ಜೀವ ಪಣಕ್ಕಿಟ್ಟು ಸೇವೆ; ಮಂಗಳೂರಿನ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಸಚಿವರಿಂದ ಶ್ಲಾಘನೆ

ನಕ್ಸಲ್ ಪೀಡಿತ ಗ್ರಾಮವಾದ ಸುಲ್ಕೇರಿ ಗ್ರಾಮದ ಕೊರಗ ಕಾಲೊನಿಗೆ ಆಶಾ ಕಾರ್ಯಕರ್ತೆಯರು ತೆರಳುವುದೇ ಮಹಾ ಸವಾಲಾಗಿದೆ. ಮಳೆಯ ನಡುವೆ ರಭಸದಿಂದ ಹರಿಯುವ ಹೊಳೆಯನ್ನು ದಾಟಿ ಪ್ರತಿದಿನ ಆ ಭಾಗಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ.

news18-kannada
Updated:July 8, 2020, 7:07 AM IST
ಜೀವ ಪಣಕ್ಕಿಟ್ಟು ಸೇವೆ; ಮಂಗಳೂರಿನ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಸಚಿವರಿಂದ ಶ್ಲಾಘನೆ
ಸುಲ್ಕೇರಿ ಗ್ರಾಮದ ಸೇತುವೆ
  • Share this:
ಮಂಗಳೂರು: ಕೊರೋನಾದ ಮಹಾಸಂಕಷ್ಟದ ಕಾಲದಲ್ಲಿ ಆಶಾ ಕಾರ್ಯಕರ್ತೆಯರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ತಮ್ಮ ಸೇವೆ ನೀಡಿದ್ದಾರೆ. ಈ ಕೊರೋನಾ ವಾರಿಯರ್​ಗಳ ಸೇವೆಗೆ ರಾಜ್ಯ ಆರೋಗ್ಯ ಸಚಿವರೇ ಶ್ಲಾಘನೆ ಮಾಡಿದ್ದಾರೆ. 

ಕೊರೋನಾ ಮಹಾಮಾರಿಯ ಈ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ಆದರೆ, ಕೊರೊನಾ ವಾರಿಯರ್ಸ್‌ಗಳು ಜನರ ಆರೋಗ್ಯಕ್ಕಾಗಿ ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡ್ತಿದ್ದಾರೆ. ಅದರಲ್ಲೂ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಎಲ್ಲರಿಗಿಂತ ಹೆಚ್ಚಿನ ಸೇವೆಯನ್ನೇ ನೀಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಕ್ಸಲ್ ಪೀಡಿತ ಸುಲ್ಕೇರಿ ಗ್ರಾಮದಲ್ಲಿಯೂ ಆಶಾ ಕಾರ್ಯಕರ್ತೆ, ಆರೋಗ್ಯ ಸಹಾಯಕಿ ಮಾದರಿ ಸೇವೆಯೊಂದನ್ನು ನೀಡಿದ್ದಾರೆ. ಜೀವ ಕೈಯಲ್ಲಿ ಹಿಡಿದು ರಭಸದಿಂದ ಹರಿಯುವ ಹೊಳೆಯನ್ನು ದಾಟಿ ಕುಗ್ರಾಮದ ಜನರಿಗೆ ಆರೋಗ್ಯ ಸೇವೆ ನೀಡಿದ್ದಾರೆ.

ಜಿಲ್ಲೆಯ ಹಲವು ಕುಗ್ರಾಮಗಳಿಗೆ ಪ್ರತಿನಿತ್ಯ ನೂರಾರು ಅಡೆತಡೆಗಳನ್ನು ಎದುರಿಸಿ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಸೇವೆ ನೀಡುತ್ತಿದ್ದಾರೆ. ಅದರಲ್ಲೂ ನಕ್ಸಲ್ ಪೀಡಿತ ಗ್ರಾಮವಾದ ಸುಲ್ಕೇರಿ ಗ್ರಾಮದ ಕೊರಗ ಕಾಲೊನಿಗೆ ಆಶಾ ಕಾರ್ಯಕರ್ತೆಯರು ತೆರಳುವುದೇ ಮಹಾ ಸವಾಲಾಗಿದೆ. ಕೊರಗ ಕಾಲೋನಿಯಲ್ಲಿ 40 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ.‌ ಕೆಲ ಕುಟುಂಬಗಳಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣಗಳೂ ಕಾಣಿಸಿಕೊಂಡಿದೆ. ಮಳೆಯ ನಡುವೆ ರಭಸದಿಂದ ಹರಿಯುವ ಹೊಳೆಯನ್ನು ದಾಟಿ ಚಿಕಿತ್ಸೆಗೆ ಹೋಗೋದು ಅಸಾಧ್ಯವಾಗಿರೋದ್ರಿಂದ ಆಶಾ ಕಾರ್ಯಕರ್ತೆಯರು ಪ್ರತಿದಿನ ಆ ಭಾಗಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಶಾಸಕರ ಕೋವಿಡ್‌ ಪರೀಕ್ಷೆಯೇ ಹೀಗಾದರೆ ಸಾಮಾನ್ಯ ಜನರ ಕಥೆ ಏನು?; ಸರ್ಕಾರಕ್ಕೆ ಶಾಸಕ ರಘು ಆಚಾರ್‌ ಪ್ರಶ್ನೆ


ಇದನ್ನೂ ಓದಿ: ಗದಗ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ರೋಗಿ ನರಳಾಟ; ವಿಡಿಯೋ ವೈರಲ್ – ಆಸ್ಪತ್ರೆ ನಿರ್ದೇಶಕರು ಏನಂತಾರೆ?

ನಕ್ಸಲ್ ಪೀಡಿತ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಈ ನಿಸ್ವಾರ್ಥ ಸೇವೆಗೆ ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಅವರೇ ಮೆಚ್ಚುಗೆ ಸೂಚಿಸಿ ಗೌರವ ಸಲ್ಲಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು ಕಾರ್ಯಕರ್ತೆಯರ ಸೇವೆ ನಿಜಕ್ಕೂ ಶ್ಲಾಘನೀಯ. ಜೀವ ಪಣಕ್ಕಿಟ್ಟು ಆಶಾ ಕಾರ್ಯಕರ್ತೆಯರು ಸೇವೆ ಮಾಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಜನರಿಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈಗಾಗಲೇ ಈ ಕೊರೊನಾ ವಾರಿಯರ್​ಗಳ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ನಮ್ಮ ಕಡೆಯಿಂದಲೂ ಅವರಿಗೊಂದು ಹ್ಯಾಟ್ಸಫ್ ಹೇಳಲೇಬೇಕು.
Published by: Vijayasarthy SN
First published: July 8, 2020, 7:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading