ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ; ನದಿ ಪಾತ್ರದ ಜನರಲ್ಲಿ ಹೆಚ್ಚಾದ ಆತಂಕ

ನವೀಲು ತೀರ್ಥ ಜಲಾಶಯದ ಭರ್ತಿಗೆ ಕೇವಲ 14 ಅಡಿಗಳು ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಕ್ಷಣ ನದಿ ಅಕ್ಕಪಕ್ಕದ ಜನ ವಸತಿ ಕೇಂದ್ರಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಿದೆ. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣಲ್ಲಿ ತೀವ್ರ ಏರಿಕೆಯಾಗಿದ್ದು, ಯಾವುದೇ ಕ್ಷಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ. ಜನರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಳಗಾವಿ (ಆಗಸ್ಟ್ 6); ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ 4 ದಿನಗಳಿಂದ ವರುಣ ಜೋರಾಗಿ ಅಬ್ಬರಿಸುತ್ತಿದ್ದಾನೆ. ಮಳೆಗೆ ಖಾನಾಪುರ ತಾಲೂಕು ಸಂಪೂರ್ಣವಾಗಿ ತತ್ತರಿಸಿದ ಹೋಗಿದೆ. ಅನೇಕ ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ರೈತರು ಬೆಳೆದಿದ್ದ ಕಬ್ಬು, ಭತ್ತ ಬೆಳೆಗಳು ನೀರಿನಲ್ಲಿ ಮುಳುಗಿದ್ದು, ಅನ್ನದಾತನಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯ ಪರಿಣಾಮ ಮಲಪ್ರಭಾ, ಮಾರ್ಕಂಡೇಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಖಾನಾಪುರ ತಾಲೂಕಿನ ಶಿರೋಳಿ ಗ್ರಾಮದ ಬಳಿ ವೃದ್ಧನೊಬ್ಬ ಪಾಂಡರಿ ನದಿ ಪ್ರವಾಹಕ್ಕೆ ಸಿಲುಕಿ ಮರವೇರಿ ಕುಳಿತ್ತಿದ್ದರು. ನಾಲ್ಕು ಗಂಟೆಯ ನಂತರ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ, ಖಾನಾಪುರ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ವಿಲಾಸ ದೇಸಾಯಿ(60) ವರ್ಷದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.
ಮಲ್ರಪಭಾ ನದಿಗೆ ಸವದತ್ತಿ ತಾಲೂಕಿನ ಮುನವಳ್ಳಿ ಇರೋ ನವಿಲುತೀರ್ಥ ಜಲಾಶಯಕ್ಕೆ ಕಳೆದ 24 ಗಂಟೆಯಲ್ಲಿ 4 ಟಿಎಂಸಿ ನೀರು ಹರಿದು ಬಂದಿದೆ. ಒಂದೇ ದಿನ 42 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ. ಇನ್ನೂ ಖಾನಾಪುರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಕಳೆದ 24 ಗಂಟೆಯಲ್ಲಿ ಖಾನಾಪುರದಲ್ಲಿ 172 ಮಿ.ಮೀ., ಅಸೋಗಾ 182 ಮಿ.ಮೀ., ಗುಂಜಿ 138 ಮಿ.ಮೀ, ಜಾಂಬೋಟಿ 180 ಮಿ.ಮೀ, ಕಕ್ಕೇರಿ 164 ಮಿ.ಮೀ., ಕಣಕುಂಬಿ 221 ಮಿ.ಮೀ, ಲೋಂಡಾ 204 ಮಿ.ಮೀ. ಮಳೆಯಾಗಿದೆ. ಸತತ ಮಳೆಯಿಂದ ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಖಾನಾಪುರ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿದ್ದು, 30ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಖಾನಾಪುರ-ಹೆಮ್ಮಡಗಾ, ಖಾನಾಪುರ- ಜಾಂಬೋಟಿ ಸೇರಿ ಅನೇಕ ಪ್ರಮುಖ ರಸ್ತೆಗಳು ಬಂದ್ ಆಗಿವೆ. ಸಣ್ಣ ಸಣ್ಣ ಹಳ್ಳಗಳು ನದಿಗಳಾಗಿ ಮಾರ್ಪಾಡಾಗಿದ್ದು, ಸಂಪರ್ಕ ಅಸ್ತವ್ಯಸ್ತಗೊಂಡಿದೆ.

ನವೀಲು ತೀರ್ಥ ಜಲಾಶಯದ ಭರ್ತಿಗೆ ಕೇವಲ 14 ಅಡಿಗಳು ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಕ್ಷಣ ನದಿ ಅಕ್ಕಪಕ್ಕದ ಜನ ವಸತಿ ಕೇಂದ್ರಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಿದೆ. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣಲ್ಲಿ ತೀವ್ರ ಏರಿಕೆಯಾಗಿದ್ದು, ಯಾವುದೇ ಕ್ಷಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ. ಜನರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಲಾಗಿದೆ.

ಇದನ್ನು ಓದಿ: ಉತ್ತರಕನ್ನಡ ಜಿಲ್ಲೆಯಲ್ಲಿ ನಿಲ್ಲದ ಮಳೆಯಬ್ಬರ; ಕದ್ರಾ ಡ್ಯಾಂನಿಂದ ಕಾಳಿ ನದಿಗೆ 60 ಕ್ಯೂಸೆಕ್ಸ್​​ ನೀರು; ಆತಂಕದಲ್ಲಿ ನದಿ ಪಾತ್ರದ ಜನ

ಮಾರ್ಕಂಡೇಯ ನದಿ, ಬಳ್ಳಾರಿ ನಾಲಾ ಸಹ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಬೆಳಗಾವಿಯ ಬಸವನ ಕುಡಚಿ, ಹಲಗಾ, ಅಲರವಾಡ ಗ್ರಾಮಗಳ ಸಾವಿರಾರು ಎಕರೆ ಜಮೀನು ನೀರಿನಲ್ಲಿ ಮುಳುಗಿದೆ. ಭತ್ತ, ಕಬ್ಬು ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ರೈತರಿಗೆ ಆತಂಕ ಎದುರಾಗಿದೆ. ಮಾರ್ಕಂಡೇಯ ನದಿ ಪ್ರವಾಹಕ್ಕೆ ಗೋಕಾಕ್ ಬಳಿ ಶಿಂಗಳಾಪುರ ಬ್ರಿಡ್ಜ್ ಮುಳುಗಡೆಯಾಗಿದೆ. ಇದು ಗೋಕಾಕ್ ಜನರಲ್ಲಿಯೂ ಭೀತಿಯನ್ನು ಹುಟ್ಟಿಸಿದೆ.
Published by:HR Ramesh
First published: