HOME » NEWS » District » HISTORICAL RESEARCHER KRISHNA KOLHAR KULKARNI DISCLOSED HIS COMPANIONSHIP WITH JOURNALIST RAVI BELAGARE MVSV HK

ಪತ್ರಕರ್ತ ರವಿ ಬೆಳಗೆರೆ ಜೊತೆ ಆತ್ಮಿಯ ಒಡನಾಟ ಬಿಚ್ಚಿಟ್ಟ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ

ನನ್ನ ಮತ್ತು ಆತನ ಮಧ್ಯೆ ಗುರು-ಶಿಷ್ಯ, ತಮ್ಮ-ಅಣ್ಣಂದಿರ ಸಂಬಂಧವಿತ್ತು. ಭೇಟಿಯಾಗುವುದನ್ನು ತಪ್ಪಿಸುತ್ತಿದ್ದರೂ, ಸಂಬಂಧ ಕೊನೆಯವರೆಗೂ ಇತ್ತು.  ಸಂಪರ್ಕಕ್ಕೇನೂ ಕೊರತೆ ಇರಲಿಲ್ಲ. ಯಾರಾದರೂ ಭೇಟಿಯಾದರೂ, ನನ್ನ ಬಗ್ಗೆ ಗೌರವದಿಂದ ಮಾತನಾಡುತ್ತಿದ್ದ

news18-kannada
Updated:November 13, 2020, 3:53 PM IST
ಪತ್ರಕರ್ತ ರವಿ ಬೆಳಗೆರೆ ಜೊತೆ ಆತ್ಮಿಯ ಒಡನಾಟ ಬಿಚ್ಚಿಟ್ಟ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ
ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ
  • Share this:
ವಿಜಯಪುರ(ನವೆಂಬರ್​. 13 ) : ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಅವರ ಒಡನಾಡಿ ಮತ್ತು ಅವರ ಬಗ್ಗೆ ಬಾಲ್ಯದಿಂದಲೂ ಮಾಹಿತಿ ಹೊಂದಿರುವ ಹಿರಿಯ ಸಾಹಿತಿ ಮತ್ತು ಖ್ಯಾತ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಕಂಬನಿ ಮಿಡಿದಿದ್ದಾರೆ. ವಿಜಯಪುರದಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ರವಿ ಬೆಳಗೆರೆ ಮತ್ತು ತಮ್ಮದು ಬಹಳ ಹಳೆಯ ಸಂಪರ್ಕ.  ಆತ 10-12 ವರ್ಷದ ಹುಡುಗನಾಗಿದ್ದಾಗಿನಿಂದ ನೋಡಿದ್ದೇವೆ. ಬಹಳ ಪ್ರತಿಭಾವಂತ ಹುಡುಗ. ಕಾಲಕಾಲಕ್ಕೆ ಆತನ ಬೆಳವಣಿಗೆ ಕಂಡು ಖುಷಿ ಪಟ್ಟಿದ್ದೇನೆ.  ಆತನೂ ನನ್ನ ಬಳಿ ಬರುತ್ತಿದ್ದ. ಗುರುಗಳೇ ಇವತ್ತು ಇದನ್ನು ಮಾಡಿದ್ದೇನೆ ಎಂದು ತನ್ನ ಕೆಲಸಗಳನ್ನು ಹೇಳಿಕೊಳ್ಳುತ್ತಿದ್ದ. ಆತ, ಕಥೆ ಬರೆಯುವಾಗ, ಕರ್ಮವೀರ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಆತನೊಂದಿಗೆ ಸಂಪರ್ಕ ನಿರಂತರವಾಗಿತ್ತು ಎಂದು ತಿಳಿಸಿದರು.

1994ರಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೋ ಒಂದು ಪತ್ರಿಕೆ ವರದಿಗೆ ಬಂದಿದ್ದ. ಆಗ, ಆತ ಟ್ಯಾಬ್ಲಾಯ್ಡ್ ಆರಂಭಿಸುತ್ತಿದ್ದೇನೆ ಎಂದು ತಿಳಿಸಿದ್ದ. ವಿಜಯಪುರಕ್ಕೆ ಬಂದರೆ ಆತ ನಮ್ಮ ಮನಗೆ ತಪ್ಪದೇ ಭೇಟಿ ನೀಡುತ್ತಿದ್ದ.

ವಿಜಯಪುರ ಜಿಲ್ಲೆಗೂ ರವಿ ಬೆಳಗೆರೆಗೂ ಅವಿನಾಭಾವ ಸಂಬಂಧ ಭೀಮಾ ತೀರದ ಕೊಲೆಯ ವಿಷಯಗಳಲ್ಲಿ ಆತನಿಗೆ ಬಹಳ ಆಸಕ್ತಿ. ಆಗ, ತನ್ನ ಪತ್ರಿಕೆಯಲ್ಲಿ ಆಸಕ್ತಿಕರ ವಿಷಯಗಳನ್ನು ಮುದ್ರಿಸುತ್ತಿದ್ದ. ಭೀಮಾ ತೀರದ ಹಂತಕರು ಆತನ ಪತ್ರಿಕೆ ಪ್ರಸಾರಕ್ಕೂ ಬಹಳ ಸಹಾಯವಾಗಿತ್ತು.

ಆತ ನನಗಿಂತ ಬಹಳ ಸಣ್ಣ ಹುಡುಗ. ಅವನ ನಿಧನದ ಸುದ್ದಿ ತಿಳಿದು ಬಹಳ ದುಃಖ ಆಯ್ತು. ಅವನಿಗೆ ಬಹಳ ಸಲ ಬೈಯ್ತಿದ್ದೆ. ಅವನು ಆರೋಗ್ಯ ಕೆಡಿಸಿಕೊಂಡಾಗ, ಅವನ ವ್ಯಸನಗಳ ಬಗ್ಗೆ ಬೈದಾಗ ನಗುತ್ತಿದ್ದ. ಸುಮ್ಮನಿರುತ್ತಿದ್ದ. ಆತನ ಮನೆಯ ಕಾರ್ಯಕ್ರಮಗಳಿಗೆ ಕರೆಯುತ್ತಿದ್ದ. ಮಕ್ಕಳ ಮದುವೆ ಕಾರ್ಯಕ್ರಮಕ್ಕೂ ಕರೆದಿದ್ದ. ಒಂದು ಒಳ್ಳೆಯದಾಗಬೇಕಾದರೆ ದುಡ್ಡು ಕಳೆದುಕೊಳ್ಳಬೇಕು. ಆತ ಒಳ್ಳೆಯ ಕಥೆಗಾರ, ಕಾದಂಬರಿಕಾರನಾಗುತ್ತಿದ್ದ. ಆಗ ಆತ ದುಡ್ಡು ಬೇಕು ಸರ್ ಎಂದು ಹೇಳುತ್ತಿದ್ದ. ದುಡ್ಡಿನ ಹಿಂದೆ ಬಿದ್ದಿದ್ದರಿಂದ ಆತನ ಗದ್ಯ ನೆನಪಿನಲ್ಲಿ ಉಳಿಯುತ್ತೆ. ಆದರೆ, ಅವನ ಕೃತಿಗಳ ಬಗ್ಗೆ ಏನೂ ಹೇಳಲಾರೆ ಎಂದು ತಿಳಿಸಿದರು

ಅವನ ಸಾವು ಅನಿರೀಕ್ಷಿತ ಏನಲ್ಲ. ಕೆಲವು ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ನನಗೆ ಸರ್ ನಮಸ್ಕಾರ ಎಂದು ಹೇಳಿದ್ದ. ಈಗೇಕೆ ನಮಸ್ಕಾರ ಎಂದು ಕೇಳಿದ್ದೆ. ಬಹುಷಃ ಅದು ಅವನಿಗೆ ಗೊತ್ತಿರಬೇಕು. ತಾನು ಬದುಕುವುದಿಲ್ಲ ಎಂದು ತಿಳಿದಿರಬೇಕು. ಅದೇ ಅವನು ನನಗೆ ಮಾಡಿದ ಕೊನೆಯ ನಮಸ್ಕಾರ. ಇವತ್ತು ತುಂಬ ದುಃಖವಾಗಿದೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ. ಅವನ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಸಿಗಲಿ ಎಂದು ಹೇಳಿದರು.

ಬೆಂಗಳೂರಿಗೆ ಹೋದಾಗ ನಾನು ಬಂದಿರುವ ವಿಷಯ ತಿಳಿದು ಭೇಟಿಯಾಗುತ್ತಿದ್ದ. ಸುಮಾರು ಸಲ ತನ್ನ ಆಫೀಸಿಗೆ ಕರೆದುಕೊಂಡು ಹೋಗುತ್ತಿದ್ದ. ತನ್ನ ಸಿಬ್ಬಂದಿಯನ್ನು ಕರೆದು ನೂರಾರು ಫೋಟೋ ತೆಗೆಸಿಕೊಂಡಿದ್ದ. ಇತ್ತೀಚೆಗೆ ತನ್ನ ಆರೋಗ್ಯ ಕೆಡಿಸಿಕೊಂಡ ಮೇಲೆ ಅಂದರೆ ಹಾಳಾದ ಮೇಲೆ ಕಣ್ಣುತ್ತಪ್ಪಿಸುತ್ತಿದ್ದ. ಭೇಟಿಯಾಗುವುದು ಬೇಡ ಗುರುಗಳೇ ಎಂದು ಹೇಳುತ್ತಿದ್ದ. ಯಾರಾದರೂ ತಮ್ಮ ಕಾರ್ಯಕ್ರಮಗಳಿಗೆ ಕೊಲ್ಹಾರ ಅವರನ್ನು ಕರೆಯೋಣ ಎಂದು ಕೇಳಿದಾಗ ಬೇಡ ಅಂತಿದ್ದ. ಏಕೆಂದರೆ ಅವನಿಗೆ ಗಿಲ್ಟಿ ಕಾನ್ಶಿಯಸ್, ತನ್ನ ಆರೋಗ್ಯ, ತಾನು ಬೆಳೆದು ಬಂದ ಆರೋಗ್ಯದ ಬಗ್ಗೆ ತಿಳಿಯಬಾರದು ಎಂದುಕೊಂಡಿರಬೇಕು ಎಂದು ತಿಳಿಸಿದರು.

ಇದನ್ನೂ ಓದಿ : ಅಧಿಕಾರಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಲ್ಲ- ಕೂಡಲೇ ಸಚಿವ ಸಂಪುಟ ಪುನರ್​ರಚಿಸಿ: ಮಾಲೀಕಯ್ಯ ಗುತ್ತೇದಾರನನ್ನ ಮತ್ತು ಆತನ ಮಧ್ಯೆ ಗುರು-ಶಿಷ್ಯ, ತಮ್ಮ-ಅಣ್ಣಂದಿರ ಸಂಬಂಧವಿತ್ತು. ಭೇಟಿಯಾಗುವುದನ್ನು ತಪ್ಪಿಸುತ್ತಿದ್ದರೂ, ಸಂಬಂಧ ಕೊನೆಯವರೆಗೂ ಇತ್ತು.  ಸಂಪರ್ಕಕ್ಕೇನೂ ಕೊರತೆ ಇರಲಿಲ್ಲ. ಯಾರಾದರೂ ಭೇಟಿಯಾದರೂ, ನನ್ನ ಬಗ್ಗೆ ಗೌರವದಿಂದ ಮಾತನಾಡುತ್ತಿದ್ದ. ಸುಮಾರು 8-10 ವರ್ಷಗಳಿಂದ ಕಣ್ಣು ತಪ್ಪಿಸುತ್ತಿದ್ದ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅವರ ಬೃಹತ್ ಕಾರ್ಯಕ್ರಮಕ್ಕೆ ರವಿ ಕುಲಕರ್ಣಿ ಎಂಬುವರನ್ನು ನನ್ನ ಬಳಿ ಕಳುಹಿಸಿ ಲೇಖನ ಬರೆಯಿಸಿಕೊಂಡಿದ್ದ. ಅವರ ಮಗಳು, ಭಾವನಾಳ ಮದುವೆಗೆ ಕರೆಯಿಸಿಕೊಂಡಿದ್ದ. ನಂತರ ನಾನು ಬರುತ್ತೇನೆ ಎಂದಾಗ ಏನೋ ನೆವ ಹೇಳಿ ಭೇಟಿಯನ್ನು ತಪ್ಪಿಸುತ್ತಿದ್ದ. ಆತನ, ದೇಹದ ಸ್ಥಿತಿಯ ಬಗ್ಗೆ ಆತನಿಗೆ ಮುಜುಗರವಾಗಿತ್ತು. ಹೀಗಾಗಿ ಭೇಟಿಯಾಗಲು ನಿರಾಕರಿಸುತ್ತಿದ್ದ ಎಂದರು

ಸುಮಾರು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮ ಸಂಘಟಕರು ನನ್ನನ್ನು ಕರೆಯಿಸುತ್ತೇವೆ ಎಂದು ಹೇಳಿದಾಗ, ಆತ ಕೊಲ್ಹಾರ ಅವರನ್ನು ಆಹ್ವಾನಿಸಿ ಕಾರ್ಯಕ್ರಮ ಮಾಡಿ. ಆದರೆ, ನನ್ನನ್ನು ಕರೆಯಬೇಡಿ ಎಂದು ಹೇಳಿದ್ದ.  ಆದರೆ, ಸುಮಾರು ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ನನಗೆ ನಮಸ್ಕಾರ ಸರ್ ಎಂದು ಕಮೆಂಟ್ ಹಾಕಿದ್ದ. ಬಹುಷ ಆಗ ಆತನಿಗೆ ತಾನು ಬಹಳ ದಿನ ಬದುಕುವುದಿಲ್ಲ ಎಂದು ಅನಿಸಿರಬೇಕು ಎಂದು ಕೃಷ್ಣ ಕೊಲ್ಹಾರ ಕುಲಕರ್ಣಿ ನ್ಯೂಸ್ 18 ಕನ್ನಡದ ಎದುರು ಪತ್ರಕರ್ತ ರವಿ ಬೆಳಗೆರೆ ಸಾವಿನ ಬಗ್ಗೆ ಕಂಬನಿ ಮಿಡಿದಿದ್ದಾರೆ.
Published by: G Hareeshkumar
First published: November 13, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories