ನನ್ನ ಬಳಿ ಇರೋದು ಮುರುಕಲು ಫೋನು, ಅದಕ್ಕೆ ಯಾವ ಕಾಲೂ ಬರಲ್ಲ, ನನ್ನಂತೂ ಯಾರೂ ಭೇಟಿಯಾಗಿಲ್ಲ; ಎಚ್.ಡಿ.ರೇವಣ್ಣ

ಡಿ.ಕೆ.ಶಿವಕುಮಾರ್ ಸಿಎಂ, ನೀವು ಡಿಸಿಎಂ ಆಗೋ ಚಾನ್ಸ್ ಇದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಅಯ್ಯೋ ನಂಗ್ಯಾವ ಆಸೆ ಇಲ್ಲ ಕಣಪ್ಪ, ಬಿಜೆಪಿ ಶಾಸಕರ ಅಸಮಾಧಾನದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲಾ ಎಂದರು.

ಹೆಚ್.ಡಿ. ರೇವಣ್ಣ

ಹೆಚ್.ಡಿ. ರೇವಣ್ಣ

 • Share this:
  ಹಾಸನ: ಮಾಜಿ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ 25 ಮಂದಿ ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಾನು ಹಾಸನದಲ್ಲಿ ಇದ್ದೀನಿ ನನ್ನನ್ನು ಯಾರು ಭೇಟಿ ಮಾಡಿಲ್ಲ. ನನ್ನನ್ನು ಯಾರು ಇಲ್ಲಿಗೆ ಬಂದು ಭೇಟಿ ಮಾಡ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.

  ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ರೇವಣ್ಣ, ನನ್ನತ್ರ ಫೋನ್ ಇಲ್ಲಾ. ನನ್ನತ್ರ ಮುರುಕಲು ಫೋನ್ ಇದೆ ಅಷ್ಟೇ. ಆ ಮುರುಕಲು ಫೋನ್ ಗೆ ಫೋನ್ ಬರೊಲ್ಲಾ.  ನನ್ನಂತೂ ಯಾರೂ ಭೇಟಿ ಮಾಡಿಲ್ಲಾ. ನಮಗೆ ಯಾವ್ ಸಿಎಂ ಬೇಡ, ಡಿಸಿಎಂ ಬೇಡ. ನಾನು ಎಲ್ಲಾ ಮೈತ್ರಿ ನೋಡಿ ಆಗಿದೆ. ನಾಲ್ಕು ಸಚಿವ ಸ್ಥಾನ ನೋಡಿದ್ದೇನೆ. ನಮ್ ಪಕ್ಷನೇ ನಾವು ನೋಡಿಕೊಂಡರೆ ಸಾಕು. ನಮ್ ಪಕ್ಷ ಉಳಿಸಿಕೊಂಡರೆ ಸಾಕು ಎಂದು ಹೇಳಿದರು.

  ಇದನ್ನು ಓದಿ: ರಾಜ್ಯಸಭೆ ಚುನಾವಣೆ ಹೆಸರಲ್ಲಿ ಕತ್ತಿ ಸಹೋದರರ ರಾಜಕೀಯ ದಾಳ; ಸಿಎಂಗೆ ತಲೆನೋವಾದ ಬೆಳಗಾವಿ ಬೆಂಕಿ..!

  ಯಾವ್ ಶಾಸಕರೂ ನನ್ನನ್ನು ಕರೆದಿಲ್ಲಾ. ನಾನು ಇಲ್ಲೇ ಹೊಳೆನರಸೀಪುರದಲ್ಲಿ ಇದ್ದೀನಿ. ಅವರ ಅಸಮಾಧಾನ ಕಟ್ಕೊಂಡು ನನಗೇನು? ಈ ಶಾಸ್ತ್ರದವ್ರು ಎಲ್ಲಾ ಬುಟ್ಟೋಗವ್ರೆ, ಇವ್ರುತಾವ ಏನು ಸಿಗುತ್ತೆ ಅಂತ? ನನಗೆ ಯಾವ ಮಂತ್ರಿ ಆಸೆ ಇಲ್ಲಾ.  ಯಡಿಯೂರಪ್ಪ ಸಿಎಂ ಆಗಿದ್ದಾರೆ ಅವರೇ ಮುಂದುವರೆಯಲಿ. ಸದ್ಯಕ್ಕೆ ಜನ ನೋಡ್ಕೊಂಡ್ರೆ ಸಾಕು ಎಂದರು. ಹಾಗೆಯೇ ಡಿ.ಕೆ.ಶಿವಕುಮಾರ್ ಸಿಎಂ, ನೀವು ಡಿಸಿಎಂ ಆಗೋ ಚಾನ್ಸ್ ಇದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಅಯ್ಯೋ ನಂಗ್ಯಾವ ಆಸೆ ಇಲ್ಲ ಕಣಪ್ಪ, ಬಿಜೆಪಿ ಶಾಸಕರ ಅಸಮಾಧಾನದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲಾ ಎಂದರು.
  First published: