Karnataka Rain: ಯಾದಗಿರಿಯಲ್ಲಿ‌ ಮಳೆ ಅಬ್ಬರ, ರಸ್ತೆಗಳೆಲ್ಲಾ ಜಲಾವೃತ, ಅಪಾರ ಬೆಳೆ ಹಾನಿ

Rain Damage: ಯಾದಗಿರಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಅರ್ಭಟ ಜೋರಾಗಿದ್ದು ಮಳೆ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ರಸ್ತೆ ಸಂಪರ್ಕ ಕಡಿತವಾಗಿದೆ, ಬೆಳೆಯೂ ನಾಶವಾಗಿದೆ.

ಯಾದಗಿರಿಯ ಸದ್ಯದ ಚಿತ್ರಣ

ಯಾದಗಿರಿಯ ಸದ್ಯದ ಚಿತ್ರಣ

  • Share this:
ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಅರ್ಭಟ ಜೋರಾಗಿದ್ದು ಮಳೆ ಅಬ್ಬರಕ್ಕೆ ಈಗ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ರಸ್ತೆ ಸಂಪರ್ಕ ಕಡಿತವಾಗುವ ಜೊತೆ ಅಪಾರ ಪ್ರಮಾಣದ ಬೆಳೆ ನೆಲ ಕಚ್ಚಿದೆ. ಯಾದಗಿರಿ ತಾಲೂಕಿನ ಮಲ್ಕಪನಹಳ್ಳಿ ,ಥಾನುನಾಯಕ ತಾಂಡಾದ ರಸ್ತೆ ಸಂಪರ್ಕ ಕಡಿತವಾಗಿದ್ದು ಊರಿಗೆ ತೆರಳಲು ಜನರು ಪರದಾಡುವಂತಾಗಿದೆ. ಯಾದಗಿರಿ, ಯರಗೋಳದಿಂದ ಮಲ್ಕಪನಹಳ್ಳಿ ಗ್ರಾಮಕ್ಕೆ ಜನರು ಪರದಾಡುವಂತಾಗಿದೆ.ಮಳೆ ಅಬ್ಬರ ಜೋರಾಗಿದ್ದು ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿವೆ. ಹಳ್ಳದ ನೀರು ರಸ್ತೆಗೆ ನುಗ್ಗಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ರೈಲ್ವೆ ಸೇತುವೆ ರಸ್ತೆಯ ಮೂಲಕ ಹೆಚ್ಚಿನ ನೀರು ಬರುತ್ತಿದ್ದು ಮಲ್ಕಪನಹಳ್ಳಿ ಗ್ರಾಮಕ್ಕೆ ತೆರಳಲು ಹರಸಾಹಸ ಪಡುವಂತಾಗಿದೆ. ಹೆಚ್ಚಿನ ಪ್ರವಾಹ ಹಿನ್ನೆಲೆ ಜನರು ಆತಂಕಗೊಂಡಿದ್ದಾರೆ.ಮಲ್ಕಪನಹಳ್ಳಿ ಗ್ರಾಮಕ್ಕೆ ತೆರಳಲು ಯರಗೋಳ ಮಾರ್ಗವಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾರ ,ಕೊಲ್ಲುರು,ಸರ್ಪಸ್ ಪೇಟೆ ಮಾರ್ಗವಾಗಿ ದೂರದಿಂದ ತೆರಳುವದು ಅನಿವಾರ್ಯವಾಗಿದೆ.

ಅದೆ ರೀತಿ ಥಾನುನಾಯಕ ತಾಂಡಾಕ್ಕೆ ತೆರಳುವ ರಸ್ತೆಯು ಜಲಾವೃತವಾಗಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ.ತಾಂಡಾದಲ್ಲಿ ಸುಮಾರು 250 ಕ್ಕೂ ಹೆಚ್ಚು ಜನರು ವಾಸವಾಗಿದ್ದು ತುರ್ತು ಕೆಲಸ ಕಾರ್ಯಕ್ಕೆ ತೆರಳಲು ಪರದಾಡುವಂತಾಗಿದೆ.ಪ್ರತಿ ವರ್ಷ ಈ ರಸ್ತೆಯು ನೀರಿನಿಂದ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತವಾಗುತ್ತಿದೆ.ಕಳೆದ ವರ್ಷ ಕೂಡ ಜನರು ಪ್ರಯಾಸ ಪಟ್ಟಿದ್ದರು.ಈಗ ಮತ್ತೆ ರಸ್ತೆ ಮೇಲೆ ನೀರು ನುಗ್ಗಿವೆ.ನೀರಿನ ಹರಿವಿಗೆ ಮುಳುಗಡೆಯಾಗುವ ರಸ್ತೆ ಮಾರ್ಗದಲ್ಲಿ ಎತ್ತರವಾಗಿ ಸೇತುವೆ ನಿರ್ಮಾಣ ಮಾಡಬೇಕೆಂದು ಸಾಕಷ್ಟು ಬಾರಿ ಜನರು ಒತ್ತಾಯ ಮಾಡಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: Weekly Horoscope: ಕರ್ಕಾಟಕ ರಾಶಿಯ ವಿದ್ಯಾರ್ಥಿಗಳಿಗೆ ಈ ವಾರ ಯಶಸ್ಸು ಖಂಡಿತಾ, ಯಾವ ರಾಶಿಯವರಿಗೆ ಈ ವಾರ ಏನು ಫಲ ?

ಪ್ರತಿ ವರ್ಷ ಮಳೆಗಾಲದಲ್ಲಿ ಜನರು  ನರಕಯಾತನೆ ಅನುಭವಿಸುವಂತಾಗಿದೆ.ಹೆಚ್ಚಿನ ಮಳೆ ಹಿನ್ನೆಲೆ ಯಾದಗಿರಿ ಜಿಲ್ಲೆಯ     ಮಲ್ಕಪನಹಳ್ಳಿ,ವಡ್ನಳ್ಳಿ,ಠಾಣಾಗುಂದಿ,ಮೋಟ್ನಳ್ಳಿ,ಹೊನಗೇರಾ,ಬಾಚವಾರ,ನಾಯ್ಕಲ್,ಮನಗನಾಳ,ಖಾನಾಪುರ ಹಾಗೂ ಮೊದಲಾದ ಕಡೆ ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿದೆ.ಮಲ್ಕಪನಹಳ್ಳಿ ,ಠಾಣಾಗುಂದಿ ಭಾಗದಲ್ಲಿ ಜಮೀನುಗಳು‌ ಈಗ ಕೆರೆಯಂತಾಗಿವೆ.ರೈತರು ಸಾಲ ಶೂಲ ಮಾಡಿ ಲಕ್ಷಾಂತರ ರೂ ಹಣ ಖರ್ಚು ಮಾಡಿ ಹೆಸರು, ಹತ್ತಿ ಬೆಳೆ ಬೆಳೆದಿದ್ದರು ಇನ್ನೇನು ಉತ್ತಮ ಇಳುವರಿ ಬರುತ್ತದೆ ಎನ್ನುವಷ್ಟರಲ್ಲಿ ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿ ಹಾನಿಯಾಗಿದೆ.

ಕಳೆದ ವರ್ಷ ಕೂಡ ಪ್ರವಾಹದಿಂದ ಬೆಳೆ ಹಾನಿ ಅನ್ನದಾತರು ಬೆಳೆ ಕಳೆದುಕೊಂಡು ಸಂಕಷ್ಟ ಎದುರಿಸಿದರು.ಮತ್ತೆ ಈ ಬಾರಿ ಭಾರಿ ಮಳೆಯಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಮಲ್ಕಪನಹಳ್ಳಿ ಗ್ರಾಮದ ರಾಜೇಂದ್ರ ಮಾತನಾಡಿ , ಕಳೆದ ಒಂದು ವಾರದಿಂದ ಭಾರಿ ಮಳೆ ಬಂದ ಹಿನ್ನೆಲೆ ಊರಿಗೆ ತೆರಳುವ ರೈಲ್ವೆ ಸೇತುವೆಯೊಳಗೆ ನೀರು ಹರಿದು ಬರುತ್ತಿದ್ದು ಇದರಿಂದ ಊರಿಗೆ ಹೋಗಲು ಆಗುತ್ತಿಲ್ಲ‌.ಬೆಳೆ ಕೂಡ ಹಾನಿಯಾಗಿದೆ. ಪ್ರತಿ ವರ್ಷ ಹೀಗಾದರೆ ನಾವು ಹೇಗೆ ಬದುಕಬೇಕೆಂದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: