ಟಿಪ್ಪು ಸುಲ್ತಾನ್​ನ ಹುಚ್ಚು ನಾಯಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಹಿಂದೂ ಮುಖಂಡ

ಟಿಪ್ಪು ಒರ್ವ ದೇಶದ್ರೋಹಿ. ವೀರ ಸಾವರ್ಕರ್ ಜೊತೆ ಟಿಪ್ಪು ಸುಲ್ತಾನನ್ನು ಹೋಲಿಸಬೇಡಿ, ಟಿಪ್ಪು ಓರ್ವ ಹುಚ್ಚು ನಾಯಿ. ಲಕ್ಷಾಂತರ ಹಿಂದೂ ಮತ್ತು ಕ್ರಿಶ್ಚಿಯನ್ ರನ್ನು ಮತಾಂತರ ಮಾಡಿದ ಮತಾಂಧ ಎಂದು ವಾಗ್ದಾಳಿ ನಡೆಸಿದರು.

ಹಿಂದೂ ಸಂಘಟನೆಗಳ ಜಾಥಾ

ಹಿಂದೂ ಸಂಘಟನೆಗಳ ಜಾಥಾ

 • Share this:
  ದಕ್ಷಿಣ ಕನ್ನಡ: ಸ್ವಾತಂತ್ರ್ಯ ದಿನಾಚರಣೆಯಂದು ಸ್ವಾತಂತ್ರ್ಯದ ರಥದಲ್ಲಿದ್ದ ಸಾವರ್ಕರ್ ಚಿತ್ರ ತೆಗೆದು ಟಿಪ್ಪು ಸುಲ್ತಾನ್ ಚಿತ್ರ ಅಳವಡಿಸುವಂತೆ SDPI ಕಾರ್ಯಕರ್ತರ ಅಡ್ಡಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹಿಂದೂ ಸಂಘಟನೆಗಳು ಬೃಹತ್ ಜಾಥಾ ನಡೆಸಿದವು. ವೀರ ಸಾವರ್ಕರ್ ಗೆ ಅವಮಾನವಾಗಿದೆ ಎಂದು ಆರೋಪಿಸಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಕಬಕ ಜಂಕ್ಷನ್ ವರೆಗೆ ಜಾಥಾ ಕೈಗೊಂಡರು. ನೂರಾರು ಸಂಖ್ಯೆಯಲ್ಲಿ ಸೇರಿದ ಸಂಘಟನೆಯ ಕಾರ್ಯಕರ್ತರು SDPI ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ವಾತಂತ್ರ್ಯ ರಥ ತಡೆದ ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಜಾಥಾ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

  ಜಾಥಾದಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ರಾಧಾಕೃಷ್ಣ ಅಡ್ಯಂತಾಯ ಅವರು ಟಿಪ್ಪು ಸುಲ್ತಾನ್​​ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದರು. ಟಿಪ್ಪು ಸುಲ್ತಾನ್​​ನ​​ ಹುಚ್ಚು ನಾಯಿಗೆ ಹೋಲಿಸಿ ಹೇಳಿಕೆ ನೀಡಿದ್ದಾರೆ. ಹಿಂದೂ ಸಂಘಟನೆಗಳ ಬೃಹತ್ ರಾಲಿ ಉದ್ಧೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ರಥದಲ್ಲಿ ಸಾವರ್ಕರ್ ಚಿತ್ರ ಇರಬಾರದೆಂದು SDPI ಆಕ್ಷೇಪ ಎತ್ತಿದೆ. ಟಿಪ್ಪು ಸುಲ್ತಾನ್ ಚಿತ್ರ ಹಾಕಬೇಕೆಂದು ಒತ್ತಾಯಿಸಿದೆ. ಟಿಪ್ಪು ಒರ್ವ ದೇಶದ್ರೋಹಿ. ವೀರ ಸಾವರ್ಕರ್ ಜೊತೆ ಟಿಪ್ಪು ಸುಲ್ತಾನನ್ನು ಹೋಲಿಸಬೇಡಿ, ಟಿಪ್ಪು ಓರ್ವ ಹುಚ್ಚು ನಾಯಿ. ಲಕ್ಷಾಂತರ ಹಿಂದೂ ಮತ್ತು ಕ್ರಿಶ್ಚಿಯನ್ ರನ್ನು ಮತಾಂತರ ಮಾಡಿದ ಮತಾಂಧ ಎಂದು ವಾಗ್ದಾಳಿ ನಡೆಸಿದರು.

  ಟಿಪ್ಪು ಚಿತ್ರವನ್ನು ಸ್ವಾತಂತ್ರ್ಯ ರಥಕ್ಕೆ ಹಾಕಲು ಒತ್ತಾಯಿಸುವುದು ಅಕ್ಷಮ್ಯ. ಆರೋಪಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಪೊಲೀಸರು ಆರೋಪಿಗಳ ಮೇಲಿನ ಮೃದುಧೋರಣೆಯನ್ನು ನಿಲ್ಲಿಸಬೇಕ ಎಂದು ಹಿಂಜಾವೆ ಮುಖಂಡ ಅಡ್ಯಂತಾಯ ಒತ್ತಾಯಿಸಿದರು. ಪ್ರತಿಭಟನೆಯ ಅಂತ್ಯದಲ್ಲಿ ಟಿಪ್ಪು ಸುಲ್ತಾನ್ ಪ್ರತಿಕೃತಿ ದಹನಕ್ಕೆ ಪ್ರತಿಭಟನಾಕಾರರು ಮುಂದಾದರು. ಆದರೆ ಪೋಲೀಸರು ಪ್ರತಿಕೃತಿ ದಹನಕ್ಕೆ ಅವಕಾಶ ನೀಡಲಿಲ್ಲ. ಟಿಪ್ಪು ಪ್ರತಿಕೃತಿಯನ್ನು ಪೊಲೀಸ್ ಜೀಪ್ ನಲ್ಲಿ ಬೇರೆಡೆ ಸಾಗಿಸಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Kavya V
  First published: