HOME » NEWS » District » HOSPITALS LOOTING MONEY IN NAME OF COVID ALLEGES HD REVANNA AKH SNVS

ಕೊರೋನಾ ಚಿಕಿತ್ಸೆ ನೆಪದಲ್ಲಿ ಲಕ್ಷ ಲಕ್ಷ ಲೂಟಿ; ಆಸ್ಪತ್ರೆಗೆ ಬೀಗ ಜಡಿಯುತ್ತೇನೆ: ಹೆಚ್ ಡಿ ರೇವಣ್ಣ

ಕೊರೋನಾ ವೈರಸ್ ಸೋಂಕಿತರಿಂದ ಖಾಸಗಿ ಆಸ್ಪತ್ರೆಗಳು ಮನಬಂದಂತೆ ಹಣ ಸುಲಿಗೆ ಮಾಡುತ್ತಿವೆ. ಆಸ್ಪತ್ರೆಗಳ ಈ ಧನದಾಹಕ್ಕೆ ಕಡಿವಾಣ ಹಾಕದಿದ್ದರೆ ಜೆಡಿಎಸ್ ಕಾರ್ಯಕರ್ತರು ಈ ಆಸ್ಪತ್ರೆಗಳಿಗೆ ಬೀಗ ಜಡಿಯುತ್ತಾರೆ ಎಂದು ಹೆಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದ್ದಾರೆ.

news18-kannada
Updated:October 22, 2020, 7:21 AM IST
ಕೊರೋನಾ ಚಿಕಿತ್ಸೆ ನೆಪದಲ್ಲಿ ಲಕ್ಷ ಲಕ್ಷ ಲೂಟಿ; ಆಸ್ಪತ್ರೆಗೆ ಬೀಗ ಜಡಿಯುತ್ತೇನೆ: ಹೆಚ್ ಡಿ ರೇವಣ್ಣ
ಮಾಜಿ ಸಚಿವ ಹೆಚ್.ಡಿ. ರೇವಣ್ಣ
  • Share this:
ಹಾಸನ: ಕೊರೋನಾ ಚಿಕಿತ್ಸೆ ನೆಪದಲ್ಲಿ ಲಕ್ಷಾಂತರ ರೂ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜೆಡಿಎಸ್ ಪಕ್ಷದಿಂದ ಅಂತಹಾ ಆಸ್ಪತ್ರೆಗಳಿಗೆ ಬೀಗ ಜಡಿಯುವುದಾಗಿ ಮಾಜಿ ಸಚಿವ ಎಚ್ ಡಿ ರೇವಣ್ಣ ಎಚ್ಚರಿಕೆ ನೀಡಿದರು. ಹಾಸನ ನಗರದಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಕೊರೋನಾ ಚಿಕಿತ್ಸೆಗೆ ಬೇಕಾಬಿಟ್ಟಿ ಹಣವಸೂಲಿ ಮಾಡುತ್ತಿರುವುದರ ವಿರುದ್ಧ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ; ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಹೇಳೋರು ಕೇಳೋರು ಇಲ್ಲದಂತಾಗಿದೆ ಹಾಗೂ ರಾಜ್ಯದಲ್ಲಿ ಸರ್ಕಾರದ ಆಡಳಿತ ಇದೆಯೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ಲಕ್ಷ ಲಕ್ಷ ಪೀಕುತ್ತಿರೊ ಖಾಸಗಿ ಆಸ್ಪತ್ರೆಗಳು: ಇತ್ತೀಚೆಗೆ ಕೆಂಚಮಾರನಹಳ್ಳಿ ಯುವತಿಯ ಚಿಕಿತ್ಸೆಗೆ ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ 10 ಲಕ್ಷ ಹಣ ವಸೂಲಿ ಮಾಡಲಾಗಿದೆ. ಇಷ್ಟು ಹಣ ನೀಡಿದರೂ ಸಹ ಯುವತಿ ಬದುಕಿಲ್ಲ. ಈಗ ಆ ಕುಟುಂಬ ಬೀದಿಪಾಲಾಗುವ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ನಗರದ ಜೈನ ಸಮುದಾಯದ ಓರ್ವ ವ್ಯಕ್ತಿ ಅದೇ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು 15 ಲಕ್ಷ ವಸೂಲಿ ಮಾಡಿದ್ದಾರೆ. ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಬೆಡ್​ಗೆ ಐದರಿಂದ ಹತ್ತು ಸಾವಿರ ರೂ ಪ್ರತಿದಿನಕ್ಕೆ ವಸೂಲಿ ಮಾಡುತ್ತಿರುವುದು ಎಷ್ಟು ಸರಿ? ಈ ರೀತಿ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾಧಿಕಾರಿ ಕಠಿಣ ಕ್ರಮ ಜರುಗಿಸಬೇಕು ಎಂದು ರೇವಣ್ಣ ಆಗ್ರಹಿಸಿದರು.

ಇದನ್ನೂ ಓದಿ: ಸಿಗಂಧೂರು ದೇವಸ್ಥಾನ ಕಿತ್ತಾಟ ಪ್ರಕರಣ: ಕೋರ್ಟ್ ಮಧ್ಯಸ್ಥಿಕೆಯಿಂದ ಸುಖಾಂತ್ಯ

ಕೂಡಲೇ ಜಿಲ್ಲಾಧಿಕಾರಿಗಳು ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಹಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಬೇಕು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿರುವ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದರೊಂದಿಗೆ ಕಠಿಣ ಎಚ್ಚರಿಕೆ ನೀಡಿ ಬಡವರನ್ನು ಉಳಿಸಬೇಕು ಎಂದು ಮಾಜಿ ಪಿಡಬ್ಲ್ಯೂಡಿ ಸಚಿವರು ಒತ್ತಾಯಿಸಿದರು.

30 ಲಕ್ಷ ಬಡ್ಡಿ...!!

ಕಾವೇರಿ ಗ್ರಾಮೀಣ ಬ್ಯಾಂಕ್​ನಲ್ಲಿ ಸಾಲ ಪಡೆದು 5 ಲಕ್ಷಕ್ಕೆ ಕಟ್ಟಾಯ ಹೋಬಳಿಯ ಓರ್ವ ರೈತ ಟ್ರ್ಯಾಕ್ಟರ್ ಖರೀದಿಸಿದ್ದು ಇದಕ್ಕೆ 30 ಲಕ್ಷ ಬಡ್ಡಿಯನ್ನು ವಿಧಿಸಿರುವ ಬ್ಯಾಂಕ್ ರೈತರ ಶೋಷಣೆಗೆ ಇಳಿದಿದೆ. ಇಂತಹ ಘಟನೆಗಳು ಜಿಲ್ಲೆಯಲ್ಲಿ ಅಲ್ಲದೆ ರಾಜ್ಯದ ಹಲವೆಡೆ ನಡೆಯುತ್ತಿದೆ. ರೈತ ಪರ ಸರ್ಕಾರ ಎಂದ ಬಿಜೆಪಿ ಯಾವ ರೀತಿಯ ಆಡಳಿತ ನೀಡುತ್ತಿದೆ ಎಂದು ಎಚ್ ಡಿ ರೇವಣ್ಣ ಕಿಡಿಕಾರಿದರು. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಜನರು ದಂಗೆ ಹೇಳುವ ಪರಿಸ್ಥಿತಿ ದೂರ ಇಲ್ಲ ಎಂದ ಅವರು, ಬಡವರು ಹಾಗೂ ರೈತರ ವಿರುದ್ಧ ಸರ್ಕಾರದ ದಬ್ಬಾಳಿಕೆಯನ್ನು ತಡೆಯಬೇಕಿದೆ ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಗಂಡ, ಅತ್ತೆ ಮತ್ತು ಮಾವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಗೃಹಿಣಿ ; ಮಂಡ್ಯದಲ್ಲೊಂದು ಹೃದಯ ವಿದ್ರಾವಕ ಘಟನೆಚುನಾವಣೆ ಮುಂದಕ್ಕೆ:

ಸಂಜೀವಿನಿ ಸಹಕಾರ ಆಸ್ಪತ್ರೆಯ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವಂತೆ ಮೊನ್ನೆ ಸೋಮವಾರ ಪ್ರತಿಭಟನೆ ನಡೆಸಿದ ನಂತರ ಉಪನಿಬಂಧಕರು ಚುನಾವಣೆ ಮುಂದೂಡಲು ಸಮ್ಮತಿ ಸೂಚಿಸಿದ್ದು ಪಾರದರ್ಶಕತೆ ಕಾಪಾಡಿಕೊಂಡು ಚುನಾವಣೆಯನ್ನು ಮುಂದಿನ ದಿನದಲ್ಲಿ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಜನತಾ ಬಜಾರ್ ಹಾಗೂ ಸಹಕಾರ ಸಂಘಗಳ ಚುನಾವಣೆಗೆ ನೇಮಿಸಿರುವ ಅಧಿಕಾರಿ ಸುನಿಲ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇವರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು ಆತನನ್ನು ಅಮಾನತು ಮಾಡುವಂತೆ ಒತ್ತಾಯಿಸಲಾಗಿದೆ ಎಂದು ಇದೇ ವೇಳೆ ರೇವಣ್ಣ ತಿಳಿಸಿದರು.

70 ಕೋಟಿ ನಷ್ಟ:

ರಾಜ್ಯದ ಕೆಎಂಎಫ್ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆಡಳಿತ ಮಂಡಳಿ ವೈಫಲ್ಯದಿಂದ 70 ಕೋಟಿ ರೂ ನಷ್ಟ ಅನುಭವಿಸಿದೆ. ಸರಿಯಾದ ವ್ಯವಹಾರ ನಡೆಯದೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸನ ಡೈರಿಯಲ್ಲಿಯೂ ಸಹ 250 ಕೋಟಿ ರು ಮೌಲ್ಯದ ಬೆಣ್ಣೆ- ತುಪ್ಪ ಹಾಗೂ ಹಾಲಿನ ಪೌಡರ್ ಮಾರಾಟವಾಗದೆ ಉಳಿದಿದೆಯೆಂದು ಹೇಳಿದ ಅವರು, ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ಕೆಎಂಎಫ್ ಬಲಗೊಳಿಸಬೇಕು ಎಂದು ಒತ್ತಾಯಿಸಿದರು.

ವರದಿ: ಡಿಎಂಜಿ ಹಳ್ಳಿ ಅಶೋಕ್
Published by: Vijayasarthy SN
First published: October 22, 2020, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories