ಹಾವೇರಿ ಜಿಲ್ಲೆಯಲ್ಲಿ ಭಾರೀ ಮಳೆ; ಬಾಳೆ, ಭತ್ತ, ಮೆಕ್ಕೆಜೋಳ, ಸೋಯಾಬಿನ್ ಬೆಳೆಗಳು ನಾಶ

ಮಲೆನಾಡು ಹಾಗೂ ಹಾವೇರಿ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ತುಂಗಭದ್ರಾ, ವರದಾ,ಧರ್ಮಾ ನದಿಗಳು ಮೈದುಂಬಿ ಹರಿಯುತ್ತಿವೆ. ಪರಿಣಾಮ ಹಾನಗಲ್ ತಾಲೂಕಿನ ಕೂಡಲ ಹಾಗೂ ನಾಗನೂರು ಗ್ರಾಮದ  ಸಂಪರ್ಕ ಸೇತುವೆ ಮುಳುಗಡೆಯಾಗಿದೆ.

news18-kannada
Updated:August 7, 2020, 2:49 PM IST
ಹಾವೇರಿ ಜಿಲ್ಲೆಯಲ್ಲಿ ಭಾರೀ ಮಳೆ;  ಬಾಳೆ, ಭತ್ತ, ಮೆಕ್ಕೆಜೋಳ, ಸೋಯಾಬಿನ್ ಬೆಳೆಗಳು ನಾಶ
ಪ್ರವಾಹದಿಂದ ಜಲಾವೃತವಾಗಿರುವ ಬೆಳೆಗಳು.
  • Share this:
ಹಾವೇರಿ (ಆಗಸ್ಟ್‌07); ಜಿಲ್ಲೆಯಲ್ಲಿ ಭಾರೀ ಮಳೆಗಾಳಿಗೆ ಬಾಳೆ, ಭತ್ತ, ಮೆಕ್ಕೆಜೋಳ, ಸೋಯಾಬಿನ್ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿದ್ದು, ಈಗಾಗಲೇ ಕೊರೋನಾದಿಂದ ಸಂಕಷ್ಟಕ್ಕೆ ಒಳಗಾಗಿದ್ದ ರೈತರಿಗೆ ಗಾಯದ‌ ಮೇಲೆ ಬರೆ ಎಳೆದಂತಾಗಿದೆ.

ರಾಣೆಬೆನ್ನೂರು ತಾಲೂಕಿನ ಕೋಟಿಹಾಳ ಗ್ರಾಮದಲ್ಲಿ ಮಳೆ‌ ನೀರಿನಿಂದಾಗಿ ನೂರಾರು ಎಕರೆ ಭತ್ತದ ಬೆಳೆ ಮುಳುಗಡೆಯಾಗಿದೆ. ಅದರಂತೆ ಹಿರೇಕೆರೂರು ತಾಲೂಕಿನ ನಿಡನೇಗಿಲು ಗ್ರಾಮದಲ್ಲಿ ಫಲವತ್ತಾಗಿ ಬೆಳೆದ ಫಸಲಿಗೆ ಬಂದ ಬಾಳೆ ಗಿಡಗಳು, ಮೆಕ್ಕೆಜೋಳ ಬೆಳೆಗಳು ಧರೆಗುರುಳಿವೆ. ಇನ್ನೂ ಹಾನಗಲ್ ತಾಲೂಕಿನ ಬೈಚುವಳ್ಳಿ ಗ್ರಾಮದಲ್ಲಿ ರಾಜು ದಾನಪ್ಪನವರ ಎಂಬುವರಿಗೆ ಸೇರಿದ ಜಮೀನು ಹಾಗೂ  ಹಲವು ರೈತರ ಜಮೀನಿಗೆ ಹಳ್ಳದ ನೀರು ನುಗ್ಗಿದೆ.

ಇದರಿಂದಾಗಿ ಸಾಲ-ಸೂಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಫಲವತ್ತಾದ ಬೆಳೆ ಬೆಳೆದ ರೈತರಿಗೆ ಆಘಾತ ಉಂಟಾಗಿದ್ದು, ಲಕ್ಷಾಂತರ ರೂಪಾಯಿ‌ ನಷ್ಟ ಅನುಭವಿಸಿದ್ದಾರೆ‌‌. ಹೀಗಾಗಿ ಕೂಡಲೇ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಇನ್ನೂ ಮಲೆನಾಡು ಹಾಗೂ ಹಾವೇರಿ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ತುಂಗಭದ್ರಾ, ವರದಾ,ಧರ್ಮಾ ನದಿಗಳು ಮೈದುಂಬಿ ಹರಿಯುತ್ತಿವೆ.

ಇದನ್ನೂ ಓದಿ : Karnataka SSLC Result 2020: ಸೋಮವಾರ ಮಧ್ಯಾಹ್ನ 3ಕ್ಕೆ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ

ಪರಿಣಾಮ ಹಾನಗಲ್ ತಾಲೂಕಿನ ಕೂಡಲ ಹಾಗೂ ನಾಗನೂರು ಗ್ರಾಮದ  ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ವರದಾ ನದಿಯ ನೀರಿನ ಹರಿವು ಹೆಚ್ಚಳಗೊಂಡ ಹಿನ್ನೆಲೆ ಸೇತುವೆ ಮುಳುಗಡೆಯಾಗಿದ್ದು, ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಮಳೆ ತಗ್ಗಿದೆಯಾದರೂ ನದಿಗಳು ಉಕ್ಕಿ ಹರಿಯುತ್ತಿವೆ.

ಇನ್ನೂಸತತ ಮಳೆಗೆ ಜಿಲ್ಲಾದ್ಯಂತ 91 ಮನೆಗಳಿಗೆ ಹಾನಿಗೊಳಗಾವೆ. ಹಾವೇರಿ 10, ಬ್ಯಾಡಗಿ 18, ಸವಣೂರು 30, ಶಿಗ್ಗಾಂವಿ 16, ಹಾನಗಲ್ ತಾಲೂನಿನಲ್ಲಿ  08 ಮನೆಗಳು ಭಾಗಶಃ ಹಾನಿಯಾಗಿದ್ದು ಸೂಕ್ತ ವರದಿ ಸಲ್ಲಿಸಿ ಕೂಡಲೇ ಪರಿಹಾರ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Published by: MAshok Kumar
First published: August 7, 2020, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading