Coorg - ಕೊಡಗಿನಲ್ಲಿ ಹೋಮ್ ಸ್ಟೇ, ರೆಸಾರ್ಟ್​ಗಳು ಬಂದ್

ಕೊಡಗಿನ ಹೋಮ್ ಸ್ಟೇ

ಕೊಡಗಿನ ಹೋಮ್ ಸ್ಟೇ

ಈಗಾಗಲೇ ಹೋಂ ಸ್ಟೇ, ರೆಸಾರ್ಟ್​ನಲ್ಲಿ ಪ್ರವಾಸಿಗರು ಇದ್ದರೆ, ಅವರ ಬುಕಿಂಗ್ ಅವಧಿ ಮುಗಿಯುತ್ತಿದ್ದಂತೆ ವಾಪಾಸ್ ಕಳುಹಿಸುವಂತೆ ಸೂಚಿಲಾಗಿದೆ. ಅಲ್ಲದೆ ಹೊಸ ಬುಕಿಂಗ್ ಮಾಡದಂತೆ ಕೊಡಗಿನ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

  • Share this:

ಕೊಡಗು(ಜುಲೈ 08): ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನಾದ್ಯಂತ ಹೋಂ ಸ್ಟೇ ಮತ್ತು ರೆಸಾರ್ಟ್​​ಗಳು ಬಂದ್ ಆಗಿವೆ. ಇವುಗಳನ್ನ ಮುಚ್ಚುವಂತೆ ಕೊಡಗಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿನ್ನೆ ಆದೇಶ ಮಾಡಿದ್ದರು.

ಎರಡು ಸಾವಿರಕ್ಕೂ ಹೆಚ್ಚು ಹೋಂಸ್ಟೇ ರೆಸಾರ್ಟ್‍ಗಳು ಕೊಡಗಿನಲ್ಲಿವೆ. ಲಾಕ್ ಡೌನ್ ತೆರವು ಮಾಡಿದ ಬಳಿಕ ಇತ್ತೀಚೆಗಷ್ಟೇ ಅಂದರೆ ಜೂನ್ 8 ರ ಬಳಿಕ ಹೋಂಸ್ಟೇ ರೆಸಾರ್ಟ್ ತೆರೆಯಲಾಗಿತ್ತು. ಬಳಿಕ ಪ್ರವಾಸಿಗರು ಜಿಲ್ಲೆಗೆ ಮತ್ತೆ ಬರಲಾರಂಭಿಸಿದ್ದರು. ಜೊತೆಗೆ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಈಚೆಗಷ್ಟೇ ಕೊಡಗಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ತೀವ್ರಗೊಳ್ಳುತ್ತಿದ್ದು, ನೂರರ ಗಡಿ ಸಮೀಪಿಸಿವೆ. ಹೀಗಾಗಿ ಎಚ್ಚುತ್ತುಕೊಂಡಿರುವ ಜಿಲ್ಲಾಡಳಿತ ಹೋಂಸ್ಟೇ, ರೆಸಾರ್ಟ್‍ಗಳನ್ನು ಬಂದ್ ಮಾಡುವಂತೆ ಆದೇಶ ಮಾಡಿದ್ದಾರೆ.

ಈಗಾಗಲೇ ಹೋಂ ಸ್ಟೇ, ರೆಸಾರ್ಟ್​ನಲ್ಲಿ ಪ್ರವಾಸಿಗರು ಇದ್ದರೆ, ಅವರ ಬುಕಿಂಗ್ ಅವಧಿ ಮುಗಿಯುತ್ತಿದ್ದಂತೆ ವಾಪಾಸ್ ಕಳುಹಿಸುವಂತೆ ಸೂಚಿಲಾಗಿದೆ. ಅಲ್ಲದೆ ಹೊಸ ಬುಕಿಂಗ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ನಿಯಮ ಮುಂದಿನ ಆದೇಶದವರೆಗೆ ಅನ್ವಯ ಆಗಲಿದ್ದು, ಉಲ್ಲಂಘನೆ ಆದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಕ್ರಾಂತಿ; ಸಿಟಿಯಿಂದ ಹಳ್ಳಿಗೆ ಬಂದು ಕೃಷಿ ಮಾಡುತ್ತಿರುವ ಯುವಕರು



ಕೊಡಗಿನಲ್ಲಿ ಇವತ್ತಿನವರೆಗೂ ಒಟ್ಟು 92 ಪ್ರಕರಣಗಳು ದಾಖಲಾಗಿವೆ. ಇವತ್ತು ಒಂದೇ ದಿನ 12 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಒಟ್ಟು 15 ಮಂದಿ ಈವರೆಗೆ ಬಿಡುಗಡೆಯಾಗಿದ್ದಾರೆ. ಈಗ ಅಲ್ಲಿ 76 ಸಕ್ರಿಯ ಪ್ರಕರಣಗಳಿವೆ.

Published by:Vijayasarthy SN
First published: