ವರುಣನ ಅವಾಂತರ ಕೊಯಿಲೂರ ಗ್ರಾಮ ಜಲಾವೃತ...! ನೀರಿನಲ್ಲಿ ಸಿಲುಕಿದ್ದ ಮಗು ಸೇರಿ 20 ಜನರ ರಕ್ಷಣೆ

ಹಳ್ಳದ ತೀರದಲ್ಲಿರುವ ಮನೆಗಳಿಗೆ ಹೆಚ್ಚಿನ ಪ್ರಮಾಣದ ನೀರು ನುಗ್ಗಿದ ಹಿನ್ನೆಲೆ ಮಗು, ಬಾಣಂತಿ, ವೃದ್ದೆ ಸೇರಿದಂತೆ 20ಕ್ಕೂ ಹೆಚ್ಚು ಜನ ನೀರಿನಲ್ಲಿ ಸಿಲುಕಿದ್ದರು. ಗ್ರಾಮದ ಯುವಕರ ತಂಡವು ಮಗು, ಬಾಣಂತಿ, ವೃದ್ದೆ ಸೇರಿದಂತೆ ನೀರಿನಲ್ಲಿ ಸಿಲುಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದವರನ್ನು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿ ಮಾನವೀಯತೆ ತೋರಿದೆ.

news18-kannada
Updated:July 23, 2020, 2:35 PM IST
ವರುಣನ ಅವಾಂತರ ಕೊಯಿಲೂರ ಗ್ರಾಮ ಜಲಾವೃತ...! ನೀರಿನಲ್ಲಿ ಸಿಲುಕಿದ್ದ ಮಗು ಸೇರಿ 20 ಜನರ ರಕ್ಷಣೆ
ಕೊಯಿಲೂರ ಗ್ರಾಮದ ಹಳ್ಳದ ನೀರು ಜಮೀನಿಗೆ ನುಗ್ಗಿರುವುದು.
  • Share this:
ಯಾದಗಿರಿ: ಜಿಲ್ಲೆಯಲ್ಲಿ ವರುಣನ ಅರ್ಭಟ ಮುಂದುವರೆದಿದೆ. ತಡರಾತ್ರಿಯಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆ ಅವಾಂತರಕ್ಕೆ ನಿತ್ಯವೂ ಜನ‌ ಈಗ ತತ್ತರಿಸಿ ಹೋಗಿದ್ದಾರೆ.

ಯಾದಗಿರಿ ತಾಲೂಕಿನ ‌ಕೊಯಿಲೂರ ಗ್ರಾಮಕ್ಕೆ ಹಳ್ಳದ ನೀರು ನುಗ್ಗಿದ್ದು ಕೊಯಿಲೂರ ಗ್ರಾಮವು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಗ್ರಾಮದ ಕ್ಯಾಜಿನಕೆರೆಯಿಂದ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹಳ್ಳದ ನೀರು ಮನೆಗಳಿಗೆ ನುಗ್ಗಿದೆ. ಗ್ರಾಮದ 80ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿ ಧವಸ ಧಾನ್ಯ ಹಾಗೂ ಇನ್ನಿತರ ವಸ್ತುಗಳು ಹಾನಿಗೀಡಾಗಿವೆ. ಗ್ರಾಮದ ಸಂಪರ್ಕ ರಸ್ತೆ ಜಲಾವೃತವಾಗಿದ್ದು ಸಂಪರ್ಕ ಕಡಿತವಾಗಿದೆ.

ಯಾದಗಿರಿ ನಗರದ ಲುಂಬಿನ ಉದ್ಯಾನವನದ ಕೆರೆ ಭರ್ತಿಯಾಗಿರುವುದು.

ಮಗು, ವೃದ್ದೆಯ ರಕ್ಷಣೆ...!

ಹಳ್ಳದ ತೀರದಲ್ಲಿರುವ ಮನೆಗಳಿಗೆ ಹೆಚ್ಚಿನ ಪ್ರಮಾಣದ ನೀರು ನುಗ್ಗಿದ ಹಿನ್ನೆಲೆ ಮಗು, ಬಾಣಂತಿ, ವೃದ್ದೆ ಸೇರಿದಂತೆ 20ಕ್ಕೂ ಹೆಚ್ಚು ಜನ ನೀರಿನಲ್ಲಿ ಸಿಲುಕಿದ್ದರು. ಗ್ರಾಮದ ಯುವಕರ ತಂಡವು ಮಗು, ಬಾಣಂತಿ, ವೃದ್ದೆ ಸೇರಿದಂತೆ ನೀರಿನಲ್ಲಿ ಸಿಲುಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದವರನ್ನು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿ ಮಾನವೀಯತೆ ತೋರಿದೆ.

ಇದನ್ನು ಓದಿ: ಕೋವಿಡ್ ಬಿಕ್ಕಟ್ಟಿನಲ್ಲಿ ಭ್ರಷ್ಟಾಚಾರ: ಸರ್ಕಾರದಿಂದ 2,000 ಕೋಟಿ ಅವ್ಯವಹಾರ: ಸಿದ್ದರಾಮಯ್ಯ ಆರೋಪ
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಗ್ರಾಮದ ಭೀಮಪ್ಪ ಮಾತನಾಡಿ, ಹಳ್ಳದ ನೀರು ಗ್ರಾಮಕ್ಕೆ ನುಗ್ಗಿ, ಹಲವು ಜನರು ನೀರಿನಲ್ಲಿ ಸಿಲುಕಿಕೊಂಡಿದ್ದರು. ಹಗ್ಗದ ಸಹಾಯದಿಂದ ಅವರ ರಕ್ಷಣೆ ಮಾಡಲಾಗುತ್ತಿದೆ ಎಂದರು. ಕೊಯಿಲೂರ ಅಲ್ಲದೆ ವಡಗೇರಾ ತಾಲೂಕಿನ  ಕೊನಹಳ್ಳಿ ಗ್ರಾಮದಲ್ಲಿ ಕೂಡ 5 ಮನೆಗಳಿಗೆ ನೀರು ನುಗ್ಗಿದೆ. ಯಾದಗಿರಿ ತಾಲೂಕಿನ ಆಶನಾಳ ಗ್ರಾಮದ ತಾಯಿಮಾಯಿ ಹಳ್ಳ ಉಕ್ಕಿ ಹರಿಯುತ್ತಿದ್ದು, ಯಾದಗಿರಿ- ಆಶನಾಳ ಗ್ರಾಮದ ಸಂಪರ್ಕ ರಸ್ತೆ ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಅದೇ ರೀತಿ ಹೊಸಳ್ಳಿ ತಾಂಡಾದ ಸಮೀಪವಿರುವ ಗಿರಿನಗರ ಕಾಲೊನಿಯಲ್ಲಿರುವ ಕೆಲ ಗುಡಿಸಲುಗಳಿಗೆ ನೀರು ನುಗ್ಗಿದ್ದು, ಇನ್ನೂ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಗುಡಿಸಲುಗಳು ಮಳೆಗೆ ಸೋರುತ್ತಿವೆ.
Published by: HR Ramesh
First published: July 23, 2020, 2:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading