Kolar: ರಮೇಶ್ ಕುಮಾರ್ ಕಾಂಗ್ರೆಸ್ ನ ಮಹಾನ್, ನಮಗೆ ಮಾತನಾಡಲು ಬರಲ್ಲ: HDK ಮಾತಿನೇಟು

ಕಳೆದ ಬಾರಿ ಅನಿಲ್ ಕುಮಾರ್ (Anil Kumar) ರನ್ನ ಸೋಲಿಸಿದವರೆ, ಈಗ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ರಮೇಶ್ ಕುಮಾರ್ (Ramesh Kumar) ಕಾಂಗ್ರೆಸ್ ನ ಮಹಾನ್ ನಾಯಕರು, ನಮಗೆ ಮಾತನಾಡಲು ಬರಲ್ಲ ನಾವೆಲ್ಲಾ ಶೂದ್ರರು ಎಂದು ಮಾತಿನ ಚಾಟಿ ಬೀಸಿದರು.

ಹೆಚ್.ಡಿ.ಕುಮಾರಸ್ವಾಮಿ

ಹೆಚ್.ಡಿ.ಕುಮಾರಸ್ವಾಮಿ

  • Share this:
ಕೋಲಾರ: ಇಂದು ಕೋಲಾರದ (Kolar) ಪತ್ರಕರ್ತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ,ಕುಮಾರಸ್ವಾಮಿ (Former CM HD Kumaraswamy), ತಮ್ಮದೇ ಪಕ್ಷದ ಶಾಸಕ ಶ್ರೀನಿವಾಸ್ ಗೌಡ (JDS MLA Srinivas Gowda) ವಿರುದ್ಧ ಅಸಮಾಧಾನ ಹೊರ ಹಾಕಿದರು. ಪಕ್ಷದ ನಾಯಕರ ಒಮ್ಮತದಿಂದ ಕಳೆದ ಬಾರಿ ಶ್ರೀನಿವಾಸಗೌಡ ರಿಗೆ ಟಿಕೆಟ್ ನೀಡಲಾಗಿತ್ತು. ವೈಯಕ್ತಿಕವಾಗಿ ಏನೇ ಟೀಕೆ ಮಾಡಲಿ ನನ್ನದೇನು ಅಭ್ಯಂತರವಿಲ್ಲ.  ಜೆಡಿಎಸ್ ನಿಂದ ದೂರವಿದ್ದು ಶಾಸಕ ಶ್ರೀನಿವಾಸಗೌಡ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಲಿ. ಕಾಂಗ್ರೆಸ್ ವಿಧಾನ ಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ರನ್ನ ಈಗಾಗಲೇ ಬೀದಿಗೆ ತಂದು ನಿಲ್ಲಿಸಿದ್ದಾರೆ.  ಕಳೆದ ಬಾರಿ ಅನಿಲ್ ಕುಮಾರ್ (Anil Kumar) ರನ್ನ ಸೋಲಿಸಿದವರೆ, ಈಗ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ರಮೇಶ್ ಕುಮಾರ್ (Ramesh Kumar) ಕಾಂಗ್ರೆಸ್ ನ ಮಹಾನ್ ನಾಯಕರು, ನಮಗೆ ಮಾತನಾಡಲು ಬರಲ್ಲ ನಾವೆಲ್ಲಾ ಶೂದ್ರರು ಎಂದು ಮಾತಿನ ಚಾಟಿ ಬೀಸಿದರು.

ಕೋಲಾರದಲ್ಲಿ ಬಿಜೆಪಿ ಶಕ್ತಿಯೇ ಇಲ್ಲ, ಆದರೂ ಚುನಾವಣೆಗೆ ನಿಲ್ಲಿಸಿದ್ದಾರೆ.  ಬಿಜೆಪಿ ಅಭ್ಯರ್ಥಿ ಹಾಕಲು ಕಾಂಗ್ರೆಸ್ ನ ಓರ್ವ ಮುಖಂಡನ ಪಾತ್ರವಿದೆ ಎಂದು ಸ್ಪೋಟಕ ಹೇಳಿಕೆ ನೀಡಿದರು. ಬೆಳೆನಾಶದ ಬಗ್ಗೆ ಸರ್ಕಾರ ನಿಖರ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ ಕುಮಾರಸ್ವಾಮಿ ಅವರು,  ಬೆಳೆಹಾನಿಗೆ ಸರ್ಕಾರ ನೀಡುವ ಪರಿಹಾರ ಸಾಕಾಗಲ್ಲ. ಹಾಗಾಗಿ ಹೆಚ್ಚಿನ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಎತ್ತಿನಹೊಳೆ ಯೋಜನೆ ದುಡ್ಡು ಹೊಡೆಯುವ ಕಾರ್ಯಕ್ರಮ

ನಾನು ಯಾರದ್ದೋ ಹಂಗಲ್ಲಿ 14 ತಿಂಗಳು ಸರ್ಕಾರ ನಡೆಸಿದ್ದೆ.  ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಪೂರ್ಣ ಸ್ವಾತಂತ್ರ್ಯ ಇರಲಿಲ್ಲ. ಕೋಲಾರದಲ್ಲಿ ಕೆಸಿ ವ್ಯಾಲಿ  ಯೋಜನೆ ವಿಸ್ತರಣೆಗೆ ನಾನು ಅಡ್ಡಿ ಮಾಡಿಲ್ಲ.  ಕೋಲಾರದ ತರಕಾರಿಗೆ ಇಂದು ಬೇಡಿಕೆಯಿಲ್ಲ ಎತ್ತಿನಹೊಳೆ ಯೋಜನೆ ದುಡ್ಡು ಹೊಡೆಯುವ ಕಾರ್ಯಕ್ರಮ ಎಂದು ಆರೋಪಿಸಿದರು.

ಇದನ್ನೂ ಓದಿ:  Karnataka Politics: ಆಪರೇಷನ್ ಕಮಲಕ್ಕೆ ಡಿಕೆಶಿ ರಿವರ್ಸ್ ಆಪರೇಷನ್

ಬಿಜೆಪಿ ಗೆಲ್ಲಲು ಕಾಂಗ್ರೆಸ್ ಕಾರಣ

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಕಾರಣ. ಜೆಡಿಎಸ್ ಪಕ್ಷವನ್ನ ಬಿಜೆಪಿ ಬಿ ಟೀಮ್ ಅಂತಾರೆ. ಈಗ ಕೊಡಗು ಹಾಗೂ ಮಂಡ್ಯದಲ್ಲಿ ಕಾಂಗ್ರೆಸ್ ಯಾರಿಗೆ ಟಿಕೆಟ್ ಕೊಟ್ಟಿದೆ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಪಕ್ಷ, ಬಿಜೆಪಿಯ A,B.C. ಅಥವಾ D ಟೀಮೋ ಅವರೇ ಹೇಳಬೇಕಿದೆ ಎಂದು ಪ್ರಶ್ನೆ ಮಾಡಿದರು.

BSY ಬೆಂಬಲ ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಣ ಹಂಚಿಕೆ ಮಾಡುತ್ತಿದೆ. ಬಿಜೆಪಿಯ ಎಲ್ಲಾ ಕ್ಯಾಟಗೆರಿಯ ಟೀಮು ಕಾಂಗ್ರೆಸ್. ಯಡಿಯೂರಪ್ಪ ಅವರು ಜೆಡಿಎಸ್ ಬೆಂಬಲ ಕೇಳಿದ್ದಾರೆ. ಯಡಿಯೂರಪ್ಪ ಅವರು ಬೆಂಬಲ ಕೇಳಿದ್ದಕ್ಕೆ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಕಾಂಗ್ರೆಸ್ ಗೆಲ್ಲುವುದು ಕಾಂಗ್ರೆಸ್ ನಾಯಕರಿಗೆ ಇಷ್ಟವಿಲ್ಲ, ಅದಕ್ಕಾಗಿಯೇ ಜೆಡಿಎಸ್ ಬೆಂಬಲ ಕೇಳ್ತಿಲ್ಲ ಎಂದರು.

ಇದನ್ಣೂ ಓದಿ:  Operation Lotus: ಕೋಲಾರದಲ್ಲಿ  ಆಪರೇಷನ್ ಕಮಲ ಸಕ್ಸಸ್, ಕಾಂಗ್ರೆಸ್ ಗೆ ಜಿಲ್ಲಾಧ್ಯಕ್ಷ್ಯ ಚಂದ್ರಾರೆಡ್ಡಿ ಗುಡ್ ಬೈ

ನಮ್ಮದು ಜನರ ಪರವಾದ ಟೀಮ್

ಜೆಡಿಎಸ್ ಮುಗಿಸಬೇಕೆಂದು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. 2023 ರ ಚುನಾವಣೆಯಲ್ಲಿ 123 ಕ್ಷೇತ್ರ ಗೆಲ್ಲುವುದು ಜೆಡಿಎಸ್ ಗುರಿ. ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಇನ್ನೆರಡು ದಿನದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವೆ. ನಾವು ಯಾವುದೇ ಪಕ್ಷದ ಟೀಮ್ ಅಲ್ಲ, ನಮ್ಮದು ಜನರ ಪರವಾದ ಟೀಮ್ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದರು.

2022ರ ಜನವರಿ 5ರಂದು 25 ಪರಿಷತ್​ ಸದಸ್ಯರ (MLC’s)ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ. . ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Election) ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ.
Published by:Mahmadrafik K
First published: