news18-kannada Updated:July 20, 2020, 4:45 PM IST
ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದ ರಸ್ತೆ ಜಲಾವೃತ
ಯಾದಗಿರಿ(ಜು.20): ತಡರಾತ್ರಿ ಸುರಿದ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯ ಜನ ತಲ್ಲಣಗೊಂಡಿದ್ದಾರೆ. ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್, ವಡಗೇರಾ, ಮೊದಲಾದ ಕಡೆ ಅಪಾರ ಪ್ರಮಾಣದ ಹಾನಿಯಾಗಿದೆ.
ಮನೆಗಳಿಗೆ ನುಗ್ಗಿದ ನೀರು...!ತಡರಾತ್ರಿ ಸುರಿದ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯ ಬಬಲಾದ, ಕೊನಹಾಳ,ಮುಷ್ಟುರು ಸೇರಿದಂತೆ ಮೊದಲಾದ ಕಡೆ 40 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಯಾದಗಿರಿಯ ಅಂಬೇಡ್ಕರ್ ನಗರದಲ್ಲಿ ಕೂಡ 10 ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ನೀರಿನಲ್ಲಿ ನೆನೆದು ಕಣ್ಣೀರಲ್ಲಿ ಕೈತೊಳೆಯುವಂತಾಗಿತ್ತು. ಅಂಬೇಡ್ಕರ್ ನಗರ ಹಾಗೂ ಕುರಕುಂದಾ ಗ್ರಾಮದಲ್ಲಿ ಭಾರಿ ಮಳೆಗೆ ಮನೆಗಳು ಕುಸಿದು ಬಿದ್ದು ಹಾನಿಯಾಗಿವೆ.

ಯಾದಗಿರಿಯ ಕುರಕುಂದಿ ಗ್ರಾಮದ ಮನೆ ಹಾನಿ
ಕೊರೊನಾ ಭೀತಿ: ಮಾನವೀಯತೆ ಮರೆತ ಜನ...!
ಕೊನಹಾಳ ಹಾಗೂ ಬಬಲಾದ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿರುವ ವೃದ್ದರು,ಮಕ್ಕಳು ಹಾಗೂ ಮಹಿಳೆಯರು ಮಳೆ ನೀರಿನಲ್ಲಿಯೇ ಬೆಳಿಗ್ಗೆ ವರಗೆ ನೆನೆದು ಪರದಾಡುವಂತಾಗಿತ್ತು.ಕಣ್ಣೆದುರೆ ಮನೆಗೆ ನೀರು ನುಗ್ಗಿ ಸಂಕಷ್ಟದಲ್ಲಿದ್ದವರ ಬಗ್ಗೆ ಪಕ್ಕದ ಓಣಿಯ ಜನ ನೋಡಿ ನೋಡದಂತೆ ಇದ್ದರು. ಕೆಲವರು ಸಹಾಯಕ್ಕಾಗಿ ಅಂಗಲಾಚಿದರೂ ಸಹಾಯ ಮಾಡುವ ಕೆಲಸ ಮಾಡಿಲ್ಲ. ಈಗಾಗಲೆ ಯಾದಗಿರಿ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಜನರು ಕೊರೊನಾ ಭೀತಿಗೆ ಒಳಗಾಗಿದ್ದಾರೆ.

ಮನೆಗೆ ನುಗ್ಗಿರುವ ಮಳೆ ನೀರು
ಬೈಕ್ ಮುಟ್ಟಿದ್ದಕ್ಕೆ ದಲಿತನ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಯುವಕನ ವಿರುದ್ಧ ಪ್ರತಿ ದೂರು ದಾಖಲು
ಮನೆಯೊಳಗೆ ನೀರು ನುಗ್ಗಿದ ಕುಟುಂಬದಸ್ಥರಿಗೆ ಮನೆಗೆ ಕರೆದುಕೊಂಡು ಬಂದು ಯಾರು ಕೂಡ ಬೆಚ್ಚನೆಯ ಆಶ್ರಯ ಕಲ್ಪಿಸಿಲ್ಲ. ಇದರಿಂದ ಕೊನಹಾಳ ಗ್ರಾಮದ ವ್ಯಕ್ತಿ ಮಾತನಾಡಿ ಯಾರು ಕೂಡ ಮನೆಗೆ ಕರೆದುಕೊಂಡು ಸಹಾಯ ಮಾಡಿಲ್ಲವೆಂದು ನೋವು ತೊಡಿಕೊಂಡಿದ್ದಾನೆ.
ರಸ್ತೆ ಸಂಪರ್ಕ ಕಡಿತ ಅಪಾರ ಬೆಳೆ ಹಾನಿ...!
ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆಯು ಜಲಾವೃತವಾಗಿದ್ದು ಭಾರಿ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಊರಿಗೆ ತೆರಳಲು ಜನರು ಪ್ರಯಾಸ ಪಡುವಂತಾಗಿದೆ.
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಯಾದಗಿರಿ ಜಿಲ್ಲಾ ಕಿಶಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಮೊಳಕೆ ಒಡೆದಿರುವ ಬೆಳೆ ಹಾನಿಯಾಗಿವೆ. ಕೆಲ ಮನೆಗಳು ಬಿದ್ದಿವೆ ಸರಕಾರ ನಿಷ್ಕಾಳಜಿ ಮಾಡದೆ ಬೇಗ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸಬೇಕೆಂದರು.
ಅದೆ ರೀತಿ ಕೊನಹಾಳ, ವಡಗೇರಾ, ಕುರಕುಂದಾ ,ಮುಷ್ಟುರು, ನಾಯ್ಕಲ್ ಮೊದಲಾದ ಕಡೆ ಹೆಸರು, ಹತ್ತಿ, ಮೊದಲಾದ ಸಾವಿರಾರು ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. ಕೂಡಲೇ ಸರಕಾರ ಮಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸುವ ಕಾರ್ಯ ಮಾಡಬೇಕಿದೆ.
Published by:
Latha CG
First published:
July 20, 2020, 4:41 PM IST