ಮಂಗಳೂರಿನಲ್ಲಿ ಗುಡ್ಡ ಕುಸಿತ; ನೆಲಸಮವಾದ ಮನೆಗಳು, ಮಣ್ಣಿನ ಅಡಿಯಲ್ಲಿ ಸಿಲುಕಿದ ಮಕ್ಕಳು, ರಕ್ಷಣಾ ಕಾರ್ಯಾಚರಣೆ

ಈ ಗುಡ್ಡದಲ್ಲಿ 14 ಮನೆಗಳಿದ್ದು, ಭೂ ಕುಸಿತದಿಂದಾಗಿ 4 ಮನೆಗಳು ಸಂಪೂರ್ಣವಾಗಿ ಜಖಂ ಆಗಿವೆ. ಅಲ್ಲದೆ, ಈ ಮನೆಯಲ್ಲಿದ್ದ ಇಬ್ಬರು ಮಕ್ಕಳು ಭಾರೀ ಪ್ರಮಾಣದ ಮಣ್ಣಿನ ಅಡಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ ಜಿ‌ಲ್ಲಾಡಳಿತ ಮತ್ತು ಎನ್‌ಡಿಆರ್‌ಎಫ್ ತಂಡ ಈಗಾಗಲೇ ಮಣ್ಣನ್ನು ತೆರವು ಮಾಡುವ ಕಾರ್ಯಾಚರಣೆಗೆ ಮುಂದಾಗಿದ್ದು, ಶೀಘ್ರದಲ್ಲಿ ಮಕ್ಕಳನ್ನು ಜೀವಂತವಾಗಿ ಹೊರಗೆ ತೆಗೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

news18-kannada
Updated:July 5, 2020, 4:15 PM IST
ಮಂಗಳೂರಿನಲ್ಲಿ ಗುಡ್ಡ ಕುಸಿತ; ನೆಲಸಮವಾದ ಮನೆಗಳು, ಮಣ್ಣಿನ ಅಡಿಯಲ್ಲಿ ಸಿಲುಕಿದ ಮಕ್ಕಳು, ರಕ್ಷಣಾ ಕಾರ್ಯಾಚರಣೆ
ಮಂಗಳೂರಿನಲ್ಲಿ ಗುಡ್ಡ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿರುವ ಸಂಸದ ನಳೀನ್ ಕುಮಾರ್‌ ಕಟೀಲ್.
  • Share this:
ಮಂಗಳೂರು (ಜುಲೈ 05); ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಹೊರ ವಲದಲ್ಲಿರುವ ಗುರುಪುರದಲ್ಲಿ ಮನೆಗಳ ಮೇಲೆ ಗುಡ್ಡ ಜರಿದು ಬಿದ್ದಿರುವ ಪರಿಣಾಮ 4 ಮನೆಗಳು ಸಂಪೂರ್ಣ ನೆಲಸಮ ಆಗಿವೆ. ಅಲ್ಲದೆ, ಇಬ್ಬರು ಮಕ್ಕಳು ಭಾರೀ ಮಣ್ಣಿನ ಅಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಸ್ಥಳೀಯರು ಹಾಗೂ ಎನ್‌ಡಿಆರ್‌ಎಫ್ ತಂಡದ ಜೊತೆಗೆ ಜಿಲ್ಲಾಡಳಿತ ಈಗಾಗಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದು, ಮಕ್ಕಳನ್ನು ಶತಾಯಗತಾಯ ಜೀವಂತವಾಗಿ ರಕ್ಷಿಸುವ ಭರವಸೆ ನೀಡಿದೆ.

ಕಳೆದ 20 ವರ್ಷಗಳ ಹಿಂದೆ ಜಿಲ್ಲಾಡಳಿತ 14 ನಿರಾಶ್ರಿತ ಕುಟುಂಬಗಳಿಗೆ ಗುರುಪುರದ ಬಂಗ್ಲೆಗುಡ್ಡದಲ್ಲಿ ಮನೆ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಹೀಗಾಗಿ ಈ ಭಾಗದಲ್ಲಿ ನಿರಾಶ್ರಿತರು ಮನೆ ಮಾಡಿಕೊಂಡಿದ್ದರು. ಇಲ್ಲಿ ನೆಲೆಸಿರುವ ಎಲ್ಲರೂ ಕೂಲಿ ಕೆಲಸ ಮಾಡುವವರು ಎಂದು ಹೇಳಲಾಗುತ್ತಿದೆ. ಆದರೆ, ಕಳೆದ ಹಲವು ದಿನಗಳಿಂದ ಇಲ್ಲಿ ಭಾರೀ ಪ್ರಮಾಣದ ಮಳೆಯಾದ ಪರಿಣಾಮ ಮಣ್ಣು ಕುಸಿದಿದ್ದು ಇಡೀ ಗುಡ್ಡ ಮನೆಗಳ ಮೇಲೆ ಬಿದ್ದಿದೆ.

ಈ ಗುಡ್ಡದಲ್ಲಿ 14 ಮನೆಗಳಿದ್ದು, ಭೂ ಕುಸಿತದಿಂದಾಗಿ 4 ಮನೆಗಳು ಸಂಪೂರ್ಣವಾಗಿ ಜಖಂ ಆಗಿವೆ. ಅಲ್ಲದೆ, ಈ ಮನೆಯಲ್ಲಿದ್ದ ಇಬ್ಬರು ಮಕ್ಕಳು ಭಾರೀ ಪ್ರಮಾಣದ ಮಣ್ಣಿನ ಅಡಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ ಜಿ‌ಲ್ಲಾಡಳಿತ ಮತ್ತು ಎನ್‌ಡಿಆರ್‌ಎಫ್ ತಂಡ ಈಗಾಗಲೇ ಮಣ್ಣನ್ನು ತೆರವು ಮಾಡುವ ಕಾರ್ಯಾಚರಣೆಗೆ ಮುಂದಾಗಿದ್ದು, ಶೀಘ್ರದಲ್ಲಿ ಮಕ್ಕಳನ್ನು ಜೀವಂತವಾಗಿ ಹೊರಗೆ ತೆಗೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಇದನ್ನೂ ಓದಿ : ರಾಯಚೂರು: ಓರ್ವ ಸೋಂಕಿತಳಿಂದ 30 ಜನರಿಗೆ ಸೋಂಕು, ಜಿಲ್ಲಾಡಳಿತಕ್ಕೆ ಹೊಸ ತಲೆನೋವು

ಇನ್ನೂ ಈ ಭಾಗದ ಸಂಸದ ನಳಿನ್ ಕುಮಾರ್‌ ಕಟೀಲ್ ಸಹ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, "ಈ ಗುಡ್ಡದ ಮೇಲಿನ ಎಲ್ಲರನ್ನೂ ಗಂಜಿ ಕೇಂದ್ರಕ್ಕೆ ರವಾನಿಸಲಾಗಿದೆ. ಮಕ್ಕಳನ್ನು ಸುರಕ್ಷಿತವಾಗಿ ಮಣ್ಣಿನ ಅಡಿಯಿಂದ ರಕ್ಷಿಸುವ ಭರವಸೆ ಇದೆ. ಅಲ್ಲದೆ, ಇಲ್ಲಿನ ಎಲ್ಲಾ ನಿರಾಶ್ರಿತ ಕುಟುಂಬಗಳಿಗೂ ಬೇರೆ ಮನೆ ಮಾಡಿಕೊಳ್ಳಲು ನಿವೇಶನ ನೀಡಲಾಗುವುದು" ಎಂದು ಭರವಸೆ ನೀಡಿದ್ದಾರೆ.
Published by: MAshok Kumar
First published: July 5, 2020, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading