HOME » NEWS » District » HOME ISOLATION PATIENT SHIFTED INTO COVID CARE CENTER BUT THERE IS NO FACILITIES RHHSN SBR

ಸೋಂಕಿತರು ಹೋಂ ಐಸೋಲೇಷನ್​ನಿಂದ ಕೋವಿಡ್ ಕೇರ್ ಸೆಂಟರ್​ಗೆ ಶಿಫ್ಟ್; ಅವ್ಯವಸ್ಥೆಯ ಆಗರ

ಸ್ಥಳೀಯರ ಒತ್ತಾಯಕ್ಕೆ ಮಣಿದು ಶಾಲೆಯಲ್ಲಿ ಕ್ವಾರಂಟೈನ್  ಮಾಡಿದ ಪುರಸಭೆ ಅಧಿಕ್ಷಕ ರೆಡ್ಡಿ ರಾಯನಗೌಡ ಕೊನೆಗೆ ಕ್ಯಾನ್ಸಲ್ ಮಾಡಿದರು, ಮತ್ತೆ ಬೇರೆ ಕಡೆ ಕ್ವಾರಂಟೈನ್ ಕೇಂದ್ರ ಮಾಡಲು ಸ್ಥಳ ಹುಡುಕುತ್ತಿದ್ದಾರೆ.  

news18-kannada
Updated:May 18, 2021, 2:57 PM IST
ಸೋಂಕಿತರು ಹೋಂ ಐಸೋಲೇಷನ್​ನಿಂದ ಕೋವಿಡ್ ಕೇರ್ ಸೆಂಟರ್​ಗೆ ಶಿಫ್ಟ್; ಅವ್ಯವಸ್ಥೆಯ ಆಗರ
ಕೋವಿಡ್ ಕೇರ್ ಸೆಂಟರ್.
  • Share this:
ಕೊಪ್ಪಳ: ಸೋಂಕಿತರು ಹೋಂ ಐಸೋಲೇಷನ್​ನಲ್ಲಿದ್ದರೆ ಸೋಂಕು ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ಅವರನ್ನು ಕೋವಿಡ್ ಕೇರ್ ಸೆಂಟರ್​ಗೆ ಸ್ಥಳಾಂತರಿಸಲು ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ಪಾಟೀಲ ಸೂಚನೆ ನೀಡಿದ್ದರು. ಈ ಸೂಚನೆಯ ಹಿನ್ನಲೆಯಲ್ಲಿ ಅಧಿಕಾರಿಗಳು ಕೋವಿಡ್ ಆರೈಕೆ ಕೇಂದ್ರ ಮಾಡಿದ್ದಾರೆ. ಆದರೆ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ಸೋಂಕಿತರು ಪರದಾಡುತ್ತಿದ್ದಾರೆ. ಮಹಾಮಾರಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಈ ಮಧ್ಯೆ ಸೋಂಕಿತರು ಹೋಂ ಐಸೋಲೇಷನ್ ಆಗುವವರೆ ಹೆಚ್ಚಾಗಿದೆ. ಇದರಿಂದ ಮನೆಯವರು ಹಾಗು ಅಕ್ಕ ಪಕ್ಕದವರಿಗೆ ಸೋಂಕು ಹರಡುವ ಭೀತಿಯಿಂದ ಅವರನ್ನು ಹೋಂ ಕ್ವಾರಂಟೈನ್ ನಿಂದ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವಸರಕ್ಕೆ ಬಿದ್ದ ಅಧಿಕಾರಿಗಳು ಕೋವಿಡ್ ಕೇರ್ ಸೆಂಟರ್ ಗಳು ಅವ್ಯವಸ್ಥೆಯ ಆಗರವಾಗಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪುರದ ಮುರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಲ್ಲಿಗೆ ಕಾರಟಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿಯ ಸೋಂಕಿತರನ್ನು ಆರೈಕೆ ಮಾಡಲು ಆರಂಭಿಸಲಾಗಿದೆ. ಈ ಕೇಂದ್ರದಲ್ಲಿ ನಿನ್ನೆ ಮಧ್ಯಾಹ್ನದ ವೇಳೆಗೆ ಸಿದ್ದಾಪುರದಿಂದ 12 ಜನರನ್ನು ಕರೆದುಕೊಂಡು ಬರಲಾಗಿದೆ. ಆದರೆ, ಸಂಜೆ 7 ಗಂಟೆಯಾದರೂ ಯಾರೂ ಇತ್ತ ಸುಳಿದಿಲ್ಲ. ಕೋಡ್ ಕೇರ್ ಸೆಂಟರ್​ನಲ್ಲಿ ಕನಿಷ್ಠ ಕುಡಿವ ನೀರಿನ ವ್ಯವಸ್ಥೆ ಕೂಡ ಇಲ್ಲ. ಇದರಿಂದ ಬೇಸತ್ತ ಸೋಂಕಿತರು ನಮ್ಮನ್ನು ಇಲ್ಲಿಗೆ ತಂದು ಬಿಟ್ಟು ಹೋಗಿದ್ದಾರೆ. ಆಮೇಲೆ ಏನಾಯಿತು ಎಂದು ಯಾರೂ ಕೇಳುತ್ತಿಲ್ಲ. ನಮ್ಮ ಪ್ರಾಬ್ಲುಂ ಯಾರಿಗ್ಹೇಳೋಣ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ತಮ್ಮ ಗ್ರಾಮದಲ್ಲಿ ಇನ್ನಷ್ಟು ಜನರು ಸೋಂಕಿತರಿದ್ದರೂ ಅವರ ಸೋಂಕಿನ ನಂತರ ಐಸೋಲೇಷನ್ ಅವಧಿ ಮುಗಿದಿದೆ ಎಂದು ಅವರನ್ನು ಕೋವಿಡ್ ಕೇರ್ ಸೆಂಟರ್​ಗೆ ಕರೆದುತಂದಿಲ್ಲ. ಸರಿಯಾದ ಸಮೀಕ್ಷೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಿಸುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಸೂಚನೆ; ಸಚಿವ ಬಸವರಾಜ ಬೊಮ್ಮಾಯಿ

ಇನ್ನೊಂದು ಕಡೆ ಮಹಾಮಾರಿ ಕೊರೋನಾದ ಬಗ್ಗೆ ಜನರು ಭಯಗೊಂಡಿದ್ದಾರೆ. ಈಗ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲು ಜಿಲ್ಲಾಡಳಿತ ಯತ್ನಿಸುತ್ತಿದೆ. ಆದರೆ ಜನರು ಇಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಬೇಡಿ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ ಸೆಂಟರ್ ಆರಂಭದ ಸಿದ್ದತೆಗೆ ಬಂದ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂಥದ್ದೆ ಒಂದು ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದಿದೆ. ಕೊರೋನಾ ಸೋಂಕಿತರ ಕ್ವಾರಂಟೈನ್ ಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಘಟನೆಯ ಕೊಪ್ಪಳದ ಕಾರಟಗಿಯಲ್ಲಿ ನಡೆದಿದೆ. ಕೊರೋನಾ ಸೋಂಕಿತರ ಕ್ವಾರಂಟೈನ್ ಮಾಡಲು ಸರ್ಕಾರ ಆದೇಶ ಮಾಡಿದ ಹಿನ್ನಲೆಯಲ್ಲಿ  ಕಾರಟಗಿಯ  ಪೊಲೀಸ್ ಕ್ವಾಟ್ರರ್ಸ್ ಬಳಿ ಇರುವ ಮೂರಾರ್ಜಿ ಶಾಲೆಯಲ್ಲಿ ಸೊಂಕಿತರಿಗೆ ಕ್ವಾರಂಟೈನ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಬೆಡ್ ಹಾಕಿ ಸಿದ್ದತೆ ಮಾಡಲಾಗಿತ್ತು. ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪುರಸಭೆಯ ಅಧಿಕಾರಿಗಳಿಗೆ ಇಲ್ಲಿ ಕ್ವಾರಂಟೈನ್ ಕೇಂದ್ರ ಬೇಡ ಎಂದು ಪಟ್ಟು ಹಿಡಿದರು. ಸ್ಥಳೀಯರು ವಿರೋಧ ಮಾಡಿದ್ದರಿಂದ ಮುರಾರ್ಜಿ ಶಾಲೆಯಲ್ಲಿ ಕ್ವಾರೆಂಟನ್ ಕ್ಯಾನ್ಸಲ್ ಮಾಡಲಾಯಿತು.
Youtube Video

ಕ್ವಾರಂಟೈನ್ ಮಾಡಿರುವ ಶಾಲೆ ಪಕ್ಕದಲ್ಲಿ ಪೊಲೀಸ್ ಕುಟುಂಬಗಳಿರುವುದರಿಂದ ಸ್ಥಳೀಯರ ವಿರೋಧ ವ್ಯಕ್ತಪಡಿಸಿದರು. ಪೊಲೀಸರು ನಮಗಾಗಿ ದಿನ ಪೂರ್ತಿ ಹೊರಗಡೆ ಇರ್ತಾರೆ. ಇಲ್ಲಿ ಸೋಂಕಿತರನ್ನು ಕ್ವಾರಂಟೈನ್ ಮಾಡುವುದರಿಂದ ಪೊಲೀಸ್ ಕುಟುಂಬಗಳು ಆತಂಕದಲ್ಲಿ ಇರಬೇಕಾಗುತ್ತದೆ. ಪೊಲೀಸರಿಗೆ ಸೋಂಕು ತಗುಲಿದರೆ ನಮ್ಮನ್ನು ಯಾರು ಕಾಯ್ತಾರೆ..? ಎಂದು ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯರ ಒತ್ತಾಯಕ್ಕೆ ಮಣಿದು ಶಾಲೆಯಲ್ಲಿ ಕ್ವಾರಂಟೈನ್  ಮಾಡಿದ ಪುರಸಭೆ ಅಧಿಕ್ಷಕ ರೆಡ್ಡಿ ರಾಯನಗೌಡ ಕೊನೆಗೆ ಕ್ಯಾನ್ಸಲ್ ಮಾಡಿದರು, ಮತ್ತೆ ಬೇರೆ ಕಡೆ ಕ್ವಾರಂಟೈನ್ ಕೇಂದ್ರ ಮಾಡಲು ಸ್ಥಳ ಹುಡುಕುತ್ತಿದ್ದಾರೆ.
Published by: HR Ramesh
First published: May 18, 2021, 2:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories