ಜಿಲ್ಲೆ

  • associate partner
HOME » NEWS » District » HERES WHAT KAPIL DEV HAS TO SAY ON MANKADING ZP

ಮಂಕಡಿಂಗ್ ರನೌಟ್ ಮಾಡಬೇಕಾ, ಬೇಡ್ವಾ? ಈ ಬಗ್ಗೆ ಕಪಿಲ್ ದೇವ್ ಹೇಳುವುದೇನು?

ಈ ಹಿಂದೆ ನಾನು ಕೂಡ ಮಂಕಡಿಂಗ್ ಮಾಡಿದ್ದೆ. ಭಾರತದ 1991-92 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಪೋರ್ಟ್ ಎಲಿಜಬೆತ್​ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ, ನಾನ್​ಸ್ಟ್ರೈಕರ್ ತುದಿಯಲ್ಲಿದ್ದ ಪೀಟರ್ ಕರ್ಸ್ಟೆನ್ ನಾನು ಬೌಲ್ ಮಾಡುವ ಮೊದಲೇ ಕ್ರೀಸ್​ನಿಂದ ಬಿಡುತ್ತಿದ್ದರು.

news18-kannada
Updated:October 12, 2020, 8:51 PM IST
ಮಂಕಡಿಂಗ್ ರನೌಟ್ ಮಾಡಬೇಕಾ, ಬೇಡ್ವಾ? ಈ ಬಗ್ಗೆ ಕಪಿಲ್ ದೇವ್ ಹೇಳುವುದೇನು?
Mankading
  • Share this:
ಐಪಿಎಲ್ 2020 ಯಲ್ಲೂ ಮಂಕಡಿಂಗ್ ರನೌಟ್ ಸುದ್ದಿಯಾಗಲಾರಂಭಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವಣ ಪಂದ್ಯದಲ್ಲಿ ಆರ್​. ಅಶ್ವಿನ್ ಆರ್​ಸಿಬಿ ಆರಂಭಿಕ ಆರೋನ್ ಫಿಂಚ್​ಗೆ ಮಂಕಡಿಂಗ್ ಎಚ್ಚರಿಕೆ ನೀಡಿದ್ದರು. ಅಲ್ಲದೆ ಇದು ಫಸ್ಟ್ ಅ್ಯಂಡ್ ಲಾಸ್ಟ್ ವಾರ್ನಿಂಗ್ ಎಂದು ಸೋಷಿಯಲ್ ಮೀಡಿಯಾ ಮೂಲಕ ಅಶ್ವಿನ್ ಎಲ್ಲಾ ಬ್ಯಾಟ್ಸ್​ಮನ್​ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಇದರೊಂದಿಗೆ ಮತ್ತೊಮ್ಮೆ ಕ್ರಿಕೆಟ್ ವಲಯದಲ್ಲಿ ಮಂಕಡಿಂಗ್ ಚರ್ಚೆ ಶುರುವಾಗಿದೆ. ಈ ಬಗ್ಗೆ ಇದೀಗ ಟೀಮ್ ಇಂಡಿಯಾ ದಂತಕಥೆ ಕಪಿಲ್ ದೇವ್ ಕೂಡ ಮಾತನಾಡಿದ್ದು, ಮಂಕಡಿಂಗ್ ಮಾಡುವುದು ತಪ್ಪಲ್ಲ ಎಂದಿದ್ದಾರೆ. ಏಕೆಂದರೆ ಕ್ರಿಕೆಟ್ ನಿಯಮದ ಪ್ರಕಾರ ಅದಕ್ಕೆ ಅವಕಾಶ ಕಲ್ಪಿಸಿದಾಗ ಅದೇಗೆ ತಪ್ಪಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಬೌಲರ್ ಚೆಂಡೆಸೆಯುವ ಮೊದಲೇ ಬ್ಯಾಟ್ಸ್​ಮನ್​ ಕ್ರೀಸ್ ಬಿಟ್ಟರೆ ರನೌಟ್ ಮಾಡುವುದು ನನ್ನ ಪ್ರಕಾರ ತಪ್ಪಲ್ಲ. ಐಸಿಸಿ ಲಾ 42.15 ರ ಪ್ರಕಾರ, "ಚೆಂಡನ್ನು ಎಸೆಯುವ ಮುನ್ನ ನಾನ್ ಸ್ಟ್ರೈಕರ್ ಕ್ರೀಸ್ ಬಿಟ್ಟರೆ ಬೌಲರ್​ಗೆ ಔಟ್ ಮಾಡಲು ಅವಕಾಶವಿದೆ. ಇದು ಕೂಡ ಒಂದು ನಿಯಮ. ಇಲ್ಲಿ ಕ್ರೀಡಾ ಸ್ಪೂರ್ತಿ ಎಲ್ಲಿ ಬರುತ್ತದೆ. ಇದರಿಂದ ಲಾಭ ಪಡೆಯುತ್ತಿರುವುದು ಬ್ಯಾಟ್ಸ್​ಮನ್​ ಅಲ್ಲವೇ? ಅವರಿಗೆ ಕ್ರೀಡಾ ಸ್ಪೂರ್ತಿ ಅನ್ವಯವಾಗುದಿಲ್ಲವೇ ಎಂದು ಕಪಿಲ್ ದೇವ್ ಪ್ರಶ್ನಿಸಿದ್ದಾರೆ.

ಕ್ರಿಕೆಟ್ ಈಗಾಗಲೇ ಸಂಪೂರ್ಣವಾಗಿ ಬ್ಯಾಟ್ಸ್​ಮನ್ ಪರವಾಗಿದೆ ಎಂದು ತಿಳಿಸಿರುವ ಕಪಿಲ್ ದೇವ್, ಇನ್ನೆಷ್ಟು ದಿನ ಬೌಲರ್ ಮಾತ್ರ ದಂಡನೆಗೆ ಗುರಿಯಾಗಬೇಕು? ಓವರ್​ಸ್ಟೆಪ್ ಮಾಡಿದರೆ ಅಂಪೈರ್ ನೋ ಬಾಲ್ ಎನ್ನಲಾಗುತ್ತದೆ, ಒಂದು ಸೆಂಟಿಮೀಟರ್​ನಷ್ಟೇ ಲೆಗ್​ಸ್ಟಂಪ್​ನಿಂದ ಎಸೆತ ಆಚೆ ಹೋದರೆ ವೈಡ್ ಬಾಲ್ ಅಂತಾರೆ. ಬೌಲರ್ ಪರಿಸ್ಥಿತಿ ಹೀಗಿರುವಾಗ ಬ್ಯಾಟ್ಸ್​ಮನ್​ಗೆ ಮಾತ್ರ ಯಾಕೆ ಅನುಚಿತ ಲಾಭ ಸಿಗಬೇಕು?. ಹೀಗಾಗಿ ಇಲ್ಲಿ ಕ್ರೀಡಾ ಸ್ಪೂರ್ತಿ ವಿಷಯವಲ್ಲ. ಒಂದು ನಿಯಮ ಅಷ್ಟೇ ಎಂದು ಕಪಿಲ್ ದೇವ್ ತಿಳಿಸಿದರು.

ಈ ಹಿಂದೆ ನಾನು ಕೂಡ ಮಂಕಡಿಂಗ್ ಮಾಡಿದ್ದೆ. ಭಾರತದ 1991-92 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಪೋರ್ಟ್ ಎಲಿಜಬೆತ್​ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ, ನಾನ್​ಸ್ಟ್ರೈಕರ್ ತುದಿಯಲ್ಲಿದ್ದ ಪೀಟರ್ ಕರ್ಸ್ಟೆನ್ ನಾನು ಬೌಲ್ ಮಾಡುವ ಮೊದಲೇ ಕ್ರೀಸ್​ನಿಂದ ಬಿಡುತ್ತಿದ್ದರು. ಈ ವೇಳೆ ಒಂದೆರಡು ಬಾರಿ ಎಚ್ಚರಿಕೆ ನೀಡಿದ್ದೆ. ಆದರೆ ಅದೇ ತಪ್ಪನ್ನು ಮರಕಳಿಸುತ್ತಿದ್ದರಿಂದ ನಾನು ಮಂಕಡಿಂಗ್ ಮಾಡಿದ್ದೆ. ಆ ವೇಳೆ ಕರ್ಸ್ಟೆನ್ ಬೇಗನೆ ಕ್ರೀಸ್ ಬಿಡಲು ಕಾರಣ ಜಾಂಟಿ ರೋಡ್ಸ್ ಅವರೊಂದಿಗೆ ರನ್ನಿಂಗ್ ಹೊಂದಿಸಬೇಕಾದ ಅನಿವಾರ್ಯತೆ ಎನ್ನಲಾಗಿತ್ತು. ಆದರೆ ರನೌಟ್ ಮಾಡಿರುವುದು ನಿಯಮದ ಪ್ರಕಾರವಾಗಿತ್ತು.


ಬ್ಯಾಟ್ಸ್​ಮನ್​ಗಳು ಹೀಗೆ ಕ್ರೀಸ್ ಬಿಡುತ್ತಿರುವುದನ್ನು ಅಂಪೈರ್​ಗಳು ಗಮನಿಸಬೇಕು. ನಾನ್​ ಸ್ಟ್ರೈಕರ್ ಬೇಗನೇ ಕ್ರೀಸ್ ಬಿಟ್ಟರೆ ಬ್ಯಾಟಿಂಗ್ ತಂಡಕ್ಕೆ ಒಂದು ರನ್ ದಂಡ ವಿಧಿಸಬೇಕು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟರು.

ಕಳೆದ ವರ್ಷದ ಐಪಿಎಲ್ ಸೀಸನ್​ನಲ್ಲಿರಾಜಸ್ಥಾನ್ ರಾಯಲ್ಸ್ ತಂಡದ ಜೊಸ್ ಬಟ್ಲರ್ ಅವರನ್ನು ಅಶ್ವಿನ್ ಮಂಕಡಿಂಗ್ ರನೌಟ್ ಮಾಡಿದ್ದರು. ಆದರೆ, ಅವರ ಕ್ರಮವನ್ನು ವ್ಯಾಪಕವಾಗಿ ಖಂಡಿಸಲಾಗಿತ್ತು. ಅಲ್ಲದೆ ಈ ಬಾರಿ ಮಂಕಡಿಂಗ್ ಮಾಡದಂತೆ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ತಿಳಿಸಿದ್ದರು. ಆದರೀಗ ಅಶ್ವಿನ್ ಅವರಿಗೆ ಸಂಪೂರ್ಣ ಬೆಂಬಲದೊಂದಿಗೆ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಅಶ್ವಿನ್ ಮಂಕಡಿಂಗ್ ಮಾಡಿದ್ರೂ ಅಚ್ಚರಿಪಡಬೇಕಿಲ್ಲ.POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ:IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?
Published by: zahir
First published: October 12, 2020, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories