HOME » NEWS » District » HERE IS THE INSPIRATION AS DOCTOR RETURNED TO DUTY AFTER HE RECOVERED FROM COVID 19 AND A MODEL FOR ALL OTHER CORONA WARRIERS HK

ಕೊರೋನಾ ಗೆದ್ದ ಡಾಕ್ಟರ್ ಸೇವೆಗೆ ಹಾಜರು : ಸೋಂಕಿತರ ಜೊತೆಗೆ ಕೊರೋನಾ ವಾರಿಯರ್ಸ್ ಗಳಿಗೂ ಪ್ರೇರಣೆ

ಸೋಂಕು ಪತ್ತೆಯಾದ ಕೂಡಲೇ ಚಿಕಿತ್ಸೆಗೆ ಸಂತಪೂರ ಆರೋಗ್ಯ ಕೇಂದ್ರದ ಪ್ರತ್ಯೇಕ ವಾರ್ಡ್ ಗೆ ದಾಖಲಾದ ವೈದ್ಯ ಮಹೇಶ್, ಇದೀಗ ಗುಣಮುಖರಾಗಿ ಮತ್ತೆ ಸೇವೆಗೆ ಹಾಜರಾಗಿದ್ದಾರೆ

news18-kannada
Updated:July 19, 2020, 9:37 AM IST
ಕೊರೋನಾ ಗೆದ್ದ ಡಾಕ್ಟರ್ ಸೇವೆಗೆ ಹಾಜರು : ಸೋಂಕಿತರ ಜೊತೆಗೆ ಕೊರೋನಾ ವಾರಿಯರ್ಸ್ ಗಳಿಗೂ ಪ್ರೇರಣೆ
ವೈದ್ಯರನ್ನು ಸನ್ಮಾನಿಸಿದ ತಾಲೂಕು ಆಡಳಿತ
  • Share this:
ಬೀದರ್​(ಜುಲೈ.19): ಸತತ ನಾಲ್ಕು ತಿಂಗಳು ಮಹಾರಾಷ್ಟ್ರ ಗಡಿಯಲ್ಲಿ ಕರ್ತವ್ಯದಲ್ಲಿದ್ದು, ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಮೂಲಕ ಗುಣಮುಖರಾದ ಔರಾದ್ ತಾಲೂಕಿನ ಸಂತಪೂರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯ ಡಾ.ಮಹೇಶ್ ಬಿರಾದಾರ ಮತ್ತೆ ಸೇವೆಗೆ ಹಾಜರಾಗುವ ಮೂಲಕ ಸೋಂಕಿತರಲ್ಲಿ ಧೈರ್ಯ ತುಂಬುತ್ತಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಮಹಾರಾಷ್ಟ್ರ ಲಿಂಕ್ ಆರಂಭವಾದಾಗಿನಿಂದ ದಿನೇ ದಿನೇ ಸೋಂಕಿನ ಪ್ರಕರಣಗಳು, ಸಾವಿನ ಪ್ರಕರಣಗಳ ಸಹ ಹೆಚ್ಚಾದವು. ಈ ನಡುವೆಯೇ ಕಳೆದ ನಾಲ್ಕು ತಿಂಗಳಿನಿಂದ ಮಹರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಸಂತಪೂರ ಆರೋಗ್ಯ ಕೇಂದ್ರದ ಜೊತೆಗೆ ಔರಾದ್ ತಾಲೂಕಿನ ವಿವಿಧ ಗ್ರಾಮಗಳಲ್ಲೂ ಮಹೇಶ ಬಿರಾದಾರ್ ಕೊರೋನಾ ವಾರಿಯರ್ ಆಗಿ ಕೆಲಸ ಮಾಡ ತೊಡಗಿದ್ದರು. ಕರ್ತವ್ಯದಲ್ಲಿದ್ದ ವೇಳೆಯಲ್ಲಿಯೇ ಯಾರದೋ ಸೋಂಕಿತರ ಸಂಪರ್ಕದಿಂದ ಎರಡು ವಾರಗಳ ಹಿಂದೆ ಡಾ.ಮಹೇಶ್ ಅವರಿಗೆ ಸೋಂಕು ದೃಢಪಟ್ಟಿತ್ತು.

ಸೋಂಕು ಪತ್ತೆಯಾದ ಕೂಡಲೇ ಚಿಕಿತ್ಸೆಗೆ ಸಂತಪೂರ ಆರೋಗ್ಯ ಕೇಂದ್ರದ ಪ್ರತ್ಯೇಕ ವಾರ್ಡ್ ಗೆ ದಾಖಲಾದ ವೈದ್ಯ ಮಹೇಶ್, ಇದೀಗ ಗುಣಮುಖರಾಗಿ ಮತ್ತೆ ಸೇವೆಗೆ ಹಾಜರಾಗಿದ್ದಾರೆ. ಇವರ ಈ ನಡೆ ಕೊರೋನಾ ವಾರಿಯರ್ಸ್ ಗಳಿಗೆ ಹಾಗೂ ಸೋಂಕಿತರಿಗೂ ಭಯಪಡದೆ ಚಿಕಿತ್ಸೆಗೆ ಧೈರ್ಯದಿಂದ ಸ್ಪಂದಿಸುವಂತೆ ಪ್ರೇರಣೆ ನೀಡಿದೆ.

ಜುಲೈ ಒಂದರಂದು ವಿಪರೀತ ಜ್ವರದ ಜೊತೆಗೆ ಸೋಂಕಿನ ಲಕ್ಷಣಗಳು ಗೋಚರಿಸಿದವು. ಕೂಡಲೇ ಬಿಸಿ ನೀರು ಕುಡಿಯಲು ಆರಂಭಿಸಿದೆ. ಮನೆಯವರಿಂದಲೂ ದೂರ ಉಳಿದೆ. ನಂತರ ಪರೀಕ್ಷೆಗೊಳಪಟ್ಟೆ. ಜುಲೈ 5 ರಂದು ವರದಿ ಪಾಸಿಟಿವ್ ಬಂದಿತ್ತು. ಸಂತಪೂರ ಆರೋಗ್ಯ ಕೇಂದ್ರದ ಪ್ರತ್ಯೇಕ ಕೋಣೆಯಲ್ಲೇ ಉಳಿದು, ಚಿಕಿತ್ಸೆ ಪಡೆದೆ. ನಿತ್ಯ ಮಾತ್ರೆಗಳ ಜೊತೆಗೆ ನಿಗದಿತ ಆಹಾರ ಸೇವಿಸಿದೆ. ವಾರದ ನಂತರ ಮತ್ತೆ ಪರೀಕ್ಷೆಗೊಳಗಾದಾಗ ವರದಿ ನೆಗೆಟಿವ್ ಬಂತು. ಈಗ ಹೋಂ ಕ್ವಾರಂಟೈನ್ ಸಹ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ವೈದ್ಯ ಮಹೇಶ್ ಎಂದು ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಆಸ್ಪತ್ರೆ ವರೆಗೆ ಬಂದರೂ ಸೋಂಕಿತನನ್ನು ಅಡ್ಮಿಟ್ ಮಾಡಿಕೊಳ್ಳದ ಜಿಮ್ಸ್ ಸಿಬ್ಬಂದಿ ; ಆರೋಗ್ಯ ಇಲಾಖೆ ನಿರ್ಲಕ್ಷ್ಯ ಬಟಾಬಯಲು

ಕೊರೋನಾ ಬಗ್ಗೆ ಭಯಪಡುವ ಅಗತ್ಯವಿಲ್ಲ. ಅಗತ್ಯ ಮುಂಜಾಗ್ರತಾ ಕ್ರಮಗಳ ಜೊತೆಗೆ ಧೈರ್ಯದಿಂದ ಇದ್ದರೆ ಅರ್ಧ ಗೆದ್ದಂತೆ. ಚಿಕಿತ್ಸೆಗೆ ಬರುವ ರೋಗಿಗಳಿಗೆ ಹಾಗೂ ಸೋಂಕಿತರಿಗೂ ಸಹ ನಾನು ಇದೇ ರೀತಿ ಸಲಹೆ ಕೊಡುತ್ತಿದ್ದೇನೆ. ಯಾಕೆಂದರೆ ಪ್ರಸ್ತುತ ಸಂದರ್ಭದಲ್ಲಿ ಜನ ಆಸ್ಪತ್ರೆ ಎಂದರೇನೆ ಪ್ಯಾನಿಕ್ ಆಗುವ ವಾತಾವರಣವಿದೆ. ಅದನ್ನು ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿದೆ ಎಂದು ಸಹ ಹೇಳಿದರು.
Youtube Video
ಇನ್ನು ಕೊರೋನಾ ಸೋಂಕಿನಿಂದ ಜಯಿಸಿ, ಮತ್ತೆ ಕರ್ತವ್ಯಕ್ಕೆ ಹಾಜರಾದ ವೈದ್ಯ ಮಹೇಶ್ ಅವರನ್ನು ತಾಲೂಕು ಆಡಳಿತ ಸಹ ಅಭಿನಂದಿಸಿ, ಸನ್ಮಾನಿಸಿದೆ.
Published by: G Hareeshkumar
First published: July 19, 2020, 9:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories