ಬೀದರ್ (ಡಿ.31): ಗಡಿ ಪ್ರದೇಶದಲ್ಲಿ ಬೀಸುತ್ತಿರುವ ಮಾಗಿಯ ಗಾಳಿ ಮೈನಡುಗುವಂತೆ ಮಾಡುತ್ತಿದೆ. ಗಡಿನಾಡು ಬೀದರ್ ಜಿಲ್ಲೆಯ(Bidar District ) ವ್ಯಾಪ್ತಿಯಲ್ಲಿ ಚಳಿಯ ತೀವ್ರತೆ ಸಾಕಷ್ಟು ಹೆಚ್ಚಾಗಿದೆ. ಕಳೆದ ಒಂದೊಂದು ವಾರದಿಂದ ವಿಪರೀತ ಚಳಿ(Winter) ಕಿರಿಕಿರಿಯಿಂದ ಹೊರ ಬರಲಾರದಂತ ಸ್ಥಿತಿ ನಿರ್ಮಾಣ. ಜಿಲ್ಲೆಯಲ್ಲಿ 10.0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ತೀವ್ರ ಶೀತದಿಂದಾಗಿ ಹೈರಾಣಾಗಿರುವ ಗಡಿ ಜಿಲ್ಲೆಯ ಜನರು(People). ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬೀಸುತ್ತಿರುವ ಶೀತ ಗಾಳಿ(Cold Wave)..
ಸಾಂಕ್ರಾಮಿಕ ರೋಗದ ಭಯದಲ್ಲಿ ಜನರು
ಗಡಿ ಜಿಲ್ಲೆ ಬೀದರ್ ನಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಹವಾಮಾನ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬೀಸುತ್ತಿರುವ ಶೀತ ಗಾಳಿ. ತೀವ್ರ ಶೀತದಿಂದಾಗಿ ಹೈರಾಣಾಗಿರುವ ಗಡಿ ಜಿಲ್ಲೆಯ ಜನರು. 10.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲು. ಹತ್ತು, ಹನ್ನೊಂದು ಗಂಟೆಯಾದರೂ ಕಡಿಮೆಯಾಗದ ತೀವ್ರ ಚಳಿ. ಹೀಗಾಗಿ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿರುವ ಜನರು. ಅನಿವಾರ್ಯ ಕಾರಣಗಳಿಂದ ಹೊರ ಬರುವವರಿಗೂ ನೆಗಡಿ ಚಳಿಯ ಆತಂಕ. ವಿಪರೀತ ಚಳಿಯ ಕಾರಣ ಸಾಂಕ್ರಾಮಿಕ ರೋಗದ ಭಯದಲ್ಲಿ ಜನರು.
ವಿಪರೀತ ಚಳಿಗೆ ನಲುಗಿದ ಜನರು
ಹೌದು... ಗಡಿ ನಾಡು ಬೀದರ್ ನಲ್ಲಿ ಕಳೆದೊಂದು ವಾರಗಳಿಂದ ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಮೈಕೊರೆಯುವ ಚಳಿಗೆ ಜನರು ಗಡಗಡ ನಡುಗುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ತಣ್ಣನೆಯ ವಾತಾವರಣ ಇರೋದರಿಂದ ಜನ್ರು ಹಾಸಿಗೆಯಿಂದ ಮೇಲೇಳಲು ಕಷ್ಟ ಪಡುತ್ತಿದ್ದಾರೆ. ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಯಾದರೂ ಜನ್ರನ್ನು ವಿಪರೀತ ಚಳಿ ಕಾಡುತ್ತಿದ್ದು ಗಡಿ ಜಿಲ್ಲೆ ಬೀದರ್ ನಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ ಹವಾಮಾನ.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಕನಿಷ್ಠ ಉಷ್ಣಾಂಶ ದಾಖಲು
ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬೀಸುತ್ತಿರುವ ಶೀತ ಗಾಳಿ, ತೀವ್ರ ಶೀತದಿಂದಾಗಿ ಹೈರಾಣಾಗಿದ್ದಾರೆ ಗಡಿ ಜಿಲ್ಲೆಯ ಜನರು. ಜಿಲ್ಲೆಯಲ್ಲಿ 10.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಳಿಗ್ಗೆ ಹತ್ತು, ಹನ್ನೊಂದು ಗಂಟೆಯಾದರೂ ಕಡಿಮೆಯಾಗದ ಚಳಿ. ಹೀಗಾಗಿ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಅನಿವಾರ್ಯ ಕಾರಣಗಳಿಂದ ಹೊರ ಬರುವವರಿಗೂ ನೆಗಡಿ ಚಳಿಯ ಆತಂಕ ಶುರುವಾಗಿದೆ. ವಿಪರೀತ ಚಳಿಯ ಕಾರಣ ಸಾಂಕ್ರಾಮಿಕ ರೋಗದ ಭಯದಲ್ಲಿ ಜನರಲ್ಲಿ ಕಾಡುತ್ತಿದೆ.
ಬೆಂಕಿಗೆ ಮೈಯೊಡ್ಡುತ್ತಿರುವ ಜನರು
ಕೋವಿಡ್ ಸಂದರ್ಭದಲ್ಲಿ ನೆಗಡಿ ಬಂದರೆ ಆಸ್ಪತ್ರೆಗೆ ಹೋಗ ಬೇಕಾಗುತ್ತದೆ ಎಂದು ಹೆದರುತ್ತಿದ್ದಾರೆ ಸಾರ್ವಜನಿಕರು ಹಿರಿಯ ನಾಗರೀಕರು, ಪುಟ್ಟ ಮಕ್ಕಳಿಗೂ ಆರೋಗ್ಯ ಸಮಸ್ಯೆಯ ಭಯ ಶುರುವಾಗಿದ್ದು, ವಾಯು ವಿಹಾರಕ್ಕೆ ಆಗಮಿಸುತ್ತಿದ್ದವರ ಸಂಖ್ಯೆಯಲ್ಲಿಯೂ ಕುಸಿತ ಕಂಡಿದೆ. ಶೀತ ಗಾಳಿ ಬೀಸುತ್ತಿರುವ ಹಿನ್ನಲೇ ಬೆಳಗಿನ ವಾಕಿಂಗ್ ಮೊಟಕು ಗೊಳಿಸಿರುವ ಸಾರ್ವಜನಿಕರು. ವೃತ್ತಿ ಅನಿವಾರ್ಯತೆಯಿಂದಾಗಿ ಚುಮು ಚುಮು ಚಳಿಯಲ್ಲಿಯೂ ಹೊರ ಬರುವವರಿಗೆ ಯಾತನೆ ಶುರುವಾಗಿದೆ. ಹೀಗಾಗಿ ಅಲ್ಲಲ್ಲಿ ಬೆಂಕಿ ಹೊತ್ತಿಸಿ ಬೆಂಕಿಗೆ ಮೈಯೊಡ್ಡುತ್ತಿರುವ ಜನರು.
ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಸವಾಲು
ಇನ್ನು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸವಾಲಾಗಿದೆ. ಬದಲಾದ ವಾತಾವರಣದಿಂದ ಮಕ್ಕಳ ಆರೋಗ್ಯ ಕಾಪಾಡಲು ಪೋಷಕರು ಪರದಾಡುತ್ತಿದ್ದಾರೆ. ಚಳಿ ಆರಂಭವಾಗಿನಿಂದ ಪೋಷಕರು ಮಕ್ಕಳಿಗೆ. ಸ್ವೆಟರ್, ಮಫ್ಲರ್ ಧರಿಸಿ ಶಾಲೆಗೆ ಕಳುಹಿಸುತ್ತಿದ್ದಾರೆ. ಶೀತ ಗಾಳಿ ಹೆಚ್ಚಾದ ಕಾರಣ, ಇಡೀ ನಗರದಲ್ಲಿ ತಂಪಾದ ವಾತಾರವಣವಿದೆ ಬೀದರ್ ನಗರವು ಮಂಜಿನ ನಗರಿಯಾಗಿ ಮಾರ್ಪಡಲು ಶುರುವಾದಂಗೆ ಕಾಣುತ್ತಿದೆ.
ಶೀತಗಾಳಿ ಮುಂದುವರಿಕೆ
ಬೀದರ್ ನಗರ ಈ ಹಿಂದೆ 1928ರಲ್ಲಿ 9.7 ಕನಿಷ್ಠ ಹವಾಮಾನ ದಾಖಲಾಗಿತ್ತೆಂದು ಹೇಳಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆ ಮನವಿಯನ್ನು ಮಾಡಿಕೊಂಡಿದೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಜಾಗ್ರತೆ ವಹಿಸುವಂತೆ ಸೂಚನೆ ನೀಡಿದ್ದು ಕಳೆದ ನಾಲ್ಕೈದು ದಿನಗಳವರೆಗೂ ಶೀತ ಗಾಳಿ ಮುಂದು ವರೆಯುವ ಸಾಧ್ಯತೆ ಇದೆ ಎಂದಿರುವ ಹವಾಮಾನ ಇಲಾಖೆ.
ಹೃದಯಾಘಾತ ಆಗುವ ಸಂಭವ ಹೆಚ್ಚು
ಚಳಿಗಾಲದಲ್ಲಿ ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆ ಇದೆ ಹೀಗಾಗಿ ಹೊರಗಡೆ ತಿರುಗಾಡಬೇಕಾದರೆ, ದೇಹವನ್ನ ಬೆಚ್ಚಗಿಟ್ಟುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ಈಗಾಗಲೇ ಬೀದರ್ ನಗರದಲ್ಲಿ ವಿಪರೀತ ಚಳಿಯಿಂದ ಜನ್ರು ಬಹಳಷ್ಟು ಆರೋಗ್ಯ ಕಡೆ ಮತ್ತು ಗಮನ ಹರಿಸಿ ಮತ್ತು ಶೀತ ಗಾಳಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಾಂತ್ರಿಕ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Karwar: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕಾರವಾರ ಕಡಲತೀರದಲ್ಲಿ ಸಂಪೂರ್ಣ ಬ್ರೇಕ್
ಮನೆಯಿಂದ ಹೊರ ಬಾರದ ಜನರು
ಬೀದರ್ ಜಿಲ್ಲೆಯಲ್ಲಿ ಶೀತ ಗಾಳಿ ಬೀಸುತ್ತಿರುವ ಪರಿಣಾಮ ಜನ್ರು ಮನೆ ಬಿಟ್ಟು ಹೊರಗೆ ಬರಲಾರದಂತ ಸ್ಥಿತಿ ನಿರ್ಮಾಣ ವಾಗಿದೆ. ಹೀಗಾಗಿ ವಿಪರೀತ ಚಳಿಂದ ಜನರು ಕೆಲವು ದಿನಗಳ ಕಾಲ ಬೆಚ್ಚಗೆ ಇರೋದು ಒಳ್ಳೆಯದು. ಮತ್ತು ಹಿರಿಯ ನಾಗರಿಕರು ಮತ್ತು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಆರೋಗ್ಯ ಇಲಾಖೆ ಮನವಿ ಕೂಡ ಹೀಗಾಗಿ ಜನ್ರು ತಮ್ನ ಕಾಳಜಿಯನ್ನು ವಹಿಸುವುದು ಅತ್ಯಮೂಲ್ಯವಾಗಿದೆ.
ವರದಿ: ಚಮನ್ ಹೊಸಮನಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ