• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಆಸ್ಪತ್ರೆಯಲ್ಲಿದ್ದ ಜನರಿಗೆ ಕುಮಾರಸ್ವಾಮಿ ನೆರವು; ಹಾಲು, ಹಣ್ಣು, ಬ್ರೆಡ್ ವಿತರಿಸಿ ಮಾಜಿ ಸಿಎಂ ಮಾನವೀಯತೆ

ಆಸ್ಪತ್ರೆಯಲ್ಲಿದ್ದ ಜನರಿಗೆ ಕುಮಾರಸ್ವಾಮಿ ನೆರವು; ಹಾಲು, ಹಣ್ಣು, ಬ್ರೆಡ್ ವಿತರಿಸಿ ಮಾಜಿ ಸಿಎಂ ಮಾನವೀಯತೆ

ರಾಮನಗರದ ಜೆಡಿಎಸ್ ಕಾರ್ಯಕರ್ತರು

ರಾಮನಗರದ ಜೆಡಿಎಸ್ ಕಾರ್ಯಕರ್ತರು

ಚನ್ನಪಟ್ಟಣದ ಬೀಗರ ಔತನಕೂಟದಲ್ಲಿ ಬಾಡೂಟ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಜನರಿಗೆ ಕುಮಾರಸ್ವಾಮಿ ಸೂಚನೆ ಮೇರೆಗೆ ಜೆಡಿಎಸ್ ಕಾರ್ಯಕರ್ತರು ನಿನ್ನೆ ಬ್ರೆಡ್, ಹಾಲು, ಹಣ್ಣುಗಳನ್ನ ವಿತರಿಸಿದ್ದಾರೆ.

  • Share this:

ರಾಮನಗರ(ಚನ್ನಪಟ್ಟಣ): ಬೀಗರೂಟದಲ್ಲಿ ಬಾಡೂಟ ಸವಿದು ಆರೋಗ್ಯದಲ್ಲಿ ವ್ಯತ್ಯಾಸವಾಗಿ ಆಸ್ಪತ್ರೆ ಸೇರಿದ್ದ ಜನರಿಗೆ ಜೆಡಿಎಸ್ ನೆರವಾಗಿದೆ. ಚನ್ನಪಟ್ಟಣ ಶಾಸಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಈ ವಿಚಾರ ತಿಳಿದ ತಕ್ಷಣವೇ ತಮ್ಮ ಕಾರ್ಯಕರ್ತರ ಜೊತೆಗೆ ಈ ವಿಚಾರವಾಗಿ ಮಾತನಾಡಿ ತಕ್ಷಣವೇ ಆಸ್ಪತ್ರೆಯಲ್ಲಿರುವ ಜನರಿಗೆ ನೆರವಾಗಿ ಎಂದು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಚನ್ನಪಟ್ಟಣ ನಗರ ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಣ್ಣ ತಮ್ಮ ಪಕ್ಷದ ಕಾರ್ಯಕರ್ತರ ಜೊತೆಗೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದೌಡಾಯಿಸಿ ಚಿಕಿತ್ಸೆ ಪಡೆಯುತ್ತಿದ್ದ 100 ಕ್ಕೂ ಹೆಚ್ಚು ಜನರಿಗೆ ಹಣ್ಣು, ಹಾಲು, ಬ್ರೆಡ್, ಜ್ಯೂಸ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.


ಚನ್ನಪಟ್ಟಣ ತಾಲೂಕಿನ ಮೋಳೆದೊಡ್ಡಿ ಗ್ರಾಮದಲ್ಲಿ ಕಳೆದ ಭಾನುವಾರ ಮುತ್ತುರಾಜ್-ರೋಹಿಣಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೊತೆಗೆ ಇವರಿಬ್ಬರು ಸಹ ಸಂಬಂಧಿಕರು, ಒಂದೇ ಗ್ರಾಮದವರು. ಇದೇ ಸಂತೋಷಕ್ಕೆ ಎರಡೂ ಮನೆಯವರು ಮೊನ್ನೆಯ ದಿನ ಗ್ರಾಮದಲ್ಲಿಯೇ ಜೋರು ಬಾಡೂಟ ಏರ್ಪಡಿಸಿದ್ದರು. ಬೀಗರ ಊಟದಲ್ಲಿ ಸರಿಸುಮಾರು 700-800 ಜನರು ಊಟ ಮಾಡಿದ್ದರು. ಆದರೆ ಬಾಡೂಟ ಸವಿದ ಬಹುತೇಕ ಜನರಿಗೆ ಮಧ್ಯರಾತ್ರಿಯಿಂದಲೇ ವಾಂತಿ-ಬೇಧಿ ಪ್ರಾರಂಭವಾಗಿದೆ. ಸರಿಸುಮಾರು 200-300 ಜನರಿಗೆ ವಾಂತಿ-ಬೇಧಿ ಕಾಣಿಸಿಕೊಂಡಿದೆ.


ತಕ್ಷಣವೇ ಕೆಲವರು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದರೆ, ಇನ್ನು ಕೆಲವರು ಖಾಸಗಿ ಆಸ್ಪತ್ರೆಗೂ ದಾಖಲಾಗಿದ್ದಾರೆ. ಸಮಾರಂಭದಲ್ಲಿ ಊಟ ಮಾಡಿದ್ದ ಗಂಡು ಮುತ್ತುರಾಜ್‌ಗೆ ಅಷ್ಟೇನೂ ಆರೋಗ್ಯದಲ್ಲಿ ವ್ಯತ್ಯಾಸವಾಗಿಲ್ಲ, ಆದರೆ ಮದುವೆ ಹೆಣ್ಣು ರೋಹಿಣಿಗೆ ಸ್ವಲ್ಪ ಸುಸ್ತು, ವಾಂತಿ ಕಾಣಿಸಿಕೊಂಡಿದ್ದು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಇದೇ ಸಮಾರಂಭದಲ್ಲಿ ಊಟ ಮಾಡಿದ್ದ ಗ್ರಾಮದ ಕೆಲವರಿಗೆ ಯಾವುದೇ ತೊಂದರೆಯಾಗಿಲ್ಲ.


ಇದನ್ನೂ ಓದಿ: ಕಾಫಿನಾಡಿನಲ್ಲಿ ಮುಂದುವರೆದ ಚುನಾವಣಾ ಬಹಿಷ್ಕಾರ; ರಾಜಕೀಯಕ್ಕಿಂತ ಬದುಕೇ ಮುಖ್ಯ ಎಂದು ಸಿಡಿದೆದ್ದ ಮಲೆನಾಡಿಗರು


ನಾವು ಕೂಡ ಇದೇ ಸಮಾರಂಭದಲ್ಲಿ ಊಟ ಮಾಡಿದ್ದೇವೆ. ಆದರೆ ನಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾಗಿಲ್ಲ ಎಂದು ಗ್ರಾಮದ ಬಿಳಿಯಪ್ಪ ಎಂಬುವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಕಷ್ಟದಲ್ಲಿದ್ದ ಕ್ಷೇತ್ರದ ಜನರಿಗೆ ಶಾಸಕರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೆರವಾಗಿರೋದಕ್ಕೆ ಮೋಳೆದೊಡ್ಡಿ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಈಗ ಚಿಕಿತ್ಸೆ ಪಡೆಯುತ್ತಿರುವ ಜನರ ಆರೋಗ್ಯ ಚೆನ್ನಾಗಿದೆ, ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.


ವರದಿ: ಎ.ಟಿ. ವೆಂಕಟೇಶ್

Published by:Vijayasarthy SN
First published: