ದೇವೇಗೌಡರ ಕುಟುಂಬ ಒಡೆಯಲು ನನ್ನ ಮಗ ಪ್ರಜ್ವಲ್​​ನ ಎತ್ತಿಕಟ್ಟುತ್ತಿದ್ದಾರೆ : ಸುಮಲತಾ ವಿರುದ್ಧ ರೇವಣ್ಣ ಕಿಡಿ

ಹಾಸನ ಸಂಸದ, ನನ್ನ ಮಗ ಪ್ರಜ್ವಲ್ ರೇವಣ್ಣ ನನಗೆ ಫೋನ್ ಮಾಡಿದ್ದ. ನನ್ನ ಹೆಸರು ತರುತ್ತಿದ್ದಾರೆ, ನಮ್ಮ ಕುಟುಂಬವನ್ನು ಒಡೆಯುವ ತಂತ್ರ ಇದು ಎಂದು ಹೇಳಿದ. ಯಾರಿಂದಲೂ ದೇವೇಗೌಡರ ಕುಟುಂಬವನ್ನು ಒಡೆಯಲು ಆಗಲ್ಲ, ದೇವೇಗೌಡರು ಬದುಕಿರುವವರಿಗೂ ಅದು ಸಾಧ್ಯವಿಲ್ಲ.

ರೇವಣ್ಣ - ಸುಮಲತಾ

ರೇವಣ್ಣ - ಸುಮಲತಾ

  • Share this:
ಹಾಸನ : ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಹಾಗೂ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಜೆಡಿಎಸ್‌ ಪಕ್ಷ ಉಳಿಯೋದಾದ್ರೆ ಪ್ರಜ್ವಲ್ ರೇವಣ್ಣ ಅವರಿಂದ ಮಾತ್ರ ಎಂಬ ಸುಮಲತಾ ಹೇಳಿಕೆ ವಿರುದ್ಧ ಮಾಜಿ ಸಚಿವ ಎಚ್​.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗ ಪ್ರಜ್ವಲ್​ ರೇವಣ್ಣ ಹೆಸರು ಬಳಸುವ ಮೂಲಕ ಎತ್ತಿಕಟ್ಟುವುದು ಬೇಡ. ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಕುಟುಂಬ ಒಡೆಯುವ ಕೆಲಸವನ್ನು ಸುಮಲತಾ ಮಾಡಬೇಕಿಲ್ಲ ಎಂದು ತಿರುಗೇಟು ನೀಡಿದರು.

ಹಾಸನ ಸಂಸದ, ನನ್ನ ಮಗ ಪ್ರಜ್ವಲ್ ರೇವಣ್ಣ ನನಗೆ ಫೋನ್ ಮಾಡಿದ್ದ. ನನ್ನ ಹೆಸರು ತರುತ್ತಿದ್ದಾರೆ, ನಮ್ಮ ಕುಟುಂಬವನ್ನು ಒಡೆಯುವ ತಂತ್ರ ಇದು ಎಂದು ಹೇಳಿದ. ಯಾರಿಂದಲೂ ದೇವೇಗೌಡರ ಕುಟುಂಬವನ್ನು ಒಡೆಯಲು ಆಗಲ್ಲ, ದೇವೇಗೌಡರು ಬದುಕಿರುವವರಿಗೂ ಅದು ಸಾಧ್ಯವಿಲ್ಲ. ಅಂಬರೀಶ್ ಬಗ್ಗೆ ಅಪಾರವಾದ ಗೌರವವಿದೆ. ಎಚ್​.ಡಿ. ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡಲ್ಲ. ಬಡವರ ಬಗ್ಗೆ ಕರುಣೆ ಇರುವ ರಾಜಕಾರಣಿ ಎಂದರೆ ಕುಮಾರಸ್ವಾಮಿ. ದೇವೇಗೌಡರ ಕುಟುಂಬ ಯಾರಿಂದಲೂ ಸಂಸ್ಕೃತಿ ಕಲಿಯಬೇಕಿಲ್ಲ. ಪ್ರಜ್ವಲ್ ನ ಎತ್ತಿಕಟ್ಟಿ ಕುಟುಂಬವನ್ನು ಹೊಡೆಯಲು ಯಾರಿಂದಲೂ ಆಗಲ್ಲ ಎಂದು ರೇವಣ್ಣ ಅವರು ಸುಮಲತಾ ವಿರುದ್ಧ ಕಿಡಿಕಾರಿದರು.

ಜೆಡಿಎಸ್ ಪಕ್ಷ ಉಳಿಸಲು ಕಾರ್ಯಕರ್ತರಿದ್ದಾರೆ, ಒಂದು ಕುಟುಂಬದಿಂದ ಪಕ್ಷ ಉಳಿಯಲ್ಲ. ನಮ್ಮದೇನಾದರೂ ಕ್ರಷರ್ ಇದಿಯಾ, ಕಾಲೇಜುಗಳಿವೆಯಾ. ಕುಮಾರಸ್ವಾಮಿ ದುಡ್ಡು ಹೊಡೆಯುತ್ತಾನೆ ಎನ್ನುತ್ತಾರಲ್ಲ ಅದು ನ್ಯಾಯನಾ? ಅಂಬರೀಶ್ ನಮ್ಮ‌ ಕಣ್ಮುಂದೆ ಇಲ್ಲ, ಅವರ ಬಗ್ಗೆ ಸಣ್ಣದಾಗಿ ಮಾತ‌ನಾಡಿದರೆ ಭಗವಂತ ನಮಗೆ ಒಳ್ಳೆಯದು ಮಾಡಲ್ಲ. ಕುಮಾರಸ್ವಾಮಿ-ಅಂಬರೀಷ್ ಹೇಗಿದ್ದರು ಎಂದು ನಮಗೆ ಗೊತ್ತು. ಒಬ್ಬ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹೇಗೆ ನಡೆದುಕೊಂಡರು. ಹೆಲಿಕಾಪ್ಟರ್ ನಲ್ಲಿ ಅಂಬರೀಶ್ ಶವವನ್ನು ಮಂಡ್ಯಕೆ ತೆಗೆದುಕೊಂಡು ಹೋದರು, ಅದರಿಂದ ಪ್ರಚಾರ ತೆಗೆದುಕೊಳ್ಳಲಿಲ್ಲ. ಪ್ರಚಾರ ಇಲ್ಲದೆ ಕೆಲಸ ಮಾಡಿದ್ದು ಕುಮಾರಸ್ವಾಮಿ. ಪ್ರಚಾರ ತೆಗೆದುಕೊಳ್ಳದಿರುವುದೇ ಕುಮಾರಸ್ವಾಮಿ ದೌರ್ಬಲ್ಯ ಎಂದು ಸೋದರನ ನಡೆಯನ್ನು ರೇವಣ್ಣ ಸಮರ್ಥಿಸಿಕೊಂಡರು.

ಅಕ್ರಮ ಗಣಿಗಾರಿಕೆ ಮಾಡಿದ್ದರೆ ತನಿಖೆ ಮಾಡಿ ಕ್ರಮ ಕೈಗೊಂಡು, ಮುಟ್ಟುಗೋಲು ಹಾಕಿಕೊಳ್ಳಲಿ. ಕೋಮುವಾದಿಗಳ ಜೊತೆ ಕಾಂಗ್ರೆಸ್ ಮುಖಂಡರು ಇದ್ದಾರೆ. ಕಾಂಗ್ರೆಸ್ ಮುಖಂಡರು ಯಡಿಯೂರಪ್ಪ ಅವರ ಮನೆಯ ಕದ ತಟ್ಟಿ, ತನಿಖೆ ಮಾಡಬೇಡಿ ಎಂದಿದ್ದಾರೆ. ಎರಡು ವರ್ಷದಿಂದ ಸುಮ್ಮನೆ ಕುಳಿತಿದ್ದಿದ್ದರು. ಇನ್ನೂ ಮೂರು ವರ್ಷ ಸಮಯವಿದೆ, ಲೂಟಿ ಮಾಡಿದ್ದರೆ ಬಲಿ ಹಾಕಿ. ಯಡಿಯೂರಪ್ಪ ಸರ್ಕಾರದ ಅಧಿಕಾರಿಗಳೇ ಕೆ.ಆರ್.ಎಸ್. ಡ್ಯಾಂಗೆ ತೊಂದರೆಯಿಲ್ಲ ಎಂದಿದ್ದಾರೆ. ಯಡಿಯೂರಪ್ಪ ಅವರ ಬಳಿ ಕುಳಿತುಕೊಂಡು ಬಲಿ ಹಾಕಲಿ. ಸುಮಲತಾ ಸಂಸದರಾಗಲು ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸಹಾಯ ಮಾಡಿದ್ದಾರೆ. ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಮಟ್ಟ ಹಾಕಲಿ ಎಂದು ರೇವಣ್ಣ ಸವಾಲೆಸೆದರು.

ಇದನ್ನೂ ಓದಿ: HDK: ರೆಬೆಲ್ ಸ್ಟಾರ್ ಎದುರು ಕೈಕಟ್ಟಿ ನಿಂತ ಕುಮಾರಣ್ಣ, ಹುಲಿ ಮುಂದೆ ಇಲಿ ಎಂದ ಫ್ಯಾನ್ಸ್, ನಾ ಎಲ್ಲಾ ಕಡೆ ಹೀಗೇ ಎಂದ ಎಚ್ಡಿಕೆ !

ಈಗ ಮೈಸೂರು ಬೆಂಗಳೂರು ರಸ್ತೆ ಕಾಮಗಾರಿ ನಡೀತಿದೆ. ಅದಕ್ಕೆ ಯಾರ್ಯಾರು ಅಡ್ಡಿ ತಂದಿದ್ದಾರೆ ಎಂಬುದು ಸಮಯ ಬಂದಾಗ ಹೇಳುತ್ತೇನೆ. ಸಂಸದರ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಒಟ್ಟಾಗಿ ಮಾಡಿದರು. ಕುಮಾರಸ್ವಾಮಿ ದುಡ್ಡು ಹೊಡಿತಾರೆ ಅಂತಾರೆ, ಆ ರೀತಿ ಆರೋಪ ಮಾಡೋದು ಸರೀನಾ? ಅಧಿಕಾರದ ಆಸೆ ನಮ್ಮ‌ ಕುಟುಂಬಕ್ಕೆ ಇಲ್ಲ. ಅವರ ಟೀಕೆ ಟಿಪ್ಪಣಿ ಬಗ್ಗೆ ನವ್ಯಾಕೆ ಮಾತಾಡಲಿ, ಆ ಭಗವಂತ ಅವರಿಗೆ ಒಳ್ಳೆಯದು ಮಾಡಲಿ ಎಂದರು.

ಇನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಾರ್ಯವೈಖರಿಯನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಜೆಡಿಎಸ್ ಘಟಕದ ತಾಲ್ಲೂಕು ಅಧ್ಯಕ್ಷ ಪೈಲ್ವಾನ್ ಮುಕುಂದ ನೇತೃತ್ವದಲ್ಲಿ ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ಧಿಕ್ಕಾರ ಕೂಗಿದ ಜೆಡಿಎಸ್ ಕಾರ್ಯಕರ್ತರು ಬೆಂಬಲಿಗರು, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ದ ಮಾತನಾಡುವಾಗ ಎಚ್ಚರಿವಿರಲಿ ಎಂದರು.
Published by:Kavya V
First published: