HOME » NEWS » District » HD KUMARASWAMY SAYS PEOPLE NOT VOTING FOR JDS DESPITE DOING GOOD WORK ANLM SNVS

‘ಅಣ್ಣ, ನನ್ನ ಸಾಲ ಮನ್ನಾ ಆಯ್ತು ಅಂತಾರೆ, ಆದ್ರೆ ಓಟ್ ಮಾತ್ರ ಕೊಡಲ್ಲ’ – ಕುಮಾರಸ್ವಾಮಿ ಬೇಸರ

ನಾನು ಹೋದಲೆಲ್ಲಾ ಅಣ್ಣಾ ನಮ್ಮ ಸಾಲ ಮನ್ನಾ ಆಗಿದೆ ಅಂತಾರೆ. ಆದರೆ, ಚುನಾವಣೆಯಲ್ಲಿ ವೋಟ್ ಮಾತ್ರ ನನಗೆ ಕೊಡಲ್ಲ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

news18-kannada
Updated:November 22, 2020, 4:35 PM IST
‘ಅಣ್ಣ, ನನ್ನ ಸಾಲ ಮನ್ನಾ ಆಯ್ತು ಅಂತಾರೆ, ಆದ್ರೆ ಓಟ್ ಮಾತ್ರ ಕೊಡಲ್ಲ’ – ಕುಮಾರಸ್ವಾಮಿ ಬೇಸರ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
  • Share this:
ನೆಲಮಂಗಲ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರದ ವಾರ್ಡ್ ಜೆಡಿಎಸ್ ಕಚೇರಿ ಉದ್ಘಾಟನೆಯನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೆರವೇರಿಸಿದರು. ಕಾರ್ಯಕರ್ತರು ಹಾಗೂ ದಾಸರಹಳ್ಳಿ ಕ್ಷೇತ್ರದ ಮತದಾರರನ್ನ ಉದ್ದೇಶಿಸಿ ಕುಮಾರಸ್ವಾಮಿ ಮಾತನಾಡಿ, ದಾಸರಹಳ್ಳಿ ಗೆ ಕುಡಿಯುವ ನೀರಿಗಾಗಿ 36 ಲಕ್ಷ ಗ್ರ್ಯಾಂಟ್ ನೀಡಿದ್ದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಜಾರಿಗೆ ತಂದೆ. ನಗರದ ಹೊರ ವಲಯದಲ್ಲಿ ಡಾಂಬರೀಕರಣ, ಕಾವೇರಿ ನೀರು ಪೂರೈಕೆಗೆ ಜೆಡಿಎಸ್ ಕಾರಣ. ನಾನು 25 ಸಾವಿರ ಕೋಟಿ ರೂ ಹಣವನ್ನು ಸಾಲ ಮನ್ನಾಗೆಂದು ಕ್ರೋಡಿಕರಿಸಿ ಕೊಟ್ಟೆ ಎಂದು ಹೇಳಿಕೊಂಡರು.

ಚುನಾವಣೆಯಲ್ಲಿ ಹಣದ ವ್ಯಾಮೋಹದಿಂದ ಮತ ಹಾಕುವ ಪರಿಸ್ಥಿತಿ ಬಂದಿದೆ. ನಾನು ಹೋದಲೆಲ್ಲಾ, ಅಣ್ಣಾ ನಮ್ಮ ಸಾಲ ಮನ್ನಾ ಆಗಿದೆ ಅಂತಾರೆ. ಆದರೆ, ಚುನಾವಣೆಯಲ್ಲಿ ವೋಟ್ ಮಾತ್ರ ನನಗೆ ಕೊಡಲ್ಲ ಎಂದು ಈ ವೇಳೆ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

2 ಗ್ರಾಮ ಪಂಚಾಯತ್, 10 ವಾರ್ಡ್ ಒಳಗೊಂಡ ಕ್ಷೇತ್ರ ದಾಸರಹಳ್ಳಿ. ಇದು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಕ್ಷೇತ್ರ.ಇಲ್ಲಿ ಜನ ಸಾಮಾನ್ಯರ ಕಷ್ಟ ಆಲಿಸಲು ವಾರ್ಡ್ ಮಟ್ಟದ ಪಕ್ಷದ ಕಛೇರಿ ತೆರೆಯಲಾಗಿದೆ. ಸುದೀರ್ಘವಾಗಿ ಕ್ಷೇತ್ರ ದ ಅಭಿವೃದ್ಧಿ ಬಗ್ಗೆ, ಕ್ಷೇತ್ರದ ಅಭಿವೃದ್ಧಿ ಹಣ ದುರುಪಯೋಗದ ಬಗ್ಗೆ ಶಾಸಕ ಮಂಜುನಾಥ್ ಮಾತಾಡಿದ್ದಾರೆ. 14ತಿಂಗಳ ಅವಧಿಯಲ್ಲಿ ಮಂಜುನಾಥ್ ವೈಯಕ್ತಿಕ ಸಹಾಯ ಕೇಳಲಿಲ್ಲ ಎಂದು ಹೆಚ್​ಡಿಕೆ ಹೇಳಿದರು.

ಇದನ್ನೂ ಓದಿ: ಅಧಿವೇಶನದ ನಂತರ ನೋಡೋಣ: ರಾಜ್ಯ ಸಂಪುಟ ವಿಸ್ತರಣೆಗೆ ಪೂರಕವಾಗಿ ಸ್ಪಂದಿಸದ ಹೈಕಮಾಂಡ್

ನಾಡಿನ ಜನತೆಗೆ ಕೆಲ ವಿಚಾರಗಳನ್ನು ತಿಳಿಸಲು ಬಯಸುವೆ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ತಿಳುವಳಿಕೆ ಇಟ್ಟುಕೊಂಡ ಪಕ್ಷ ಜೆಡಿಎಸ್. ಮೈತ್ರಿಸರ್ಕಾರದ 14 ತಿಂಗಳ ಆಡಳಿತದ ಕಷ್ಟ ನನಗೆ ಗೊತ್ತು. ಬಿಜೆಪಿ 10% ಸರ್ಕಾರ ಅಂತ ಸಿದ್ದರಾಮಯ್ಯ ಹೇಳ್ತಾರೆ, ಕಾಂಗ್ರೆಸ್ ಸಹ ಪರ್ಸೆಂಟೇಜ್ ಸರ್ಕಾರ ಅಂತ ಮೋದಿನು ಹೇಳ್ತಾರೆ ನನ್ನ ಬಗ್ಗೆ ಹಾಗೆ ಹೇಳಲು ಸಾಧ್ಯ ಇಲ್ಲ ಎಂದರು.

ಸ್ಕೂಲೇ ನಡೆಯುತ್ತಿಲ್ಲ, ಆದ್ರೆ ಫೀಸ್ ಕಟ್ಟೋದು ನಿಂತಿಲ್ಲ. ಸರ್ಕಾರ ಒಂದೇ ವರ್ಷದಲ್ಲಿ ಪಬ್ಲಿಕ್ ಶಾಲೆಗಳನ್ನ ಶುರುಮಾಡಲಿ. ಖಾಸಗಿ ಶಾಲೆ ಮಟ್ಟದಲ್ಲಿ ಸರ್ಕಾರಿ ಶಾಲೆಗಳನ್ನ ಕಟ್ಟಲಿ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ತಿಳಿಹೇಳಿದರು.

ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ
Published by: Vijayasarthy SN
First published: November 22, 2020, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading