ಜೂನ್ 8ರಿಂದಲೂ ಹೊರನಾಡಿನಲ್ಲಿ ಭಕ್ತರಿಗಿಲ್ಲ ದರ್ಶನ; ಕೊರೋನಾ ತಡೆಗಟ್ಟಲು ಬೇಕಾಗಿದೆ ಕಾಲಾವಕಾಶ

ಇನ್ನು ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ದೇವಾಲಯದಲ್ಲಿ ಮುನ್ನೆಚರಿಕಾ ಕ್ರಮಗಳನ್ನ ಕೈಗೊಳ್ಳುವ ಅವಶ್ಯಕತೆ ಇದೆ. ದೇವಾಲಯದ ಸುತ್ತಮುತ್ತ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಇದೆಲ್ಲದಕ್ಕೂ ಕಾಲಾವಕಾಶ ಬೇಕಾಗಿರುವುದರಿಂದ ಭಕ್ತರಿಗೆ ಸದ್ಯಕ್ಕೆ ಅವಕಾಶವಿಲ್ಲ. ಹೀಗಾಗಿ ಭಕ್ತರು ಸಹಕರಿಸಬೇಕೆಂದು ಧರ್ಮದರ್ಶಿ ಮನವಿ ಮಾಡಿದ್ದಾರೆ.

news18-kannada
Updated:June 6, 2020, 8:15 AM IST
ಜೂನ್ 8ರಿಂದಲೂ ಹೊರನಾಡಿನಲ್ಲಿ ಭಕ್ತರಿಗಿಲ್ಲ ದರ್ಶನ; ಕೊರೋನಾ ತಡೆಗಟ್ಟಲು ಬೇಕಾಗಿದೆ ಕಾಲಾವಕಾಶ
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ
  • Share this:
ಚಿಕ್ಕಮಗಳೂರು(ಜೂ.06): ರಾಜ್ಯಾದ್ಯಂತ ದೇವಾಲಯಗಳನ್ನು ಜೂನ್ 8 ರಿಂದ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ಹಾಗೂ ದೇವಾಲಯದಲ್ಲಿ ವಾಸ್ತವ್ಯ ಹೂಡಲು ನಿರಾಕರಿಸಲಾಗಿದೆ ಎಂದು ದೇವಾಲಯದ ಧರ್ಮಕರ್ತ ಡಾ.ಭೀಮೇಶ್ವರ ಜೋಶಿ ತಿಳಿಸಿದ್ದಾರೆ.

ಶುಕ್ರವಾರ ಪ್ರಕಟಣೆ ಹೊರಡಿಸಿದ್ದು, ಕೊರೋನಾ ಸೋಂಕು ತಡೆಗಟ್ಟಲು ಕಾಲಾವಕಾಶ ಬೇಕಿದೆ. ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವುದರಿಂದ ಕೊರೊನಾ ಸೋಂಕು ಹರಡುವ ಆತಂಕವಿದೆ. ಭಕ್ತರ ಹಿತದೃಷ್ಟಿ ಹಾಗೂ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜೂ.8ರಿಂದ ಅನ್ನಪೂಣೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ಹಾಗೂ ವಾಸ್ತವ್ಯಕ್ಕೆ ನಿರಾಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶ ಹಾಗೂ ರಾಜ್ಯಾದ್ಯಂತ ಕೊರೋನಾ ವೈರಸ್ ಅತಿವೇಗವಾಗಿ ಹರಡುತ್ತಿದೆ, ಒಂದು ವೇಳೆ ದೇವಾಲಯದಲ್ಲಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಮಸ್ಯೆ ಎದುರಾಗುತ್ತದೆ. ಕೆಲವೊಂದು ಧಾರ್ಮಿಕ ಕೈಂಕರ್ಯಗಳಿಗೆ ಸಮಸ್ಯೆ ಆಗುವ ಹಿನ್ನೆಲೆಯಲ್ಲಿ ಭಕ್ತರಿಗೆ ಅವಕಾಶವಿಲ್ಲ. ಎರಡು ತಿಂಗಳಿನಿಂದ ದೇವರ ದರ್ಶನ ಅವಿಕಾಶವಿರದ ಕಾರಣ ಏಕಾಏಕಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ ಭಕ್ತರು ಹೆಚ್ಚಾಗುವ ಸಾಧ್ಯತೆ ಇದೆ. ಭಕ್ತರು ಹೆಚ್ಚಾದಾಗ ಸಾಮಾಜಿಕ ಅಂತರ ಕಾಪಾಡೋದು ಕಷ್ಟವಾಗಬಹುದು. ಭಕ್ತರ ಹಿತದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ಭೀಮೇಶ್ವರ ಜೋಶಿ ತಿಳಿಸಿದ್ದಾರೆ.

ಅನ್‌ಲಾಕ್ ಆದ್ರೂ ಚೇತರಿಸದ ಫೋಟೋಗ್ರಫಿ ಉದ್ಯಮ; ಫೋಟೋಗ್ರಾಫರ್ಸ್​​ ಈಗ ಏನು ಮಾಡ್ತಿದಾರೆ ಗೊತ್ತಾ?

ಇನ್ನು ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ದೇವಾಲಯದಲ್ಲಿ ಮುನ್ನೆಚರಿಕಾ ಕ್ರಮಗಳನ್ನ ಕೈಗೊಳ್ಳುವ ಅವಶ್ಯಕತೆ ಇದೆ. ದೇವಾಲಯದ ಸುತ್ತಮುತ್ತ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಇದೆಲ್ಲದಕ್ಕೂ ಕಾಲಾವಕಾಶ ಬೇಕಾಗಿರುವುದರಿಂದ ಭಕ್ತರಿಗೆ ಸದ್ಯಕ್ಕೆ ಅವಕಾಶವಿಲ್ಲ. ಹೀಗಾಗಿ ಭಕ್ತರು ಸಹಕರಿಸಬೇಕೆಂದು ಧರ್ಮದರ್ಶಿ ಮನವಿ ಮಾಡಿದ್ದಾರೆ.

ಇನ್ನು ಫೇಸ್​​ಬುಕ್​ ಲೈವ್​​ನಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಆನ್ಲೈನ್ ಮೂಲಕ ಪೂಜೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.  ಸೇವೆ ಸಲ್ಲಿಸಲು ಅಪೇಕ್ಷೆ ಹೊಂದಿದವರು ದೇವಾಲಯದ ಕಚೇರಿ ದೂರವಾಣಿ ಸಂಖ್ಯೆ 9448282410 ಅಧವಾ 9900076410 ಸಂಖ್ಯೆಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ. ಇನ್ನು ಫೇಸ್ ಬುಕ್ ನಲ್ಲಿ ಪ್ರತಿದಿನ ಬೆಳ್ಳಿಗೆ 9 ಗಂಟೆ, ಮಧ್ಯಾಹ್ನ 1 ಗಂಟೆ ಹಾಗೂ ಸಂಜೆ 5 ಗಂಟೆಗೆ ಮಹಾಮಂಗಳರತಿಯ ಲೈವ್ ದೃಶ್ಯವನ್ನ ಫೇಸ್ ಬುಕ್ ನಲ್ಲಿ ದೇವಿಯ ದರ್ಶನ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
First published: June 6, 2020, 8:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading