭಿಸಲಾಗಿದೆ.

80 ಬೆಡ್ ಗಳನ್ನು ಒಳಗೊಂಡಿರೋ ಆಸ್ಪತ್ರೆಯಾಗಿದ್ದು, ಸೇವಾ ಭಾರತಿ ಟ್ರಸ್ಟ್ ಮತ್ತು ಕೆ.ಎಲ್.ಇ. ಸಂಸ್ಥೆಗಳ ಜಂಟಿ ಪ್ರಯತ್ನದಿಂದ ಆರಂಭಗೊಂಡಿದೆ. 80 ಬೆಡ್ ಗಳ ಪೈಕಿ 20 ಆಕ್ಸೀಜನ್ ಹಾಗೂ 60 ಐಸಿಯು ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧೆಡೆ ಕೋವಿಡ್ ಸೋಂಕಿತರಿಗೆ ಬೆಡ್ ಗಳು ಸಿಗದೇ ಇರೋ ಹಿನ್ನೆಲೆ, ಸೋಂಕಿತರ ಚಿಕಿತ್ಸೆಗೆಂದು ತಾತ್ಕಾಲಿಕ ಆಸ್ಪತ್ರೆ ಪ್ರಾರಂಭಿಸಲಾಗಿದೆ. ಚಿಕಿತ್ಸೆ ಪಡೆಯಲು ಬರೋ ರೋಗಿಗಳಿಗೆ ಕನಿಷ್ಟ ಫೀಜ್ ವಿಧಿಸಿ ಚಿಕಿತ್ಸೆಯ ವ್ಯವಸ್ತೆ ಮಾಡಲಾಗಿದೆ.
Published by:Kavya V
First published: