• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕೊರೋನಾದಿಂದಾಗಿ ಉತ್ಪಾದನೆ ಕುಸಿದರೂ ಹಟ್ಟಿ ಚಿನ್ನದ ಗಣಿಗಿಲ್ಲ ನಷ್ಟ; ಏಕೆ ಗೊತ್ತಾ?

ಕೊರೋನಾದಿಂದಾಗಿ ಉತ್ಪಾದನೆ ಕುಸಿದರೂ ಹಟ್ಟಿ ಚಿನ್ನದ ಗಣಿಗಿಲ್ಲ ನಷ್ಟ; ಏಕೆ ಗೊತ್ತಾ?

ಹಟ್ಟಿ ಚಿನ್ನದ ಗಣಿ.

ಹಟ್ಟಿ ಚಿನ್ನದ ಗಣಿ.

ಕಡಿಮೆ ಚಿನ್ನ ಹೊರತೆಗಯಲಾಗಿದ್ದರೂ ಕಂಪನಿ ನಷ್ಟ ಅನುಭವಿಸಿಲ್ಲ. ಕಾರಣ ಕಳೆದ ಎರಡು ತಿಂಗಳಲ್ಲಿ ಚಿನ್ನದ ಬೆಲೆ ಏರಿಕೆ. ಈಗ ಜಾಗತಿಕ ಮಟ್ಡದಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಂ ಚಿನ್ನಕ್ಕೆ 52,000 ರೂಪಾಯಿಯಾಗಿದೆ. ಇದರಿಂದಾಗಿ ಉತ್ಪಾದನೆ ವೆಚ್ಚ ಹಾಗೂ ಕಂಪನಿಯ ಖರ್ಚಿಗೆ ಸರಿ ಹೊಂದುತ್ತಿದೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ಮಾಹಿತಿ ನೀಡಿದೆ.

ಮುಂದೆ ಓದಿ ...
  • Share this:

ರಾಯಚೂರು: ಒಂದು ಕಡೆ ಕೊರೋನಾದಿಂದಾಗಿ ಉದ್ಯಮಗಳು ನೆಲಕಚ್ಚುತ್ತಿವೆ. ಅನೇಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರ ಸ್ವಾಮ್ಯದ ಹಟ್ಟಿ ಚಿನ್ನದ ಕಂಪನಿ ಮಾತ್ರ ನಷ್ಟವಿಲ್ಲದೆ ಎಂದಿನಂತೆ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಈಗ ಜಾಗತಿಕ ಮಟ್ಟದಲ್ಲಿ ಹಳದಿ ಲೋಹದ ಬೆಲೆ ಗಗನಕ್ಕೇರಿದ್ದು, ಚಿನ್ನದ ಗಣಿ ಕಂಪನಿಗೆ ವರದಾನವಾಗಿದೆ.


ಪುರಾತನವಾಗಿರುವ ಹಟ್ಟಿ ಚಿನ್ನದ ಗಣಿ ಕಂಪನಿ ಈಗಲೂ ಚಿನ್ನ ಉತ್ಪಾದಿಸುವ ರಾಜ್ಯದ ಏಕೈಕ ಕಂಪನಿಯಾಗಿದೆ.  ರಾಯಚೂರು ಜಿಲ್ಲೆಗೆ ಚಿನ್ನದ ನಾಡು ಎಂಬ ಹೆಗ್ಗಳಿಕೆಯು ಚಿನ್ನದ ಗಣಿಯಿಂದಲೇ ಬಂದಿದೆ. ಸರಕಾರದ ಉದ್ಯಮವಾಗಿರುವ ಹಟ್ಟಿ ಚಿನ್ನದ ಗಣಿ ಕಂಪನಿಯು ಇತ್ತೀಚಿಗೆ ನಷ್ಟ ಅನುಭವಿಸಿದ್ದು ಕಡಿಮೆ. ಈ ನಡುವೆ ಈಗ ಚಿನ್ನದ ಬೆಲೆ ದಾಖಲೆ ಪ್ರಮಾಣದ ಏರಿಕೆಯಾಗಿದ್ದರಿಂದ ಚಿನ್ನದ ಕಂಪನಿ ಈಗಲೂ ನಷ್ಟವಿಲ್ಲದೆ ಲಾಭದಲ್ಲಿ ನಡೆಯುತ್ತಿದೆ.


ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಕಂಪನಿಯು ಈಗ ವಾರ್ಷ 1400 ಕೆ.ಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಿದೆ. ಕಳೆದ 2-3 ವರ್ಷಗಳಲ್ಲಿ ನಿಗಿದಿಗಿಂತ ಅಧಿಕ ಚಿನ್ನ ಉತ್ಪಾದಿಸಿದ ಹೆಗ್ಗಳಿಕೆಯನ್ನೂ ಹೊಂದಿದೆ. ಸುಮಾರು 4200 ಕಾರ್ಮಿಕರು ದುಡಿಯುವ ಹಟ್ಟಿ ಚಿನ್ನದ ಗಣಿಯಲ್ಲಿ ಈ ಆರ್ಥಿಕ ವರ್ಷದ ಆರಂಭದಲ್ಲಿ ಕೊರೋನಾ ಸೋಂಕಿನಿಂದಾಗಿ ಆತಂಕ ಸೃಷ್ಠಿಯಾಗಿತ್ತು. ಮಾರ್ಚ್‌ 21 ರಿಂದ ಎಪ್ರಿಲ್ ತಿಂಗಳ ಅಂತ್ಯದವರೆಗೂ ಗಣಿ ಮುಚ್ಚಲಾಗಿತ್ತು. ಆದರೆ, ಸರಕಾರ ಮಾರ್ಗಸೂಚಿಯಂತೆ ಮೇ ತಿಂಗಳಿನಿಂದ ಕಡಿಮೆ ಸಿಬ್ಬಂದಿ ಬಳಕೆ ಮಾಡಿ ಚಿನ್ನ ಉತ್ಪಾದಿಸಲಾಗುತ್ತಿದೆ.


ಪ್ರತಿ ತಿಂಗಳು 180-190 ಕೆ.ಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿದೆ. ಆದರೆ, ಈಗಿನ ಸಂದರ್ಭದಲ್ಲಿ ಅಷ್ಟು ಚಿನ್ನ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಮೂರು ತಿಂಗಳ ಅವಧಿಯಲ್ಲಿ ಅಂದಾಜು 340 ಕೆ.ಜಿ ಚಿನ್ನ ಉತ್ಪಾದಿಸಲಾಗಿದೆ. ಮೇ ತಿಂಗಳಲ್ಲಿ 80 ಕೆ.ಜಿ, ಜೂನ ತಿಂಗಳಲ್ಲಿ 140 ಕೆಜಿ ಉತ್ಪಾದಿಸಲಾಗಿದೆ. ಈ ತಿಂಗಳು 145 ಕೆಜಿ ಚಿನ್ನ ಉತ್ಪಾದಿಸಲಾಗುವ ಸಾಧ್ಯತೆ ಇದೆ.


ಇದನ್ನೂ ಓದಿ : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್‌ ವರ್ಗಾವಣೆ ವಿಚಾರ; ಸರ್ಕಾರದ ವಿರುದ್ಧ ಯುಟಿ ಖಾದರ್‌ ಕಿಡಿಕಡಿಮೆ ಚಿನ್ನ ಹೊರತೆಗಯಲಾಗಿದ್ದರೂ ಕಂಪನಿ ನಷ್ಟ ಅನುಭವಿಸಿಲ್ಲ. ಕಾರಣ ಕಳೆದ ಎರಡು ತಿಂಗಳಲ್ಲಿ ಚಿನ್ನದ ಬೆಲೆ ಏರಿಕೆ. ಈಗ ಜಾಗತಿಕ ಮಟ್ಡದಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಂ ಚಿನ್ನಕ್ಕೆ 52,000 ರೂಪಾಯಿಯಾಗಿದೆ. ಇದರಿಂದಾಗಿ ಉತ್ಪಾದನೆ ವೆಚ್ಚ ಹಾಗೂ ಕಂಪನಿಯ ಖರ್ಚಿಗೆ ಸರಿ ಹೊಂದುತ್ತಿದೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ಮಾಹಿತಿ ನೀಡಿದೆ.

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು