HOME » NEWS » District » HISTORICAL BIDRI ART CAME TO END STAGE NEEDED GOVERNMENT SUPORT TO PERSIAN BASED ART RHHSN SSBDR

ಅವಸಾನದತ್ತ ಐತಿಹಾಸಿಕ ಬಿದ್ರಿ ಕಲೆ; ಪರ್ಶಿಯನ್ ಮೂಲದ ಕಲೆಗೆ ಬೇಕಿದೆ ಕಾಯಕಲ್ಪ

ಸರಕಾರ ನಮ್ಮ ಸಮಸ್ಯೆಯ ಬಗ್ಗೆ ಅರಿತು ನಮಗೆ ಈ ಕಲೆ ಉಳಿಸಿ ಬೆಳೆಸಿಕೊಂಡು ಹೋಗಲು ಅನುವು ಮಾಡಿಕೊಟ್ಟರೆ ನಾವು ಇದೇ ಕೆಲಸದಲ್ಲಿ ಮುಂದುವರೆಯುತ್ತೇವೆ ಎನ್ನುತ್ತಾರೆ ಕರಕುಶಲಗಾರರು. ಇನ್ನು ಬೀದರ್ ಜಿಲ್ಲಾಧಿಕಾರಿಗಳು ಸಹ ಬೀದರ್ ನಗರದಲ್ಲೇ ಬಿದ್ರಿ ಕಲೆಯ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

news18-kannada
Updated:December 17, 2020, 7:52 PM IST
ಅವಸಾನದತ್ತ ಐತಿಹಾಸಿಕ ಬಿದ್ರಿ ಕಲೆ; ಪರ್ಶಿಯನ್ ಮೂಲದ ಕಲೆಗೆ ಬೇಕಿದೆ ಕಾಯಕಲ್ಪ
ಬಿದ್ರಿ ಕಲೆ
  • Share this:
ಬೀದರ್; ಜಿಲ್ಲೆ ಎಂದ ಕೂಡಲೇ ಥಟ್ಟನೇ ನೆನಪಾಗುವುದು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಬಿದ್ರಿ ಕಲೆ. ಇಂತಹ ಅಪರೂಪದ ಕಲೆ ಈಗ ಅವಸಾನದತ್ತ ಸಾಗಿದೆ. ಈ ಕಲೆಯನ್ನ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಕುಶಲಕರ್ಮಿಗಳು ವಂಶಪರಂಪರಾಗತವಾಗಿ ಬಂದಿದ್ದ ಉದ್ಯೋಗವನ್ನು ಬಿಟ್ಟು ಬೇರೆ ಉದ್ಯೋಗ ಅರಸಿಕೊಂಡು ಗುಳೆ ಹೋಗುತ್ತಿದ್ದಾರೆ.

ಈ ಕಲೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಕಲಾವಿದರ ಬಗ್ಗೆ ಸರಕಾರ ನಿಷ್ಕಾಳಜಿ ತೋರುತ್ತಿರುವುದೇ ಕಲಾವಿದರ ಬದುಕು ಬೀದಿಗೆ ಬರಲು ಕಾರಣವಾಗಿದೆ. ಜೊತೆಗೆ ಅತ್ಯಂತ ಸೂಕ್ಷ್ಮವಾದ ಕುಸುರಿ ಕಲೆಯಿಂದ ವಸ್ತುಗಳನ್ನು ತಯಾರು ಮಾಡಲಿಕ್ಕೆ ತಿಂಗಳುಗಳೇ ಬೇಕಾಗುತ್ತದೆ. ಬಿದರಿ ಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ್ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ.

ಇದನ್ನು ಓದಿ: ಟೊಯೋಟಾ ಕಾರ್ಮಿಕರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು: ಹೆಚ್.ಸಿ.ಬಾಲಕೃಷ್ಣ ಒತ್ತಾಯ

ಈ ಬಿದ್ರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿದ್ರಿ ಕಲೆಗೆ ಸಾವಿರಾರು ರೂಪಾಯಿ ಹಣವನ್ನು ಕೊಟ್ಟು ಖರೀದಿ ಮಾಡುತ್ತಾರೆ. ಬಿದ್ರಿ ಕಲೆ ಮೂಲಕ ಗೊಂಬೆಗಳು, ಬಳೆಗಳು, ಕೀ ಚೈನ್, ಮಹಾತ್ಮರ ಮೂರ್ತಿಗಳು, ದೇವರ ವಿಗ್ರಹಗಳನ್ನ ತಾಮ್ರ ಹಾಗೂ ಸತುಗಳಿಂದ ತಯಾರಿಸಿ ಅದರ ಮೇಲೆ ಕೆತ್ತನೆ ಮಾಡಲಾಗುತ್ತದೆ. ಈ ಕೆತ್ತನೆಯು ಅತ್ಯಂತ ಸೂಕ್ಷ್ಮ ರೀತಿಯಿಂದ ಕೂಡಿದ್ದು, ಶ್ರಮ ಬೇಡುವ ಕರಕುಶಲ ಕಲೆಯಾಗಿದೆ. ಹೀಗೆ ಕಷ್ಟಪಟ್ಟು ತಯಾರಿಸಿದ ವಸ್ತುಗಳಿಗೆ ಸೂಕ್ತವಾದ ಮಾರುಕಟ್ಟೆ ಕೊರತೆ ಸಹ ಇದೆ. ಹೀಗಾಗಿ ಐತಿಹಾಸಿಕ ಬಿದ್ರಿ ಕಲೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಳ್ಳುವುದು ಸಾಧ್ಯವಿಲ್ಲ ಎಂದು ತಿಳಿದ ಅದೇಷ್ಟೋ ಬಿದ್ರಿ ಕಲೆ ಪರಿಣಿತರು ಈ ಕಲೆಯಿಂದ ದೂರ ಸರಿಯುತ್ತಿದ್ದಾರೆ.

ಸರಕಾರ ನಮ್ಮ ಸಮಸ್ಯೆಯ ಬಗ್ಗೆ ಅರಿತು ನಮಗೆ ಈ ಕಲೆ ಉಳಿಸಿ ಬೆಳೆಸಿಕೊಂಡು ಹೋಗಲು ಅನುವು ಮಾಡಿಕೊಟ್ಟರೆ ನಾವು ಇದೇ ಕೆಲಸದಲ್ಲಿ ಮುಂದುವರೆಯುತ್ತೇವೆ ಎನ್ನುತ್ತಾರೆ ಕರಕುಶಲಗಾರರು. ಇನ್ನು ಬೀದರ್ ಜಿಲ್ಲಾಧಿಕಾರಿಗಳು ಸಹ ಬೀದರ್ ನಗರದಲ್ಲೇ ಬಿದ್ರಿ ಕಲೆಯ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.
Published by: HR Ramesh
First published: December 17, 2020, 7:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories