ಇನ್ನೆಷ್ಟು ದಿನ ಜನರನ್ನು ಮನೆಯಲ್ಲೇ ಕೂರಿಸುತ್ತೀರಿ?; ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಹಾಕಿದ ಪ್ರತಾಪ್‌ ಸಿಂಹ

ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ‌ವಾಗಿ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ್‌ಸಿಂಹ, ನಿಮ್ಮ ಅಕ್ಕ ಪಕ್ಕದಲ್ಲಿರುವ ಕೊಡವರು ಯಾರೋ ಗೋಮಾಂಸ ತಿನ್ನಬಹುದು. ಆದ್ರೆ ಅವರ ಕಾರಣಕ್ಕೆ ಇಡೀ ಕೊಡವರನ್ನ ಗೋಮಾಂಸ ತಿನ್ನುತ್ತಾರೆ ಎಂದರೆ ಹೇಗೆ.? ಎಂದು ಪ್ರಶ್ನೆ ಮಾಡಿದ್ದಾರೆ.

ಸಂಸದ ಪ್ರತಾಪ್​​ ಸಿಂಹ.

ಸಂಸದ ಪ್ರತಾಪ್​​ ಸಿಂಹ.

  • Share this:
ಮೈಸೂರು: ದೇಶಾದ್ಯಾಂತ ಮ್ಯೂಟೆಂಟ್‌ ಕೊರೋನಾ ಬಗ್ಗೆ ಗಂಭೀರ ಚರ್ಚೆಯಾಗುತ್ತಿದ್ದು, ರೂಪಾರಂತಗೊಂಡಿರುವ ಕೊರೊನಾ ಹರಡುವಿಕೆಯಿಂದ ಮತ್ತೆ ಲಾಕ್‌ಡೌನ್ ಭೀತಿಯೂ ಆರಂಭವಾಗಿದೆ. ಈ ನಡುವೆ ಮೈಸೂರಿನಲ್ಲಿ ಮಾತನಾಡಿರುವ ಸಂಸದ ಪ್ರತಾಪ್‌ಸಿಂಹ ಇನ್ನು ಎಷ್ಟು ದಿನ ಅಂತ ಜನರನ್ನ ಮನೆಯಲ್ಲಿ ಬಾಗಿಲು ಹಾಕಿ ಒಳಗೆ ಕೂರಿಸುತ್ತೀರಾ ಅಂತ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.  ಕೊರೊನಾಂತಕದ ಜೊತೆಗೆ ನೈಟ್‌ ಕರ್ಪ್ಯೂ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರತಾಪ್‌ಸಿಂಹ ಸರ್ಕಾರಕ್ಕೆ ಪ್ರಶ್ನೆ ಹಾಕುವ ಮೂಲಕ ಬಿಜೆಪಿ ಪಕ್ಷದ ನಿರ್ಧಾರದ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಕಳೆದ ಮಾರ್ಚ್‌ನಿಂದಲೂ ಜನರು ನಿರ್ಬಂಧದ ವ್ಯವಸ್ಥೆಯಲ್ಲೆ ಇದ್ದಾರೆ, ಜನರನ್ನ ಇನ್ನೆಷ್ಟು ದಿನ ಮನೆಯಲ್ಲಿ ಕೂರಿಸ್ತಿರಾ ? ಇನ್ನಾದ್ರು ಜನರು ಓಡಾಡಲು ಬಿಡಿ. ಮಾಸ್ಕ್‌ ಕಡ್ಡಾಯ ಮಾಡಿ ಆದ್ರೆ ಮಾಸ್ಕ್ ಹೆಸರಿನಲ್ಲಿ ಜನರಿಗೆ ಅನಗತ್ಯ ತೊಂದರೆ ಕೊಡಬೇಡಿ ಅಂತ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ನಾನು ದೆಹಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಹೋಗಿಬಂದಿದ್ದೇನೆ ಎಲ್ಲ ಕಡೆ ಕೊರೋನಾ ರೂಪಾಂತರದ ಬಗ್ಗೆ ಚರ್ಚೆ ಇದೆ. ಈ ಜೊತೆಗೆ ಹೊಸ ಕೊರೊನಾ ಅಷ್ಟು ಪರಿಣಾಮಕಾರಿ ಅಲ್ಲ ಅಂತಾನು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಅದೇನೆ ಇದ್ದರೂ ಜನರನ್ನ ಹೆಚ್ಚು ದಿನ‌ ನಿರ್ಬಂಧ ಮಾಡೋಕೆ ಆಗೋಲ್ಲ, ಉದ್ಯಮ ಹಾಗೂ ಅವರ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಕೊಡಬೇಕು. ಮಾಸ್ಕ್ ಹಾಕೋದನ್ನ ಕಡ್ಡಾಯ ಮಾಡಿ ಆದ್ರೆ ಮಾಸ್ಕ್ ಹೆಸರಿನಲ್ಲಿ ಕಾರು ಬೈಕ್ ನಿಲ್ಲಿಸಿ ಅವರಿಗೆ ದಂಡ ಹಾಕುತ್ತಾ ಜನರಿಗೆ ತೊಂದರೆ ಕೊಡಬೇಡಿ ಅಂತ ರಾಜ್ಯ ಸರ್ಕಾರವನ್ನ ಮೈಸೂರಿನ ಸಂಸದ ಪ್ರತಾಪ್‌ಸಿಂಹ ಮನವಿ ಮಾಡಿದ್ದಾರೆ.

ಸಿದ್ದು ವಿರುದ್ದ ಗುಡುಗಿದ ಸಿಂಹ:

ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ‌ವಾಗಿ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ್‌ಸಿಂಹ, ನಿಮ್ಮ ಅಕ್ಕ ಪಕ್ಕದಲ್ಲಿರುವ ಕೊಡವರು ಯಾರೋ ಗೋಮಾಂಸ ತಿನ್ನಬಹುದು. ಆದ್ರೆ ಅವರ ಕಾರಣಕ್ಕೆ ಇಡೀ ಕೊಡವರನ್ನ ಗೋಮಾಂಸ ತಿನ್ನುತ್ತಾರೆ ಎಂದರೆ ಹೇಗೆ.? ನೀವು ಗೋಮಾಂಸ ತಿಂತೀರಿ ಅಂತ ಇಡೀ ಕುರುಬ ಸಮಾಜ ಬೀಫ್ ತಿಂತಾರೆ ಅನ್ನೋಕೆ ಆಗುತ್ತಾ? ಎಂದು ಸಿದ್ದರಾಮಯ್ಯಗೆ ಸಂಸದ ಪ್ರತಾಪ್‌ ಸಿಂಹ ಪ್ರಶ್ನೆ ಹಾಕಿದ್ದಾರೆ.

ಇದನ್ನೂ ಓದಿ : ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಎಡಪಕ್ಷಗಳ ಜೊತೆ ಮೈತ್ರಿಗೆ ಸಿದ್ದ; ಕಾಂಗ್ರೆಸ್​ ಘೋಷಣೆ

ಸಿದ್ದರಾಮಯ್ಯ ಈ ವಿಚಾರವನ್ನ ವಿವೇಚನೆ ಇಲ್ಲದೆ ಯಾಕೇ ಮಾತನಾಡಿದ್ದಾರೆ ಅನ್ನೋದೆ ನನಗೆ ಅರ್ಥ ಆಗಿಲ್ಲ.  ಆತ್ಮದ್ರೋಹದ ಮಾತುಗಳನ್ನ ಕಾಂಗ್ರೆಸ್ ನವರು ಮಾತ್ರ ಮಾತನಾಡೋಕೆ ಸಾಧ್ಯ.ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡ ಗೋಮಾತೆಯನ್ನ ಎರಡನೆ ತಾಯಿಯಾಗಿ ನೋಡುತ್ತಾರೆ.

ಕೋಟ್ಯಂತರ ಜನರ ಭಾವನೆಗೆ ಧಕ್ಕೆ ಬರುವಂತೆ ಮಾತನಾಡಬೇಡಿ ನಿಮ್ಮ ತಪ್ಪಿನ ಅರಿವಾಗಿ ಅದನ್ನ ತಪ್ಪಾಗಿ ಅರ್ಥೈಸಲಾಗಿದೆ ಅಂತ ಹೇಳಿದ್ದೀರಾ, ಆದ್ರೆ ಇನ್ನು ಮುಂದೆ ಕೊಡವರಿಗೆ ನೋವಾಗುವಂತೆ ಮಾತನಾಡಬೇಡಿ ಅಂತ ಪ್ರತಾಪ್‌ಸಿಂಹ ಸಿದ್ದರಾಮಯ್ಯರಿಗೆ ಮನವಿ ಮಾಡಿದರು.
Published by:MAshok Kumar
First published: