HOME » NEWS » District » HD REVANNA TALK AGAINST BJP GOVERNMENT RH

ಹಾಸನ ಜಿಲ್ಲೆಯ ಜನರು ದಂಗೆ ಎದ್ದರೆ ಈ ಬಿಜೆಪಿ ಸರ್ಕಾರ ಉಳಿಯಲ್ಲ: ಎಚ್.‌ಡಿ.ರೇವಣ್ಣ ಆಕ್ರೋಶ

ಮೊಸಳೆ ಹೊಸಳ್ಳಿ ಇಂಜಿನಿಯರಿಂಗ್ ಕಾಲೇಜು ಹಾಸನಕ್ಕೆ ಸ್ಥಳಾಂತರಿಸಲು ಸರ್ಕಾರ ಆದೇಶ ಮಾಡಿದೆ. ಕಾಲೇಜು ಮುಚ್ಚಲ್ಲಾ ಎಂದು, ವಿಧಾನಸಭೆಯಲ್ಲಿ ಸಿಎಂ ಉತ್ತರ ಕೊಟ್ಟಿದ್ದಾರೆ. ಅದರಂತೆ ನಡೆಯಬೇಕು. ಇಲ್ಲದಿದ್ದರೆ ಸಿಎಂ ಮನೆ ಮುಂದೆ ಧರಣಿ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು.

news18-kannada
Updated:June 26, 2020, 6:03 PM IST
ಹಾಸನ ಜಿಲ್ಲೆಯ ಜನರು ದಂಗೆ ಎದ್ದರೆ ಈ ಬಿಜೆಪಿ ಸರ್ಕಾರ ಉಳಿಯಲ್ಲ: ಎಚ್.‌ಡಿ.ರೇವಣ್ಣ ಆಕ್ರೋಶ
ಮಾಜಿ ಸಚಿವ ಹೆಚ್​ ಡಿ ರೇವಣ್ಣ ಹಾಗೂ ಸಿಎಂ ಯಡಿಯೂರಪ್ಪ
  • Share this:
ಹಾಸನ; ಕೊರೋನಾ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಇಂದು ಆರೋಪಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಬ್ಲಿಕ್ ಹೌಸಿಂಗ್ ಕಮಿಟಿ ಚೇರ್ಮನ್ ಭೇಟಿ ಮಾಡಲು ನಮಗೆ ಅವಕಾಶ ನೀಡುತ್ತಿಲ್ಲ. ಹಾಸನ ಜಿಲ್ಲೆಯ ಜನರು ದಂಗೆ ಎದ್ದರೆ ಈ ಬಿಜೆಪಿ ಸರ್ಕಾರ ಉಳಿಯಲ್ಲ. ಹಾಸನ ಜಿಲ್ಲೆಯ ಜನರ ಶಾಪ ಸರ್ಕಾರಕ್ಕೆ ಒಳ್ಳೆಯದಾಗಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಯಡಿಯೂರಪ್ಪ ಅವರ ಅಳಿಯ ಇಂಜಿನಿಯರ್ ರನ್ನು ಹುಬ್ಬಳಿಯಲ್ಲೇ ಮುಂದುವರೆಸಿದ್ದೆ. ಯಡಿಯೂರಪ್ಪರ ಅಳಿಯನಿಗೆ ಬಡ್ತಿಯನ್ನೂ ಕೊಡಿಸಿದ್ದೆ. ಈಗ ಸಿಎಂ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾನು ಯಡಿಯೂರಪ್ಪ ಮತ್ತು ಈಶ್ವರಪ್ಪ ಹೇಳಿದ ಎಲ್ಲಾ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಯಡಿಯೂರಪ್ಪ ಏನ್ ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರಾ. ಬಿಜೆಪಿ ಲೂಟಿಕೋರರ ಸರ್ಕಾರವಾಗಿದೆ‌ ಎಂದು ಆರೋಪ ಮಾಡಿದರು.

ಮೊಸಳೆ ಹೊಸಳ್ಳಿ ಇಂಜಿನಿಯರಿಂಗ್ ಕಾಲೇಜು ಹಾಸನಕ್ಕೆ ಸ್ಥಳಾಂತರಿಸಲು ಸರ್ಕಾರ ಆದೇಶ ಮಾಡಿದೆ. ಕಾಲೇಜು ಮುಚ್ಚಲ್ಲಾ ಎಂದು, ವಿಧಾನಸಭೆಯಲ್ಲಿ ಸಿಎಂ ಉತ್ತರ ಕೊಟ್ಟಿದ್ದಾರೆ. ಅದರಂತೆ ನಡೆಯಬೇಕು. ಇಲ್ಲದಿದ್ದರೆ ಸಿಎಂ ಮನೆ ಮುಂದೆ ಧರಣಿ ಕೂರುತ್ತೇವೆ. ಸಿಎಂ ವಿರುದ್ದ ಪ್ರಿವಿಲೈಜ್ ಕಮಿಟಿಗೆ ದೂರು ಸಲ್ಲಿಸುತ್ತೇನೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರ ವರ್ಗಾವಣೆಗೆ 50 ಲಕ್ಷ ಪಡೆದಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಈ‌ ಸರ್ಕಾರದಲ್ಲಿ ಸ್ಥಾನ ಇಲ್ಲಾ ಎಂದು ದೂರಿದರು.

ಇದನ್ನು ಓದಿ: Bangalore Lockdown: ಬೆಂಗಳೂರು ಶಾಸಕರ ಸಭೆ ಮುಕ್ತಾಯ: ಲಾಕ್​ಡೌನ್​ ಮತ್ತೆ ಮಾಡಲ್ಲ ಎಂದು ಸರ್ಕಾರ ಅಧಿಕೃತ ಸ್ಪಷ್ಟನೆ

ಅಷ್ಟೇ ಅಲ್ಲದೆ ಬಿಜೆಪಿಯವರು ಅಕೌಂಟ್ ಇಲ್ಲದಿರುವ ಹಣವನ್ನ ಹೂಡಿಕೆ ಮಾಡಲು ಕೈಗಾರಿಕೆಗೆ ಮುಕ್ತ ಅವಕಾಶ ನೀಡಿದ್ದಾರೆ‌ ಎಂದು ರೇವಣ್ಣ ಕಿಡಿಕಾರಿದ್ದಾರೆ
First published: June 26, 2020, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories