HOME » NEWS » District » HEALTH MINISTER DR SUDHAKAR TAKES MEASURES TO BRING DISCIPLINE IN HIS DEPT SNVS

ಅಧಿಕಾರಿಗಳಿಗೆ ನಿತ್ಯ ಡೈರಿ ಬರೆದಿಡಲು ಸೂಚಿಸಿದ ಆರೋಗ್ಯ ಸಚಿವ ಡಾ. ಸುಧಾಕರ್

ಆರೋಗ್ಯ ಇಲಾಖೆಯ ಅಧಿಕಾರಿಗಳು ತಾವು ಮಾಡಿದ ಕೆಲಸ ಕಾರ್ಯಗಳ ವಿವರವನ್ನು ಡೈರಿಯಲ್ಲಿ ಬರೆದಿಡಬೇಕು. ಅದರ ಆಧಾರದ ಮೇಲೆ ಅವರ ವೇತನ ಭತ್ಯೆ ಇತ್ಯಾದಿ ಸಿಗಲಿದೆ. ಆರೋಗ್ಯ ಸಚಿವರು ಇಂಥದ್ದೊಂದು ಕ್ರಮಕ್ಕೆ ಫರ್ಮಾನು ಹೊರಡಿಸಿದ್ದಾರೆ.

news18-kannada
Updated:March 31, 2021, 9:01 AM IST
ಅಧಿಕಾರಿಗಳಿಗೆ ನಿತ್ಯ ಡೈರಿ ಬರೆದಿಡಲು ಸೂಚಿಸಿದ ಆರೋಗ್ಯ ಸಚಿವ ಡಾ. ಸುಧಾಕರ್
ಸಚಿವ ಕೆ. ಸುಧಾಕರ್.
  • Share this:
ಉಡುಪಿ: ಆರೋಗ್ಯ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸಚಿವ ಡಾ. ಕೆ ಸುಧಾಕರ್ ಕೆಲ ಕ್ರಮಗಳನ್ನ ಕೈಗೊಂಡಿದ್ದಾರೆ. ಅದರಲ್ಲಿ ಇನ್ಸ್​ಪೆಕ್ಷನ್ ಡೇ ಮತ್ತು ಡೈರಿ ಬರೆಯುವ ಕ್ರಮವೂ ಸೇರಿದೆ. ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಜಿಲ್ಲಾ ಆರೋಗ್ಯ ಅಧಿಕಾರಿ (DHO) ಸೇರಿ ಎಲ್ಲಾ ಅಧಿಕಾರಿಗಳೂ ಡೈರಿ ಬರೆಯಬೇಕು ಎಂದು ಸಚಿವರು ನಿರ್ದೇಶಿಸಿದ್ದಾರೆ. ಹಾಗೆಯೇ, ಪ್ರತೀ ಬುಧವಾರದಂದು ಇನ್ಸ್​ಪೆಕ್ಷನ್ ಡೇ (Inspection Day) ಎಂದು ಅವರು ಘೋಷಣೆ ಮಾಡಿದ್ದಾರೆ.

ಎಲ್ಲಾ ಅಧಿಕಾರಿಗಳು ದಿನನಿತ್ಯವೂ ಡೈರಿ ಬರೆಯಬೇಕು. ತಮ್ಮ ವೃತ್ತಿಸಂಬಂಧಿತ ಕಾರ್ಯಗಳ ಮಾಹಿತಿಯನ್ನು ಅದರಲ್ಲಿ ನಮೂದಿಸಬೇಕು. ಏನೇನು ಕೆಲಸ ಮಾಡಲಾಗಿದೆ ಎಂಬುದನ್ನು ನಿತ್ಯವೂ ಡೈರಿಯಲ್ಲಿ ಬರೆದಿಡಬೇಕು. ಈ ಡೈರಿಯ ಮೇಲೆ ವೇತನ ಭತ್ಯೆ, ಪ್ರೊಮೋಶನ್ ಸೇರಿ ಅಂಕಗಳನ್ನ ನೀಡಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲ ಸುಧಾರಣೆ ತರುವ ಪ್ರಯತ್ನದ ಭಾಗವಾಗಿ ಇದು ಇದ್ದು, ಖಾಸಗಿ ವ್ಯವಸ್ಥೆಯಿಂದ ಉತ್ತಮವಾಗಿ ಕೆಲಸ ಮಾಡಬೇಕು ಎಂಬುದು ಕಾಯಕಲ್ಪ ಎಂದು ವೈದ್ಯಕೀಯ ಶಿಕ್ಷಣ ಸಚಿವರೂ ಆದ ಡಾ. ಸುಧಾಕರ್ ಹೇಳಿದ್ದಾರೆ.

ಇನ್ನು, ಪ್ರತೀ ಬುಧವಾರದಂದು ಇನ್ಸ್​ಪೆಕ್ಷನ್ ಡೇ ಇರಲಿದೆ. ಇಲ್ಲಿ ಮಂತ್ರಿಗಳಿಂದ ವೈದ್ಯರವರೆಗೂ ಅವರವರ ಕಾರ್ಯ ವ್ಯಾಪ್ತಿಯ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇಲಾಖೆಯ ಕಾರ್ಯಕ್ಷಮತೆಯನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸಚಿವರು ತಿಳಿಸಿದ್ದಾರೆ.

ಇನ್ನು ಕೊರೋನಾ ಪ್ರಕರಣಗಳ ಏರುಗತಿ ಬಗ್ಗೆ ಮಾತನಾಡಿದ ಡಾ. ಸುಧಾಕರ್, ಮುಂದಿನ 60-90 ದಿನಗಳು ಸವಾಲಿನದ್ದಾಗಿವೆ. ಪಾಸಿಟಿವ್ ರೇಟ್ ಕಡಿಮೆ ಇಟ್ಟುಕೊಳ್ಳಲೇಬೇಕು. ಒಬ್ಬ ಪಾಸಿಟಿವ್ ವ್ಯಕ್ತಿಯ 20-30 ಮಂದಿ ಪ್ರಾಥಮಿಕ ಮತ್ತು ದ್ವತೀಯ ಸಂಪರ್ಕಿತರನ್ನು ಹುಡುಕಬೇಕೆನ್ನುವ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಜನರ ಸಮಸ್ಯೆ ಬಗ್ಗೆ ಚಿಂತಿಸದ ಸರ್ಕಾರದ ಬಗ್ಗೆ ಮತದಾರರು ಬೇಸತ್ತಿದ್ದಾರೆ: ಡಿ.ಕೆ. ಶಿವಕುಮಾರ್ ಕಿಡಿ

ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಲಸಿಕೆ ನೀಡಲಾಗುವುದು. ಮನೆಯಲ್ಲಿರುವ ಹಿರಿಯರಿಗೆ ಲಸಿಕೆ ಕೊಡಿಸಿ. ಲಸಿಕೆ ನೀಡಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚು ಕಾರ್ಯಕ್ರಮ ಜಾರಿಗೆ ತರಲಾಗುತ್ತದೆ ಎಂದವರು ಮಾಹಿತಿ ನೀಡಿದ್ಧಾರೆ.

ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ವೈದ್ಯರ ನೇರ ನೇಮಕಾತಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.ವರದಿ: ಪರೀಕ್ಷಿತ್ ಶೇಟ್
Published by: Vijayasarthy SN
First published: March 31, 2021, 9:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories