HOME » NEWS » District » HEMAVATHI WATER SHOULD NOT BE DRAINED TO MANDYA HASSAN AND TUMKUR DISTRICTS SAYS MINISTER MADHUSWAMY MAK

ಹೇಮಾವತಿ ನೀರನ್ನು ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಹರಿಸುವುದು ಬೇಡ; ಸಚಿವ ಮಾಧುಸ್ವಾಮಿ

ಹೇಮಾವತಿ ನೀರು ಹರಿಸುವ  ವಿಚಾರದಲ್ಲಿ ಹೆಚ್ .ಡಿ ರೇವಣ್ಣ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ‌ ಮಾಧುಸ್ವಾಮಿ ನಡುವೆ ಚಕಮಕಿ ನಡೆಯಿತು. ಈ ವೇಳೆ ಅಗತ್ಯಕ್ಕಿಂತ ಹೆಚ್ಚು ನೀರು ಹಾಸನಕ್ಕೆ ಮತ್ತು ಮಂಡ್ಯಕ್ಕೆ ಹರಿದಿದೆ. ಯಾವ ಯಾವ ಜಿಲ್ಲೆಗೆ ಎಷ್ಟು ನೀರು ಹರಿಸಬೇಕೆಂಬ ನಿಯಮವಿದೆ ಅಷ್ಟೇ ನೀರು ಹರಿಸುವ ನಿರ್ಣಯವನ್ನು ಅಂಗೀಕರಿಸೋಣ ಎಂದು ಸಚಿವ ಮಾಧುಸ್ವಾಮಿ ಹೇಳಿದರು. 

news18-kannada
Updated:August 10, 2020, 4:15 PM IST
ಹೇಮಾವತಿ ನೀರನ್ನು ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಹರಿಸುವುದು ಬೇಡ; ಸಚಿವ ಮಾಧುಸ್ವಾಮಿ
ಜೆಸಿ ಮಾಧುಸ್ವಾಮಿ.
  • Share this:
ಬೆಂಗಳೂರು: ಹೇಮಾವತಿ ಜಲಾಶಯದ ನೀರನ್ನು  ಅಗತ್ಯಕ್ಕಿಂತ ಹೆಚ್ಚು ಹಾಸನಕ್ಕೆ ಮತ್ತು ಮಂಡ್ಯಕ್ಕೆ ಹರಿದಿದೆ. ಹೀಗಾಗಿ ಯಾವ ಯಾವ ಜಿಲ್ಲೆಗೆ ಎಷ್ಟು ನೀರು ಹರಿಸಬೇಕೆಂಬ ನಿಯಮವಿದೆಯೋ? ಅಷ್ಟೇ ನೀರು ಹರಿಸುವ ನಿರ್ಣಯವನ್ನು ಅಂಗೀಕರಿಸೋಣ ಎಂದು ಸಣ್ಣ ನಿರಾವರಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಹೇಮಾವತಿ ಜಲಾಶಯದ ನೀರನ್ನು ಮಂಡ್ಯ, ಹಾಸನ ಹಾಗೂ ತುಮಕೂರು ಜಿಲ್ಲೆಗಳಿಗೆ ಹರಿಸುವ ಬಗ್ಗೆ ಇಂದು ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.  ಈ ಸಭೆಯಲ್ಲಿ ಮೂರು ಜಿಲ್ಲೆಗಳ ಸಂಸದರು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗವೂ ನಡೆಯಿತು. ವಿಕಾಸಸೌಧದಲ್ಲಿ ಇಂದು ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆಯಲಾಗಿತ್ತು.

ಸಚಿವರಾದ ಮಾಧುಸ್ವಾಮಿ, ಗೋಪಾಲಯ್ಯ ಹಾಗೂ ತುಮಕೂರು ಸಂಸದ ಬಸವರಾಜ್ , ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಮಂಡ್ಯ, ಹಾಸನ, ತುಮಕೂರು ಶಾಸಕರು, ಪರಿಷತ್ ಸದಸ್ಯರು   ಅಧಿಕಾರಿಗಳು ಭಾಗಿಯಾಗಿದ್ದರು.

ನೀರು ಹಂಚಿಕೆ ವಿಚಾರದಲ್ಲಿ  ಹಾಸನದವರು ಅನ್ಯಾಯ ಮಾಡಿದರೆಂದು ತುಮಕೂರು ಸಂಸದ ಬಸವರಾಜು ಹೇಳಿದರು. ಆಗ,  ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಹಾಸನದವರು ಅನ್ಯಾಯ ಮಾಡಿದರು, ಹಾಸನದವರು ಅನ್ಯಾಯ ಮಾಡಿದರೆಂದು ಹೇಳುತ್ತಲೇ ಇದ್ದೀರಿ. ಚರ್ಚೆಗೆ ಅವಕಾಶ ಕೊಡಿ. ಚರ್ಚೆ ಆಗಲಿ. ಎಲ್ಲಿ ಎಷ್ಟು ನೀರು ಬರುತ್ತದೆ. ಸಂಗ್ರಹ ಎಷ್ಟಾಗುತ್ತದೆ ಎಂಬುದು  ನಮಗೂ ಗೊತ್ತಿದೆ ಎಂದು ಏರು ಧ್ವನಿಯಲ್ಲಿ ಹೇಳಿದರು.

ಆಗ ಸಂಸದ ಬಸವರಾಜ್ ಅವರಿಗೂ,  ಶಾಸಕ ಶಿವಲಿಂಗೇಗೌಡ ನಡುವೆ ಮಾತಿನ ಚಕಮಕಿ ಉಂಟಾಯಿತು. ಚರ್ಚೆ ಆಗಲಿ ಎಂದರು  ಸಂಸದ ಬಸವರಾಜ್.ಇದರ ಮಧ್ಯ ಪ್ರವೇಶಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಸಚಿವರೇ ಹಿಂದೆ ಅದಾಗಿತ್ತು, ಇದಾಗಿತ್ತು ಅನ್ನೋದರ ಬಗ್ಗೆ ಚರ್ಚೆ ಬೇಡ. ಈಗ ಇರುವ ನೀರನ್ನು ಮೂರು ಜಿಲ್ಲೆಗಳಿಗೆ ಹೇಗೆ ಮ್ಯಾನೇಜ್  ಮಾಡಬೇಕು ಅನ್ನೋದರ ಬಗ್ಗೆ ಮಾತ್ರ ಹೇಳಿ ಅಂತಾ ಪಟ್ಟು ಹಿಡಿದರು.

ಸಭೆಯಲ್ಲಿ ಹೆಚ್.ಡಿ. ರೇವಣ್ಣ ಮಾತನಾಡಿ, ನೀರನ್ನು ಸಮಾನವಾಗಿ ಹಂಚಿಕೆ ಮಾಡಿ. ಹಾಸನ, ತುಮಕೂರು, ಮಂಡ್ಯ ಬೇರೆ ಬೇರೆ ಅಲ್ಲ. ಎಲ್ಲರಿಗೂ ನೀರು ಕೊಡಬೇಕು. ರೈತರು ಬೆಳೆ ಬೆಳೆಯಬೇಕು. ಸಮಾನವಾಗಿ ನೀರು ಹಂಚಿಕೆ ಮಾಡಿ ಎಂದು ಒತ್ತಾಯಿಸಿದರು.

ಹಾಸನದವರು ನೀರು ಬಿಡುವುದಿಲ್ಲವೆಂದು ಆರೋಪ ಮಾಡ್ತಾರೆ. ನಾನು 15 ವರ್ಷಗಳ ಮಾಹಿತಿ ‌ಕೊಡುತ್ತೇವೆ.  ತುಮಕೂರಿಗೂ ನೀರು ಬಿಟ್ಟಿದ್ದೇವೆ. ನೀರು ಬಿಟ್ಟಿಲ್ಲ ಅನ್ನೋದು ಸರಿಯಲ್ಲ. ತುಮಕೂರಿಗೆ ಅನ್ಯಾಯ ಆಗ್ತಿದೆ ಅಂತ ದಿನಾ ಹೇಳ್ತಾರೆ. ರಾಜಕೀಯವಾಗಿ ಮಾತಾಡೋದು ಬೇಡ. 3 ಜಿಲ್ಲೆಗೂ ಸಮಾನತೆ ಇರಬೇಕು. ಎಲ್ಲಾ ಜಿಲ್ಲೆಗಳಿಗೆ ಸಮಾನವಾಗಿ ನೀರು ಹಂಚಿಕೆ ಮಾಡಿ ಎಂದು ಆಗ್ರಹಿಸಿದರು.ಇದನ್ನೂ ಓದಿ: Karnataka KSEEB SSLC Result 2020: ಕೊರೋನಾ ಭೀತಿಯ ನಡುವೆ ಇಳಿಮುಖವಾಯ್ತು ಎಸ್‌ಎಸ್‌ಎಲ್‌ಸಿ ಫಲಿತಾಂಶ

ರೇವಣ್ಣ- ಮಾಧುಸ್ವಾಮಿ ನಡುವೆ ಚಕಮಕಿ :

ಹೇಮಾವತಿ ನೀರು ಹರಿಸುವ  ವಿಚಾರದಲ್ಲಿ ಹೆಚ್ .ಡಿ ರೇವಣ್ಣ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ‌ ಮಾಧುಸ್ವಾಮಿ ನಡುವೆ ಚಕಮಕಿ ನಡೆಯಿತು. ಈ ವೇಳೆ ಅಗತ್ಯಕ್ಕಿಂತ ಹೆಚ್ಚು ನೀರು ಹಾಸನಕ್ಕೆ ಮತ್ತು ಮಂಡ್ಯಕ್ಕೆ ಹರಿದಿದೆ. ಯಾವ ಯಾವ ಜಿಲ್ಲೆಗೆ ಎಷ್ಟು ನೀರು ಹರಿಸಬೇಕೆಂಬ ನಿಯಮವಿದೆ ಅಷ್ಟೇ ನೀರು ಹರಿಸುವ ನಿರ್ಣಯವನ್ನು ಅಂಗೀಕರಿಸೋಣ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಆಯ್ತು ಸ್ವಾಮಿ ಅಷ್ಟೇ ನೀರು ಹರಿಸಿ, ನಿರ್ಣಯ ಮಾಡಿ.‌ ಹಾಸನಕ್ಕೆ ಹೆಚ್ಚಿಗೆ ನೀರು ಹರಿದಿಲ್ಲವೆಂದು ರೇವಣ್ಣ ಹೇಳಿದಾಗ, ಹರಿದಿದೆ ಸ್ಚಾಮಿ ಅಧಿಕಾರಿಗಳೇ ಮಾಹಿತಿ ನೀಡ್ತಾರೆ ಇರೀ ಎಂದು ಸಚಿವ ಮಾಧುಸ್ವಾಮಿ ಸಮಜಾಯಿಷಿ ನೀಡಿದರು.ತಂದೆ ಕೆಳಗೆ, ಮಗ ವೇದಿಕೆ ಮೇಲೆ : ಸಂಸದ ಪ್ರಜ್ವಲ್ ರೇವಣ್ಣ ವೇದಿಕೆ ಮೇಲೆ ಕುಳಿತಿದ್ದರೆ, ಇವರ ತಂದೆ, ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣ ವೇದಿಕೆ ಕೆಳಗೆ ಕುಳಿತಿದ್ದ ದೃಶ್ಯ ಕಂಡು ಬಂತು.
Published by: MAshok Kumar
First published: August 10, 2020, 4:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories