Heavy Rain: ಕೋಟೆನಾಡಿನ ಜನರನ್ನು ಕಂಗೆಡಿಸಿದ ಭಾರೀ ಮಳೆ; ಬಿರುಗಾಳಿ ಅಬ್ಬರಕ್ಕೆ ಅಡಿಕೆ-ತೆಂಗು ನಾಶ

ಈಗ ಬಿರು ಬೇಸಿಗೆಯ ಕಾಲವಾಗಿದ್ದು, ಮುಂಗಾರು ಪ್ರಾರಂಭಕ್ಕೆ ಇನ್ನುೂ ಹಲವು ದಿನಗಳೇ ಇವೆ. ಆದರ ಈಗಲೆ ಮಳೆರಾಯ ಆಗಮಿಸಿ, ಕೋಟೆ ನಾಡಿನ ರೈತನನ್ನ ತಾಪತ್ರಯಕ್ಕೆ ಸಿಲುಕಿಸಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹಲವಡೆ ಗಾಳಿ, ಗುಡುಗು, ಮಳೆ ಸುರಿದಿದೆ‌.

ಭಾರೀ ಮಳೆಗೆ ಧರೆಗುರುಳಿದ ಬಾಳೆ ಮರ

ಭಾರೀ ಮಳೆಗೆ ಧರೆಗುರುಳಿದ ಬಾಳೆ ಮರ

  • Share this:
ಚಿತ್ರದುರ್ಗ: ಬಿರು ಬೇಸಿಗೆಯ (Summer) ಅಬ್ಬರದ ಈ ಕಾಲದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಅದ್ಯಾಕೋ ಚಿತ್ರದುರ್ಗ (Chitradurga) ಜಿಲ್ಲೆಯ ಹಲವೆಡೆ ಗುಡುಗು, ಮಿಂಚು, ಮಳೆ (Rain) ಸಹಿತ ಬಾರಿ ಗಾಳಿ ಬೀಸುತ್ತಿದೆ.  ಈ ಗಾಳಿ ಮಳೆಗೆ ಫಸಲಿಗೆ ಬಂದಿದ್ದ ತೆಂಗು (Coconut), ಬಾಳೆ (Banana), ನೆಲಕ್ಕುರುಳಿದ್ದು ಅನ್ನದಾತನ ಶ್ರಮದ ಫಲಕ್ಕೆ ಬರೆ ಎಳೆದಂತಾಗಿ ಜಿಲ್ಲೆಯ ಹಲವೆಡೆ ಅಪಾರ ಪ್ರಮಾಣದ ನಷ್ಟ ಉಂಟಾಗಿ ರೈತರು (Farmer) ಕಂಗಾಲಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಅಂದ್ರೆ ಇತಿಹಾಸ (History) ಸಾರುವ ಕೋಟೆ (Fort), ಚಂದ್ರವಳ್ಳಿ, ಮದಕರಿ ನಾಯಕರ ಶೌರ್ಯ ಪರಾಕ್ರಮ ಮೈ ನವಿರೇಳುವಂತೆ ಮಾಡುತ್ತದೆ. ಈ ಗಂಡು ಮೆಟ್ಟಿದ ನೆಲದ ಇತಿಹಾಸ ದುರ್ಗದ ಪ್ರತಿಯೊಬ್ಬನ ಎದೆಯಲ್ಲೂ ಅಚ್ಚಳಿಯದೆ ಉಳಿದಿದೆ. ಹಾಗೆಯೇ ಜಿಲ್ಲೆಯಲ್ಲಿ ನೀರಾವರಿ, ಮಳೆ ವಿಚಾರಕ್ಕೆ ಬಂದ್ರೆ ಜಿಲ್ಲೆಯ ಜನರ ಬದುಕು ಬವಣೆಯ ಕರಾಳ ಪರಿಸ್ಥಿತಿಯನ್ನೂ ಹೇಳುತ್ತದೆ.

ಕೆರೆ ಕಟ್ಟೆ ತುಂಬಿದ್ದೇ ಕಡಿಮೆ

ಇಲ್ಲಿ ಮಳೆ ಅನ್ನೋದು ಕಡಿಮೆ ಪ್ರಮಾಣದಲ್ಲಿಯೇ ಸುರಿದು ಭೂಮಿಯ ದಾಹವನ್ನ ತಣಿಸುತ್ತದೆಯೇ ಹೊರತು ಈ ಭಾಗದ ರೈತರ ಬದುಕಿಗೆ ಆತ್ಮ ಸ್ಥೈರ್ಯ ತುಂಬುವ ದಾಖಲೆ ಮಳೆ ಸುರಿದು ಕೆರೆ ಕಟ್ಟೆಗಳು ತುಂಬಿ ಹರಿದದ್ದು ತೀರಾ ಕಡಿಮೆ. ಆದರೂ ಹಾಗೋ ಹೀಗೋ ಬೋರ್ವೆಲ್ ನೀರನ್ನ ಆಶ್ರಯಿಸಿ ತೋಟ ತುಡಿಕೆ ಮಾಡಿಕೊಂಡ ರೈತರಿಗೆ ಹಾಗಾಗ ಸಂಕಷ್ಟವನ್ನೂ ತಂದೊಡ್ಡಿದೆ.  ಅದಕ್ಕೆ ಸಾಕ್ಷಿಯಾಗಿ‌ ಪ್ರತೀ ವರ್ಷವೂ ಮಳೆಗಾಲ ಪ್ರಾರಂಭ ವಾಗಿ ಅಂತ್ಯವಾಗೋ ವೇಳೆಗೆ ಜಿಲ್ಲೆಯ ನೂರಾರು ರೈತರ ಬೆಳೆಗಳ‌ ನಷ್ಟ ಮಾಡಿರುತ್ತೆ.

ಬಿರು ಬೇಸಿಗೆಯಲ್ಲೇ ಕೋಟೆನಾಡಲ್ಲಿ ಮಳೆ ಅಬ್ಬರ

ಈಗ ಬಿರು ಬೇಸಿಗೆಯ ಕಾಲವಾಗಿದ್ದು, ಮುಂಗಾರು ಪ್ರಾರಂಭಕ್ಕೆ ಇನ್ನುೂ ಹಲವು ದಿನಗಳೇ ಇವೆ. ಆದರ ಈಗಲೆ ಮಳೆರಾಯ ಆಗಮಿಸಿ, ಕೋಟೆ ನಾಡಿನ ರೈತನನ್ನ ತಾಪತ್ರಯಕ್ಕೆ ಸಿಲುಕಿಸಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹಲವಡೆ ಗಾಳಿ, ಗುಡುಗು, ಮಳೆ ಸುರಿದಿದೆ‌, ಈ ಸಮಯದಲ್ಲಿ ನಿನ್ನೆ  ಸಂಜೆ ಬೀಸಿದ ಬಿರುಗಾಳಿಗೆ ಹಿರಿಯೂರು ತಾಲ್ಲೂಕಿನ ಕೋವೆರಹಟ್ಟಿ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಬಾಳೆ ತೋಟ ನೆಲಕ್ಕುರುಳಿದೆ.

ಇದನ್ನೂ ಓದಿ: Karnataka Rain: ಇನ್ನೈದು ದಿನ ಗುಡುಗು ಸಹಿತ ಮಳೆ: ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಸಾವಿರಾರು ಬಾಳೆ ಗಿಡ, ಅಡಿಕೆ, ತೆಂಗಿನ ಮರ ನಾಶ

ಇದು ಕೋವೇರಹಟ್ಟಿ ಗ್ರಾಮದ ಎಲ್. ತಿಪ್ಪೇಸ್ವಾಮಿ ಹಾಗೂ ಪ್ರಸನ್ನ ಅವರಿಗೆ ಸೇರಿದ ಬಾಳೆ ತೋಟವಾಗಿದ್ದು, ಸುಮಾರು ಐದು ಎಕರೆಯಲ್ಲಿ  ಬಾಳೆ ತೋಟ ಮಾಡಿದ್ದಾರೆ. , ಇದರಲ್ಲಿ  ಸುಮಾರು  ಸಾವಿರಾರು ಬಾಳೆ ಗಿಡಗಳು ಹಾಗೂ 20 ಕ್ಕೂ ಹೆಚ್ಚು ಅಡಿಕೆ ಗಿಡಗಳು ಬಿರುಗಾಳಿಗೆ ಸಿಲುಕಿ ನಾಶವಾಗಿವೆ.

ರೈತರ ಹೊಟ್ಟೆಗೆ ಮಳೆ ನೀರೇ ಗತಿ!

ನೀರಾವರಿ ಆಶ್ರಯದಲ್ಲಿ ಹಗಲು ರಾತ್ರಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ಬಿರುಗಾಳಿಗೆ ನೆಲಕ್ಕೆ ಉರುಳಿದ್ದು ರೈತನಿಗೆ ಲಕ್ಷಾಂತರ ನಷ್ಟವಾಗಿದೆ. ಅಲ್ಲದೇ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೂಗೂರು ಗ್ರಾಮದ ರೈತ ತಿಪ್ಪೇಸ್ವಾಮಿ ಜಮೀನಲ್ಲಿ ಫಸಲಿಗೆ ಬಂದಿದ್ದ 30 ಕ್ಕೂ ಹೆಚ್ಚು ತೆಂಗಿನ ಮರಗಳು ಬೇರು ಸಮೇತ ನೆಲಕ್ಕೆ ಉರುಳಿವೆ. ಫಸಲಿಗೆ ಬಂದ ತೆಂಗಿನ ಮರಗಳು ಧರೆಗೆ ಬಿದ್ದು ರೈತನಿಗೆ ಲಕ್ಷಾಂತರ ರೂ ನಷ್ಟವಾಗಿದೆ.


ಇದನ್ನೂ ಓದಿ: Heavy Rain: ಅಕಾಲಿಕ ಮಳೆಗೆ ಕುಸಿದೇ ಹೋಯ್ತು ಬದುಕು! ಮದುವೆ ನಡೆಯಬೇಕಿದ್ದ ಮನೆಯಲ್ಲಿ ಕಣ್ಣೀರಧಾರೆ!

ಸೂಕ್ತ ಪರಿಹಾರ ನೀಡುವಂತೆ ರೈತರ ಆಗ್ರಹ

ರೈತ ತಿಪ್ಪೇಸ್ವಾಮಿ ಜಮೀನಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಒಂದು ಮರಕ್ಕೆ 5 ಸಾವಿರ ಪರಿಹಾರ ನೀಡುವಂತೆ ಆಗ್ರಹ ಮಾಡಿದ್ದಾರೆ.
Published by:Annappa Achari
First published: