ಹಾವೇರಿ ರೈಲು ನಿಲ್ದಾಣ ಇನ್ನುಮುಂದೆ ಮಹಾದೇವಪ್ಪ ಮೈಲಾರ ರೈಲು ನಿಲ್ದಾಣ 

ಹಾವೇರಿಯ ಮೈಲಾರ ಮಹಾದೇವಪ್ಪ ರೈಲ್ವೆ ನಿಲ್ದಾಣ.

ಹಾವೇರಿಯ ಮೈಲಾರ ಮಹಾದೇವಪ್ಪ ರೈಲ್ವೆ ನಿಲ್ದಾಣ.

ಸಂಸದ ಶಿವಕುಮಾರ ಉದಾಸಿ ನೇತೃತ್ವದ ತಂಡ 2019ರ ಜುಲೈ 2ರಂದು ಕೇಂದ್ರದ ರೈಲ್ವೇ ರಾಜ್ಯ ಖಾತೆ ಸಚಿವ ದಿ.ಸುರೇಶ ಅಂಗಡಿಯವರ ಮೂಲಕ ಕೇಂದ್ರ ಸರಕಾರಕ್ಕೆ ಹಾವೇರಿ ರೈಲ್ವೇ ನಿಲ್ದಾಣಕ್ಕೆ ಹುತಾತ್ಮ ಮೈಲಾರ ಮಹಾದೇವ ನಾಮಕರಣ ಮಾಡಬೇಕೆಂದು ಮನವಿ ಸಲ್ಲಿಸಿತ್ತು. 

  • Share this:

ಹಾವೇರಿ; ಹಾವೇರಿ ರೈಲು ನಿಲ್ದಾಣಕ್ಕೆ ಮಹಾದೇವಪ್ಪ ಮೈಲಾರ ರೈಲು ನಿಲ್ದಾಣ ಎಂದು ನಾಮಕರಣ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದೇಶ ಹೊರಬಿದ್ದ ಬೆನ್ನಲ್ಲೇ ಹಾವೇರಿ ರೈಲ್ವೆ ಇಲಾಖೆಯ ಸಿಬ್ಬಂದಿ ನಾಮ ಫಲಕ ಅಳವಡಿಸಿದ್ದಾರೆ. ಈ ಹಿಂದೆ ಇದ್ದ ಹಾವೇರಿ ರೈಲು ನಿಲ್ದಾಣ ಎನ್ನುವ ನಾಮ ಫಲಕಕ್ಕೆ ಬಣ್ಣ ಬಳಿದು ಮಹಾದೇವಪ್ಪ ಮೈಲಾರ ರೈಲು ನಿಲ್ದಾಣ ಎಂದು ಕನ್ನಡ, ಇಂಗ್ಲಿಷ್, ಹಾಗೂ ಹಿಂದಿ ಬಾಷೆಯಲ್ಲಿ ಬರೆಯಲಾಗಿದೆ.


ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಅಪ್ರತಿಮ ಹೋರಾಟ ನಡೆಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸ್ವಾತಂತ್ರ್ಯ ಸೇನಾನಿ, ಅಪ್ರತಿಮ ದೇಶಭಕ್ತ ಹುತಾತ್ಮ ಮೈಲಾರ ಮಹಾದೇವಪ್ಪ ಅವರು ಜಿಲ್ಲೆಗೆ ನೀಡಿದ ಕೊಡುಗೆ ಅಪಾರ. ಜಿಲ್ಲೆಯ ಜನರ ಹಾಗೂ ಮೈಲಾರ ಕುಟುಂಬದ ಬಹುದಿನದ ಬೇಡಿಕೆಯನ್ನು ಕೇಂದ್ರ ಸರಕಾರದ ರೈಲ್ವೇ ಸಚಿವಾಲಯ ಈಡೇರಿಸುವ ಮೂಲಕ ಜಿಲ್ಲೆಯ ಜನತೆಯ ಬೇಡಿಕೆಯನ್ನು ಈಡೇರಿಸಿದೆ.


ಇದನ್ನು ಓದಿ: ಮಠದ ಆವರಣದಲ್ಲಿ ಗಾಂಜಾ ಗಿಡ ಪತ್ತೆ; ಜಾಗದ ಮಾಲೀಕರ ಪತ್ತೆಗೆ ಮುಂದಾದ ಅಬಕಾರಿ ಇಲಾಖೆ


ಹುತಾತ್ಮ ಮೈಲಾರ ಮಹಾದೇವಪ್ಪ ರಾಷ್ಟ್ರೀಯ ಸ್ಮಾರಕ ಸಮಿತಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಹಾಗೂ ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಂಸದ ಶಿವಕುಮಾರ ಉದಾಸಿ ನೇತೃತ್ವದ ತಂಡ 2019ರ ಜುಲೈ 2ರಂದು ಕೇಂದ್ರದ ರೈಲ್ವೇ ರಾಜ್ಯ ಖಾತೆ ಸಚಿವ ದಿ.ಸುರೇಶ ಅಂಗಡಿಯವರ ಮೂಲಕ ಕೇಂದ್ರ ಸರಕಾರಕ್ಕೆ ಹಾವೇರಿ ರೈಲ್ವೇ ನಿಲ್ದಾಣಕ್ಕೆ ಹುತಾತ್ಮ ಮೈಲಾರ ಮಹಾದೇವ ನಾಮಕರಣ ಮಾಡಬೇಕೆಂದು ಮನವಿ ಸಲ್ಲಿಸಿತ್ತು.

First published: