Water Karez: ಅಂತರ್ಜಲಕ್ಕೂ ನೀರಿನ ಕಾಲುವೆ, ಇರಾನಿ ತಂತ್ರಜ್ಞಾನ ಬಳಸಿ ನಿರ್ಮಿಸಿದ ಕರೇಜ್: ಬೀದರ್​ನಲ್ಲಿದೆ ಅಚ್ಚರಿಯ ಇತಿಹಾಸ

Historical Water Tech: ಬಹುಮನಿ ಸುಲ್ತಾನರ ಕಾಲದಲ್ಲಿ ಬೀದರ್ ಜನರಿಗೆ ನೀರು ಪೂರೈಕೆ ಮಾಡುವ ಸಲುವಾಗಿ ವಿಶಿಷ್ಟ ತಂತ್ರಜ್ಞಾನವನ್ನ ಬಳಿಸಿ ನೀರಿನ ಝರಿಗಳು, ಅಂತರಜಲದ ಮೂಲಗಳನ್ನ ಸುರಂಗದೊಳಗೆ ಹರಿಸಿ ಸುರಂಗದೊಳಗೆ ನೀರು ಬರುವಂತೆ ಮಾಡೋದು ಇದೊಂದು ವಿಶಿಷ್ಟ ತಂತ್ರಜ್ಞಾನ.

ಐತಿಹಾಸಿಕ ಕರೇಜ್

ಐತಿಹಾಸಿಕ ಕರೇಜ್

 • Share this:
  ಬೀದರ್ :  ಅದು ಹದಿನೈದನೆಯ ಶತಮಾನದಲ್ಲಿ ಬಹಮನಿ ಸುಲ್ತಾನರ (Bahamani Sultan) ಕಾಲದಲ್ಲಿ ನಿರ್ಮಾಣವಾದ ಭೂ ಕಾಲುವೆ. ಆರು ಶತಮಾನಗಳ ಹಿಂದೆ ಬಹುಮನಿ ಸುಲ್ತಾನರು ಈ ಜಲಮಾರ್ಗವನ್ನ ಕುಡಿಯುವ ನೀರಿಗಾಗಿ (Drinking Water) ಬಳಸುತ್ತಿದ್ದರು. ನಾಲ್ಕು ವರ್ಷದ ಹಿಂದೆ ಜಲಮಾರ್ಗ ಸ್ವಚ್ಚಗೊಳಿಸಿ ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡಲಾಗಿತ್ತು. ಆದರೀಗ ಲ್ಯಾಂಡ್ ಮಾಫೀಯಾದಿಂದ (Land Mafia) ವಿಶ್ವ ಪಾರಂಪರಿಕ ತಾಣ ಅಪಾಯದಂಚಿಗೆ ಬಂದಿದೆ. ಅಪಾಯದ ಅಂಚಿನಲ್ಲಿದೆ ವಿಶ್ವ ಪಾರಂಪರಿಕ ಐತಿಹಾಸಿಕ ‌ವಾಟರ್ ಕರೆಜ್. ಭೂಕಾಲುವೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ, ಭಾರಿ ವಾಹನ ಸಂಚಾರ. ಭೂ ಕಾಲುವೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆ ನಿರ್ಮಾಣವಾದರೆ ಐತಿಹಾಸಿಕ ಮಹತ್ವ ಕಳೆದುಕೊಳ್ಳುವುದೆ ನಿಜಾಮರ ‌ಕಾಲದ ವಾಟರ್ ಕರೇಜ್. ಐತಿಹಾಸಿಕ ಭೂ ಕಾಲುವೆ ಅರ್ಧಕ್ಕೆ ನಿಂತಿರುವ ಕೆಲಸವನ್ನು ಆರಂಭಿಸಿ ಭೂ ಕಾಲುವೆಗೆ ಧಕ್ಕೆಯಾಗದಂತೆ ಕ್ರಮ ವಹಿಸಿ ಎಂದು ಜನರು ಮನವಿ ಮಾಡಿದ್ದಾರೆ.

  ಹೌದು...ಅದು ಹದಿನೈದನೆ ಶತಮಾನದ ಬಹುಮನಿ ಸುಲ್ತಾನರ ಕಾಲದಲ್ಲಿ ಬೀದರ್ ನಗರದಲ್ಲಿ ನಿರ್ಮಿಸಲಾಗಿದ್ದ ಭೂ ಕಾಲುವೆಗೆ ಈಗ ಅಪಾಯ ಬಂದೊದಗಿದೆ. ಐತಿಹಾಸಿಕ ಭೂ ಕಾಲುವೆಯ ಅಕ್ಕಪಕ್ಕದಲ್ಲಿ 20 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿಷೇಧವಿದ್ದರು ಅಲ್ಲಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ಜೊತೆಗೆ ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದರ ಪರಿಣಾಮವಾಗಿ 20 ಟನ್, 40 ಟನ್ ಮರಳು ತುಂಬಿದ ಲಾರಿಗಳು ಭೂ ಕಾಲುವೆಯ ಸುತ್ತಮುತ್ತಲೂ ಓಡಾಡುತ್ತಿದ್ದುದ್ದರ ಪರಿಣಾಮವಾಗಿ ವಿಶ್ವ ಪಾರಂಪರಿಕ ಐತಿಹಾಸಿಕ ವಾಟರ್ ಕರೇಜ್ ಅಪಾಯದ ಅಂಚಿಗೆ ಬಂದಿದೆ. ಭಾರಿ ಪ್ರಮಾಣದ ವಾಹನಗಳು ಇದರ ಮೇಲೆ ಓಡಾಡುತ್ತಿದ್ದುದ್ದರ ಪರಿಣಾಮವಾಗಿ ಭೂ ಕಾಲುವೆಯ ಮಣ್ಣು ಕುಸಿಯುವ ಭೀತಿ ಎದುರಾಗಿದ್ದು ಸ್ಮಾರಕ ಪ್ರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

  ಇದನ್ನೂ ಓದಿ: House For Sale: ಮನೆ ಮಾರಾಟಕ್ಕಿದೆ, ಒಂದು ಮನೆಗೆ ಬರೀ 87 ರೂಪಾಯಿ! ಎಲ್ಲಿ ಈ ಮನೆ? ಕೊಳ್ಳೋದು ಹೇಗೆ? ಏನೆಲ್ಲಾ ದಾಖಲೆಗಳು ಕೊಡ್ಬೇಕು..ಫುಲ್ ಡೀಟೆಲ್ಸ್

  ಇನ್ನು ಈ ಹಿಂದೆ ಅನುರಾಗ್ ತಿವಾರಿ ಬೀದರ್ ಜಿಲ್ಲಾಧಿಕಾರಿಯಾಗಿ ಬಂದ ನಂತರ ಭೂ ಕಾಲುವೆಯ ಅಭಿವೃದ್ಧಿಗೆ 3 ಕೋಟಿ ರೂಪಾಯಿ ಖರ್ಚುಮಾಡಿ ಐತಿಹಾಸಿಕ ವಾಟರ್ ಕರೇಜ್ ಹೂಳು ತೆಗೆಸಿ ಅಲ್ಲಿಂದ ನೀರು ಬರುವಂತೆ ಮಾಡಿದ್ದರು, ಇದಾದ ನಂತರ ದೇಶ ವಿದೇಶದಿಂದ ಇಲ್ಲಿನ ಭೂ ಕಾಲುವೆಯನ್ನ ನೋಡಲು ಜನರು ಕೂಡಾ ಬರುತ್ತಿದ್ದರು. ಆದರೇ ಈಗ  ಭೂ ಕಾಲುವೆಯ ಸುತ್ತಮುತ್ತಲೂ ದೊಡ್ಡ ದೊಡ್ಡ ಮನೆಗಳು ನಿರ್ಮಾಣವಾಗುತ್ತಿದ್ದು ಐತಿಹಾಸಿಕ ಪುರಾತನ ಭೂ ಕಾಲುವೆಯೂ ಅಪಾಯದ ಅಂಚಿಗೆ ಬಂದು ನಿಂತಿದ್ದು ಸ್ಮಾರಕ ಪ್ರೀಯರಲ್ಲಿ ಇದು ಬೇಸರಕ್ಕೆ ಕಾರಣವಾಗಿದೆ.

  ಈ ವಾಟರ್ ಕರೇಜ್ ದ ಇತಿಹಾಸ ಕೆದಕಿದರೇ ಬಹುಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಅಂದರೆ 15 ನೇಯ ಶತಮಾನದ ವಾಟರ್ ಕರೇಜ ಕಳೆದ 6 ವರ್ಷದ ಹಿಂದೆ ಪತ್ತೆಯಾಗಿತ್ತು. ಇಲ್ಲಿ ಪತ್ತೆಯಾದ ಸುರಂಗ ಮಾರ್ಗ ಏನಿರ ಬಹುದೆಂದು ಇತಿಹಾಸಕಾರಿಂದ ಪರಿಶೀಲನೆ ನಡೆಸಿದಾಗ ಬೆಳಕಿಗೆ ಬಂದಿದ್ದು ಇದು ವಾಟರ್ ಕರೇಜ್ ಅಂತ. ಬಹುಮನಿ ಸುಲ್ತಾನರ ಕಾಲದಲ್ಲಿ ಬೀದರ್ ಜನರಿಗೆ ನೀರು ಪೂರೈಕೆ ಮಾಡುವ ಸಲುವಾಗಿ ವಿಶಿಷ್ಟ ತಂತ್ರಜ್ಞಾನವನ್ನ ಬಳಿಸಿ ನೀರಿನ ಝರಿಗಳು, ಅಂತರಜಲದ ಮೂಲಗಳನ್ನ ಸುರಂಗದೊಳಗೆ ಹರಿಸಿ ಸುರಂಗದೊಳಗೆ ನೀರು ಬರುವಂತೆ ಮಾಡೋದು ಇದೊಂದು ವಿಶಿಷ್ಟ ತಂತ್ರಜ್ಞಾನ. ಕಳೆದ 15ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಬಹುಮನಿ ಸುಲ್ತಾನರ ಕಾಲದಲ್ಲಿ(1387-1518) ಅವಧಿಯಲ್ಲಿ ಬೀದರ್ ನ ನೌಬಾದ್ ಬಳಿ ಸುರಂಗ ಮಾರ್ಗ ನಿರ್ಮಿಸಲಾಗಿತ್ತು.

  ಇದನ್ನೂ ಓದಿ: LIC Policy Revival: ನಿಮ್ಮ ಎಲ್​ಐಸಿ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ಅದನ್ನು ಮತ್ತೆ ಬಳಸುವಂತೆ ಮಾಡಬಹುದು, ಹೀಗೆ ಮಾಡಿ

  ಬರೋಬ್ಬರಿ 10 ಕಿಲೋ ಮೀಟರ್ ಉದ್ದವಿರುವ ಈ ಸುರಂಗ ಮಾರ್ಗ ಕಾಲಾಂತರದಲ್ಲಿ ನಿರ್ವಹಣೆ ಇಲ್ಲದೆ ಹಾಳಾಗಿತ್ತು. ಅಷ್ಟೆ ಅಲ್ಲದೆ ಸುರಂಗ ಮಾರ್ಗ ಮಧ್ಯೆ ಮಣ್ಣು ತುಂಬಿಕೊಂಡು ಮುಚ್ಚಲ್ಪಟ್ಟಿತ್ತು. ಯಾವುದೆ ಮೋಟರ್ ಇಲ್ಲದೆ ವಿದ್ಯುತ್ ಇಲ್ಲದೆ ಬೀದರ್ ನಗರದ ಕೋಟೆಯವರೆಗೆ ಸರಾಗವಾಗಿ ಸುರಂಗ ಮಾರ್ಗದ ಮುಖಾಂತರ ನೀರನ್ನ ಅಂದು ಹರಿಸಲಾಗುತ್ತಿತ್ತು, ಅದು ನಿರಂತರವಾಗಿ..! ಆದ್ರೆ ಇದರ ಬಗ್ಗೆ ಕಾಲಾಂತರದಲ್ಲಿ ಮಾಹಿತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ಹಾಳಾಗಿದೆ...
  ಈ ರೀತಿ ಒಂದು ಕರೇಜ್ ಬೀದರ್ ನಗರದಲ್ಲಿ ಇದೆ ಅನ್ನೋದೆ ಜನರು ಮರೆತಿದ್ದರು ಅದನ್ನ ಬೆಳಕಿಗೆ ತಂದವರೆ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಪಿ.ಸಿ. ಜಾಫರ್ ಹಾಗೂ ದಿವಂಗತ ಅನುರಾಗ್ ತಿವಾರಿ.

  ಇಂದಿಗೂ ವಿಶ್ವದ 38 ದೇಶದಲ್ಲಿ ಈ ಕರೇಜ್ ವ್ಯವಸ್ಥೆ ಜಾರಿಯಲ್ಲಿದೆ. ವಿಶೇಷವಾಗಿ ಇರಾನ್ ದೇಶದಲ್ಲಿ ಸಾವಿರಾರು ಕರೇಜ್(ಸುರಂಗಮಾರ್ಗ)ಗಳಿವೆ. ಅಲ್ಲಿ ನೀರಿನ ಮೂಲ ಇಂದಿಗೂ ಕರೇಜ್ ಆಗಿದೆ. ಭಾರತದಲ್ಲಿ ಮುಸ್ಲಿಂ ರಾಜ್ಯರ ಆಳ್ವಿಕೆಯಲ್ಲಿ ಪರ್ಶಿಯಾದಿಂದ ತಂತ್ರಜ್ಞರನ್ನ ಕರೆಸಿ ಈ ಯೋಜನೆಯನ್ನ ಕೈಗೊಳ್ಳಲಾಗಿತ್ತು. ಆದರೆ ಇಂತಹ ಅಪರೂಪದ ವಾಟರ್ ಕರೇಜ್ ನಮ್ಮ ಕರ್ನಾಟದಲ್ಲಿ ಬೀದರ್ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೆಯಾಗಿದೆ. ಈ ಕರೇಜ್ ಮರುಜೀವ ಪಡೆದಿದ್ದೆ ಯಾದರೆ ಪ್ರವಾಸಿಗರನ್ನ ಕೈಬೀಸಿ ಕರೆಯುವುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೆ ಇದು ಆಶಾಕಿರಣವಾಗಲಿದೆ. ಅಷ್ಟೆ ಅಲ್ಲದೆ ದೇಶ ವಿದೇಶದಿಂದ ಪ್ರವಾಸಿಗರನ್ನ ಸೆಳೆಯುವುದರಲ್ಲೂ ತನ್ನದೆಯಾದ ಮಹತ್ತರ ಪಾತ್ರ ವಹಿಸಲಿದೆ.

  ಜಿಲ್ಲಾಡಳಿತದ ಪ್ರಯತ್ನದಿಂದಾಗಿ ಇತಿಹಾಸದ ಕಾಲಗರ್ಭದಲ್ಲಿ ಮುಚ್ಚಿಹೋಗಿದ್ದ ಈ ಕರೇಜ್ ಗೆ ಮರುಜೀವ ನೀಡುವ ಕೆಲಸವನ್ನ ಅನುರಾಗ್  ತಿವಾರಿ ಮಾಡಿದ್ದರು. ಆದರೇ ಈಗ ಕರೇಜ್ ಮಣ್ಣು ತೆಗೆಯುವ ಕೆಲಸ ಸಂಪೂರ್ಣವಾಗಿ ನಿಂತು ಹೋಗಿದೆ. ಜೊತೆಗೆ ಲ್ಯಾಂಡ್ ಮಾಫೀಯಾ ಕೂಡಾ ಈಗ ಇಲ್ಲಿ ಎಂಟ್ರಿ ಕೊಟ್ಟಿದ್ದು ಅಲ್ಲಲ್ಲಿ ಮನೆ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ. ಇದು ಐತಿಹಾಸಿಕ ವಾಟರ್ ಕರೇಜ್ ಗೆ ಅಪಾಯ ತಂದೊಡ್ಡುವುದರಲ್ಲಿ ಅನುಮಾನವೇ ಇಲ್ಲ.  3 ಕಿಲೋಮೀಟರ್ ಜಲಮಾರ್ಗದಲ್ಲಿರುವ ಮಣ್ಣು ಕ್ಲೀನ್ ಮಾಡಿದ್ದರಿಂದ ಈಗ ಅಲ್ಲಿ ನೀರು ಹರಿಯುತ್ತಿದೆ ಹತ್ತಾರು ಬಾವಿಯಲ್ಲಿ ನೀರು ತುಂಬಿಕೊಂಡಿದೆ. ಆದರೆ ಇನ್ನುಳಿದ ಕರೇಜ್ ದಲ್ಲಿರುವ ಮಣ್ಣು ತೆಗೆದು ಉತ್ತಮ ಪ್ರವಾಸಿ ತಾಣ ಮಾಡಬೇಕಾಗಿದೆ.

  (ವರದಿ: ಚಮನ್ ಹೊಸಮನಿ, ಬೀದರ್)
  Published by:Soumya KN
  First published: