ಯಡಿಯೂರಪ್ಪ ಏನು ಶಾಶ್ವತವಾಗಿ ಇರ್ತಾನಾ, ದೇವರು ಶಿಕ್ಷೆ ಕೊಡ್ತಾನೆ: ಏಕವಚನದಲ್ಲಿ HD ರೇವಣ್ಣ ವಾಗ್ದಾಳಿ!

ನನ್ನ 21 ವರ್ಷದ ರಾಜಕಾರಣದಲ್ಲಿ ಸುಳ್ಳು ಹೇಳುವ, ದ್ವೇಷದ ರಾಜಕಾರಣ ಮಾಡುವ ನಂ.1 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ರೇವಣ್ಣ ವಾಗ್ದಾಳಿ ನಡೆಸಿದರು.

ರೇವಣ್ಣ, ಸಿಎಂ ಬಿಎಸ್​ವೈ

ರೇವಣ್ಣ, ಸಿಎಂ ಬಿಎಸ್​ವೈ

  • Share this:
ಹಾಸನ : ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಿಚಾರವಾಗಿ ಸಿಎಂ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಸಂಪೂರ್ಣ ‌ನಿಂತಿದೆ. ದ್ವೇಷದ ರಾಜಕಾರಣ ‌ಎಷ್ಟು ದಿನ ಮಾಡುತ್ತೀರಿ ಮಾಡಿ, ನಾವೇನು ಹೆದರಿ ಓಡುವುದಿಲ್ಲ. ಯಡಿಯೂರಪ್ಪ ಶಾಶ್ವತವಾಗಿ ಇರ್ತಾನಾ? ದೇವರೇ ಶಿಕ್ಷೆ ಕೊಡುವ ಕಾಲ‌ ಬರುತ್ತೆ. ನಾನು ಬದುಕಿರುತ್ತೀನಿ, ನೋಡುತ್ತಿನಿ ಎಂದು ಆವೇಶಭರಿತವಾಗಿ ಮಾತನಾಡಿದರು.

ಯಡಿಯೂರಪ್ಪ ಒಬ್ಬ ಡಿನೋಟಿಫಿಕೇಷನ್ ಮುಖ್ಯಮಂತ್ರಿ. ಹಾಸನದಲ್ಲಿ ಭೂಸ್ವಾಧೀನವಾಗಿದ್ದ ಜಮೀನನ್ನು ಭೂ ಮಾಲೀಕರ ಜೊತೆ ಶಾಮೀಲಾಗಿ ವಾಪಾಸ್ ಕೊಟ್ಟರು. ನನ್ನ 21 ವರ್ಷದ ರಾಜಕಾರಣದಲ್ಲಿ ಸುಳ್ಳು ಹೇಳುವ, ದ್ವೇಷದ ರಾಜಕಾರಣ ಮಾಡುವ ನಂ.1 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ಆರೋಪಿಸಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ 130, ಕಾಂಗ್ರೆಸ್ 150 ಗೆಲ್ಲುತ್ತೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಒಟ್ಟು 280 ಸೀಟ್ ಆಗುತ್ತೆ, ಹಾಗಾದರೆ ಬಾಕಿಯವರು ಯಾರು ಇಲ್ಲವೇ ಇಲ್ವಾ? 2023ರಲ್ಲಿ ಬಿಜೆಪಿ ಎಷ್ಟು ಸ್ಥಾನ ಪಡೆಯುತ್ತೆ ನಾನು ನೋಡ್ತಿನಿ ಎಂದು ಸವಾಲೆಸೆದರು.

ಇದನ್ನೂ ಮುನ್ನ ಮಾತನಾಡಿದ ರೇವಣ್ಣ, ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ಮೂಲಭೂತ ಅಭಿವೃದ್ಧಿ ಇಲಾಖೆಯಿಂದ ಮಾಡಲು ಇಂಜಿನಿಯರ್ ಗಳಿಲ್ಲ. ಪಿಡಬ್ಲ್ಯೂಡಿ ಇಲಾಖೆಯಿಂದ ಮಾಡುವುದಾದರೆ ಮಾಡಿ. ಇಲ್ಲವಾದರೆ ದೇವರು ಶಕ್ತಿ ಕೊಟ್ಟಾಗ ಮಾಡುತ್ತೇವೆ. ವಿಮಾನ ನಿಲ್ದಾಣಕ್ಕೆ 761 ಎಕರೆ ಭೂಮಿ ಅವಶ್ಯಕವಿದೆ. 536 ಎಕರೆ ಭೂ ಸ್ವಾಧೀನ ಮಾಡಲಾಗಿದೆ.

ಶಿವಮೊಗ್ಗ, ಬಿಜಾಪುರ, ಕಲಬುರಗಿಯ ಏರ್ ಪೋರ್ಟ್ ನ ಪಿಡಬ್ಲ್ಯೂಡಿಗೆ ಕೊಡಬಹುದು. ಆದರೆ ಹಾಸನದ ಏರ್ ಫೋರ್ಟ್ ನ ಯಾಕೆ ಪಿಡಬ್ಲ್ಯೂಡಿಗೆ ಕೊಡಬಾರದು. ಶಿವಮೊಗ್ಗ ಮಾದರಿಯಲ್ಲಿ ಕಾಮಗಾರಿ ಮಾಡುವುದಾದರೆ ಮಾಡಲಿ ಇಲ್ಲಾ ಕಾಮಗಾರಿ ತಡೆ ಹಿಡಿಯುತ್ತೇವೆ. ಇದರಲ್ಲಿ ರಾಜಕೀಯ ಬೆರಸುವುದು ಬೇಡ, ನಾಟಕವಾಡುವುದು ಬೇಡ. ನಾಮಕವಸ್ತೆಗೆ ಮಾಡಿ ವಿಮಾನ ‌ನಿಲ್ದಾಣ ಮಾಡಿದ್ದೆವು ಎನ್ನುವುದು ಬೇಡ. ಮಾಯ-ಮಾರ್ಯದೆ ಇದ್ದರೆ, ಗೌರವ ಇದ್ದರೆ ಪಿಡಬ್ಲ್ಯೂಡಿಗೆ ಮೂಲಕ‌ ಮಾಡಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಶ್ರೀರಾಮುಲು ಪಿಎ ಬಗ್ಗೆ, ವಿಜಯೇಂದ್ರ ಬಗ್ಗೆ ಮಾತಾಡೋದು ನನ್ನ ಲೆವೆಲ್ ಅಲ್ಲ: ಡಿಕೆ ಶಿವಕುಮಾರ್

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: