news18-kannada Updated:June 17, 2020, 7:26 AM IST
ಸಾಂದರ್ಭಿಕ ಚಿತ್ರ
ಕಾರವಾರ(ಜೂ.17): ಆರ್ಥಿಕತೆಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಲಾಕ್ ಡೌನ್ ಸಡಿಲಿಕೆಮಾಡಿ ಸರಕಾರ ಹೋಟೆಲ್ ಮತ್ತು ಸಾರಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇವೆರಡು ಈಗ ತೀರಾ ನಷ್ಟದಲ್ಲೆ ನಡೆಯುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರ ಸೇರಿ ಜಿಲ್ಲೆಯ ಎಲ್ಲ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೋಟೆಲ್ ಉದ್ಯಮ ನೆಲಕಚ್ಚಿದೆ. ಆರ್ಥಿಕತೆಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಸ್ಥಗಿತವಾಗಿದ್ದ ಸರಕಾರಿ ಹಾಗು ಖಾಸಗಿ ಸಾರಿಗೆ ಸಂಚಾರಕ್ಕೆ ಮತ್ತು ಹೋಟೆಲ್ ಉದ್ಯಮಕ್ಕೆ ಸರಕಾರ ಅವಕಾಶ ನೀಡಿತ್ತು.
ಈಗ ಈ ಎರಡಕ್ಕೂ ಅವಕಾಶ ನೀಡಿ ಹದಿನೈದು ದಿನ ಕಳೆದರು ಹೋಟೆಲ್ ಉದ್ಯಮ ತೀರಾ ನಷ್ಟದಲ್ಲಿ ಸಾಗುತ್ತಿದ್ರೆ ಬಸ್ ಸಂಚಾರದಲ್ಲಿ ಪ್ರಯಾಣಿಕರ ಕೊರತೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರಿಗೆ ತೀರಾ ನಷ್ಟದಲ್ಲಿ ಸಾಗುತ್ತಿದೆ. ಪ್ರಯಾಣಿಕರಿಗೆ ಅತಿ ಅವಶ್ಯಕತೆ ಇದ್ದ ಜಿಲ್ಲೆ ಮತ್ತು ತಾಲೂಕಿಗೆ ಬಸ್ ವ್ಯವಸ್ಥೆ ಇದ್ದರೂ ಕೂಡಾ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿದೆ.
ಇನ್ನೂ ಕಾರವಾರದಲ್ಲಿ ಹೋಟೆಲ್ ಉದ್ಯಮವಂತು ತೀರಾ ನಷ್ಟದಲ್ಲಿದೆ. ಇಲ್ಲಿನ ಪ್ರಮುಖ ಹೋಟೆಲ್ ಗಳಾದ ಅಮೃತ್, ಸಾಯಿ ಇಂಟರ್ ನ್ಯಾಷನಲ್, ಪ್ರೀಮಿಯರ್ ಹೀಗೆ ವಿವಿಧ ಹೊಟೇಲ್ ಗಳಲ್ಲಿ ಗ್ರಾಹಕರು ತುಂಬಿ ತುಳುಕುತ್ತಿದ್ದರು.
ಇದನ್ನೂ ಓದಿ :
ರಸ್ತೆ ಸಂಪರ್ಕದಿಂದ ಎಲ್ಲ ಸಮಸ್ಯೆ ನಿವಾರಣೆ ಎಂದುಕೊಂಡ ಗ್ರಾಮಸ್ಥರು - ಗ್ರಾಮಕ್ಕೆ ಮುಳುವಾದ ರಸ್ತೆ ಅಭಿವೃದ್ದಿ ಕಾಮಗಾರಿ
ಅದೇ ನಿರೀಕ್ಷೆಯಲ್ಲೆ ಲಾಕ್ ಡೌನ್ ಸಡಿಲಿಕೆ ಬಳಿಕ ಹೋಟೆಲ್ ಉದ್ಯಮ ಆರಂಭಿಸಿದ ಮಾಲಿಕರ ನಿರೀಕ್ಷೆ ಹುಸಿ ಆಗಿದೆ. ಗ್ರಾಹಕರ ಕೊರತೆ ಮತ್ತು ಜಿಲ್ಲೆಗೆ ಪ್ರವಾಸಿಗರ ನಿಷೇಧ, ಜತೆಗೆ ಕೊರೋನಾ ಭಯ ಇನ್ನೂ ಕೂಡಾ ಮುಕ್ತ ಮನಸ್ಸಿನಿಂದ ಗ್ರಾಹಕರಿಗೆ ಹೋಟೆಲ್ ಕಡೆ ಬರಲು ಬಿಡುತ್ತಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ಎರಡು ತೀರಾ ನಷ್ಟದಲ್ಲಿ ಸಾಗುತ್ತಿದ್ರೆ ಹೋಟೆಲ್ ಉದ್ಯಮಕ್ಕೆ ಅವಕಾಶ ಕೊಟ್ಟು ಗ್ರಾಹಕರ ಕೊರತೆಯಿಂದ ಪ್ರಯೋಜನವಾಗುತ್ತಿಲ್ಲ. ಮುಂದೆ ಏನಾಗೊತ್ತೆ ಎನ್ನುವುದು ಪ್ರಶ್ನೆಯಾಗಿದೆ.
First published:
June 17, 2020, 7:26 AM IST