ಮಧ್ಯಾಹ್ನ 1ರಿಂದ ಬೆಳಗ್ಗೆ 7ಗಂಟೆಯವರೆಗೆ ಹೊಳೆನರಸೀಪುರ ಲಾಕ್​ಡೌನ್; ಎಚ್.ಡಿ.ರೇವಣ್ಣ

ಹೊಳೆನರಸೀಪುರ ಪಟ್ಟಣವನ್ನು ಸ್ವಯಂಪ್ರೇರಿತವಾಗಿ ಲಾಕ್​ಡೌನ್​ ಮಾಡಿಸುತ್ತಿದ್ದೇನೆ.  ಎಲ್ಲಾ ವರ್ತಕರು, ಜನ ಸಾಮಾನ್ಯರ ಸಭೆ ಕರೆದು ತೀರ್ಮಾನ ಮಾಡಿದ್ದೇವೆ.  ಹೊಳೆನರಸೀಪುರದಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆದಿರುತ್ತದೆ. 

ಎಚ್.ಡಿ.ರೇವಣ್ಣ.

ಎಚ್.ಡಿ.ರೇವಣ್ಣ.

  • Share this:
ಹಾಸನ; ನಾನೂ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ನನ್ನ ವರದಿ ನೆಗೆಟಿವ್ ಬಂದಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ನಾನು ಕೊರೋನಾ ಟೆಸ್ಟ್ ಮಾಡಿಸಿ ರಿಸಲ್ಟ್ ಬರುವವರೆಗೂ ಯಾರನ್ನು ಭೇಟಿ ಮಾಡಬಾರದು ಎಂದು ಸುಮ್ಮನಿದ್ದೆ.  ನಮ್ಮ ಮನೆಯಲ್ಲಿ ಯಾರೂ ಹೋಂ ಕ್ವಾರಂಟೈನ್​ನಲ್ಲಿ ಇಲ್ಲ. ನಮ್ಮ ಮನೆಯಲ್ಲಿರುವ ಯಾರಿಗೂ ಕೊರೋನಾ ಇಲ್ಲಾ. ನಮ್ಮ ಮನೆಯ ಎಲ್ಲರೂ ಟೆಸ್ಟ್ ಮಾಡಿಸಿದ್ದೇವೆ. ಎಲ್ಲರಿಗೂ ಕರೋನಾ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಸುದ್ದಿ ಬೆನ್ನಲ್ಲೇ ಎಚ್.ಡಿ.ರೇವಣ್ಣ ಅವರಿಗೂ ಸೋಂಕು ತಗುಲಿದೆ ಎಂಬ ಮಾತುಗಳು ಜಿಲ್ಲೆಯಾದ್ಯಂತ ಕೇಳಿಬಂದಿತ್ತು. ಈ ವಿಷಯವಾಗಿ ಎದ್ದಿದ್ದ ಗೊಂದಲಕ್ಕೆ ಇಂದು ರೇವಣ್ಣ ಅವರೇ ಸ್ಪಷ್ಟನೆ ನೀಡಿ ತೆರೆ ಎಳೆದಿದ್ದಾರೆ.

ಇದನ್ನು ಓದಿ: ಅಪಾಯದಲ್ಲಿವೆ ಬದುಕಿನ ಇಳಿಸಂಜೆಯಲ್ಲಿರುವ 61 ಲಕ್ಷ ಜೀವಗಳು; ಬೆಂಗಳೂರಿನಲ್ಲೇ 7.5 ಲಕ್ಷ ವೃದ್ಧಜೀವಗಳು!

ಹೊಳೆನರಸೀಪುರ ಪಟ್ಟಣವನ್ನು ಸ್ವಯಂಪ್ರೇರಿತವಾಗಿ ಲಾಕ್​ಡೌನ್​ ಮಾಡಿಸುತ್ತಿದ್ದೇನೆ.  ಎಲ್ಲಾ ವರ್ತಕರು, ಜನ ಸಾಮಾನ್ಯರ ಸಭೆ ಕರೆದು ತೀರ್ಮಾನ ಮಾಡಿದ್ದೇವೆ.  ಹೊಳೆನರಸೀಪುರದಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆದಿರುತ್ತದೆ. ಮಧ್ಯಾಹ್ನ 1 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಪ್ರತಿದಿನ ಹೊಳೆನರಸೀಪುರ ಲಾಕ್ ಡೌನ್ ಆಗಿರಲಿದೆ ಎಂದು ತಿಳಿಸಿದರು.
First published: