• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಒತ್ತಾಯಪೂರ್ವಕವಾಗಿ ಬಂದ್​ ಮಾಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ

ಒತ್ತಾಯಪೂರ್ವಕವಾಗಿ ಬಂದ್​ ಮಾಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ

ಗೃಹ ಸಚಿವ ಬಸವರಾಜ​​ ಬೊಮ್ಮಾಯಿ

ಗೃಹ ಸಚಿವ ಬಸವರಾಜ​​ ಬೊಮ್ಮಾಯಿ

ಗೋ ಹತ್ಯೆ ನಿಷೇಧ ಕಾಯ್ದೆ ಇನ್ನಷ್ಟು ಕಠಿಣಗೊಳಿಸಲು ಸರಕಾರ ನಿರ್ಧರಿಸಿದೆ. ಇದಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳೂ ನಡೆಯುತ್ತಿದೆ. ಅಲ್ಲದೆ, ಗೋವುಗಳ ಕಳ್ಳ ಸಾಗಾಟ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

  • Share this:

ಕಾರವಾರ (ಡಿಸೆಂಬರ್​ 04); ಉಪ ಚುನಾವಣೆಯ ದೃಷ್ಟಿಕೋನದಿಂದ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಇತ್ತೀಚೆಗೆ ಮರಾಠ ಅಭಿವೃದ್ಧಿ ನಗಮವನ್ನು ಘೋಷಣೆ ಮಾಡಿದ್ದರು. ಅಲ್ಲದೆ, 50 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು. ಆದರೆ, ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್​ಗೆ ಘೋಷಣೆ ಮಾಡಿವೆ. ಈ ಕುರಿತು ಇಂದು ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, "ನಾಳೆಯ ಕರ್ನಾಟಕ ಬಂದ್ ಮಾಡದಿರಲು ನಾನು ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡುತ್ತೇನೆ. ಒಂದು ವೇಳೆ ಬಂದ್​ ಮಾಡಲೇಬೇಕಾದರೆ ಸಾರ್ವಜನಿಕರಿಗೆ ತೊಂದರೆ ಮಾಡಬೇಡಿ. ಇನ್ನೂ ಒತ್ತಾಯಪೂರ್ವಕವಾಗಿ ಬಂದ್​ ಮಾಡಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.


ಪತ್ರಿಕಾಗೋಷ್ಠಿ ನಡೆಸಿ ಸುದ್ದಿಗಾರರೊಮದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, "ಬಂದ್​ ನೆಪದಲ್ಲಿ ಜನಜೀವನವನ್ನು ಅಸ್ತವ್ಯಸ್ಥ ಮಾಡುವುದು ಸರಿಯಲ್ಲ. ಪ್ರತಿಭಟನೆ ಮಾಡಲು ಹಲವು ರೀತಿಯ ಅವಕಾಶಗಳಿವೆ. ಎಲ್ಲದಕ್ಕೂ ಬಂದ್​ ಒಂದೇ ಪರಿಹಾರವಲ್ಲ. ಆದರೆ, ಒತ್ತಾಯದಿಂದ ಬಂದ್ ಮಾಡಿಸಿದರೆ ಅಂತವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.


ಇದೇ ಸಂದರ್ಭದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕುವ ಬಗ್ಗೆ ಮಾತನಾಡಿರುವ ಅವರು, "ಕೋವಿಡ್ ಹರಡುವ ಭಿತಿಯಿಂದ ಸರಕಾರ ಹೊಸ ವಾರ್ಷಚರಣೆ ಆಚರಿಸಲು ನಿರ್ಭಂದ ಹೇರುವ ಬಗ್ಗೆ ಈಗಾಗಲೆ ಅಧಿಕಾರಿಗಳ ಜತೆ ಹತ್ತಾರು ಸಭೆಗಳು ನಡೆಯುತ್ತಿವೆ. ನೈಟ್ ಕರ್ಪ್ಯೂ ಹೇರುವ ಬಗ್ಗೆ ಹಲವು ಸಲಹೆ ಸೂಚನೆಗಳು ಬಂದಿವೆ ಈ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳು ಸೂಕ್ತ ತಿರ್ಮಾನ ಕೈಗೊಳ್ಳಲ್ಲಿದ್ದಾರೆ" ಎಂದು ತಿಳಿಸಿದ್ದಾರೆ. ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆಯನ್ನ ಗಮನಿಸಿದರೆ ಈ ವರ್ಷ ಹೊಸ ವರ್ಷಾಚರಣೆಗೆ ಬ್ರೇಕ್ ಬೀಳುವ ಸಾದ್ಯತೆ ಹೆಚ್ಚು ಎಂಬುದು ಸ್ಪಷ್ಟವಾಗುತ್ತಿದೆ.


ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಮನೆ ಹುಡುಕುತ್ತಿರುವ ಪ್ರಿಯಾಂಕ ಗಾಂಧಿ; ಪಕ್ಷ ಸಂಘಟನೆಯ ಹುರುಪಿನಲ್ಲಿ ಕಾರ್ಯಕರ್ತರು


ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆಯೂ ಮಾತನಾಡಿರುವ ಅವರು, "ಗೋ ಹತ್ಯೆ ನಿಷೇಧ ಕಾಯ್ದೆ ಇನ್ನಷ್ಟು ಕಠಿಣಗೊಳಿಸಲು ಸರಕಾರ ನಿರ್ಧರಿಸಿದೆ. ಇದಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳೂ ನಡೆಯುತ್ತಿದೆ. ಅಲ್ಲದೆ, ಗೋವುಗಳ ಕಳ್ಳ ಸಾಗಾಟ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.

top videos
    First published: