• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Corona Vaccine: ಹೊಲ ಗದ್ದೆಗಳಿಗೇ ಹೋಗಿ ಲಸಿಕೆ ನೀಡಿದ ಆರೋಗ್ಯ ಕಾರ್ಯಕರ್ತರು, ವ್ಯಾಕ್ಸಿನ್ ತಗೊಳಲ್ಲ ಅಂದ್ರೆ ಇನ್ನೇನು ಮಾಡೋದು?

Corona Vaccine: ಹೊಲ ಗದ್ದೆಗಳಿಗೇ ಹೋಗಿ ಲಸಿಕೆ ನೀಡಿದ ಆರೋಗ್ಯ ಕಾರ್ಯಕರ್ತರು, ವ್ಯಾಕ್ಸಿನ್ ತಗೊಳಲ್ಲ ಅಂದ್ರೆ ಇನ್ನೇನು ಮಾಡೋದು?

ಹೊಲದಲ್ಲೇ ವ್ಯಾಕ್ಸಿನ್

ಹೊಲದಲ್ಲೇ ವ್ಯಾಕ್ಸಿನ್

Corona Vaccine: ನಮ್ಗೆ ಹೊಲದಲ್ಲಿ ಕೆಲ್ಸಾ ಇದೆ. ನಾಳೆ ಬಂದು ಲಸಿಕೆ ತಗೋಳ್ತೀವಿ ಅಂದ ಮಂದಿಗೆ ಹೊಸ ಐಡಿಯಾ ದೊಂದಿದೆ ಇಂಜೆಕ್ಷನ್ ಚುಚ್ಚೇ ಬಿಟ್ಟಿದ್ದಾರೆ.

  • Share this:

ಬಳ್ಳಾರಿ: ಆ ಎರಡು ಗ್ರಾಮದಲ್ಲಿ ಜನ ವ್ಯಾಕ್ಸಿನ ಹಾಕಿಸಿಕೊಳ್ಳೋಕೆ ಹಿಂದೇಟು ಹಾಕ್ತಾ ಇದ್ರು, ಅಧಿಕಾರಿಗಳು ಎಷ್ಟು ತಿಳಿ ಹೇಳಿದ್ರು ಜನಾ ಮಾತ್ರ ಕೇಳುತ್ತಿರಲಿಲ್ಲ, ಅದಕ್ಕೆ ಆರೋಗ್ಯ ಅಧಿಕಾರಿಗಳು ವ್ಯಾಕ್ಸಿನ್ ಬೇಡ ಅಂತಾ ಹೇಳಿದ ಜನರಿಗೆ ಮನವೊಲಿಸೋ ಪ್ರಯತ್ನವನ್ನು ಸತತವಾಗಿ ಮಾಡುತ್ತಾ ಬಂದ್ರು. ಕೊನೆಗೆ ಜನ ಎಲ್ಲಿದ್ದಾರೋ ಅಲ್ಲಿಗೆ ಹೋಗಿ ವ್ಯಾಕ್ಸಿನ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ....ಹೌದು ನೀವು ಏನ್ ಹೇಳ್ರಿ ನಾವು ಮಾತ್ರ ಲಸಿಕೆ ತಗೋಳ ಅಂದ್ರ ತಗೋಳಲ್ಲ... ಅಂತಾ ಜನ ಪಟ್ಟು ಹಿಡಿದಿದ್ರು.. ಯಸ್.. ಸಂಡೂರು ತಾಲೂಕಿನ ಕುರೇಕುಪ್ಪ, ಹಳೆದರೋಜಿ ಗ್ರಾಮದಲ್ಲಿ ಜನ್ರು ವ್ಯಾಕ್ಸಿನ್ ತಗೋಳಕ್ಕೂ ಹಿಂದೇಟು ಹಾಕ್ತಿದ್ರು. ಹೇಗಾದರು ಮಾಡಿ ಜನರ ಮನಸ್ಸನ್ನ ತಿಳಿಗೊಳಿಸಿ ವ್ಯಾಕ್ಸಿನ್ ಹಾಕಿಸುವ ಜವಾಬ್ದಾರಿ ಆರೋಗ್ಯ ಅಧಿಕಾರಿಗಳ ಮೇಲಿತ್ತು. ಹೀಗಾಗಿ ಅಧಿಕಾರಿಗಳು ಆ ಎರಡು ಗ್ರಾಮಕ್ಕೆ ಭೇಟಿ ನೀಡಿ ಜನರಲ್ಲಿದ್ದ ತಪ್ಪು ತಿಳುವಳಿಕೆ ಹೊಗಲಾಡಿಸಿದ್ರು.


ಆದ್ರೂ ಕೆಲವೊಂದಿಷ್ಟು ಮಂದಿ ವ್ಯಾಕ್ಸಿನೇಷನ್‌ ಮಾಡ್ಕೊಳ್ಕು ಹಿಂದೇಟು ಹಾಕ್ತಿರಂತೆ ಹೀಗಾಗಿ   ಕುರೇಕುಪ್ಪ ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಹೊಸ ಐಡಿಯಾ ಮಾಡಿದ್ರು. ನಮ್ಗೆ ಹೊಲದಲ್ಲಿ ಕೆಲ್ಸಾ ಇದೆ. ನಾಳೆ ಬಂದು ಲಸಿಕೆ ತಗೋಳ್ತೀವಿ ಅಂದ ಮಂದಿಗೆ ಹೊಸ ಐಡಿಯಾ ದೊಂದಿದೆ ಇಂಜೆಕ್ಷನ್ ಚುಚ್ಚೇ ಬಿಟ್ಟಿದ್ದಾರೆ.ಅಂದಹಾಗೇ ಪೊಲೀಸರ ಸಮೇತವಾಗಿ ಬಂದಿರೋ ಇವರು ಬೆಳೆ ಸಮೀಕ್ಷೆ ಮಾಡೋಕಲ್ಲ ಬದಲಾಗಿ ಹೊಲದಲ್ಲಿ ಕೆಲ್ಸಾ ಮಾಡೋ ಮಂದಿಗೆ ವ್ಯಾಕ್ಸಿನ್ ಹಾಕೋಕೆ. ಜನ ಇರೋ ಸ್ಥಳಕ್ಕೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹೊಲಕ್ಕೆ ಹೋಗಿ  ವ್ಯಾಕ್ಸಿನೇಷನ್‌ ಮಾಡಿದ್ದಾರೆ.. ವ್ಯಾಕ್ಸಿನ ತಗೋಂಡ ಮಂದಿಯಲ್ಲ ಈಗ ಪುಲ್ ಖಷ್ ಆಗಿ ನಾವು ಲಸಿಕೆ ತಗೋಂಡೆವಿ ಏನ್ ಆಗಿಲ್ಲ ನೀವು ತಗೋಳಿ ಅಂತೀದ್ದಾರೆ.


ಇದನ್ನೂ ಓದಿ: Explained: ವ್ಯಾಕ್ಸಿನ್ ತೆಗೆದುಕೊಂಡ ಮೇಲೆ ಜ್ವರ ಬಂದಿಲ್ಲ, ಹಾಗಿದ್ರೆ ಲಸಿಕೆ ಕೆಲಸ ಮಾಡ್ತಿಲ್ವಾ?


ಇನ್ನು ಕುರೇಕುಪ್ಪ, ಹಳೆದರೋಜಿ ಗ್ರಾಮದ ಜನ ವ್ಯಾಕ್ಸಿನ ತಗೋಂಡ್ರೆ ಪುರುಷತ್ವ ಹೋಗುತ್ತೇ, ಜನ ಸಾಯ್ತಾರೆ ಹಾಗೇ,ಹೀಗೆ ಅಂತಾ ಹಿಂದೇಟು ಹಾಕಿದ್ರು. ಆದರೆ ಸಂಡೂರು ತಹಶಿಲ್ದಾರ ರಶ್ಮೀ ಜನರಿದ್ದ ಸ್ಥಳಕ್ಕೆ ಹೋಗಿ ವ್ಯಾಕ್ಸಿನ್ ಮಾಡಿಸಿದ್ದಾರೆ. ಇನ್ನೂ ವಿಶೇಷ ಅಂದ್ರೆ ಗ್ರಾಮಸ್ಥರ ಕೆಲ್ಸಾ ಮಾಡ್ತಿದ್ದ ಹೊಲ ಗದ್ದೆಗಳು ವ್ಯಾಕ್ಸಿನೇಷನ್‌ ಕೇಂದ್ರಗಳಾಗಿದ್ದು, ಇಂಜೆಕ್ಷನ್ ಹಿಡ್ಕೊಂಡೆ ಬಂದಿದ್ದಾರೆ.ಇನ್ಯಾರು ನಮ್ಮನ್ನ ಬಿಡುವುದಿಲ್ಲ, ಇನ್ನೇನು‌ ಮಾಡೋಕೆಗಲ್ಲ ಅಂತಾ ಹೊಲದಲ್ಲಿ ಕೆಲ್ಸಾ ಮಾಡ್ತಿದ್ದ ಜನ ವ್ಯಾಕ್ಸಿನ ಹಾಕಿಸಿಕೊಂಡಿದ್ದಾರೆ. ಎರಡು ಗ್ರಾಮದಲ್ಲಿ ವ್ಯಾಕ್ಸಿನ ಹಾಕಲು ಮನವೊಲಿಸಲು ಹರಸಹಾಸ ಮಾಡ್ತಿದ್ದ ಆಶಾ ಕಾರ್ಯಕರ್ತೆಯರಿಗೂ ಸಂತಸ ಮೂಡಿಸಿದೆ. ಹೊಲದಲ್ಲಿ ವ್ಯಾಕ್ಸಿನೇಷನ್‌ ಮಾಡಿರೋದು ಜನ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಜನರಿಗೆ ವ್ಯಾಕ್ಸಿನ ಮಾಡೋಕೆ ಹರಸಾಹ ಮಾಡ್ತಿದ್ದ ಸಿಬ್ಬಂದಿಗಳು ಈಗ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ...


ಒಟ್ಟಿನಲ್ಲಿ ಎಚ್ಚೆತ್ತ ಆರೋಗ್ಯಾಧಿಕಾರಿಗಳು ಜನರಿದ್ದ ಸ್ಥಳಕ್ಕೆ ಹೋಗಿ ವ್ಯಾಕ್ಸಿನ್ ಹಾಕ್ತಿದ್ದಾರೆ. ಈಗ ಗ್ರಾಮಸ್ಥರಲಿದ್ದ ವ್ಯಾಕ್ಸಿನ್ ಭಯ ನಿವಾರಣೆ ಆಗಿದೆ. ಲಸಿಕೆ ಬೇಡ ಎಂದು ಹಿಂದೇಟು ಹಾಕಿದ ಮಂದಿ ವ್ಯಾಕ್ಸಿನೇಷನ್‌ ಮಾಡಿಸಿಕೊಂಡು ನಮ್ಗೇನು ಆಗಿಲ್ಲ, ಆರಾಮ್ ಆಗಿದ್ದೇವೆ ಅಂತಾ ಸಂತಸ ಪಡಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.


(ವರದಿ: ವಿನಾಯಕ್ ಬಡಿಗೇರ್)

top videos
    First published: