• Home
  • »
  • News
  • »
  • district
  • »
  • Uttara Kannada: ಮಾರಿಕಾಂಬಾ ಜಾತ್ರೆಗೆ ವರುಣನ ಅಡ್ಡಿ, ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ್ವು ಸಣ್ಣ-ಪುಟ್ಟ ಅಂಗಡಿಗಳು

Uttara Kannada: ಮಾರಿಕಾಂಬಾ ಜಾತ್ರೆಗೆ ವರುಣನ ಅಡ್ಡಿ, ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ್ವು ಸಣ್ಣ-ಪುಟ್ಟ ಅಂಗಡಿಗಳು

ಮಾರಿಕಾಂಬಾ ಜಾತ್ರೆ

ಮಾರಿಕಾಂಬಾ ಜಾತ್ರೆ

ಏಕಾಏಕಿಯಾಗಿ ಸುರಿದ ಮಳೆ ಮಾರಿಕಾಂಬಾ ಜಾತ್ರೆಗೆ ಅಡ್ಡಿ ಪಡಿಸಿದೆ. ಭಾರೀ ಮಳೆಗೆ ಸಣ್ಣ-ಪುಟ್ಟ ಅಂಗಡಿರಗಳ ಸಾಮಾನುಗಳೆಲ್ಲಾ ಕೊಚ್ಚಿ ಹೋಗಿದೆ.

  • Share this:

ಶಿರಸಿ (ಮಾ.18): ಇಂದು ರಾಜ್ಯದ ಹಲವೆಡೆ ಮಳೆರಾಯ (Rain) ತಂಪೆರೆದಿದ್ದಾನೆ. ಶಿರಸಿ ಹಾಗೂ ಮಡಿಕೇರಿಯಾಗಿ ಭಾರೀ ಮಳೆಯಾಗಿದೆ. ಮಾರ್ಚ್​ 15ರಿಂದ ಶಿರಸಿಯಲ್ಲಿ ಮಾರಿಕಾಂಬಾ ಜಾತ್ರೆ (Marikamba Jatre) ನಡೆಯುತ್ತಿದೆ. ಇಂದು ಏಕಾಏಕಿಯಾಗಿ ಸುರಿದ ವರುಣ ಜಾತ್ರೆ ಅಡ್ಡಿ ಪಡಿಸಿದ್ದಾನೆ. ಶಿರಸಿ (Sirsi) ಸುತ್ತಮುತ್ತ ಮಳೆ ಜೋರಾಗಿಯೇ ಅಬ್ಬರಿಸಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ವರುಣನ ಆರ್ಭಟಕ್ಕೆ ಎಲ್ಲವೂ ಅಸ್ತವ್ಯಸ್ಥಗೊಂಡಿದೆ. ಅಂಗಡಿ (Shop) ಮುಂಗಟ್ಟುಗಳಿಗೆ ನೀರು ನುಗ್ಗಿದ್ದು, ವ್ಯಾಪಾರಸ್ಥರ ವಸ್ತುಗಳೆಲ್ಲಾ ಕೊಚ್ಚಿ ಹೋಗಿದೆ. ಮಳೆ ಜೊತೆ ಜೋರಾಗಿ ಬೀಸಿದ ಗಾಳಿಯಿಂದ ಜಾತ್ರಾ ಗದ್ದುಗೆ ಮಂಟಪಕ್ಕೆ ಹಾನಿಯಾಗಿದೆ (Damage). ಗಾಳಿಗೆ ಗದ್ದುಗೆಯ ಗೋಪುರ ಅಡ್ಡವಾಗಿದೆ. ಜಾತ್ರೆಯಲ್ಲಿ ವ್ಯಾಪಾರಕ್ಕೆಂದು ತಂದಿದ್ದ ಬಟ್ಟೆಗಳು, ಆಟಿಕೆ ಸಾಮಾನುಗಳು ಹಾಗೂ ಇತರ ವಸ್ತುಗಳೆಲ್ಲಾ ಸಂಪೂರ್ಣ ಹಾನಿಯಾಗಿದೆ.


ಮಾರಿಕಾಂಬಾ ಜಾತ್ರೆಗೆ ವರುಣನ ಅಡ್ಡಿ


ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ. ಮಾರ್ಚ್​ 15ರಿಂದ ಜಾತ್ರೆ ಆರಂಭವಾಗಿದೆ. 9 ದಿನಗಳ ಕಾಲ ನಡೆಯುವ ಈ ಅದ್ದೂರಿ ಜಾತ್ರಾ ಮಹೋತ್ಸವ ಮಾರ್ಚ್​ 23ರಂದು ಕೊನೆಗೊಳ್ಳುತ್ತದೆ. ರಾಜ್ಯದ ಅತೀ ದೊಡ್ಡ ಜಾತ್ರೆ ಎನ್ನುವ ಹೆಸರು ಪಡೆದ ಜಾತ್ರೆಗೆ ದಿನನಿತ್ಯ ಲಕ್ಷಾಂತರ ಜನರ ದಂಡೇ ಹರಿದುಬರುತ್ತದೆ. ಆದ್ರೆ ಇವತ್ತು ಬಿರು ಬಿಸಿಲ ನಡುವೆ ಏಕಾಏಕಿ ಮಳೆ ಸುರಿದಿದ್ದು, ಭಾರೀ ಅವಾಂತರವನ್ನೆ ಸೃಷ್ಟಿ ಮಾಡಿದ್ದಾನೆ. ಜೋರಾಗಿ ಸುರಿದ ಮಳೆಯಿಂದ ಜಾತ್ರಾ ಗದ್ದುಗೆಯ ಮಂಟಪಕ್ಕೆ ಹಾನಿಯಾಗಿದೆ. ಗಾಳಿಗೆ ಗದ್ದುಗೆಯ ಗೋಪುರ ಅಡ್ಡವಾಗಿದೆ.


ಗಾಳಿಗೆ ಹಾರಿ ಹೋದ್ವು ಟಾರ್ಪಾಲುಗಳು


ಜಾತ್ರೆ ಅಂದ್ರೆ ಹಲವು ಸಣ್ಣ ಸಣ್ಣ ವ್ಯಾಪಾರಿಗಳು ಟಾರ್ಪಾಲು ಹಾಕಿ ಅಂಗಡಿ ಮಾಡಿಕೊಂಡು ವ್ಯಾಪಾರ ಮಾಡ್ತಾರೆ. ಮಾರಿಕಾಂಬಾ ಜಾತ್ರೆಯಲ್ಲಿ ಹಲವು ವ್ಯಾಪಾರಿಗಳು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ರು, ಏಕಾಏಕಿಯಾಗಿ ಸುರಿದ ಭಾರೀ ಮಳೆಗೆ ಎಲ್ಲವೂ ಕೊಚ್ಚಿ ಹೋಗಿದೆ. ಗಾಳಿಗೆ ಟಾರ್ಪಾಲುಗಳು ಹಾರಿ ಹೋದ್ವು, ತಗಡಿನ ಶೀಟು ಕೂಡ ಕಿತ್ತುಕೊಂಡು ಹಾರಿ ಹೋಗಿವೆ, ಇನ್ನು ರಸ್ತೆಯಲ್ಲಿ ಸಣ್ಣ-ಪುಟ್ಟ ಸಾಮಾನು ಮಾರುತ್ತಿದ್ದವರ ಪಾಡಂತು ಕೇಳಲೇ ಬೇಡಿ, ಎಲ್ಲ ಅಟಿಕೆಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.


ಅರ್ಧ ಗಂಟೆಗೂ ಅಧಿಕ ಕಾಲ ಅಬ್ಬರಿಸಿದ ವರುಣ


ಅರ್ಧ ಗಂಟೆಗೂ ಅಧಿಕ ಕಾಲ ಜೋರಾಗಿಯೇ ಮಳೆಯಾಗಿದೆ. ಜಾತ್ರೆಗೆ ಬಂದಿದ್ದ ಸಾವಿರಾರು ಭಕ್ತರು ಗಾಳಿ, ಮಳೆಗೆ ತತ್ತರಿಸಿ ಹೋಗಿದ್ದಾರೆ. ಮಳೆ ಜೋರಾಗುತ್ತಿದ್ದಂತೆ ಜನರೆಲ್ಲಾ ಓಡಿ ಹೋಗಿ, ವಿವಿಧ ಅಂಗಡಿಗಳು, ಬಸ್‌ಸ್ಟ್ಯಾಂಡ್, ದೇವಾಲಯದ  ಪ್ರಾಂಗಣದಲ್ಲಿ ಆಸರೆ ಪಡೆದುಕೊಂಡ್ರು.


ಇದನ್ನೂ ಓದಿ: Marikamba Jatre 2022: ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆಯ ಇತಿಹಾಸ, ಮಹತ್ವದ ಬಗ್ಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ


9 ದಿನವೂ ಜನಜಂಗುಳಿ


ಶಿರಸಿ ಜಾತ್ರೆ ಎಂದರೆ ಜನವೋ ಜನ. ಕಣ್ಣು ಕುಕ್ಕುವ ಲೈಟ್​ಗಳು, ನಾಟಕ, ಯಕ್ಷಗಾನಗಳ ತಂಡಗಳ ಪ್ರದರ್ಶನ. ಕರ್ನಾಟಕ ಮಾತ್ರವಲ್ಲದೆ, ನೆರೆಯ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದಲೂ ಜನರು ಆಗಮಿಸುತ್ತಾರೆ. ಬಳೆ, ಓಲೆಗಳ ಸಾಲು ಸಾಲು ಅಂಗಡಿಗಳು, ಬಾಯಿ ಸಿಹಿ ಮಾಡುವ ಮಿಠಾಯಿ, ತರಹೇವಾರಿ ತಿಂಡಿಗಳು, ಮನರಂಜನೆಯ ಆಟಗಳು ಕಣ್ಸೆಳೆಯುತ್ತವೆ. ಆದ್ರೆ ಇವೆಲ್ಲಕ್ಕೂ ಇವತ್ತು ಮಳೆರಾಯ ತಣ್ಣೀರು ಎರಚಿದ


ಇದನ್ನೂ ಓದಿ: Sirsi Marikamba Jatra 2022: ಶಿರಸಿ ಮಾರಿಕಾಂಬೆಯ ಪ್ರೀತ್ಯರ್ಥ ರಕ್ತದಾನ ಸೇವೆ! ಪೂಜೆ, ಹರಕೆಯ ಜೊತೆಗೆ ರಕ್ತದಾನ ಮಾಡಿ


ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸುತ್ತಮುತ್ತಲಿನ ಭಾಗದಲ್ಲಿ ಮಳೆಯಾಗಿದೆ.


ಮಡಿಕೇರಿ, ಸುಂಟಿಕೊಪ್ಪ, ನಾಪೋಕ್ಲು, ಕಕ್ಕಬೆ, ಭಾಗಮಂಡಲ ಸೇರಿದಂತೆ ವಿವಿಧೆಡೆ ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯಾಹ್ನ ಸುಮಾರು ಒಂದು ಗಂಟೆಯ ವರೆಗೆ ಮಳೆಯಾಗಿದೆ. ಮಳೆಯು ಇಳೆಯನ್ನು ಸೋಕುತ್ತಿದ್ದಂತೆ ಬೇಸಿಗೆಯ ಧಗೆ ಕೊಂಚ ಮಟ್ಟಿಗೆ ಕಡಿಮೆಯಾದಂತಾಗಿದೆ. ಪ್ರಾಣಿ ಪಕ್ಷಿಗಳಿಗೂ ಒಂದಷ್ಟು ಕುಡಿಯುವ ನೀರಿಗೆ ಆಕ್ರಂದನ ಮುಗಿಲು ಮುಟ್ಟುತ್ತಿರುವ ಸಮಯದಲ್ಲಿ ದಿಢೀರ್ ಮಳೆಯಿಂದ ಇಳೆ ತಂಪಾಗಿದೆ. ರೋಬಸ್ಟಾ ಕಾಫಿ ಗಿಡದಲ್ಲಿ ಹೂವು ಅರಳುತ್ತಿದ್ದು, ಅರೇಬಿಕಾ ತಳಿಯ ಕಾಫೀ ಗಿಡಗಳಲ್ಲಿನ ಮೊಗ್ಗುಗಳು ಅರಳಲಾರಂಭಿಸಿದೆ. ಸಣ್ಣ ಬೆಳೆಗಾರರು ಮತ್ತು ರೈತರು ತೋಟಕ್ಕೆ ನೀರು ಹಾಯಿಸುವ ಸಮಯದಲ್ಲಿ ಮಳೆ ಬಂದಿದೆ.

Published by:ಪಾವನ ಎಚ್ ಎಸ್
First published: