ಉಡುಪಿ (ಮಾ.15): ಹಿಜಾಬ್ ಪ್ರಕರಣದ (Hijab Case) ಕುರಿತು ಹೈಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಹಿಜಾಬ್ ಧರಿಸೋದು ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ತನ್ನ ಅಭಿಪ್ರಾಯ ತಿಳಿಸಿದ್ದು, ಸಮವಸ್ತ್ರ (Uniform) ಕಡ್ಡಾಯಗೊಳಿಸಿ ಸರ್ಕಾರ ನೀಡಿದ್ದ ಆದೇಶವನ್ನ ಕರ್ನಾಟಕ ಹೈಕೋರ್ಟ್ (Karnataka High court) ಎತ್ತಿಹಿಡಿದಿದೆ. ಹಿಜಾಬ್ ಗಾಗಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ಹೈಕೋರ್ಟ್ವಜಾಗೊಳಿಸಿದೆ. ಸಮವಸ್ತ್ರದ ಜೊತೆ ಹಿಜಾಬ್ಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯರು (Students) ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಉಡುಪಿಯಲ್ಲಿ (Udupi) ಸುದ್ದಿಗೋಷ್ಠಿ ನಡೆಸಿದ 6 ಮಂದಿ ವಿದ್ಯಾರ್ಥಿನಿಯರು, ನಮಗೆ ನ್ಯಾಯ ಸಿಗುತ್ತೆ ಅನ್ನೋ ಭರವಸೆ ಇತ್ತು ಆದ್ರೆ ಕೋರ್ಟ್ನಿಂದ ನಮಗೆ ನ್ಯಾಯ ಸಿಕ್ಕಿಲ್ಲ ಎಂದಿದ್ದಾರೆ.
ಉಡುಪಿಯಲ್ಲಿ ವಿದ್ಯಾರ್ಥಿನಿಯರ ಸುದ್ದಿಗೋಷ್ಠಿ
ಸರ್ಕಾರಿ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರಿಂದ ಸಮವಸ್ತ್ರದ ಜೊತೆ ಹಿಜಾಬ್ಗಾಗಿ ಮನವಿ ಸಲ್ಲಿಸಿದ್ರು. ನಮಗೆ ಹಿಜಾಬ್ ಧರಿಸೋ ಹಕ್ಕು ಸಿಗುತ್ತೆ ಅನ್ನೋ ನಂಬಿಕೆ ಇತ್ತು, ಆದರೆ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿಲ್ಲ. ನಾವು ನ್ಯಾಯ ಸಿಗೋವರೆಗೂ ಕಾಲೇಜಿಗೆ ಹಿಜಾಬ್ ಇಲ್ಲದೆ ಹೋಗಲ್ಲ ಅಂತ ಹೇಳಿದ್ದಾರೆ. ಕುರಾನ್ ನಲ್ಲಿ ಹೇಳಿರೋದ್ರಿಂದ ನಾವು ಹಿಜಾಬ್ ಗಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ಮುಂದೆ ಕೂಡ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ.
‘ಹಿಜಾಬ್ ತೆಗೆದು ಕ್ಲಾಸ್ ಒಳಗೆ ಹೋಗಲ್ಲ’
ನಾವು ಹಿಜಾಬ್ ತೆಗೆದು ಕ್ಲಾಸ್ ಒಳಗೆ ಹೋಗಲ್ಲ ಎಂದು ವಿದ್ಯಾರ್ಥಿನಿಯರು ಹೇಳ್ತಿದ್ದಾರೆ. ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ ಕುರಾನ್ ನಲ್ಲಿ ದೇಹವನ್ನು ಮುಚ್ಚಬೇಕೆಂಬ ಉಲ್ಲೇಖ ಇದೆ. ಹಿಜಾಬ್ ಅವಶ್ಯಕತೆ ಇಲ್ಲದಿದ್ದರೆ ನಾವು ಹಿಜಾಬ್ ತೊಡುತ್ತಿರಲಿಲ್ಲ. ನಮಗೆ ಶಿಕ್ಷಣವೂ ಬೇಕು ಹಿಜಾಬ್ ಕೂಡಾ ಬೇಕು ಅಂತ ಆಲಿಯಾ ಅಸಾದಿ ಹೇಳಿದ್ದಾರೆ.
ಇದನ್ನೂ ಓದಿ: Hijab Row: ತ್ರಿಸದಸ್ಯ ಪೀಠದಿಂದ 129 ಪುಟಗಳ ತೀರ್ಪು: ತೀರ್ಪಿನಲ್ಲಿ ನಾಲ್ಕು ಪ್ರಶ್ನೆಗಳನ್ನ ಗಂಭೀರವಾಗಿ ಪರಿಗಣನೆ
ಹಿಜಾಬ್ಗೆ ತಡೆ ಅಲ್ಲ, ಇದು ನಮ್ಮ ಶಿಕ್ಷಣದ ತಡೆ
ರಾಜಕೀಯ ಲಾಭಕ್ಕೆ ವಿಚಾರವನ್ನು ಕಮ್ಯೂನಲ್ ಮಾಡಲಾಗಿದೆ. ರಾಜಕೀಯ ದುರುದ್ದೇಶದಿಂದ ದೊಡ್ಡ ವಿವಾದ ಮಾಡಿದರು. ಎಲ್ಲರ ಶಿಕ್ಷಣಕ್ಕೆ ಬಹಳ ಸಮಸ್ಯೆ ಆಗಿದೆ. ನಮ್ಮ ಕಾಲೇಜಿನ ಪ್ರಾಂಶುಪಾಲರು ಹಿಜಾಬ್ಗೆ ಅವಕಾಶ ಕೊಡದಿದ್ರೆ ಅದು ಹಿಜಾಬ್ಗೆ ತಡೆ ಅಲ್ಲ, ಇದು ನಮ್ಮ ಶಿಕ್ಷಣದ ತಡೆ. ನಮಗೆ ಧರ್ಮ ಮತ್ತು ಶಿಕ್ಷಣ ಎರಡೂ ಬಹಳ ಮುಖ್ಯ. ನಮಗೆ ಎರಡಕ್ಕೂ ಅವಕಾಶ ಬೇಕು ಅಂತ ಉಡುಪಿಯಲ್ಲಿ ಆಲಿಯಾ ಅಸಾದಿ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
‘ನಮ್ಮ ಹಕ್ಕಿಗಾಗಿ ನಾವು ಹೋರಾಡುತ್ತೇವೆ‘
ಡಾ. ಬಿ.ಆರ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ. ಅಂಬೇಡ್ಕರ್ ಬದುಕಿದ್ದರೆ ಇಂದು ಕಣ್ಣೀರು ಹಾಕುತ್ತಿದ್ದರು, ಸಂವಿಧಾನದ ಈಗಿನ ಪರಿಸ್ಥಿತಿ ನೋಡಿ ಮರುಗುತಿದ್ದರು. ನಮ್ಮ ಹಿಜಾಬ್ ಹಾಗೂ ಸಂವಿಧಾನದ ಹಕ್ಕಿಗಾಗಿ ಮುಂದಿನ ಹೋರಾಟ ಮಾಡುತ್ತೇವೆ. ನಾವು ನಮ್ಮ ಕುರಾನ್ ಫಾಲೋ ಮಾಡುತ್ತೇವೆ. ನಾವು ಸರಕಾರದ ಆದೇಶ ಅನುಸರಿಸಬೇಕಾಗಿಲ್ಲ. ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ಬೇಕು. ನಾವು ಎರಡು ತಿಂಗಳು ಮನೆಯಲ್ಲೇ ತಯಾರು ಮಾಡುತ್ತಿದ್ದೇವೆ.
‘ನಾವು ಕಾಂಪ್ರಮೈಸ್ ಆಗಲ್ಲ’
ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ನಾವು ಹೈಕೋರ್ಟ್ ಗೆ ಹಿಜಬ್ ಗಾಗಿ ಹೋದೆವು. ನಮ್ಮ ನಿರೀಕ್ಷೆ ವಿರುದ್ಧ ತೀರ್ಪು ಬಂದಿದೆ. ನಮ್ಮ ದೇಶದಲ್ಲೇ ನಮಗೆ ಅನ್ಯಾಯ ಆಗಿದೆ ಎಂದು ಅನ್ನಿಸುತ್ತಿದೆ ಅಂತ ಉಡುಪಿಯಲ್ಲಿ ವಿದ್ಯಾರ್ಥಿನಿ ಅಲ್ಮಾಸ್ ಹೇಳಿದ್ದಾರೆ. ಸರಕಾರದ ಮಧ್ಯಂತರ ಆದೇಶದ ಮೂಲಕ ಕೋರ್ಟ್ ಮೇಲೆ ಪ್ರೆಶರ್ ಹಾಕಲಾಗಿದೆ. ರಾಜ್ಯ ಸರಕಾರ ಕೋರ್ಟ್ ತೀರ್ಪಿನ ಮೇಲೆ ಹಸ್ತಕ್ಷೇಪ ಮಾಡಿದೆ. ರಾಜ್ಯ ಸರಕಾರದಿಂದ ಕೋರ್ಟ್ ಮೇಲೆ ಒತ್ತಡ ಇದೆ. ಒತ್ತಡ ಇದ್ದದ್ದಕ್ಕೆ ಇಂದು ಹಿಜಾಬ್ ವಿರುದ್ಧ ತೀರ್ಪು ಬಂದಿದೆ. ಉಡುಪಿಯಲ್ಲಿ ಆಲಿಯಾ ಅಸಾದಿ ಹೇಳಿಕೆ.
ಇದನ್ನೂ ಓದಿ: Hijab Verdict: ಹೈಕೋರ್ಟ್ ತೀರ್ಪು ಗೌರವಿಸುವಂತೆ BSY ಮನವಿ, ನಮಗೆ ಕಪಾಳಮೋಕ್ಷ ಆಗಿದೆ ಎನ್ನಲಾಗಲ್ಲ ಎಂದ್ರು ಸಿದ್ದು
ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಯುತ್ತಿವೆ
ನಾವು ಜಾತ್ಯಾತೀತ ದೇಶದಲ್ಲಿ ಇದ್ದೇವೆ ಎಲ್ಲಾ ಧರ್ಮಕ್ಕೆ ಎಲ್ಲರೂ ಗೌರವ ಕೊಡಬೇಕು. ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾವು ನಮ್ಮ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದೇವೆ. ನಾವು ಈಗಾಗಲೇ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಈಗ ಬಂದ ತೀರ್ಪಿನಿಂದ ನಾವು ಬಹಳ ನೊಂದಿದ್ದೇವೆ ಅಂತ ಅಲ್ಮಾಸ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ