• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ಇನ್ನು ಮುಂದೆ ಏಜೆಂಟರು ಕಂಡುಬಂದರೆ ಜನರಿಂದಲೇ ಹೊಡೆಸುತ್ತೇನೆ; ಎಚ್.ಡಿ.ರೇವಣ್ಣ

ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ಇನ್ನು ಮುಂದೆ ಏಜೆಂಟರು ಕಂಡುಬಂದರೆ ಜನರಿಂದಲೇ ಹೊಡೆಸುತ್ತೇನೆ; ಎಚ್.ಡಿ.ರೇವಣ್ಣ

ಹೆಚ್.ಡಿ. ರೇವಣ್ಣ

ಹೆಚ್.ಡಿ. ರೇವಣ್ಣ

ಸೀನಿಯಾರಿಟಿ ಬಿಟ್ಟು ಕೆಲಸ ಮಾಡಲು ನಿಮಗೆ ಯಾರು ಹೇಳಿದ್ದು? ಯಾರಾದರೂ ಮನೆಯಲ್ಲಿ ಮದುವೆ ಶುಭ ಕಾರ್ಯಗಳು ಇದ್ದರೇ ಅಂತಹವರಿಗೆ ಮಾಡಿಕೊಡಿ. ಅದು ಬಿಟ್ಟು ಈ ರೀತಿ ಬಡವರ ಮೇಲೆ ದಂಧೆ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದೆ ಇದನ್ನು ಸರಿಪಡಿಸಬೇಕು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಬಿಟ್ಟು ಬೇರೆ ಏಜೆಂಟ್ ಇರಬಾರದು ಎಂದು ಮತ್ತೊಮ್ಮೆ ಕಟ್ಟುನಿಟ್ಟಾಗಿ ಹೇಳಿದರು.

ಮುಂದೆ ಓದಿ ...
  • Share this:

ಹಾಸನ ; ಕೆಲ ದಿನಗಳ ಹಿಂದೆ ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಯಲಿಗೆಳೆದಿದ್ದರು. ಇದೀಗ ನಗರದ ಸಬ್ ರಿಜಿಸ್ಟರ್ ಕಚೇರಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದರು. ಅಲ್ಲದೇ ಭೂಮಿ ಮಾರಾಟ ಮಾಡಿದವರಿಂದ ದಾಖಲೆ ವರ್ಗಾವಣೆಗೆ ಸಾವಿರಾರು ರೂ. ಹಣವನ್ನು ಅಧಿಕಾರಿಗಳು ಪಡೆದು ವಸೂಲಿ ಮಾಡಿ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. 


ಹಾಸನದ ಸಬ್ ರಿಜಿಸ್ಟರ್ ಕಚೇರಿಗೆ ಯಾರಾದರೂ ಜಮೀನು ವಿಚಾರದಲ್ಲಿ ಹೋದರೇ ಹತ್ತು ಲಕ್ಷ ರಿಜಿಸ್ಟರ್​ಗೆ 10 ಸಾವಿರ, 20 ಲಕ್ಷಕ್ಕೆ 20 ಸಾವಿರ ಹಾಗೂ 30 ಲಕ್ಷಕ್ಕೆ 30 ಸಾವಿರ ರೂ. ನಿಗದಿ ಮಾಡಿಕೊಂಡಿರುವ ಇಲ್ಲಿನ ಅಧಿಕಾರಿಗಳ ಏಜೆಂಟ್ ಮೂಲಕ ಹಣ ಪಡೆಯುತ್ತಿರುವ ಬಗ್ಗೆ ರೇವಣ್ಣನವರು ಕೆಲವು ದಿನಗಳ ಹಿಂದೆ ಹೇಳಿದ್ದರು. ಇದೀಗ ಇಂದು ಬೆಳಿಗ್ಗೆ ಸಬ್ ರಿಜಿಸ್ಟರ್ ಕಚೇರಿಗೆ ಖುದ್ದಾಗಿ ತಾವೇ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಕಚೇರಿ ಒಳಗೆ ಬರುತಿದ್ದಂತೆ ಸಬ್ ರಿಜಿಸ್ಟರ್ ಹಿರಿಯ ಅಧಿಕಾರಿ ಮಧು ಮತ್ತು ಹೆಚ್ಚುವರಿ ಅಧಿಕಾರಿ ರಮೇಶ್ ಕಕ್ಕಾಬಿಕ್ಕರಾದರು. ಸಾರ್ವಜನಿಕರ ಎದುರು ಬಹಿರಂಗವಾಗಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿ, ಪ್ರಶ್ನೆ ಮಾಡಿದಾಗ ಅಧಿಕಾರಿಗಳು ಉತ್ತರ ನೀಡದೇ ಮೌನವಾಗಿದ್ದರು. ಇನ್ನು ಮುಂದೆ ನಾನು ಇಲ್ಲಿಗೆ ಬಂದಾಗ ಏಜೆಂಟ್​ಗಳು ನನ್ನ ಕಣ್ಣಿಗೆ ಏನಾದರೂ ಕಾಣಿಸಿದರೇ ಇಲ್ಲಿರುವ ಜನರಿಂದಲೇ ಓಡಾಡಿಸಿ ಹೊಡೆಯಲು ಹೇಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಒಂದೊಂದು ನಿವೇಶನಕ್ಕೂ ಬಡ ಜನರಿಂದ ಹಣ ಪಡೆಯುವ ನೀವು ಈ ಹಣವನ್ನು ಶಾಸಕರಿಗೆ ಕೊಡೊದಕ್ಕಾ? ನನ್ನ ವಿಧಾನಸಭಾ ಕ್ಷೇತ್ರದ ಎರಡು ಹೋಬಳಿ ಬರುತ್ತವೆ. ಅವರಿಗೆ ಯಾಕೆ ನೀವು ಕೆಲಸ ಮಾಡಿ ಕೊಡುತ್ತಿಲ್ಲ. ನನಗೆ ಯಾವತ್ತು ಹಣ ಕೊಟ್ಟಿಲ್ಲ. ಮತ್ತೆ ಯಾವ ಶಾಸಕರಿಗೆ ಹಣ ಕೊಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.


ಪ್ರತಿ ತಿಂಗಳು ನಾಲ್ಕು ಲಕ್ಷ ಕೊಡಬೇಕು ಅಂತಾ ಹಣ ವಸೂಲಿ ಮಾಡುತ್ತಿದ್ದೀರಾ. ಸರ್ಕಾರಕ್ಕೆ ಕೊಡಲು ವಸೂಲಿ ಮಾಡುತ್ತಿದ್ದೀರಾ? ಇಲ್ಲ ಬೇರೆ ಯಾರಿಗೆ ಕೊಡಲು ವಸೂಲಿ ಮಾಡುತ್ತಿದ್ದೀರಾ ಹೇಳಿ ಎಂದು ತರಾಟೆಗೆ ತೆಗೆದುಕೊಂಡ ಅವರು, ನಿಮ್ಮ ಡ್ರಾಯರ್ ಎಲ್ಲ ತೆಗೆಯಿರಿ ಎಷ್ಟೆಷ್ಟು ಹಣ ಇರಬಹುದು ನೋಡೋಣ ಎಂದು ಅಧಿಕಾರಿಗಳಿಗೆ ಕೇಳಿದಾಗ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ. ಇನ್ನು ರಿಜಿಸ್ಟರ್ ಆಗಿರುವ ಪಟ್ಟಿ ತೋರಿಸಿ, ದಿನಕ್ಕೆ ಎಷ್ಟು ರಿಜಿಸ್ಟರ್ ಮಾಡಲಾಗುತ್ತಿದೆ? ಸೀನಿಯಾರಿಟಿ ಮೇಲೆ ಮಾಡಲಾಗುತ್ತಿದಿಯಾ? ಇಲ್ಲ ಹಣ ಹೆಚ್ಚು ಕೊಟ್ಟವರದು ಮೊದಲು ಆಗುತ್ತಿದಿಯಾ ನೋಡುತ್ತೇನೆ ಎಂದು ಹೇಳಿದ ರೇವಣ್ಣ ಅವರು ದಾಖಲೆಗಳನ್ನು ನೋಡಿದರು. ಆಗ ಸೀನಿಯಾರಿಟಿಯಲ್ಲಿ ರಿಜಿಸ್ಟರ್ ಆಗದ ಬಗ್ಗೆ ಕಿಡಿಕಾರಿದರು.


ಇದನ್ನು ಓದಿ: ಹದಗೆಟ್ಟ ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75; ಕೊರಕಲು ರಸ್ತೆಯಲ್ಲಿ ಪ್ರಯಾಣಿಕರು ಹೈರಾಣು


ಸೀನಿಯಾರಿಟಿ ಬಿಟ್ಟು ಕೆಲಸ ಮಾಡಲು ನಿಮಗೆ ಯಾರು ಹೇಳಿದ್ದು? ಯಾರಾದರೂ ಮನೆಯಲ್ಲಿ ಮದುವೆ ಶುಭ ಕಾರ್ಯಗಳು ಇದ್ದರೇ ಅಂತಹವರಿಗೆ ಮಾಡಿಕೊಡಿ. ಅದು ಬಿಟ್ಟು ಈ ರೀತಿ ಬಡವರ ಮೇಲೆ ದಂಧೆ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದೆ ಇದನ್ನು ಸರಿಪಡಿಸಬೇಕು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಬಿಟ್ಟು ಬೇರೆ ಏಜೆಂಟ್ ಇರಬಾರದು ಎಂದು ಮತ್ತೊಮ್ಮೆ ಕಟ್ಟುನಿಟ್ಟಾಗಿ ಹೇಳಿದರು.

Published by:HR Ramesh
First published: