Corona Effect: ಕೋವಿಡ್ ವರದಿ ಯಡವಟ್ಟು: ಯಾದಗಿರಿಯಲ್ಲಿ ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಶಾಕ್..!

ಅಂತ್ಯಸಂಸ್ಕಾರವೆಲ್ಲಾ ಮುಗಿದ ಬಳಿಕ ವೈದ್ಯರು ಹನುಮಂತ ಅವರ ಕೋವಿಡ್ ರಿಪೋರ್ಟ್ ನೆಗೆಟಿವ್ ಇದೆ ಎಂದು ತಿಳಿಸಿದ್ದಾರೆ. ಬೇರೊಬ್ಬರ ಪಾಸಿಟಿವ್ ರಿಪೋರ್ಟ್ ಅದಲು ಬದಲಾಗಿ ಗೊಂದಲ ಉಂಟಾಗಿದೆ ಎಂದಿದ್ದಾರೆ. ಇದರಿಂದ ಇಡೀ ಕುಟುಂಬಕ್ಕೆ ಶಾಕ್ ಆಗಿದೆ.

health officials made mistake in covid report in yadagiri

health officials made mistake in covid report in yadagiri

  • Share this:
ಯಾದಗಿರಿ (ಏ.21) : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಚೈನ್​ ಲಿಂಕ್​ ಕಟ್​ ಮಾಡುವ ಸಲುವಾಗಿ 14 ದಿನಗಳ ಕಾಲ ಕರ್ಫ್ಯೂ ಹೇರಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಕೊರೋನಾ ಸಂಕಷ್ಟವನ್ನು ನಿರ್ವಹಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಈ ಮಧ್ಯೆ ಆರೋಗ್ಯ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ ಕುಟುಂಬವೊಂದು ಸಂಕಟಕ್ಕೀಡಾಗಿದೆ. ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯ ಕೋವಿಡ್​ ರಿಪೋರ್ಟ್​ ಪಾಸಿಟಿವ್​ ಎಂದೇಳಿ ಕೋವಿಡ್​ ನಿಯಮಾನುಸಾರ ಅಂತ್ಯಕ್ರಿಯೆ ಮಾಡಿಸಿದ್ದಾರೆ. ಅಂತ್ಯಸಂಸ್ಕಾರದ ಬಳಿಕ ಮೃತ ವ್ಯಕ್ತಿಯ ಕೋವಿಡ್​ ರಿಪೋರ್ಟ್​ ನೆಗೆಟಿವ್​ ಇದೆ ಎಂದು ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಈ ಯಡವಟ್ಟು ಸಾವಿನ ನೋವಿನಲ್ಲಿದ್ದ ಕುಟುಂಬವನ್ನು ಹೈರಾಣಾಗಿಸಿದೆ.

ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ ಹಣಮಂತ ಎಂಬುವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಏ.18ರಂದು ಚಿಕಿತ್ಸೆಗಾಗಿ ಶಹಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಹಣಮಂತ ಅವರ ಸ್ಬ್ಯಾಬ್​ ಪಡೆದು ಕೋವಿಡ್​ ಪರೀಕ್ಷೆಗೆ ಕಳುಹಿಸಲಾಗಿತ್ತು. ಕೋವಿಡ್​ ರಿಪೋರ್ಟ್​​ ಸಹ ನೆಗೆಟಿವ್​ ಬಂದಿತ್ತು. ಕೊರೋನಾ ಸೋಂಕಿಲ್ಲ ಎಂದು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದರು. ಆದರೆ ವಿಧಿಯಾಟ ಹಣಮಂತ ಮರುದಿನ (ಏ.19) ಚಿಕಿತ್ಸೆ ಫಲಿಸದೇ ಹನುಮಂತ ಮೃತಪಟ್ಟಿದ್ದರು.

ಹಣಮಂತ ಅವರ ಮೃತದೇಹವನ್ನು ಊರಿಗೆ ಕೊಂಡೊಯ್ದು ಕುಟುಂಬ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಈ ವೇಳೆ ಸಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಆಗಮಿಸಿ ಹಣಮಂತ ಅವರ ಕೋವಿಡ್ ರಿಪೋರ್ಟ್ ಪಾಸಿಟಿವ್  ಬಂದಿದೆ. ಕೋವಿಡ್​ ನಿಯಮಾನುಸಾರವೇ ಅಂತ್ಯಸಂಸ್ಕಾರ ಮಾಡಬೇಕು ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆಘಾತಕ್ಕೊಳಗಾದ ಕುಟುಂಬಸ್ಥರು ಕೊರೋನಾಗೆ ಹಿಡಿಶಾಪ ಹಾಕಿದ್ದರು. ಕೊರೋನಾದಿಂದ ಸಾವನ್ನಪ್ಪಿದ್ದಾರೆಂದು ಗೊತ್ತಾದ ಬಳಿಕ ಸಂಬಂಧಿಕರು, ಸ್ನೇಹಿತರು ಅಂತಿಮ ದರ್ಶನಕ್ಕೆ ಬರಲಿಲ್ಲ.

ಮೃತದೇಹವನ್ನು ಊರಿಗೆ ತಂದಿದ್ದ ಕುಟುಂಬಸ್ಥರಲ್ಲೂ ಕೊರೋನಾ ಆತಂಕ ಮನೆ ಮಾಡಿತ್ತು. ಕೊನೆಗೆ ಕೋವಿಡ್​ ನಿಯಮಾನುಸಾರವೇ ಕೆಲವೇ ಕೆಲವರು ಅಂತ್ಯಕ್ರಿಯ ಪ್ರಕ್ರಿಯೆಗಳನ್ನು ಮುಗಿಸಿದ್ದರು. ಅಂತ್ಯಸಂಸ್ಕಾರವೆಲ್ಲಾ ಮುಗಿದ ಬಳಿಕ ವೈದ್ಯರು ಹಣಮಂತ ಅವರ ಕೋವಿಡ್​ ರಿಪೋರ್ಟ್​ ನೆಗೆಟಿವ್​ ಇದೆ ಎಂದು ತಿಳಿಸಿದ್ದಾರೆ. ಬೇರೊಬ್ಬರ ಪಾಸಿಟಿವ್​ ರಿಪೋರ್ಟ್​ ಅದಲು ಬದಲಾಗಿ ಗೊಂದಲ ಉಂಟಾಗಿದೆ ಎಂದಿದ್ದಾರೆ. ಇದರಿಂದ ಇಡೀ ಕುಟುಂಬಕ್ಕೆ ಶಾಕ್​ ಆಗಿದೆ.

ಕೋವಿಡ್​ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಿದ್ದರಿಂದ ಸಂಬಂಧಿಕರು, ಸ್ನೇಹಿತರು ಅಂತಿಮ ದರ್ಶನ ಪಡೆಯಲು ಬಂದಿರಲಿಲ್ಲ. ಅಂತ್ಯಕ್ರಿಯೆ ಬಳಿಕ ಮೃತನಲ್ಲಿ ಕೊರೋನಾ ಸೋಂಕಿರಲಿಲ್ಲ ಎನ್ನುತ್ತಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಯ ಯಡವಟ್ಟಿನ ವಿರುದ್ಧ ಕುಟುಂಬಸ್ಥರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿದ ಶಹಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ್ ಗುತ್ತೆದಾರ, ಡಾಟಾ ಆಪರೇಟರ್ ತಪ್ಪಿನಿಂದ ನೆಗೆಟಿವ್ ವರದಿ ಇದ್ದರೂ ಪಾಸಿಟಿವ್ ಎಂದು ಹೇಳಲಾಗಿದೆ. ರಸ್ತಾಪುರ ಗ್ರಾಮದ ಮೃತ ಹಣಮಂತನ ಕೋವಿಡ್ ವರದಿ ನೆಗೆಟಿವ್ ಇದೆ. ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಕೋವಿಡ್ ನಿಯಮವನ್ನು ಪಾಲನೆ ಮಾಡಬೇಕು ಎಂದರು.
Published by:Kavya V
First published: