• Home
  • »
  • News
  • »
  • district
  • »
  • Holi Festival: ರಾಜ್ಯಾದ್ಯಂತ ಸಂಭ್ರಮದ ಹೋಳಿ; ಕಾರವಾರದ ಕಡಲತೀರದಲ್ಲಿ ರಂಗಿನಾಟ, ಸಮುದ್ರದಲ್ಲಿ ಮಿಂದೆದ್ದ ಜನ

Holi Festival: ರಾಜ್ಯಾದ್ಯಂತ ಸಂಭ್ರಮದ ಹೋಳಿ; ಕಾರವಾರದ ಕಡಲತೀರದಲ್ಲಿ ರಂಗಿನಾಟ, ಸಮುದ್ರದಲ್ಲಿ ಮಿಂದೆದ್ದ ಜನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಡಲನಗರಿ‌ ಕಾರವಾರದಲ್ಲಿ ಭರ್ಜರಿ ಹೋಳಿ ಸಂಭ್ರಮ .ಸಮುದ್ರd ಮಿಂದೆದ್ದ ಜನ, ಡಿಜೆ ಸದ್ದಿಗೆ ಯುವಕ-ಯುವತಿಯರ ಮಸ್ತ್​ ಡ್ಯಾನ್ಸ್​

  • Share this:

ಕಾರವಾರ (ಮಾ.18): ರಾಜ್ಯದೆಲ್ಲೆಡೆ ಸಂಭ್ರಮದ ಹೋಳಿ ಆಚರಣೆ (Holi Festival) ನಡೆದಿದೆ. ಮಕ್ಕಳು-ದೊಡ್ಡವರೆನ್ನುವ ಭೇದಭಾವವಿಲ್ಲದೆ ಬಣ್ಣದ ನೀರನ್ನೆರಚುವುದರ ಮೂಲಕ ಜನರು ಸಂಭ್ರಮಿಸಿದ್ರು. ಇತ್ತ ಕಡಲನಗರಿ ಕಾರವಾರದಲ್ಲಿಯೂ (Karwar) ಇಂದು ಜೋರಾಗಿಯೇ ಹೊಳಿ ಆಚರಿಸಲಾಗಿದೆ. ಮನೆಮಂದಿಯೆಲ್ಲಾ ಪ್ರೀತಿ ಪಾತ್ರರಿಗೆ ಬಣ್ಣ (Color) ಎರಚಿ ಪರಸ್ಪರ ಶುಭಾಶಯ (Wishes) ಕೊರಿದ್ರೆ ಇನ್ನು ಕೆಲ ಯುವಕ ಯುವತಿಯರು ಅಲ್ಲಲ್ಲಿ ಡಿಜೆ ಸದ್ದಿಗೆ (DJ Sound) ಹೆಜ್ಜೆಹಾಕಿ ಹೋಳಿಯನ್ನು ಫುಲ್ ಎಂಜಾಯ್ ಮಾಡಿದ್ದಾರೆ.


ಹಬ್ಬದ ಸಂಭ್ರಮ ಭರ್ಜರಿ.. ರಂಗಿನಾಟದಲ್ಲಿ ಮಿಂದೆದ್ದ ಜನ


ಕರ್ನಾಟಕದ ಕಾಶ್ಮೀರ ಕಾರವಾರದಲ್ಲಿ ಹೋಳಿ ಸಂಭ್ರಮ ಜೋರಾಗಿ ನಡೆದಿದೆ. ಕಳೆದ ವರ್ಷ ಕೊರೊನಾದಿಂದಾಗಿ ಕಳೆಗುಂದಿದ್ದ ಹೋಳಿ ಸಂಭ್ರಮ ಈ ಭಾರಿ ಡಬಲ್ ಆಗಿದೆ. ಕೋವಿಡ್ ಅಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ಹಿರಿಯರು ಕಿರಿಯರೆನ್ನದೆ ಬೆಳಿಗ್ಗೆಯಿಂದಲೇ ಪ್ರೀತಿ ಪಾತ್ರರಿಗೆ ಬಣ್ಣ ಎರಚಿ ಸಂಭ್ರಮಿಸಿದ್ದಾರೆ. ಇನ್ನು  ಕೆಲವೆಡೆ ಆಯಾ ಸಮುದಾಯದವರು ಆಯೋಜಿಸಿದ್ದ ಹೋಳಿ ಆಚರಣೆಯನ್ನು ಫುಲ್ ಕಲರ್ ಪುಲ್ ಆಗಿ ಆಚರಿಸಿದ್ದಾರೆ.


ಮಕ್ಕಳ ಹೋಳಿಯಾಟ ಬಲು ಜೋರು


ಮಕ್ಕಳು ಅಲ್ಲಲ್ಲಿ ಪಿಚಕಾರಿಗಳನ್ನು ಹಿಡಿದು ರಸ್ತೆಯಲ್ಲಿ ಹೋಗಿ ಬರುವವರ ಮೇಲೆ ಬಣ್ಣದ ನೀರನ್ನು ಎರಚಿ ಸಂಭ್ರಮಿಸಿದ್ರೆ, ನಗರದ ಕೋಡಿಭಾಗದಲ್ಲಿ ಯುವಕರ ಗುಂಪೊಂದು ರಸ್ತೆಬದಿ ಡಿಜೆ ಇಟ್ಟು ಒಟ್ಟಾಗಿ ಬಣ್ಣ ಹಚ್ಚಿ ಡಾನ್ಸ್ ಮಾಡುವ ಮೂಲಕ ಎಂಜಾಯ್ ಮಾಡಿದ್ರು. ಇದಲ್ಲದೆ ಕಾಜುಭಾಗದ ಗುಜರಾತಿ ತಾಂಡಾದಲ್ಲಿ ಗುಜರಾತಿಗಳು ತಮ್ಮದೆ ಶೈಲಿಯಲ್ಲಿ ನೃತ್ಯ ಮಾಡಿದ್ರೆ ಇನ್ನು ಯುವತಿಯರು ಸಿನಿಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ರು. ಬೆಳಿಗ್ಗೆಯಿಂದಲೂ ಎಲ್ಲರೂ ಒಂದೆಡೆ ಸೇರಿ ಡಾನ್ಸ್ ಮಾಡಿದ್ದು, ಹೋಳಿಯನ್ನು ಸಂಭ್ರಮದಿಂದ ಆಚರಿಸಿದ್ದೇವೆ ಎನ್ನುತ್ತಾರೆ ಹೋಳಿ ಸಂಭ್ರಮದಲ್ಲಿ ತೊಡಗಿದವರು.


ಹೋಳಿ ಹಬ್ಬದ ಹಿನ್ನೆಲೆ ತಿಳಿಯಿರಿ


ಇನ್ನು ಹೋಳಿ ಹುಣ್ಣಿಮೆ ಹಿನ್ನೆಲೆಯಲ್ಲಿ ಗುರುವಾರವೇ ಕಾಮದಹನ ಮಾಡಿದ್ದು, ಇಂದು ಹೋಳಿ ಆಡಲಾಗಿದೆ. ಇದರ ಮುಖ್ಯ ಉದ್ದೇಶ ನಮ್ಮಲ್ಲಿರುವ ಕೆಟ್ಟ ಯೋಚನೆ, ಸಿಟ್ಟು, ಅಸುಯೆಗಳು ಹೊರಗೆ ಹಾಕಿ ಪರಸ್ಪರ ಬಣ್ಣ ಎರಚಿ ಎಲ್ಲರೊಂದಿಗೆ ಸದಾ ಸಂತೋಷವಾಗಿರಬೇಕು ಎಂದು ಆಚರಿಸಲಾಗುತ್ತದೆ. ಕಾರವಾರದಲ್ಲಿ ಹೋಳಿ ಬಳಿಕ ಸಮುದ್ರಸ್ನಾನ ಮಾಡುವುದು ಸಂಪ್ರದಾಯ.‌


ಇದನ್ನೂ ಓದಿ: Holi Festival 2020: ಬಣ್ಣದೋಕುಳಿ ಆಡುವ ಮುನ್ನ ಈ ಸಲಹೆಗಳನ್ನೊಮ್ಮೆ ಓದಿ..!


ಸಮುದ್ರದಲ್ಲಿ ಮಿಂದೆದ್ದು ಮಸ್ತಿ


ಹೋಳಿಯಾಡಿದ ಮಂದಿ ಬಳಿಕ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಆಗಮಿಸಿ ಸಮುದ್ರಸ್ನಾನ ಮಾಡಿ ಎಂಜಾಯ್ ಮಾಡಿದ್ರು. ಆದ್ರೆ ಕಳೆದ ವರ್ಷ ಕೋವಿಡ್ ನುಂಗಿದ್ದ ಹೋಳಿ  ಸಂಭ್ರಮವನ್ನು ಈ ಭಾರಿ ಅದ್ದೂರಿಯಾಗಿ ಆಡಿದ ಮಂದಿ ಫುಲ್ ಎಂಜಾಯ್ ಮಾಡಿದ್ರು. ಆದರೆ ಈ ಹಿಂದೆಗಿಂತಲೂ ಹೋಳಿ ಆಡಿದವರ ಸಂಖ್ಯೆ ಕಡಿಮೆಯಾಗಿತ್ತು.


ಕೊರೊನಾ ವೈರಸ್​ ಆತಂಕ


ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಮುಂಜಾಗೃತವಾಗಿ ಹೋಳಿ ಆಡಲು‌ ಬಂದವರ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಮಾತುಗಳು ಕೇಳಿ ಬಂತು. ಆದ್ರೆ ಅದೆಷ್ಟೊ ಜನರು ಮನೆಯಲ್ಲಿಯೇ ಹೋಳಿ ಆಡಿ ಕುಟುಂಬಸ್ಥರು ನೆರೆಹೊರೆಯವರೊಂದಿಗೆ ಎಂಜಾಯ್ ಮಾಡಿದ್ದಾರೆ..
ಒಟ್ಟಿನಲ್ಲಿ ಕಳೆದ ಭಾರಿ ಕೊರೊನಾ ಕಾರಣದಿಂದಾಗೀ ಕಳೆಗುಂದಿದ್ದ ಹೋಳಿ ಸಂಭ್ರಮ ಈ ಭಾರಿ ನಗರದಲ್ಲಿ ಜೋರಾಗಿಯೇ ನಡೆಯಿತು. ಸಾವಿರಾರು ಜನರು ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಆಚರಿಸುವುದರ ಜೊತೆಗೆ ಸಮುದ್ರ ಸ್ನಾನವನ್ನು ಮಾಡಿ ಬಣ್ಣದ ಹಬ್ಬವನ್ನು ಎಂಜಾಯ್ ಮಾಡಿದ್ರು.


ಇದನ್ನೂ ಓದಿ: Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು


ಬೆಂಗಳೂರಲ್ಲೂ ಕಳೆ ಕಟ್ಟಿದ ಹೋಳಿ


ಹೊರತುಪಡಿಸಿದರೆ ಬೆಳಗ್ಗಿನಿಂದಲೇ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಬಣ್ಣದೋಕುಳಿ ಕಂಡುಬಂದಿತ್ತು. ಅದರಲ್ಲೂ ಮಾರವಾಡಿ ಸಮುದಾಯದವರು ಹೆಚ್ಚಾಗಿರುವ ಕಬ್ಬನ್‌ಪೇಟೆ, ಅವೆನ್ಯೂ ರಸ್ತೆ, ಚಿಕ್ಕಪೇಟೆ ಇವೇ ಮೊದಲಾದ ಪ್ರದೇಶಗಳಲ್ಲಿ ಹೋಳಿ ಹಬ್ಬದ ಸಂಭ್ರಮಾಚರಣೆ ನಡೆದು ವಾತಾವರಣಕ್ಕೊಂದು ಭವ್ಯಕಳೆಯನ್ನು ತಂದುಕೊಟ್ಟಿತ್ತು.

Published by:ಪಾವನ ಎಚ್ ಎಸ್
First published: