ಚಿಕ್ಕಬಳ್ಳಾಪುರ: ಇಲ್ಲಿದೆ ಬಯಲು ಸೀಮೆ‌ಯ ಜೋಗ್ ಫಾಲ್ಸ್ ಸುತ್ತ ಒಂದು ನೋಟ 

ಜರಿ ಹರಿವ ಸ್ಥಳಕ್ಕೆ ಪ್ರೇಕ್ಷಕರು, ಪ್ರವಾಸಿಗರಿಗೆ ನಿರ್ಬಂಧ ಇದ್ದು ವರ್ಷದಲ್ಲಿ ಮೂರ್ನಾನಕ್ಕು ತಿಂಗಳು ಕಣ್ಣಿಗೆ ಮುದ ಕೊಡುವ ರಮಣೀಯ ಚನ್ನಗಿರಿ ದೃಶ್ಯಗಳು ನೋಡುಗರನ್ನು ಮಂತ್ರ ಮುಗ್ದರಾಗಿಸುತ್ತದೆ. ಆದರೆ ತೀರಾ ಸೂಕ್ಷ್ಮ ಮತ್ತು ಅಪಾಯಕಾರಿ ಸ್ಥಳದಲ್ಲಿ ಹಲವು ಅಹಿತಕರ ಘಟನೆಗಳು ನಡೆದ ಹಿನ್ನೆಲೆ ಸಾರ್ವಜನಿಕರಿಗೆ ನಿರ್ಬಂಧ ಇರೋದ್ರಿಂದ ನಾವು ಕೆಲವು ತುಣುಕು ನಿಮಗಾಗಿ ತಂದಿದ್ದೇವೆ.

news18-kannada
Updated:July 16, 2020, 3:15 PM IST
ಚಿಕ್ಕಬಳ್ಳಾಪುರ: ಇಲ್ಲಿದೆ ಬಯಲು ಸೀಮೆ‌ಯ ಜೋಗ್ ಫಾಲ್ಸ್ ಸುತ್ತ ಒಂದು ನೋಟ 
ಚಿಕ್ಕಬಳ್ಳಾಪುರ ಜಲಪಾತ
  • Share this:
ಚಿಕ್ಕಬಳ್ಳಾಪುರ(ಜು.16): ಚನ್ನಗಿರಿ ಫಾಲ್ಸ್ ನಂದಿಬೆಟ್ಟದ ಪಕ್ಕದಲ್ಲಿರುವ ಚಿಕ್ಕರಾಯಪನಹಳ್ಳಿ ಬಳಿಯ ಬಯಲು ಸೀಮೆಯ ಜೋಗ್ ಫಾಲ್ಸ್. ನಮ್ಮ ಬೆಂಗಳೂರಿಗೆ ಸಮೀಪದಲ್ಲೇ ಈ ರೀತಿಯ ಮಲೆನಾಡ ಮೈಸಿರಿ ಹೊತ್ತ ಚನ್ನಗಿರಿ, ನಂದಿಗಿರಿ(ಉತ್ತರ, ದಕ್ಷಿಣ, ಪಿನಾಕಿನಿ), ದಿಬ್ಬಗಿರಿ( ಅರ್ಕಾವತಿ, ಪಾಲಾರ್), ವಿಷ್ಟುಗಿರಿ(ಸಣ್ಣ ಕಾಲುವೆ ಅರ್ಕಾವತಿಗೆ) ಇದ್ದು ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿರುವ ಅರ್ಕಾವತಿ ನೋಡಲು ಸುಂದರವಾಗಿದೆ.

ಸ್ಕಂದಗಿರಿ(ಪಾಪಾಘ್ನಿ) ಪಂಚನದಿಗಳು ಹುಟ್ಟಿ ಹರಿಯುತ್ತವೆ. ನಂದಿಕಣಿವೆಯ ಪಂಚಗಿರಿಗಳಲ್ಲಿ ಪಂಚನದಿಗಳು ಹುಟ್ಟಿ ಹರಿಯುವುದನ್ನು ಕಣ್ತುಂಬಿಕೊಂಡರೆ ನಾವೇ ಧನ್ಯರು. ಆ ಸೌಭಾಗ್ಯ. ಅರ್ಕಾವತಿ ನದಿಯ ಉಗಮ ಸ್ಥಾನ ನಂದಿ ಬೆಟ್ಟಗಳ ಪಂಚ ಗರಿ. ಶ್ರೇಣಿಗಳು, ಸಧ್ಯ ಚನ್ನಗಿರಿ ಬೆಟ್ಟಕ್ಕೆ ಭೇಟಿಗೆ ಸಾರ್ವಜನಿಕರಿಗೆ ನಿರ್ಬಂಧ ಇದ್ದು ಸಧ್ಯ ಚನ್ನಗಿರಿ ಫಾಲ್ಸ್‌ ಮೆಂದುಂಬಿ ಹರಿಯುತ್ತಿರುವ ದೃಶ್ಯ ರಮಣೀಯವಾದ ಪ್ರಕೃತಿ ಸೌಂದರ್ಯದ ನಡುವೆ ಬಯಲು ಸೀಮೆಗೆ ಕಳಶ ಪ್ರಿಯವಾಗಿದ್ದು, ಮಲೆನಾಡನ್ನ ನಾಚಿಸುವಂತಿದೆ.

ನಂದಿಬೆಟ್ಟದ ಟಿಪ್ಪು ಡ್ರಾಪ್ ಬಳಿಯ ಮೂಲದಲ್ಲಿ ಹುಟ್ಟಿ ಗುಪ್ತಗಾಮಿನಿಯಾಗಿ, ಚನ್ನಗಿರಿ ಬೆಟ್ಟದ  ಫಾಲ್ಸ್​ನಿಂದ ಹರಿಯುವ ನೀರು ಏಳೆಮ್ಮೆ ದೊಣೆಯಲ್ಲಿ ಸೇರಿ ನಂತರ ಚಿಕ್ಕರಾಯಪನಹಳ್ಳಿ ಅರ್ಕಾವತಿ ನದಿಯ ಮೊದಲ ಕೆರೆ ಕೋಡಿ, ನಂದಿಕಣಿವೆಯಲ್ಲಿ ಹುಟ್ಟುವ ಎಲ್ಲಾ ನದಿಗಳು ಕೆರೆಯಿಂದ ಕೆರೆಗೆ ಕೋಡಿ ರೂಪದಲ್ಲಿ ಹರಿಯುವ ನದಿಗಳೆ. ಕೆರೆಯಿಂದ ಹರಿದು ಮುಂದೆ ಮೆಳೆಕೋಟೆ, ಕೊನಘಟ್ಟ,  ದೊಡ್ಡಬಳ್ಳಾಪುರ ದೊಡ್ಡಕೆರೆ, ದೇವನಹಳ್ಳಿ ತಾಲೂಕಿನ ಸ್ವಲ್ಪ ಭಾಗ ಸೇರಿ, ಸೊಣ್ಣೇನಹಳ್ಳಿ ಕೆರೆ, ಹೆಸರಘಟ್ಟ ಕೆರೆ, ಮಾಕಳಿ, ಸೊಂಡೆಕೊಪ್ಪ, ತಿಪ್ಪಗೊಂಡನಹಳ್ಳಿ ಜಲಾಶಯ ಸೇರಿ ಒಂದು ಕಾದಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಆಸರೆಯಾಗಿ ಇತ್ತು.

ಕಾಲ ಕ್ರಮೇಣ ನದಿ ಮೂಲಗಳು ಮಾಯವಾಗಿ ಹರಿವಿನ ಸೆಲೆಗಳು ಮೆಚ್ಚಿದ್ದರಿಂದ ಬೆಂಗಳೂರಿಗೆ ನೀರಿನ ಮೂಲವಾಗಿದ್ದ ಜಲಾನಯನ ಪ್ರದೇಶ ಇದೀಗ ವಾಣಿಜ್ಯಿಕರಣ ಆಗಿ ಹಚ್ಚ ಹಸುರಿನ ಕಾಡುಗಳು, ಭೂ ಪ್ರದೇಶಗಳು ಬರಡಾಗಿವೆ. ಮಂಚನಬೆಲೆ ಜಲಾಶಯದ ಮೂಲಕ ಮಂಡ್ಯ ಜಿಲ್ಲೆಯ ಸಂಗಮದಲ್ಲಿ ಅರ್ಕಾವತಿ ನದಿ ಕಾವೇರಿ ನದಿಯಲ್ಲಿ ಸಂಗಮವಾಗುತ್ತಾಳೆ.

ಇದನ್ನೂ ಓದಿ: ಕೊರೋನಾ ಎಫೆಕ್ಟ್​: ಮದುವೆಯಾಗಲೆಂದು ಜಮ್ಮು-ಕಾಶ್ಮೀರದಿಂದ ಬಂದ ಯೋಧ ಕ್ವಾರಂಟೈನ್​​ ಆದ

ಜರಿ ಹರಿವ ಸ್ಥಳಕ್ಕೆ ಪ್ರೇಕ್ಷಕರು, ಪ್ರವಾಸಿಗರಿಗೆ ನಿರ್ಬಂಧ ಇದ್ದು ವರ್ಷದಲ್ಲಿ ಮೂರ್ನಾನಕ್ಕು ತಿಂಗಳು ಕಣ್ಣಿಗೆ ಮುದ ಕೊಡುವ ರಮಣೀಯ ಚನ್ನಗಿರಿ ದೃಶ್ಯಗಳು ನೋಡುಗರನ್ನು ಮಂತ್ರ ಮುಗ್ದರಾಗಿಸುತ್ತದೆ. ಆದರೆ ತೀರಾ ಸೂಕ್ಷ್ಮ ಮತ್ತು ಅಪಾಯಕಾರಿ ಸ್ಥಳದಲ್ಲಿ ಹಲವು ಅಹಿತಕರ ಘಟನೆಗಳು ನಡೆದ ಹಿನ್ನೆಲೆ ಸಾರ್ವಜನಿಕರಿಗೆ ನಿರ್ಬಂಧ ಇರೋದ್ರಿಂದ ನಾವು ಕೆಲವು ತುಣುಕು ನಿಮಗಾಗಿ ತಂದಿದ್ದೇವೆ.
Published by: Ganesh Nachikethu
First published: July 16, 2020, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading