Theft: ಸರಣಿಗಳ್ಳತನಕ್ಕೆ ಬೆಚ್ಚಿಬಿದ್ದ ಅಥಣಿ ಜನ ; ದೇವರನ್ನೂ ಬಿಡದ ಕಳ್ಳರು

ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಗ್ರಾಮದ ಮನೆಗಳಲ್ಲಿ ಯಾರು ಇಲ್ಲದೆ ಇರುವುದನ್ನ ಗಮನಿಸಿದ ಖದಿಮರು ಕಳ್ಳತನ ಮಾಡಿ ಪಾರಾರಿ ಯಾಗಿದ್ದಾರೆ. ಕಳ್ಳತನಕ್ಕೂ ಮೊದಲು ಗ್ರಾಮಕ್ಕೆ ಬಂದು ಮನೆಗಳನ್ನ ಗುರುತು ಮಾಡಿಯೆ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ.

  • Share this:

ಚಿಕ್ಕೋಡಿ(ಡಿಸೆಂಬರ್. 11): ​ನಿನ್ನೆಯಷ್ಟೆ ಆ ತಾಲೂಕಿನಲ್ಲಿ 12 ಮನೆ ಸೇರಿದಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ದರೋಡೆಯಾಗಿತ್ತು. ಇಂದು ಮತ್ತೆ ಅದೇ ತಾಲೂಕಿನ ಬೇರೊಂದು ಹಳ್ಳಿಯಲ್ಲಿ 6 ಮನೆ , ಎರಡು ದೇವಸ್ಥಾನ ಹಾಗೂ ಒಂದು ಕಿರಾಣಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಕಳ್ಳರು ರಾತೋರಾತ್ರಿ ಗ್ರಾಮಕ್ಕೆ ನುಗ್ಗಿ ಸರಣಿಗಳ್ಳತನ ನಡೆಸುತ್ತಿರುವ ಪರಿಣಾಮ ತಾಲೂಕಿನ ಜನ ಈಗ ಬೆಚ್ಚಿ ಬಿದ್ಧಿದ್ದಾರೆ. ನಿನ್ನೆಯಷ್ಟೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಸುಮಾರು 12 ಮನೆಗಳು ಸೇರಿದಂತೆ ಒಂದು ಸರ್ಕಾರಿ ಸಾಮಿತ್ವದ ಬ್ಯಾಂಕ್ ಕೂಡ ಕಳ್ಳತನವಾಗಿತ್ತು. 30 ಗ್ರಾಂ ಬಂಗಾರ ಮತ್ತು 300 ಗ್ರಾಂ ಬೆಳ್ಳಿ ದೋಚಿ ಖದೀಮರು ಪರಾರಿಯಾಗಿದ್ದರು. ಆ ಘಟನೆ ಮಾಸುವ ಮುನ್ನವೇ ಅದೇ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯ ಝುಂಜರವಾಡದಲ್ಲಿ 2 ದೇವಸ್ಥಾನ ಹಾಗೂ 6 ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. 6 ಮನೆಗಳಲ್ಲಿನ ಚಿನ್ನಾಭರಣ ಜತೆಗೆ ಝುಂಜುರವಾಡ ಗ್ರಾಮದ ಅಪ್ಪಯ್ಯ ಸ್ವಾಮಿ ದೇವಸ್ಥಾನಕ್ಕೂ ಖದಿಮರು ಕನ್ನ ಹಾಕಿದ್ದಾರೆ.


ನಿನ್ನೆಯಷ್ಟೆ ಅಥಣಿ ತಾಲೂಕಿನ  ಶಿರಹಟ್ಟಿ ಗ್ರಾಮದಲ್ಲಿ ಕಳ್ಳತನ ಮಾಡಲಾಗಿತ್ತು.‌ ಈ ಘಟನೆಯಿಂದ ಬೆಚ್ಚಿ ಬಿದ್ದ ಅಥಣಿ ತಾಲೂಕಿನ ಜನರಿಗೆ ಈಗ ಝುಂಜರವಾಡ ಗ್ರಾಮದಲ್ಲಿ ನಡೆದ ಸರಣಿಗಳ್ಳತನ ನಿದ್ದೆಗೆಡಿಸಿದೆ. ಗ್ರಾಮಕ್ಕೆ ನುಗ್ಗಿ ಬೀಗ ಹಾಕಿದ್ದ 6 ಮನೆಗಳಲ್ಲಿದ್ದ ಸಾವಿರಾರೂ ರೂಪಾಯಿ ನಗದು ಸೇರಿದಂತೆ. ಗ್ರಾಮದ ಅಪ್ಪಯ್ಯ ಸ್ವಾಮೀ ದೇವಸ್ಥಾನ ಹಾಗೂ ಲಕ್ಕಮ್ಮ ದೇವಿ ದೇವರ ಮೂರ್ತಿ ಸೇರಿ ಒಟ್ಟು 12 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಖದೀಮರು ದೋಚಿ ಪರಾರಿಯಾಗಿದ್ದಾರೆ. ಅಪ್ಪಯ್ಯ ದೇವಸ್ಥಾನದ ಬೆಳ್ಳಿಯ ಮೂರ್ತಿಯನ್ನು ಕಳ್ಳರು ಎಗರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ದೇವಸ್ತಾನದ ಹುಂಡಿಯಲ್ಲಿದ್ದ ಸಾವಿರಾರು ರೂಪಾಯಿ ಹಣವನ್ನ ಕಳ್ಳರು ಕದ್ದುಕೊಂಡು ಹೋಗಿದ್ದಾರೆ.


ಇನ್ನು ಕಳ್ಳತನವಾಗಿರುವ ಗ್ರಾಮಗಳು ಕೃಷ್ಣಾ ತೀರದಲ್ಲಿ ಬರುವ ಕಾರಣ ಬಹುತೇಕ ಜನರು ಗ್ರಾಮದಲ್ಲಿ ಒಂದು ಮನೆ ಹಾಗೂ ತೋಟದ ವಸತಿ ಪ್ರದೇಶದಲ್ಲಿ ಒಂದು ಮನೆ ಹೊಂದಿದ್ದಾರೆ. ಜನರು ಹೆಚ್ಚಿನ ಸಮಯ ತೋಟದ ವಸತಿ ಪ್ರದೇಶದ ಮನೆಗಳಲ್ಲೆ ಹೆಚ್ವು ವಾಸ ಮಾಡುವ ಕಾರಣ ಗ್ರಾಮದ ಮನೆಗಳಲ್ಲಿ ಯಾರು ಇಲ್ಲದೆ ಇರುವುದನ್ನ ಗಮನಿಸಿದ ಖದಿಮರು ಕಳ್ಳತನ ಮಾಡಿ ಪಾರಾರಿ ಯಾಗಿದ್ದಾರೆ. ಕಳ್ಳತನಕ್ಕೂ ಮೊದಲು ಗ್ರಾಮಕ್ಕೆ ಬಂದು ಮನೆಗಳನ್ನ ಗುರುತು ಮಾಡಿಯೆ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ.


ಇದನ್ನೂ ಓದಿ : ದಿಢೀರ್​ ಸಾರಿಗೆ ಮುಷ್ಕರ: ರಾಯಚೂರಿನಲ್ಲಿ ಬಾಣಂತಿ ಪರದಾಟ; ದುಪ್ಪಟ್ಟು ದರ ತೆತ್ತ ಪ್ರಯಾಣಿಕರು


ದಿನೇ ದಿನೇ ಅಥಣಿ ತಾಲೂಕಿನಲ್ಲಿ ಸರಣಿಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಪೊಲೀಸರ ಕರ್ತವ್ಯದ ಬೇಜವಾಬ್ದಾರಿತನ ಎತ್ತಿ ತೋರಿಸುತ್ತಿದೆ. ಅಲ್ಲದೆ ಕಾನೂನು ಸುವ್ಯವಸ್ಥೆಯೂ ಸಹ ತಾಲೂಕಿನಲ್ಲಿ ಹದಗೆಡುತ್ತಿದೆ ಎಂದು ಸ್ಥಳೀಯರು ಪಿಸುಗುಡುತ್ತಿದ್ದಾರೆ.


ಪೊಲೀಸರು ಇನ್ನಾದರೂ ಇಂತಹ ಪ್ರಕರಣಗಳು ಮರುಕಳಿಸದ ರೀತಿಯಲ್ಲಿ ಸೂಕ್ತ ಗಸ್ತು ಹಾಗೂ ಕರ್ತವ್ಯ ಪ್ರಜ್ಞೆ ಮೆರೆಯಬೇಕಿದೆ. ಅಲ್ಲದೆ ಈಗ ಕಳ್ಳತನದಲ್ಲಿ ಪಾಲ್ಗೊಂಡಿರುವರ ಹೆಡೆಮುರಿ ಕಟ್ಟಬೇಕಿದೆ.

top videos
    First published: