ಗಂಡ, ಅತ್ತೆ ಮತ್ತು ಮಾವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಗೃಹಿಣಿ ; ಮಂಡ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ

ಕೋಪದ ಕೈಗೆ ಬುದ್ದಿಕೊಟ್ಟ ಹೆಂಡತಿ ನಾಗಮಣಿ ತನ್ನ ಹಠದ ಕಾರಣದಿಂದ ಸುಂದರವಾಗಿದ್ದ ತನ್ನ ಇಡೀ ಸಂಸಾರಕ್ಕೆ ಕೊಳ್ಳಿ ಇಟ್ಟುಕೊಂಡಿದ್ದಾಳೆ.

 ನಾಗಮಣಿ

ನಾಗಮಣಿ

  • Share this:
ಮಂಡ್ಯ(ಅಕ್ಟೋಬರ್​. 21): ಮನೆಯಲ್ಲಿ ತನ್ನ ಮಾತು ಕೇಳದ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಗಂಡ, ಅತ್ತೆ ಹಾಗೂ ಮಾವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಗಂಡ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸೊಸೆಯ ಮಾರಣಾಂತಿಕ ಹಲ್ಲೆಯಿಂದ ಗಾಯಗೊಂಡಿರುವ ಅತ್ತೆ ಹಾಗೂ ಮಾವನ ಸ್ಥಿತಿ ಗಂಭೀರವಾಗಿದೆ‌. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಗರಾಜು ಎಂಬು ಮನೆಯಲ್ಲಿ ಹೆಂಡತಿ ನಾಗಮಣಿ ತನ್ನ ಮಾತು ಕೇಳಿದ ಕಾರಣಕ್ಕೆ ತನ್ನ ಗಂಡ ಸೇರಿದಂತೆ ಅತ್ತೆ ಹಾಗೂ ಮಾವನ‌ ಮೇಲೆ ತುರಿಯುವ ಮನೆಯಿಂದ ಹಲ್ಲೆ‌ ನಡೆಸಿ ಗಂಭೀರ ಗಾಯಮಾಡಿದ್ದಳು. ಘಟನೆಯಲ್ಲಿ ಗಂಡ ನಾಗರಾಜು(46) ಅತ್ತೆ ಕುಳ್ಳಮ್ಮ(60)ಮಾವ ವೆಂಕಟೇಗೌಡ(67)ಗಂಭೀರ ಗಾಯಗೊಂಡು ಮೈಸೂರಿನ ಕುವೆಂಪುನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು‌.

ಇನ್ನು ಗಂಭೀರ ಗಾಯಗೊಂಡ ಮೂವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಎರಡು‌ ದಿನಗಳಿಂದ ಚಿಕಿ ತ್ಸೆ ಪಡೆಯುತ್ತಿದ್ದು, ಇಂದು ಗಂಡ ನಾಗರಾಜು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಅತ್ತೆ ಮಾವರ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ‌. ಇನ್ನು ಗಂಭೀ ರವಾಗಿ ಹಲ್ಲೆ‌ ಮಾಡಿದ ಹೆಂಡತಿ‌ ನಾಗಮಣಿಯನ್ನು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಪಾಲಿಕೆ ಮೇಯರ್ ತಸ್ನಿಂ ಗರಂ ಯಾಕೆ ಗೊತ್ತಾ?

ನಾಗಮಣಿಗೆ ಇಬ್ಬರು ಗಂಡು ಮಕ್ಕಳಿದ್ದು ಈ ಮಕ್ಕಳು ಇದೀಗ ಅನಾಥರಾಗಿದ್ದಾರೆ. ಅತ್ತ ತಂದೆ ಹೆಂಡತಿಯ ಹಲ್ಲೆಯಿಂದ ಮೃತಪಟ್ಟಿದ್ರೆ, ಇತ್ತ ತಾಯಿ ಕೂಡ ಜೈಲು ಪಾಲಾಗಿದ್ದಾಳೆ. ಇದರ ನಡುವೆ ಮಕ್ಕಳನ್ನು‌ ಮುದ್ದು ಮಾಡುತ್ತಿದ್ದ ತಾತ ಹಗೂ ಅಜ್ಜಿಯ ಸ್ಥಿತಿ ಕೂಡ  ಆಸ್ಪತ್ರೆಯಲ್ಲಿ ತೀರಾ ಗಂಭೀರವಾಗಿದೆ.

ಒಟ್ಟಾರೆ ಕೋಪದ ಕೈಗೆ ಬುದ್ದಿಕೊಟ್ಟ ಹೆಂಡತಿ ನಾಗಮಣಿ ತನ್ನ ಹಠದ ಕಾರಣದಿಂದ ಸುಂದರವಾಗಿದ್ದ ತನ್ನ ಇಡೀ ಸಂಸಾರಕ್ಕೆ ಕೊಳ್ಳಿ ಇಟ್ಟುಕೊಂಡಿದ್ದಾಳೆ. ಅಲ್ಲದೇ ತನ್ನ‌ ಹಠದ ಕಾರಣದಿಂದ ಇಡೀ ಕುಟುಂಬವೇ ಇದೀಗ ಸರ್ವನಾಶದ ಅಂಚಿಗೆ ಬಂದಿದ್ದು, ತನ್ನ ಮಕ್ಕಳನ್ನು ಅನಾಥರನ್ನಾಗಿಸಿ ತಾನು ಕೂಡ ಜೈಲು ಪಾಲಾಗಿದ್ದಾಳೆ.
Published by:G Hareeshkumar
First published: