Farmers Problem: ಭಾರೀ ಮಳೆ, ಗಾಳಿಗೆ ಕಬ್ಬು- ಈರುಳ್ಳಿ ಹಾನಿ: ಮತ್ತೊಂದೆಡೆ ಬೆಲೆ ಕುಸಿತದಿಂದ ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ನೀರು..!

ಬಾಗಲಕೋಟೆ ಜಿಲ್ಲೆಯಾದ್ಯಂತ ರೈತರು ಹೆಚ್ಚಾಗಿ ಈರುಳ್ಳಿ ಬೆಳೆದಿದ್ದಾರೆ. ರೈತರ ಶ್ರಮಕ್ಕೆ ತಕ್ಕಂತೆ ಈರುಳ್ಳಿ ಬೆಳೆ ಉತ್ತಮವಾಗಿ ಬಂದಿದೆ. ರೈತನ ದುರಾದೃಷ್ಟವೂ ಏನೋ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗದೇ ರೈತ ಹಾಕಿದ ಬಂಡವಾಳವೂ ಬರದೇ ಕಂಗಾಲಾಗಿದ್ದಾನೆ. ಬೆಲೆ ಕುಸಿತದ ನಡುವೆ ಈರುಳ್ಳಿ ಬೆಳೆಗೆ ಕೊಳೆ ರೋಗ ಕಾಟ ಶುರುವಾಗಿದೆ.

ಕಬ್ಬಿನ ಹೊಲದಲ್ಲಿ ಮಳೆ ನೀರು ನಿಂತಿರುವುದು.

ಕಬ್ಬಿನ ಹೊಲದಲ್ಲಿ ಮಳೆ ನೀರು ನಿಂತಿರುವುದು.

 • Share this:
  ಬಾಗಲಕೋಟೆ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಬಹುತೇಕ ಬೆಳೆಗಳು ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಬಾಗಲಕೋಟೆ (Bhagalakote) ಜಿಲ್ಲೆಯ ಹುನಗುಂದ ತಾಲೂಕಿನ ಹೂವಿನಹಳ್ಳಿ ಗ್ರಾಮದ ರೈತರ ಜಮೀನುಗಳಲ್ಲಿ ಕಬ್ಬಿನ ಫಸಲು ಸಂಪೂರ್ಣ ನೆಲ ಕಚ್ಚಿದೆ. ಹೂವಿನಹಳ್ಳಿ ಗ್ರಾಮದ ಯಮನಪ್ಪ ಮಲ್ಲಪ್ಪ ಹರಗಿ ಅವರ 10 ಎಕರೆ ಜಮೀನಿನಲ್ಲಿ ಅಂದಾಜು 6 ಎಕರೆಯಷ್ಟು ಕಬ್ಬಿನ ಬೆಳೆ ಮಳೆ- ಗಾಳಿ ಹೊಡೆತಕ್ಕೆ ಸಿಕ್ಕು ಸಂಪೂರ್ಣ ಹಾನಿ ಆಗಿದೆ. ಇನ್ನು ಮತ್ತೊಬ್ಬ ರೈತ  ಮುತ್ತಪ್ಪ ನಕ್ಕರಗುಂದಿ ಅವರ 3 ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು ಭಾಗಶಃ ಹಾಳಾಗಿದೆ. ರಮೇಶ ಗಗನದ ಸೇರಿದಂತೆ ಅನೇಕ ರೈತರು ಜಮೀನುಗಳಲ್ಲಿ ಬೆಳೆದ ಕಬ್ಬು ಕೂಡ ಹಾನಿಯಾಗಿದ್ದು ರೈತರನ್ನು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿಸಿದೆ.

  ಜಮೀನುಗಳಲ್ಲಿ ಮೊಳಕಾಲುದ್ದ ನೀರು ಸಂಗ್ರಹವಾಗಿದೆ. ದೀಪಾವಳಿ ಹಬ್ಬದ ನಂತರ ಕಬ್ಬು ಕಟಾವು ಮಾಡಿ ಶುಗರ್ ಫ್ಯಾಕ್ಟರಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ಸುರಿದ ನಿರಂತರ ಧಾರಾಕಾರ ಮಳೆಗೆ ಕೈಗೆ ಬಂದ ಫಸಲು ಬಾಯಿಗೆ ಬಾರದಂತಾಗಿದೆ. ಅಲ್ಲದೇ ಇತರೆ ಬೆಳೆ ಬೆಳೆದಿರುವ ರೈತರ ಜಮೀನುಗಳಲ್ಲಿ ಮಳೆ ನೀರು ನಿಂತಿದ್ದು, ಬೆಳೆಗಳೆಲ್ಲ ಕೊಳೆಯುವ ಭೀತಿ ಶುರುವಾಗಿದೆ.

   ರೈತನಿಗೆ ಕಣ್ಣೀರು ತರಿಸಿದ ಈರುಳ್ಳಿ ಬೆಲೆ ಕುಸಿತ..!

  ಬಾಗಲಕೋಟೆ ಜಿಲ್ಲೆಯಾದ್ಯಂತ ರೈತರು ಹೆಚ್ಚಾಗಿ ಈರುಳ್ಳಿ ಬೆಳೆದಿದ್ದಾರೆ. ರೈತರ ಶ್ರಮಕ್ಕೆ ತಕ್ಕಂತೆ ಈರುಳ್ಳಿ ಬೆಳೆ ಉತ್ತಮವಾಗಿ ಬಂದಿದೆ. ರೈತನ ದುರಾದೃಷ್ಟವೂ ಏನೋ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗದೇ ರೈತ ಹಾಕಿದ ಬಂಡವಾಳವೂ ಬರದೇ ಕಂಗಾಲಾಗಿದ್ದಾನೆ. ಬೆಲೆ ಕುಸಿತದ ನಡುವೆ ಈರುಳ್ಳಿ ಬೆಳೆಗೆ ಕೊಳೆ ರೋಗ ಕಾಟ ಶುರುವಾಗಿದೆ. ಈರುಳ್ಳಿ ಕಟಾವು ಮಾಡಿ ತಿಪ್ಪೆಗೆ ಎಸೆಯುವಂತಹ ಪರಿಸ್ಥಿತಿ ರೈತರಿಗೆ ಬಂದಿದೆ.ಅಲ್ಪ ಸ್ವಲ್ಪ ಉಳಿದ ಗುಣಮಟ್ಟದ ಈರುಳ್ಳಿ ಸಹ ಸೂಕ್ತ ಬೆಲೆ ಇಲ್ಲದ ಕಾರಣ ಮಾರುಕಟ್ಟೆ ತೆಗೆದುಕೊಂಡು ಹೋಗಲು ರೈತರು ಹಿಂದೇಟು ಹಾಕಿದ್ದಾರೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ. ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಇನ್ನು ಮಳೆ ಕಾಟದಿಂದ ಎಲ್ಲಿ ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ಈರುಳ್ಳಿ ಬೆಳೆಗೆ ಈ ಕೊಳೆ ರೋಗ ಬರುತ್ತದೆ. ಒಂದು ಬುಡಕ್ಕೆ ಈ ಕಾಯಿಲೆ ಬಂದರೆ ಬಂದರೆ ಸುತ್ತಮುತ್ತಲಿನ ಕಾಂಡಗಳಿಗೂ ರೋಗ ಹತ್ತಿಕೊಳ್ಳುತ್ತದೆ. ಇದರಿಂದ ಜಮೀನಿನ ಬೆಳೆಯೇ ಸಂಪೂರ್ಣವಾಗಿ ನಾಶವಾಗುತ್ತದೆ.

  ಇನ್ನು ಸಾಮಾನ್ಯವಾಗಿ ಪ್ಯುಸೇರಿಯಂ ಕೊಳೆರೋಗ, ಫೈಥಿಯಂ ಮತ್ತು ಆಲ್ಟರ್ನೇರಿಯಾ ಕೊಳೆ ರೋಗಗಳು ಈರುಳ್ಳಿಗೆ ಬರುತ್ತವೆ. ಈರುಳ್ಳಿ ಬೆಳೆಗಳು ಕೊಳೆತು ಹೋಗುತ್ತವೆ ಎಂದು  ಕೆಲ ರೈತರು ಹೇಗಾದರೂ ಮಾಡಿ ಈರುಳ್ಳಿ ಹಸಿ ಗಡ್ಡೆ ಇರುವುದರಿಂದ ಹೀಗೆ ಬಿಟ್ಟರೇ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ ಎಂದು ಸಿಕ್ಕ ದರದಲ್ಲೇ ಮಾರಾಟ ಮಾಡುತ್ತಿದ್ದಾರೆ.

  ಇದನ್ನು ಓದಿ: Bullock cart Race: ಧೂಳೆಬ್ಬಿಸಿದ ರಾಸುಗಳು..! ಅಜ್ಜಂಪುರ ದಲ್ಲಿ ಜೋಡೆತ್ತಿನ ಗಾಡಿ ಸ್ಪರ್ಧೆ ನೋಡಿ ಮಸ್ತ್ ಎಂಜಾಯ್ ಮಾಡಿದ ಜನರು!

  ಒಟ್ಟಿನಲ್ಲಿ ಬಾಗಲಕೋಟೆಯಲ್ಲಿ ಸುಮಾರು ಪ್ರದೇಶ ಈರುಳ್ಳಿ ಬೆಳೆಯನ್ನು ಬೆಳೆಯಲಾಗಿದೆ. ಈರುಳ್ಳಿ ಬೆಲೆ ದಿಢೀರ್ ಕುಸಿತ ಕಂಡಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಬೆಲೆ ಕುಸಿತಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆಯ ಮಧ್ಯವರ್ತಿಗಳೇ ಕಾರಣ ಎಂದು ರೈತರು ದೂರುತ್ತಿದ್ದಾರೆ. ಆದ್ದರಿಂದ ಸರಕಾರ ರೈತರ ಸಂಕಷ್ಟ ಅರಿತುಕೊಂಡು ಈರುಳ್ಳಿಗೆ ಸೂಕ್ತವಾದ ನಿರ್ದಿಷ್ಟ ಬೆಲೆಯನ್ನು ನಿಗದಿ ಮಾಡಬೇಕು. ರೈತರ ಕಷ್ಟವನ್ನು ಪರಿಹರಿಸಿ, ಹಿತ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

  ವರದಿ: ಮಂಜುನಾಥ್ ತಳವಾರ್ 
  Published by:HR Ramesh
  First published: