• Home
  • »
  • News
  • »
  • district
  • »
  • ಅಂಕೋಲದಲ್ಲಿ ನಕಲಿ ವೈದ್ಯರ ಹಾವಳಿ; ದಂಧೆಗೆ ಮೂಗುದಾರ ಹಾಕಲು ಮುಂದಾದ ಆರೋಗ್ಯ ಅಧಿಕಾರಿಗಳು

ಅಂಕೋಲದಲ್ಲಿ ನಕಲಿ ವೈದ್ಯರ ಹಾವಳಿ; ದಂಧೆಗೆ ಮೂಗುದಾರ ಹಾಕಲು ಮುಂದಾದ ಆರೋಗ್ಯ ಅಧಿಕಾರಿಗಳು

ನಕಲಿ ವೈದ್ಯರ ಪರವಾನಗಿಯನ್ನು ಪರಿಶೀಲಿಸುತ್ತಿರುವ ವೈದ್ಯಾಧಿಕಾರಿ.

ನಕಲಿ ವೈದ್ಯರ ಪರವಾನಗಿಯನ್ನು ಪರಿಶೀಲಿಸುತ್ತಿರುವ ವೈದ್ಯಾಧಿಕಾರಿ.

ಆಸ್ಪತ್ರೆ ಹೋದ್ರೆ ಪಾಸಿಟಿವ್ ಆಗೊತ್ತೆ ಎನ್ನುವ ನೆಪದಲ್ಲಿ ಇಂತ ನಕಲಿ ಕ್ಲಿನಿಕ್ ನಲ್ಲಿ ಕೊರೋನಾ ಪರೀಕ್ಷೆ ಮಾಡಿಕೊಳ್ಳದೆ ಅನೇಕರು ಚಿಕಿತ್ಸೆ ಪಡೆಯುತ್ತಿದ್ದಾರೆ.

  • Share this:

ಕಾರವಾರ; ವೈದ್ಯಕೀಯ ಪದವಿ ಪಡೆಯದಿದ್ರು ಅಲೋಪಥಿ ಪದ್ದತಿಯಲ್ಲಿ ಚಿಕಿತ್ಸೆ, ಅನುಮತಿ ಇಲ್ಲದಿದ್ರು ಔಷದಿಗಳ ಮಾರಾಟ ಮಾಡುತ್ತಿದ್ದ ಆರೋಪ ಮತ್ತು ಸಾರ್ವಜನಿಕ ದೂರಿನನ್ವಯ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಆರೋಗ್ಯಾಧಿಕಾರಿಗಳು ಇಂತ ಕ್ಲಿನಿಕ್ ಮೇಲೆ ದಾಳಿ ನಡೆಸಿ ಇಂತವರಿಗೆ ಎಚ್ಚರಿಕೆ ನೀಡಿ ನೋಟಿಸ್ ನೀಡುತ್ತಿದ್ದು ನಕಲಿ ವೈದ್ಯರ ಹಾವಳಿ ತಡೆಯಲು ಮುಂದಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲೆ ಐವತ್ತಕ್ಕೂ ಹೆಚ್ಚು ಕ್ಲಿನಿಕ್ ಮೇಲೆ ದಾಳಿ ನಡೆಸಿದ ಅಂಕೋಲಾ ಆರೋಗ್ಯಾಧಿಕಾರಿಗಳು ವೈದ್ಯಕೀಯ ಪದವಿ ಇಲ್ಲದಿದ್ರು ಅಲೋಪಥಿ ಪದ್ದತಿಯಲ್ಲಿ ಚಿಕಿತ್ಸೆ ನೀಡುವವರನ್ನ ಪತ್ತೆ ಹಚ್ಚಿದ್ದಾರೆ.


ಸುಮಾರು ಐವತ್ತು ಮಂದಿ ವೈದ್ಯರು ಎಂಬ ಹೆಸರಿನಲ್ಲಿ ಪತ್ತೆಯಾಗಿದ್ದಾರೆ.ಇಂತ ನಕಲಿ ಹಾವಳಿ ನಿಯಂತ್ರಣಕ್ಕಾಗಿ ಕೆ.ಪಿ.ಎ.ಇ  ಕಾಯ್ದೆ ಉಲ್ಲಂಘಿಸಿದವರಿಗೆ ನೋಟಿಸ್ ಜಾರಿ ಮಾಡಿ ನಕಲಿಗೆ ಮೂಗು ದಾರ ಹಾಕಲಗುತ್ತಿದೆ. ಈಗ ಕೊರೋನಾ ಹಾವಳಿಯಲ್ಲಿ ಕೊರೋನಾ ರೋಗ ಲಕ್ಷಣ ಇರುವವರು ಇಂತ ನಕಲಿ ಕ್ಲಿನಿಕ್ ಗೆ ಹೋಗಿ ಚಿಕಿತ್ಸೆ ಪಡೆಯುತ್ತಿರೋದು ಬೆಳಕಿಗೆ ಬಂದಿದೆ.


ಆಸ್ಪತ್ರೆ ಹೋದ್ರೆ ಪಾಸಿಟಿವ್ ಆಗೊತ್ತೆ ಎನ್ನುವ ನೆಪದಲ್ಲಿ ಇಂತ ನಕಲಿ ಕ್ಲಿನಿಕ್ ನಲ್ಲಿ ಕೊರೋನಾ ಪರೀಕ್ಷೆ ಮಾಡಿಕೊಳ್ಳದೆ ಅನೇಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಕೆಲವರು ಹಾನಿಗೊಳಗಾಗಿದ್ದು ಅಂಕೋಲಾ ತಾಲೂಕಿನಲ್ಲಿ ಬೆಳಕಿಗೆ ಬರುತ್ತಿದೆ. ಈ ಎಲ್ಲ ದೂರಿನನ್ವಯ ಆರೋಗ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.


ಕೊರೋನಾ ಸಂದರ್ಭದಲ್ಲಿ ನಡೆದ ದಾಳಿಯಿಂದ ವಿಚಿಲತರಾದ ನಕಲಿ ವೈದ್ಯರು:


ಕೊರೋನಾ ಸಂದರ್ಭದಲ್ಲಿ ಶೀತ ಜ್ವರ ಬಂದ್ರು ಭಯಕ್ಕೆ ಒಳಗಾಗಿ ಸರಕಾರಿ ಆಸ್ಪತ್ರೆ ಅಥವಾ ಪರವಾನಗಿ ಪಡೆದ ಖಾಸಗಿ ಆಸ್ಪತ್ರೆಗೆ ಹೋಗಲು ಭಯ ಬೀಳುತ್ತಿದ್ದಾರೆ, ಇವರೆಲ್ಲ ಹಳ್ಳಿ ಗಲ್ಲಿಯಲ್ಲಿ ಇರುವ ಇಂತ ಅಲೋಪಥಿ ಪದ್ದತಿಯಲ್ಲಿ ಚಿಕಿತ್ಸೆ ನಡೆಸುತ್ತಿರುವವರ ಜತೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಇವರೆಲ್ಲ ಶೀತ ಜ್ವರಕ್ಕೆ ಹೈ ಡೋಜ್ ಲಸಿಕೆ ನೀಡಿ ಗುಣಮುಖ ಮಾಡುತ್ತಾರೆ.


ಇದನ್ನೂ ಓದಿ: ರಾಜ್ಯಕ್ಕೆ 1200 ಮೆ.ಟನ್ ಆಕ್ಸಿಜನ್ ನೀಡಿ ಎಂದ ಹೈಕೋರ್ಟ್​ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕೇಂದ್ರ; ಸಿದ್ದರಾಮಯ್ಯ ಖಂಡನೆ


ಕೊರೋನಾ ಸೋಂಕು ಇದ್ರೂ ಕೂಡಾ ಇವರೆಲ್ಲ ಇಂತ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ ಕೆಲವರು ಅಡ್ಡ ಪರಿಣಾಮದಿಂದ ಸಮಸ್ಯೆ ಎದುರಿಸುತ್ತಾರೆ ಇವೆಲ್ಲ ಮುನ್ನೆಲೆಗೆ ಬರಲ್ಲ...ಕೆಲ ಪ್ರಜ್ಞಾವಂತರು ಇಂತ ದಂದೆಯ ಬಗ್ಗೆ ಧ್ವನಿ ಎತ್ತಿ ಆರೋಗ್ಯ ಇಲಾಖೆ ಕಿವಿ ಹಿಂಡಿ ಆರೋಗ್ಯ ಇಲಾಖೆಯ ಅಧಿಕಾರಿಗಳು ನಕಲಿ ವೈದ್ಯರ ಕಿವಿ ಹಿಂಡಿದ್ದಾರೆ.


ಕೂಡಲೆ ಪರವಾನಗಿ ಪಡೆಯಲು ನೋಟಿಸ್ ಅಲ್ಲಿ ತನಕ ಕ್ಲಿನಿಕ್ ಬಂದ್


ಕೆಲವರು ಪದವಿ ಪಡೆದ್ರು ಕೆ.ಪಿ.ಎ.ಇ ಅಡಿಯಲ್ಲಿ ಪರವಾನಗಿ ಪಡೆಯದೆ ಚಿಕಿತ್ಸೆ ನೀಡುತ್ತಿರುವವರಿಗೆ ಕೂಡಲೆ ಪರವಾನಗಿ ಪಡೆಯಲು ಸೂಚಿಸಿದ್ದಾರೆ, ಇನ್ನು ಯಾವುದೆ ವೈದ್ಯ ಪದವಿ ಇಲ್ಲದೆ ಚಿಕಿತ್ಸೆ ಪಡೆಯುವವ ಕ್ಲಿನಿಕ್ ಬಂದ್ ಮಾಡಲು ಸೂಚಿಸಿದ್ದಾರೆ ಅಂತೆ ಅಧಿಕಾರಿಗಳು...ಹೀಗೆ ನಕಲಿ ವೈದ್ಯ ದಂದೆಗೆ ಮೂಗುದಾರ ಹಾಕಲು ಅಂಕೋಲಾ ಆರೋಗ್ಯ ಇಲಾಖೆ ಮುಂದಾಗಿದೆ..ಆದ್ರೆ ಇಂತ ನಕಲಿ ದಂದೆಯ  ಅಡ್ಡ ಪರಿಣಾಮದಿಂದ ಎಷ್ಟೊ ಮಂದ ಜೀವ ಕಳೆದುಕೊಂಡ್ರು ಇನ್ನು ಕೂಡಾ ತೆರೆಮೆರೆಯಿಂದ ಹೊರ ಬಂದಿಲ್ಲ.

Published by:MAshok Kumar
First published: